ಓ ತಾವರೆ
-ಗುರು ಬಬ್ಬಿಗದ್ದೆ
ಮರೆಯಬೇಡ ಮರೆಯಬೇಡ ಮರೆಯಬೇಡ ಎನ್ನ
ಮರೆತರೆ ಮರೆಯಾಗುವೆ ಮನದಿಂದ ಚಿನ್ನ
ಮದನನ ಮದವೇರಿದ ಮನಸಿದು ಮಾಗುವ ಮುನ್ನ
ಮಾಮರದ ಮಾರ್ದನಿಗೆ ಮಾಲೆಯ ಹಾಕುವ ಮುನ್ನ ೧
ಮಸುಕಾಗಿದೆ ಮಬ್ಬಿನಲಿ ಮಿಸುಕಾಡಿದೆ ಮುಖವು
ಮನಗಾಣಿಸು ಮಮತೆಯಲಿ ಮರಳಿದೆ ಸುಖವು
ಮಹನೀಯಳೆ ಮಾಣಿಕ್ಯವೆ ಮೆಚ್ಚಿದೆ ನಿನ್ನನ್ನ
ಮಾಂತ್ರಿಕ ಮೃದು ಸ್ಪರ್ಶಕೆ ಮಾಗಿದೆ ಮೈ ಬಣ್ಣ ೨
ಮೆಲ ಮೆಲ್ಲನೆ ಮೆಲುನುಡಿಯಲಿ ಸೆಳೆದಿದೆ ಜೀವ
ಮೈ ಮರೆತಿಹೆ ಮೇಳ್ಯಸಿಹೆ ಮೊಳೆತಿದೆ ಭಾವ
ಮುಗಿಲಿನ ಮೋಡದ ಹಿಂದೆ ಮರೆ ಬೇಡ ರನ್ನ
ಮತ್ತಲಿ ಮುತ್ತನು ಸುರಿವೆ ಮರೆಯಬೇಡ ಎನ್ನ ೩
ಮೂಡುತ ಮೂಡಲಿನಲಿ ಮುದುಡಿದ ಮಿಹಿರ
ಮಾಧುರ್ಯದ ಮಾಟಗಾತಿ ಮೆಚ್ಚಿ ನಿನ್ನ ಅಧರ
ಮಲ್ಲಿಗೆಯ ಮಂದಾಕಿನಿ ಮೋಹಿಸುತ ನಿನ್ನ
ಮರೆಯಬೇಡ ಮರೆಯಬೇಡ ಮರೆಯಬೇಡ ಎನ್ನ ೪
ಸಾವಿನಿಂದ ಕಾಯುವವನೂ ಕಾಯುವವರ ಕರೆಗೆ ಓಗೊಟ್ಟು ಸಾಯಿಸುವುದಲ್ಲ... ಅದು ತರ್ಕಕ್ಕೆ
ನಿಲುಕದ್ದು!
-
*ಸಾವು ಖಚಿತ ಅಂತ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಆದರೆ, ನಾನೊಬ್ಬ ಇದಕ್ಕೆ ಅತೀತ
ಅನ್ನುವ ವಿಚಿತ್ರ ಭ್ರಾಂತಿ ಬಹುಶಃ ಎಲ್ಲೋ ಮೂಲೆಯಲ್ಲಿ ಮನೆ ಮಾಡಿರುತ್ತದೆ. ಸಾವನ್ನು
ತಪ್ಪಿಸಲು...
1 day ago
1 comment:
che! enthaa mood!..... geetha bhaava? athva bhaavageetha?....... kavigale heelabeku...
Post a Comment