ಚಿತ್ತಾರ ಬಿಡಿಸಿಹನು ನೋಡು ಬಾರಾ.........
- ಗುರು ಬಬ್ಬಿಗದ್ದೆ
ಚೆಲ್ಲಿದನು ಕಿರಣವನು ಬಾನ ಚಂದಿರನು
ಚಿತ್ತಾರ ಬಿಡಿಸು ಬಾರಾ
ಚುಕ್ಕಿ ಚಂದ್ರಮನಲ್ಲಿ ಪ್ರೇಮದ ಗಿಳಿಹುದು
ಹಿಡಿಯೋಣು ಓಡಿ ಬಾರಾ ಹಿಡಿಯೋಣು ಓಡಿ ಬಾರಾ ೧
ಚಿಲಿಪಿಲಿ ಹಕ್ಕಿಗಳು, ಚಿಮುಕಿಸುವ ಹನಿಗಳು
ಚಾದರದ ಒಳಗಿಂದ ಹೊರಟು ಬಾರಾ
ಚೆಲ್ಲಿದರು ಆಗಸದಿ ಹೊಳಪಿನ ಕನಸುಗಳು
ಒಂದಾಗಿ ಹೆಣೆಯ ಬಾರಾಒಂದಾಗಿ ಹೆಣೆಯ ಬಾರಾ ೨
ಮನಸಿಂದ ವೇದನೆಯ ಹೊರಗೆ ನೀ ಹಾಕುತ
ಮನವನ್ನು ತಣಿಸು ಬಾರಾ
ಮೈ ಮನದ ತುಂಬೆಲ್ಲ ನೀಲಿ ಆಕಾಶವೋ
ತಾರೆಗಳ ಕುಣಿಸು ಬಾರಾತಾರೆಗಳ ಕುಣಿಸು ಬಾರಾ ೩
ಬಾಳು ಬೆಳದಿಂಗಳು ಚಂದ್ರಮನೇ ಕಂಗಳು
ಆನಂದ ಸವಿಯ ಬಾರಾತಂಪಾದ ತಂಗಾಳಿ
ಕಾದಿಹುದು ನಿನಗಾಗಿ ಜಗವನ್ನೇ ಮರೆತು ಬಾರಾ
ಜಗವನ್ನೇ ಮರೆತು ಬಾರಾ ೪
carrot cake
-
ಹಿಂದಿನ ತಿಂಗಳು ತರಕಾರಿ ಮಾರುಕಟ್ಟೆಗೆ ಹೋದಾಗ, ನಿಹಾಗೆ ತಾಜಾ ಕ್ಯಾರೆಟ್ ಕಣ್ಣಿಗೆ
ಬಿತ್ತು. 'ಅಮ್ಮ ಕ್ಯಾರೆಟ್ ಕೇಕ್ ತಿನ್ನ ಬೇಕೆಂದು ಅನ್ನಿಸ್ತಿದೆ' ಅಂದ್ಲು...ಸಿಕ್ಕಿದ್ದೇ
chance ...
3 days ago
No comments:
Post a Comment