Tuesday, June 30, 2009

ಸಾಗರದಾಚೆಯ ಇಂಚರ...

ಇಂಚರವೋ, ಇಂಚರವೋ

ಸಾಗರದಾಚೆಯ ಇಂಚರವೋ

ಗೀತೆಯಲಿ, ಸಂಗೀತದಲಿ, ಅಂಚಲಿ ಮಿಂಚಿದ ಇಂಚರವೋ


ಜಿಗಿದಾಡಿವೆ ಬಾನಿಗೆ ಹಕ್ಕಿಗಳು

ಗೂಡನು ಮರೆತು ಹೋಗದಿರಿ

ನಭದಲಿ ಸೆಳೆಯುವ ಛಲವಿಹುದು

ಬೇರನು ಬಿಟ್ಟು ತೊಲಗದಿರಿ


ಹೊಸತನ, ಹೊಸಕ್ಷಣ ಹೊಸದು ನಿಜ

ಹೊಸದರಲಿ ಎಲ್ಲವೂ ಸಹಜ

ನಿಮ್ಮೆಲ್ಲರ ತನುವಿದು ಜತನದಲಿ

ಸತತವೂ ಇಹುದು ತಾಯ್ನಾಡಿನಲಿ


ಗೂಡಿಗೆ ಅದರದೇ ಅಧರವಿದೆ

ಉದರವ ಪೊರೆಯುವ ಸೆಳೆತವಿದೆ

ಸಾಗರದಾಚೆಗೆ ಸೇರದಿರು

ನೆಲವಿದು ನಿನಗೆ ಕಾಯುತಿದೆ

19 comments:

ಜಲನಯನ said...

ಮೂರ್ತಿ, ಚನ್ನಾಗಿದೆ ಸಾಗರದಾಚೆಯ ಇಂಚರ ...ಬನ್ನಿ ಸಾರ್ ನಮ್ಮ ಬ್ಲಾಗ್ ಕಡೆಗೂ ಒಮ್ಮೆ...

Ittigecement said...

ಗುರುಮೂರ್ತಿಯವರೆ....

ಸಪ್ತ ಸಾಗರದಾಚೆಯೆಲ್ಲೋ...
ಸುಪ್ತ ಚೇತನ ಮಿಡಿದಿದೆ...
ತಾಯ್ನಾಡಿನ ಪ್ರೇಮ..
ಸೆಳೆತ ತುಂಬ ಚೆನ್ನಾಗಿ ಬಿಂಬಿತವಾಗಿದೆ....

ಚಂದದ ಕವಿತೆಗೆ ಅಭಿನಂದನೆಗಳು...

ದಿವ್ಯಾ ಮಲ್ಯ ಕಾಮತ್ said...

ತಾಯ್ನಾಡಿನ ಮಹತ್ವವನ್ನು ಸುಂದರವಾಗಿ ತೆರೆದಿಟ್ಟ ಕವನ... ಚೆನ್ನಾಗಿದೆ!

ಸಾಗರದಾಚೆಯ ಇಂಚರ said...

ಜಲನಯನ,
ಕಂಡಿತ ನಿಮ್ಮ ಬ್ಲಾಗ್ ಗೆ ಬರುತ್ತೇನೆ. ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಇರುವುದೆಲ್ಲವ ಬಿಟ್ಟು ಇರದುದೆರೆಡೆಗೆ ತುಡಿವುದೇ ಜೀವನ ಆಗಿದೆ ವಿದೇಶದಲ್ಲಿರುವವರ ಸ್ಥಿತಿ. ತಾಯ್ನಾಡ ಪ್ರೇಮ ಯಾವತ್ತೂ ಸೆಳೆಯುತ್ತದೆ.
ಅಭಿಪ್ರಾಯಕ್ಕೆ ವಂದನೆಗಳು

ಸಾಗರದಾಚೆಯ ಇಂಚರ said...

ದಿವ್ಯ ಅವರೇ,
ನಿಮಗೆ ಇಷ್ಟವಾಗಿದ್ದಕ್ಕೆ ನನಗೂ ಸಂತೋಷವಿದೆ. ಹೀಗೆಯೇ ಬರುತ್ತಿರಿ.

PARAANJAPE K.N. said...

ಸಾಗರದಾಚೆ ಇದ್ದರು ನಿಮ್ಮ ಮನ ತಾಯ್ನಾಡಿನತ್ತ ತುಡಿಯುತ್ತಿರುವುದು ನಿಮ್ಮ ಕವನದಿ೦ದ ವ್ಯಕ್ತ. ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ಜನನಿ ಜನ್ಮಭುಮಿಷ್ಯ ಸ್ವರ್ಗದಪೀ ಗರೀಯಸಿ ಆಲ್ವಾ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಕ್ಷಣ... ಚಿಂತನೆ... said...

ಗುರುಮೂರ್ತಿಯವರೆ, ಸಾಗರದಾಚೆಯ ಇಂಚರ... ಕವಿತೆಯಲ್ಲಿ ತಾಯ್ನಾಡಿನ ಬಗೆಗಿನ ಸೆಳೆತ, ತುಡಿತ ಚೆನ್ನಾಗಿ ಭಾವದುಂಬಿ ಮೂಡಿದೆ. ಈಸ್ಟ್ ಆರ್‍ ವೆಸ್ಟ್ ಹೋಂ ಇಸ್ ಬೆಸ್ಟ್ ಅಂತ ನಮ್ಮೂರೆ ನಮಗೆ ಚೆಂದ. ಹೀಗೆಯೆ ಮತ್ತಷ್ಟು ಕವಿತೆಗಳು ಮೂಡಿಬರುತ್ತಿರಲಿ.

ಚಂದ್ರಶೇಖರ ಬಿ.ಎಚ್.

shivu.k said...

ಗುರುಮೂರ್ತಿ ಸರ್,

ನಮ್ಮೂರೆ ಚೆಂದ ಅಲ್ವಾ....ತಾಯ್ನಾಡಿನ ಮೇಲಿನ ಸೆಳೆತ ಎಂಥವರನ್ನು ಬಿಡಲಾಗರದು. ದೂರದ ಸಾಗರದಾಚೆ ಇದ್ದವರ ಭಾವನೆಗಳನ್ನು ಕವನದಲ್ಲಿ ಹೇಳಿದ್ದೀರಿ...ಧನ್ಯವಾದಗಳು.

ವಿನುತ said...

ನಿಜ ಗುರುಮೂರ್ತಿಯವರೇ, ಅಲ್ಲಿದ್ದಷ್ಟು ದಿನವೂ ಯಾವಾಗ ಹಿ೦ದಿರುಗುವುದೆ೦ಬ ತವಕ ನನ್ನನ್ನೂ ಕಾಡಿತ್ತು. ನಿಮ್ಮ ದುಗುಡವನ್ನು ಚೆನ್ನಾಗಿ ಹೇಳಿದ್ದೀರಿ ಕವಿತೆಯಲ್ಲಿ. ಚ೦ದದ ಕವನಕ್ಕಾಗಿ ಅಭಿನ೦ದನೆಗಳು.

ಸಾಗರದಾಚೆಯ ಇಂಚರ said...

ಕ್ಷಣ ಚಿಂತನೆ,
ಜನನಿ ಜನ್ಮಭೂಮಿ ಮರೆಯಲು ಸಾದ್ಯವೇ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶಿವೂ ಸರ್,
ಮುಂದಿನವಾರ ಭಾರತಕ್ಕೆ ಬರ್ತಾ ಇದಿವಿ ಅದಿಕ್ಕೆ ದೇಶ ಪ್ರೇಮ ಇನ್ನು ಉಕ್ಕುತ್ತ ಇದೆ. ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು

ಸಾಗರದಾಚೆಯ ಇಂಚರ said...

ವಿನುತ ಅವರೇ,
ನೀವು ಅಂದಿದ್ದು ನಿಜ, ಎಷ್ಟು ಬೇಗ ಊರು ಸೇರುತ್ತೇವೋ ಅನ್ನೋ ತವಕ ಇದ್ದೆ ಇರುತ್ತೆ.
ಹೀಗೆಯೇ ಬರುತ್ತಿರಿ

Guruprasad said...

ತುಂಬ ಚೆನ್ನಾಗಿ ಇದೆ.. ಕವನ....ಇಷ್ಟ ಆಯಿತು....ಎಸ್ಟೆ ಆದರು,, ಎಲ್ಲೇ ಹೋದರು,, ನಮ್ಮ ನಾಡು ನಮ್ಮ ನುಡಿ......ನಮ್ಮದಲ್ಲವೇ...ಅದೇ ನಮಗೆ gr8....ಅಲ್ವ

ಜಿ.ಎಸ್.ಬಿ. ಅಗ್ನಿಹೋತ್ರಿ said...

ಚನ್ನಾಗಿದೆ....ಅಭಿನಂದನೆಗಳು

ಮನಸು said...

tumba chennagide kavana

ಸಾಗರದಾಚೆಯ ಇಂಚರ said...

ಮನಸು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಅಂತರ್ವಾಣಿ said...

Dr,

Title song chennagide..