ಕಳೆದ ವಾರ ಸ್ವೀಡನ್ನಿನ ಪೊಲೀಸರಿಗೆ ಸಿಕ್ಕಿ ಬಿದ್ದ ನನ್ನ ಸ್ಥಿತಿ ''http://gurumurthyhegde.blogspot.com/2010/01/blog-post.html'' ಯ ಬಗ್ಗೆ ಹೇಳಿದ್ದೆ. ಬಹಳಷ್ಟು ಬ್ಲಾಗ್ ಮಿತ್ರರು ಕಥೆಯನ್ನು ಧಾರಾವಾಹಿಯ ಹಾಗೇ ಮುಂದೂಡಬೇಡಿ , ಬೇಗ ಮುಂದೇನಾಯಿತು ಹೇಳಿ ಎಂದಿದ್ದರು. ಅದಕ್ಕೆ ಇಂದಿನ ಶೀರ್ಷಿಕೆಯೂ ಅದೇ '' ಮುಂದೇನಾಯಿತು? ಪೊಲೀಸರೊಂದಿಗೆ ನನ್ನ ಮಾತುಕತೆ- ಭಾಗ 2 '' ಎಂದು ಹಾಕಿದ್ದೇನೆ. ಇಂದು ಎಲ್ಲವನ್ನೂ ಹೇಳಿ ಮುಗಿಸುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.
ಬಸ್ಸು ಚಲಿಸಲು ಆರಂಬಿಸಿತು, ಆ ಮಹಾತಾಯಿಯ ಪತ್ತೆ ಇರಲಿಲ್ಲ. ಇವರಿಗೆ ಭಾಷೆ ಬೇರೆ ಅರ್ಥವಾಗುವುದಿಲ್ಲ. ನನಗೋ ಭಯವೇ ಭಯ. ಇಳಿದು ಬಿಡೋಣವೆಂದರೆ ಬಸ್ಸನ್ನು ನಿಲ್ದಾಣ ಬರುವವರೆಗೂ ಮದ್ಯದಲ್ಲಿ ಎಲ್ಲಿಯೂ ಇಳಿಯುವ ಹಾಗಿಲ್ಲ. ಮುಂದಿನ ನಿಲ್ದಾಣ ದಲ್ಲೇ ಇಳಿದು ಬಿಡುವುದು ಎಂದು ನಿರ್ದರಿಸಿದೆ. ಆದದ್ದಾಗಲಿ ಎದುರಿಸೋಣ ಎಂಬ ಹುಂಬ ಧೈರ್ಯ ತಂದು ಕೊಂಡೆ. ನಿಧಾನ ಮುಂದಿನ ನಿಲ್ದಾಣ ಬಂದಿತು.
ನಿಲ್ದಾಣ ಹತ್ತಿರ ಬರುವಷ್ಟರಲ್ಲಿ ನಿಲ್ದಾಣದಲ್ಲಿ 3-4 ಜನ ಪೊಲೀಸರು ತಿರುಗುತ್ತಿದ್ದಾರೆ. ಅವರ ಜೊತೆಗೆ ಆ ಮಹಾತಾಯಿಯೂ ಇದ್ದಾಳೆ. ಎಲ್ಲೋ ಎಡವಟ್ಟಾಗಿದೆ ಎಂದು ಆಗಲೇ ಅನ್ನಿಸತೊಡಗಿತು. ಇಳಿಯಲು ಭಯ. ಇಳಿಯದೆ ಇದ್ದರೆ ಅವರು ಬೇರೇನಾದರೂ ತಿಳಿದುಕೊಂಡರೆ ಎಂಬ ದಿಗಿಲು ಬೇರೆ. ಮಗುವನ್ನು ಎತ್ತಿಕೊಂಡು ಸ್ಟೇಷನ್ ದಲ್ಲಿ ಇಳಿದೆ. ಕೂಡಲೇ ಆ ತಾಯಿ ಪೊಲೀಸರೊಂದಿಗೆ ಓಡಿ ಬಂದು ''ಇವನೇ ನನ್ನ ಮಗುವನ್ನು ಎತ್ತಿಕೊಂಡು ಹೋದದ್ದು'' ಎನ್ನಬೇಕೆ. ಆಕಾಶ ಮೇಲಿದೆಯೇ ? ಕೆಳಗಿದೆಯೇ? ಎಂದು ಒಂದು ಕ್ಷಣ ತಿಳಿಯಲಿಲ್ಲ. ಇದೇನಪ್ಪ, ಯಾರಿಗೋ ಸಹಾಯ ಮಾಡಲು ಹೋಗಿ ಎಂಥಹ ಕಷ್ಟದಲ್ಲಿ ಸಿಲುಕಿದೆ ಎಂದೆನ್ನಿಸತೊಡಗಿತು. ಹೆಂಡತಿಗೆ ಇದನ್ನು ತಿಳಿಸೋಣವೆಂದರೆ ಮೊಬೈಲ್ off . ನಾನೊಂದು ತರ Dead Lock Situation ಗೆ ಬಿದ್ದಿದ್ದೆ. ಕೂಡಲೇ ಪೊಲೀಸರು ಮರುಮಾತನಾಡದೆ ಆ ಹೆಂಗಸಿನ ಜೊತೆ ನನ್ನನ್ನು ಪೋಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋದರು. ಎರಡನೇ ಬಾರಿಗೆ ವಿದೇಶದಲ್ಲಿ (ಮೊದಲ ಬಾರಿ ಸ್ಪೇನ್ ದಲ್ಲಿ ನನ್ನ ಪಾಸ್ ಪೋರ್ಟ್ ಕದ್ದಾಗ ಹೋಗಿದ್ದೆ, ಓದಲು ಇಲ್ಲಿ ಕ್ಲಿಕ್ಕಿಸಿ ''http://gurumurthyhegde.blogspot.com/2009/10/s-pain-pain.html'') ಪೋಲಿಸ್ ಸ್ಟೇಷನ್ ದರ್ಶನವಾಯಿತು. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಅಲ್ಲಿನ ವ್ಯವಸ್ಥೆ ನೋಡಿ ಶಾಶ್ವತ ಅಪರಾಧಿ ಯಾಗಿರುವುದೇ ಒಳ್ಳೆಯದು ಎಂದು ಎನ್ನಿಸದೇ ಇರದು. ಅಷ್ಟೊಂದು ಐಶಾರಾಮಿ ಜೀವನ ಅಲ್ಲಿನ ಕಳ್ಳರಿಗೆ.
ಇನ್ನು ಸ್ವೀಡನ್ನಿನ ಪೊಲೀಸರು ಶಿಸ್ತಿಗೆ ಕರ್ತವ್ಯಕ್ಕೆ ಹೆಸರುವಾಸಿ. ಅವರ ಬಗ್ಗೆ ಇನ್ನೂ ಆಸಕ್ತಿಯಿದ್ದರೆ ಮುಂದಿನ ವೆಬ್ಸೈಟ್ ನೋಡಿ ''http://www.polisen.se/'' . ಅವರಿಗೆ ಸಮಾಜದಲ್ಲಿ ದೊಡ್ಡ ಗೌರವವಿದೆ. ಲಂಚ ಎನ್ನುವುದು ಅವರಿಂದ ಕೊಂಚ ದೂರವೇ ಇರುತ್ತದೆ. ಸರಕಾರ ಅವರಿಗೆ ಬೇಕಾದಷ್ಟು ಸಂಬಳ ಕೊಡುತ್ತದೆ. ಗಿಂಬಳಕ್ಕೆ ಕೈ ಚಾಚುವ ಪ್ರಮೇಯವಿಲ್ಲ. ಅವರನ್ನು ನೋಡಿದರೆ ಹೆದರಿಕೆ ಹುಟ್ಟುತ್ತದೆ. ಎತ್ತರದ ಶರೀರ, ಅಚ್ಚು ಕಟ್ಟಾದ ಮೈ ಅಳತೆ, ಗಂಭೀರ ವದನ, ಕೈಯಲ್ಲಿ ಹೊಸ ತಂತ್ರಜ್ಞಾನದ ಪಿಸ್ತೂಲ್, gun ಗಳು ಇರುತ್ತವೆ. ಅವರ ದೇಹದ ಅಳತೆ ನೋಡಿದರೆ ಅವರ ಕೈ ಒಂದೇ 3-4 ಜನರನ್ನು ಹೊಡೆಯಲು ಸಾಕು ಎನಿಸುತ್ತದೆ. ಇಂಥಹ ಗಂಡೆದೆಯ ಪೋಲೀಸರ ಮುಂದೆ ನಾನು ನಿಂತಿದ್ದೆ.
ಮೈ ನಡುಗುತ್ತಿತ್ತು. ಹೊರಗಡೆ -14 ಡಿಗ್ರಿ ಯಷ್ಟು ಚಳಿ. ಸ್ಟೇಷನ್ ಒಳಗಡೆ +28 ಡಿಗ್ರಿ ಆದರೆ ನನಗೂ -14 degree ಕ್ಕಿಂತಲೂ ಹೆಚ್ಚಿನ ಚಳಿ, ಭಯ ಒಮ್ಮೆಲೇ ಆಗಿತ್ತು. ಮೊದಲಿಗೆ ನನ್ನ ಸಂಪೂರ್ಣ ದೇಹವನ್ನು ಪರೀಕ್ಷಿಸಿ ನನ್ನಿಂದ ನನ್ನ ಮೊಬೈಲ್ ಅನ್ನು ಕಿತ್ತುಕೊಂಡರು. ನಂತರ ನನ್ನ ಬಗ್ಗೆ ವಿಚಾರಣೆ ಆರಂಬಿಸಿದರು. ನನ್ನ ಕುಲ ಗೋತ್ರ ಎಲ್ಲ ಜಾಲಾಡಿಸಲು ಪ್ರಾರಂಬವಾಯಿತು. ಮದ್ಯದಲ್ಲಿ ನಾನೊಮ್ಮೆ ಬಾಯಿ ಹಾಕಿ ನಾನೊಂದು ಸಲ ನನ್ನ ಹೆಂಡತಿಗೆ ಫೋನ್ ಮಾಡಲೇ? ಇಲ್ಲ ನನ್ನ ಬಾಸ್ ಗೆ ಫೋನ್ ಮಾಡಲೇ ಎಂದೆ. ಆ ಪೋಲೀಸರ ಬಾಯಿಂದ ಹುಂ ಎನ್ನುವ ಯಾವ ಶುಭ ಲಕ್ಷಣಗಳೂ ಗೋಚರಿಸಲಿಲ್ಲ. ಆ ತಾಯಿ ನಾನೇ ಮಗುವನ್ನು ಕಿಡ್ನಾಪ್ ಮಾಡಿದ್ದೇನೆ ಎಂಬ ಅಪಾದನೆ ಮಾಡಿದ್ದಳು. ಸಾಲದ್ದಕ್ಕೆ ಕಂಪ್ಲೈಂಟ್ ಬೇರೆ ಕೊಟ್ಟಿದ್ದಾಳೆ. ನನ್ನನ್ನು ರಕ್ಷಿಸಲು ಯಾರು ಬರಲು ಸಾದ್ಯ. ನನಗೆ ನಾನೇ? ತಾನೇ. ನಾನೆಷ್ಟು ಹೇಳಿದರೂ ಪೊಲೀಸರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ ಆ ತಾಯಿಯ ವೇದನೆ, ಕೋಪ ಅವರನ್ನು ಹಾಗೇ ನಂಬುವಂತೆ ಮಾಡಿತ್ತು. ನಂಗೆ ಆಗಲೇ ಅನ್ನಿಸತೊಡಗಿತ್ತು, ಜೀವನದಲ್ಲಿ ಜೈಲಿನ ದರ್ಶನ ಖಂಡಿತ ಇದೆ ಎಂದು. ಕೆಲವು ತಿಂಗಳ ಹಿಂದೆ ಭಾರತಕ್ಕೆ ಹೋದಾಗ ಜ್ಯೋತಿಷಿಯೊಬ್ಬರು ಒಂದು ಭವಿಷ್ಯ ಹೇಳಿದ್ದರು ''ಕೆಲವೇ ದಿನಗಳಲ್ಲಿ ನೀನು ನಿಮ್ಮ ಕುಟುಂಬದಲ್ಲೇ ಯಾರೂ ಹೋಗದ ಜಾಗಕ್ಕೆ ಹೋಗುತ್ತಿಯಾ'' ಎಂದು. ಬಹುಷ: ಅವರು ಹೇಳಿದ್ದು ಇದೆ ಇರಬೇಕು. ನಮ್ಮ ಕುಟುಂಬದಲ್ಲೇ ಯಾರೂ ಹೋಗದ ಜೈಲಿಗೆ ಬಹುಷ: ನಾನು ಹೋಗುವೆನೆಂದು ಆಗ ಅನ್ನಿಸತೊಡಗಿತು.
ವಿಧಿಯಾಟ ಹೇಗೆ ನೋಡಿ, ಹತ್ತಾರು ಕೊಲೆ ಮಾಡಿದವ ತನಗೆ ಗೊತ್ತೇ ಇಲ್ಲದಂತೆ ತಿರುಗುತ್ತಾನೆ. ಆದರೆ ಇನ್ನೊಬ್ಬರಿಗೆ ಸಹಾಯ ಮಾಡಲು ಹೋದ ನನಗೆ ಪೋಲೀಸರ ದರ್ಶನ ಭಾಗ್ಯ. ಜೀವನವೆಂದರೆ ಸುಖ ದು:ಖ ಗಳ ಸಮರಸದ ಪ್ಯಾಕೇಜ ಎಂದು ಯಾರೋ ಹೇಳಿದ್ದು ನೆನಪಿಗೆ ಬಂತು. ಹೌದು, ಬದುಕಿನ ಜಟಕಾ ಬಂಡಿಯಲ್ಲಿ ಯಾರೆಲ್ಲ ಇರುತ್ತಾರೆ, ಬರುತ್ತಾರೆ, ಎಷ್ಟೋ ಸ್ನೇಹಿತರು, ಎಷ್ಟೋ ಹಿತ ಶತ್ರುಗಳು, ಎಷ್ಟೋ ವೈರಿಗಳು. ರಕ್ತ ಸಂಭಂಧವೆ ಇಲ್ಲದಿದ್ದರೂ ನಮಗೆ ಜೀವವನ್ನೇ ಕೊಡುವ ಆತ್ಮೀಯರು, ಆದಷ್ಟು ನಮ್ಮನ್ನು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡಲು ಪ್ರಯತ್ನಿಸುವ ಭಂಡ ಮನುಷ್ಯರು, ಹೀಗೆ ಎಲ್ಲರೂ ನಮ್ಮೊಂದಿಗೆ ಬದುಕಿನ ಗಾಡಿಯಲ್ಲಿ ಪ್ರಯಾಣಿಸುತ್ತಾರೆ. ಆ ಗಾಡಿಯಲ್ಲಿ ಇಂದು ಪೋಲೀಸರ ಪ್ರಯಾಣ.
ಒಂದು ಮಾತನ್ನು ಹೇಳಲೇಬೇಕು. ಇಲ್ಲಿನ ಪೊಲೀಸರಲ್ಲಿ ಒಂದು ವಿಧೇಯತೆ ಇದೆ, ವಿನಯತೆ ಇದೆ. ದರ್ಪವಿಲ್ಲ. ಕರ್ತವ್ಯ ಪ್ರಜ್ಞೆಯಿದೆ. ಸಮಯ ಪ್ರಜ್ಞೆಯಿದೆ. ಆ ತಾಯಿ ಯ ಮಾತಿನಲ್ಲಿ ಇರುವ ಸತ್ಯಾಂಶ ಹಾಗೂ ನನ್ನ ಮಾತಿನಲ್ಲಿರುವ ಸತ್ಯತೆಯನ್ನು ಅಳೆದು ತೂಗುತ್ತಿದ್ದರು. ಪರಿ ಪರಿಯಾಗಿ ಬೇಡಿದರೂ ನನ್ನ ಬಾಯಿಯಿಂದ ಒಂದೇ ಉತ್ತರ '' ಆ ತಾಯಿ ನನ್ನ ಮೇಲೆ ಸುಮ್ಮನೆ ಅಪವಾದ ಹಾಕುತ್ತಿದ್ದಾಳೆ'' ಎಂದು. ಆ ಮಹಾತಾಯಿಯಲ್ಲಿ ಹೋಗಿ ನಡೆದುದನ್ನು ಹೇಳಿದೆ. ಆದರೆ ಅವಳು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಯಾವ ತಾಯಿಯಾದರೂ ಅಷ್ಟೇ ಅಲ್ಲವೇ? ಮಗುವನ್ನು ಅರೆಕ್ಷಣ ಕಾಣದಿದ್ದರೆ ಚಡಪಡಿಸುತ್ತಾರೆ. ಅಂಥಹುದರಲ್ಲಿ ಮಗುವನ್ನು ಎತ್ತಿಕೊಂಡ ನಾನು ಬಸ್ಸಿನಲ್ಲಿ ಹೋದೆ ಎಂದರೆ ಏನೇನೋ ಅವಳು ಕಲ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಳು.
ನನಗೆ ಹೇಳಲು ಏನೂ ಉಳಿದಿರಲಿಲ್ಲ. ಫೋನ್ ಮಾಡಲು ಅವರು ಅವಕಾಶ ನೀಡಲಿಲ್ಲ. ಸುಮಾರು ಒಂದು ಘಂಟೆ ವಿಚಾರಣೆ ನಡೆಸಿದರೂ ಯಾವುದೇ ವಿಷಯವನ್ನು ನನ್ನ ಬಾಯಲ್ಲಿ ಅವರು ಕೇಳಲಿಲ್ಲ ''ನಾನು ಅವಳಿಗೆ ಸಹಾಯ ಮಾಡಲು ಮಗುವನ್ನು ಎತ್ತಿಕೊಂಡಿದ್ದೇನೆ'' ಎನ್ನುವ ವಿಷಯವೊಂದನ್ನು ಬಿಟ್ಟು.
ಅಲ್ಲಿನ ಪೋಲೀಸರ ತಾಳ್ಮೆ ಮೀರುತ್ತಿತ್ತು. ಇವನು ಸುಮ್ಮನೆ ಬಾಯಿ ಬಿಡುವುದಿಲ್ಲ ಎಂದು ನಿರ್ಧರಿಸಿದರೋ ಏನೋ, ಕೂಡಲೇ ಒಬ್ಬ ನನ್ನ ಬಗ್ಗಿಸಿ ಕೈಯನ್ನು ಹಿಂದಕ್ಕೆ ಕಟ್ಟಿ ಬೇಡಿ ಹಾಕಿದ. ಇನ್ನೊಬ್ಬ ನನ್ನನ್ನು ಹಿಡಿದುಕೊಂಡ. ಏನಾಗುತ್ತಿದೆ ಎಂದು ನನಗೆ ತಿಳಿಯದಾಗಿತ್ತು, ಆದರೆ ಪೋಲೀಸರ ಹೊಡೆತದ ರುಚಿ ಖಂಡಿತ ಇಂದು ಸಿಗುತ್ತದೆ ಎಂಬುದು ಮಾತ್ರ ಖಾತ್ರಿಯಾಗಿತ್ತು. ಒಬ್ಬ ಪೋಲಿಸ ತನ್ನ ಬಲವಾದ ಕೈಯಿಂದ ನನ್ನ ಬೆನ್ನ ಮೇಲೆ ಗುದ್ದಲು ಕೈ ಎತ್ತಿದ, ಇನ್ನೇನು ಅವನ ಬಲವಾದ ಕೈ ನನ್ನ ಮೇಲೆ ಅಪ್ಪಳಿಸುತ್ತದೆ , ನಾನು ಜೀವನದಲ್ಲೇ ಮೊದಲ ಬಾರಿಗೆ ಇಂಥಹ ದಿನವನ್ನೂ ನೋಡುತ್ತೇನೆ ಎಂದುಕೊಳ್ಳುತ್ತಿದ್ದೇನೆ.......ಅಷ್ಟರಲ್ಲಿ...
ಅಷ್ಟರಲ್ಲಿ ''ಬೇಗ ಏಳಿ, ಕನಸು ಕಂಡಿದ್ದು ಸಾಕು, ತಿಂಡಿ ಸಿದ್ದವಾಗಿದೆ, ಎದ್ದು ಹಲ್ಲು ತಿಕ್ಕಿ ಮುಖ ತೊಳೆದು ತಿಂಡಿ ತಿನ್ನಲು ಬನ್ನಿ'' ಎಂದು ಒಲವಿನ ಮಡದಿ ಹಾಸಿಗೆಯ ಹೊದಿಕೆಯನ್ನು ಸರಿಸಿದಳು. ಪೋಲಿಸರಿಂದ ಹೊಡೆತ ತಿನ್ನುವ ಸುಂದರ ಕನಸು ಹಾಗೆಯೇ ಮುರಿದು ಬಿತ್ತು.
'' ಇನ್ನೈದು ನಿಮಿಷ ಬಿಟ್ಟು ಎಬ್ಬಿಸಿದ್ದರೆ ನಿನಗೆ ಆಗುತ್ತಿರಲಿಲ್ಲವೇ, ನನ್ನ ಕನಸು ಹಾಳು ಮಾಡಿದೆ'' ಎಂದು ಅವಳಲ್ಲಿ ಹುಸಿ ಮುನಿಸು ತೋರಿದೆ.
ಮುಖ ತೊಳೆದು ಬಂದವನಿಗೆ ''ಬಿಸಿ ಬಿಸಿ'' ಆದ ದೋಸೆ ಕಾಯುತ್ತಿತ್ತು. ಮನಸಿನಲ್ಲಿಯೇ ಕನಸಿನ ಬಗ್ಗೆ ನಗುತ್ತಾ ದೋಸೆ ತಿಂದು ಆಫೀಸ್ ಕಡೆ ಹೆಜ್ಜೆ ಹಾಕಿದೆ.
ಆತ್ಮೀಯರೇ, ಕಳೆದ ಒಂದು ವಾರದಿಂದ ನನ್ನೊಂದಿಗೆ ಕನಸಿನಲ್ಲಿ ಪ್ರಯಾಣಿಸಿದ್ದಿರಿ, ನಿಮಗೂ ಇಂಥಹ ಕನಸು ಬಿದ್ದಿತ್ತೆ? ಹಂಚಿಕೊಳ್ಳುತ್ತಿರಲ್ಲ.
ಸರ್ವರಿಗೂ ''ಮಕರ ಸಂಕ್ರಾಂತಿಯ'' ಹಾರ್ದಿಕ ಶುಭಾಶಯಗಳು.
ಮುಂದಿನ ವಾರ ಮತ್ತೆ ಸಿಗುತ್ತೇನೆ.