Monday, April 27, 2009

ನಾ ನಡೆವ ಹಾದಿಯಲಿ.....


ಗುರು ಬಬ್ಬಿಗದ್ದೆ

ನಾ ನಡೆವ ಹಾದಿಯಲಿ 

ಕಲ್ಲು ಮುಳ್ಳುಗಳಿರದಿರಲಿ

ಸೃಷ್ಟಿ ಸೊಬಗಿನ ಚೆಲುವೆ ಆಡುತಿರಲಿ

ಸಂತೋಷದಿ ಹೂವು ಬಿರಿಯುತಿರಲಿ  


ನಾ ನಡೆವ ಹಾದಿಯಲಿ

ತೆಂಗು ಕಂಗುಗಳೆಲ್ಲ ಕಂಗೊಳಿಸುತಿರಲಿ

ಗಿಡವೆಲ್ಲ ಮರವಾಗಿ ಹಸುರಾಗಲಿ

ಸಜ್ಜನರ ಪಾಲಿಗದು ಉಸಿರಾಗಲಿ 


ನಾ ನಡೆವ ಹಾದಿಯಲಿ ಪ್ರೀತಿ ಪಸರಿಸಲಿ

ವಾತ್ಸಲ್ಯದ ಮೂರ್ತಿ ಎಚ್ಚೆತ್ತು ಬರಲಿ

ಭ್ರಾತೃತ್ವದ ಕಂಪು ಇಂಪಾಗಿ ಹರಡಲಿ 


ನಾ ನಡೆವ ಹಾದಿಯಲಿ ಬಡತನವು ಇರದಿರಲಿ

ಸಿರಿತನವು ತನ್ನ ಮಿತಿ ಮೀರದಿರಲಿ

ಸಮಾನತೆಯ ಬದುಕು ಮೂಡಿ ಬರಲಿ 


ನಾ ನಡೆವ ಹಾದಿಯಲಿ ಹಿಂಸೆಗಳು ಅಳಿಯಲಿ

ದ್ವೇಷಕ್ಕೆ ಶಾಂತಿಯು ಬೆಳಕಾಗಲಿ

ಮನಸುಗಳ ಬೆಸೆಯುವ ಸರಪಳಿಯಾಗಲಿ 


ನಾ ನಡೆವ ಹಾದಿಯಲಿ

ಸಾಹಿತ್ಯದ ಧ್ವನಿಯು ಕೇಳಿ ಬರಲಿ

ಕವಿ ಪುಂಗವರ ಕವನ ಹಾಡಾಗಲಿ

ನನ್ನ ಉನ್ನತಿಗೆ ಮಾರ್ಗದರ್ಶನವಾಗಲಿ 


ನಾ ನಡೆವ ಹಾದಿಯಲಿ ಎಲ್ಲರೂ ಬರಲಿ

ಅದು ಮನುಜ ಪಥವಾಗಲಿ

ವಿಶ್ವ ಮಾನವ ಪಥಕೆ ನುಡಿಯಾಗಲಿ 

34 comments:

PARAANJAPE K.N. said...

ಗುರೂ
ಒಳ್ಳೆಯ ಆಶಯವನ್ನು ಕವನದ ಮೂಲಕ ಹರಿಯಬಿಟ್ಟಿದ್ದೀರಿ. ನಿಮ್ಮ ಆಶಯ ಈಡೇರಿದರೆ ಅದಕ್ಕಿ೦ತ ಖುಷಿಯ ವಿಚಾರ ಬೇರೆ ಇಲ್ಲ, ಚೆನ್ನಾಗಿದೆ. ಕವನ.

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ಪ್ರೀತಿಯಿಂದ ಪ್ರತಿಕ್ರಿಯಿಸದ್ದಕ್ಕೆ ಧನ್ಯವಾದಗಳು, ನಾನಂದುಕೊಂಡಂತೆ ಆದರೆ ನನಗಿಂತ ಸುಖಿ ಬೇರೆ ಯಾರಿದ್ದಾರೆ ಹೇಳಿ

Vinutha said...

ನಾ ನಡೆವ ಹಾದಿಯಲ್ಲಿ ಕೂಡ... ಬಹುಷರ ಎಲ್ಲರು ನಡೆಯುವ ಹಾದಿಯೂ ಕೂಡ..
ತುಂಬಾ ಚೆನ್ನಾಗಿದೆ ಕವನದ ಆಶಯ..

shivu said...

ಗುರುಮೂರ್ತಿ ಸರ್,

ಕವನದಲ್ಲಿ ಒಳ್ಳೆಯ ಆಶಯವಿದೆ...

ಅದು ನಿಮ್ಮ ಆಶಯವೂ ಕೂಡ ಆಗಿದ್ದರೆ ಬೇಗ ಈಡೇರಲಿ...

ಪ್ರಾಸ ಹೆಚ್ಚಾದರೂ ಓದಿಸಿಕೊಂಡು ಹೋಗುತ್ತದೆ...

ಧನ್ಯವಾದಗಳು...

ಮನಸು said...

kavanadallina nimma asseyante...neevu nedeva haadiyali nage hoovu chelli jeevana sukavagiralendu aashisuttene..

ಸಾಗರದಾಚೆಯ ಇಂಚರ said...

ವಿನುತ,
ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶಿವೂ ಸರ್,

ಕೆಲವೊಮ್ಮೆ ಪ್ರಾಸ ಇಲ್ಲದಿದ್ರೆ ತ್ರಾಸು ಆಗುತ್ತದೆ ಬರೆಯಲು ಹ ಹ ಹ
ತುಂಬಾ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಮನಸು,
ನಿಮ್ಮ ಪ್ರೀತಿಯ ಹಾರೈಕೆ ಸದಾ ಇರಲಿ . ಹೀಗೆಯೇ ಬರುತ್ತಿರಿ

Divya Mallya - ದಿವ್ಯಾ ಮಲ್ಯ said...

ಪ್ರೌಢ ಶಾಲಾ ಸಮಯದಲ್ಲಿ ಅಧ್ಯಾಪಕರೊಬ್ಬರು ಹೇಳಿದ್ದು ನೆನಪಿಗೆ ಬರುತ್ತಿದೆ .... "ಅಸ್ತು ದೇವತೆಗಳು ಯಾವತ್ತೂ ಅಸ್ತು ಅಸ್ತು ಅನ್ನುತಿರುತ್ತಾರೆ, ಆದ್ದರಿಂದ ಯಾವತ್ತೂ ಒಳ್ಳೆಯದನ್ನೇ ಬಯಸಬೇಕು, ನುಡಿಯಬೇಕು" ಎಂದು.. ಎಲ್ಲಾ ಒಳಿತನ್ನೇ ಬಯಸುವ ಸುಂದರವಾದ ಕವನಕ್ಕಾಗಿ ಅಭಿನಂದನೆಗಳು..

ಸಾಗರದಾಚೆಯ ಇಂಚರ said...

ದಿವ್ಯಾ ಮೇಡಂ,
ನಿಮ್ಮ ಅಸ್ತು ಸದಾ ತಥಾಸ್ತು ಆಗಲಿ, ಸದಾ ಒಳಿತಾಗಲಿ ಎನ್ನುವುದೇ ನಮ್ಮೆಲ್ಲರ ಆಶಯವಲ್ಲವೇ, ಹೀಗೆಯೇ ಬರುತ್ತಿರಿ

ಬಿಸಿಲ ಹನಿ said...

very nice!!

ಸಾಗರದಾಚೆಯ ಇಂಚರ said...

ಬಿಸಿಲ ಹನಿ
ಅಭಿಪ್ರಾಯಕ್ಕೆ ಧನ್ಯವಾದಗಳು

ಶಿವಪ್ರಕಾಶ್ said...

ನೀವು ನಡೆವ ಹಾದಿಯಲ್ಲಿ ನಾವು ಬರಬಹುದೇ... ? :)
ತುಂಬಾ ಚನ್ನಾಗಿದೆ...

ಗಿರಿ said...

ಗುರುಮೂರ್ತಿ,

"ಅದು ಮನುಜ ಪಥವಾಗಲಿ
ವಿಶ್ವ ಮಾನವ ಪಥಕೆ ನುಡಿಯಾಗಲಿ"
ಕವನದ ಆಶಯ ಖುಶಿ ನೀಡಿತು...
ಚೆನ್ನಗಿ ಬರೀತೀರಾ... ಅಭಿನಂದನೆಗಳು...

ಧನ್ಯವಾದಗಳು,
-ಗಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್,
ಎಲ್ಲರೂ ಬನ್ನಿ ನಮ್ಮ ಪಥಕ್ಕೆ , ಆದರೆ ಹೀಗೆಯೇ ಬರುತ್ತಿರಿ ಬ್ಲಾಗ್ಗೆ

ಸಾಗರದಾಚೆಯ ಇಂಚರ said...

ಗಿರಿ ಸರ್,
ಹೌದು, ಅದೊಂದು ಮನುಜ ಪಾಠ ಆಗಬೇಕು ಅನ್ನೋದೇ ಆಶಯ,
ಮೆಚ್ಚಿದ್ದಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ

sunaath said...

ಕವನ ಓದುತ್ತಿದ್ದಂತೆ ಸುಖ ಹಾಗೂ ಶಾಂತಿಯ ಅನುಭವವಾಯಿತು.ಒಳ್ಳೆಯ ಮನಸ್ಸು ಎಲ್ಲೆಡೆಗೂ ಒಳ್ಳೆಯದನ್ನೇ
ಹರಡುತ್ತದೆ.

sunaath said...

ಕವನ ಓದುತ್ತಿದ್ದಂತೆ ಸುಖ ಹಾಗೂ ಶಾಂತಿಯ ಅನುಭವವಾಯಿತು.ಒಳ್ಳೆಯ ಮನಸ್ಸು ಎಲ್ಲೆಡೆಗೂ ಒಳ್ಳೆಯದನ್ನೇ
ಹರಡುತ್ತದೆ.

ಸಾಗರದಾಚೆಯ ಇಂಚರ said...

ಧನ್ಯವಾದಗಳು ಸುನಾಥ,
ಹೀಗೆಯೇ ಬರುತ್ತಿರಿ

ಕ್ಷಣ... ಚಿಂತನೆ... Thinking a While.. said...
This comment has been removed by the author.
ಕ್ಷಣ... ಚಿಂತನೆ... Thinking a While.. said...

ಸರ್‌, ನಾ ನಡೆವ ಹಾದಿಯಲ್ಲಿ...

ಕವಿತೆಯಲ್ಲಿ ಉನ್ನತ ಆಶಯ, ಆದರ್ಶ, ಶಾಂತಿ, ಪ್ರೀತಿ, ಸಮಾಧಾನ ಇವೆಲ್ಲವನ್ನೂ ವ್ಯಕ್ತಪಡಿಸಿದ್ದೀರಿ. ಕವಿತೆಯನ್ನು ಗೀತಸಂಗೀತಕ್ಕೆ ಅಳವಡಿಸುವಂತಿದೆ. ಜೊತೆಗೆ ಈ ಕವಿತೆಯ ಮೊದಲ ಸಾಲನ್ನು ಓದುವಾಗಲೇ ನನಗೆ ನೆನಪಾಗಿದ್ದು...ಸಲೀಲ್‌ ಚೌಧರಿ ಅವರ ಸಂಗೀತ ನಿರ್ದೇಶನವಿದ್ದ, ಬಂಗಾರದ ಹೂವು ಗೀತೆಯಲ್ಲಿ ಬರುವ ನೀ ನಡೆವ ಹಾದಿಯಲ್ಲಿ... ಹಾಡು.

ಕವನ ಖುಷಿ ಕೊಟ್ಟಿತು. ಮತ್ತಷ್ಟು ಕವನಗಳು ಮೂಡಿಬರಲಿ ಎಂದು ಆಶಿಸುತ್ತಾ...

ಸಾಗರದಾಚೆಯ ಇಂಚರ said...

ಕ್ಷಣ ಚಿಂತನೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಶಾಂತಿ, ನೆಮ್ಮದಿ ಎಲ್ಲ ಕಡೆ ನೆಲೆಸಿದರೆ ಬಾಳು ಎಷ್ಟೊಂದು ಸುಂದರ ಅಲ್ಲವೇ,
ಹೀಗೆಯೇ ಬರುತ್ತಿರಿ

PaLa said...

ನಿಮ್ಮ ಆಶಯ ಚೆನ್ನಾಗಿದೆ. ನನಗೆ ಮಾತ್ರ ಕಲ್ಲು ಮುಳ್ಳಿಲ್ಲದ ಹಾದಿಯಲ್ಲಿ ಯಾಕೋ ಸ್ವಾರಸ್ಯವಿಲ್ಲ!

Kannada said...

full hot maga :)

ಅಂತರ್ವಾಣಿ said...

ಡಾ,
ನಿಮ್ಮ ಆಸೆ ಚೆನ್ನಾಗಿ ಹೇಳಿದ್ದಿರ. ಹಾಗೆ ಇರಲಿ ನಿಮ್ಮ ಹಾದಿ

ಸಾಗರದಾಚೆಯ ಇಂಚರ said...

Pala,
ಕಲ್ಲು ಮುಳ್ಳುಗಳನ್ನು ದಾಟಿದ ಮೇಲೆ ಪುನಃ ಅದೇ ಬರದಿರಲಿ ಎನ್ನುವುದು ಕವನದ ಆಶಯ, ಸದಾ ಅದರ ಮೇಲೆ ನೀವು ನಡೆಯುತ್ತಿದ್ದರೆ ಜೀವನದಲ್ಲಿ ಉನ್ನತಿ ಹೇಗೆ, ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಕನ್ನಡ,
ಧನ್ಯವಾದಗಳು, ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

antarvaani,
tumbaa ಧನ್ಯವಾದಗಳು, ಹೀಗೆಯೇ ಬರುತ್ತಿರಿ,

ಧರಿತ್ರಿ said...

ತುಂಬಾ ಸರಳ, ಆದರೆ ಅರ್ಥ ವಿಶಾಲ! ತುಂಬಾ ಒಳ್ಳೆ ಆಶಯವನ್ನು ಕವನದ ಮೂಲಕ ವ್ಯಕ್ತಪಡಿಸಿದ್ದೀರಿ. .
ಹೌದು..ಪಸರಿಸಲಿ ನಾವು ನಡೆಯೋ ಹಾದಿಯಲ್ಲಿ ಪ್ರೀತಿ, ವಾತ್ಸಲ್ಯ, ಮಮತೆ ಬತ್ತದ ತೊರೆಯಂತೆ ಅಲ್ವೇ? ತಡವಾಗಿ ಬಂದಿದ್ದಕ್ಕೆ ಬೈಬೇಡಿ. ಅದೇ ಡಾಕ್ಟರೇಟ್ ಗಡಿಬಿಡಿಯಲ್ಲಿದ್ದೆ!!
ಹಿಹಿಹಿ
-ಧರಿತ್ರಿ

Lakshmi S said...

Very simply and excellently put.

ಸಾಗರದಾಚೆಯ ಇಂಚರ said...

ಧರಿತ್ರಿಯವರೇ,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ,

ಸಾಗರದಾಚೆಯ ಇಂಚರ said...

ಲಕ್ಷ್ಮಿಯವರೇ,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ,

Anonymous said...

Il semble que vous soyez un expert dans ce domaine, vos remarques sont tres interessantes, merci.

- Daniel

antharala kantharaj said...

sounds good, congrats make a beautifull book as kavana sankalana