ಹೇ ಮಾರಿಕಾಂಬೇ
- ಗುರು ಬಬ್ಬಿಗದ್ದೆ
ವಂದಿಪೆನು ಮಾರಿಕಾಂಬೆ ನಿನ್ನ ಮಡಿಲಿಗೆ
ಭಕ್ತ ಜನರ ಪೊರೆವ ಪ್ರೀತಿವಿತ್ತ ತಾಯಿಗೆ
ಸಿರಸಿಪುರದ ನಡುವೆ ಇರುವ ಲೋಕಮಾತೆಗೆ
ಕರುಣೆಯಿಂದ ವರವ ನೀಡ್ವ ಲೋಕಜನನಿಗೆ ೧
ನಿನ್ನ ಮಹಿಮೆ ಅರಿಯದಾದೆ ಇಂದಿಗೂ ನಾನು
ನನ್ನ ಮನವ ಅರಿತಿಹೆ ಮಮತಾಮಯಿ ನೀನು
ಕಷ್ಟ ನಷ್ಟ ಬಾಳಲಿಹುದು ನೀ ಪರಿಹರಿಸು
ಇಷ್ಟ ದೇವಿ ನಿನ್ನ ನೆನೆವೆ ನಮ್ಮನು ಹರಸು ೨
ಅಲ್ಪ ಮತಿಯು ನಾನು ದಿವ್ಯ ಸುತೆಯು ನೀನು
ನಿನ್ನ ದಿವ್ಯ ಕಂಗಳಿಂದ ನೋಡು ನಮ್ಮನು
ಬೆಳೆದು ನಿಂತ ಗದ್ದೆ ತೋಟ ನಿನ್ನದೆ ತಾಯೆ
ಭಕ್ತಿಯಿಂದ ನಮಿಸುವೆವು ಕಾಯು ನೀ ಮಾಯೆ ೩
ಎರಡು ವರ್ಷಕೊಮ್ಮೆ ಬರುವ ನಿನ್ನಯ ಜಾತ್ರೆ
ವಿಶ್ವದಲ್ಲೇ ಜನರ ಸೆಳೆವ ಅಕ್ಷಯ ಪಾತ್ರೆ
ನಿನ್ನ ನಾಮ ಸ್ಮರಣೆಯಲ್ಲೇ ಜಗವ ಕಾಣುವೆ
ಸಿರಸಿ ಮಾರಿಕಾಂಬೆ ನಿನಗೆ ಶರಣು ಎನ್ನುವೆ ೪
ಅಷ್ಟೇ....
-
ಮೊದಲೆಲ್ಲಾ ಯಾವುದೇ ಒಂದು ಕಾರ್ಯಕ್ರಮ ಇರಲಿ ಅದನ್ನು ವೀಕ್ಷಕರು ಆಸಕ್ತಿಯಿಂದ ವೀಕ್ಷಣೆ
ಮಾಡುತ್ತಿದ್ದರು. ಆಗ ವಾಹಿನಿಗಳ ಸಂಖ್ಯೆ ಕಡಿಮೆ ಇತ್ತು ಅಥ್ವಾ ಉತ್ತಮ ಗುಣಮಟ್ಟದ
ಕಾರ್ಯಕ್ರ...
6 hours ago
3 comments:
ವೃತ್ತಿಯಲ್ಲಿ ವಿಜ್ನಾನಿಯಾದರೂ,ನಿಮ್ಮಲ್ಲಿನ "ಆಸ್ತಿಕತೆ" ನನಗೆ ಆಶ್ಚರ್ಯ ತಂದಿದೆ.
ತುಂಬಾ ಉತ್ತಮವಾದ ಬರಹ.
ರೂಪಕ ತಾಳಕ್ಕೆ ಚಂದ ಸೇರ್ತು,ಚಂದ ಬರದ್ದೆ.
bhakti namma ulike belevanigegaagi... pujeyaste shresta geethe heluvaduu saha.... ninna bhakti abhivyakti... irali sadaa... aa devi santrapti aagi kodali varagalannu sadaa....
Post a Comment