Saturday, September 12, 2009

ಮರೆಯದಿರು ಮನವೇ

- ಗುರು ಬಬ್ಬಿಗದ್ದೆ

ಮರೆಯಬೇಡ ಮರೆಯಬೇಡ ಮರೆಯಬೇಡ ನನ್ನ ಮನವೇ
ಮರೆತು ನೀನು ಮರುಗ ಬೇಡ ಮನದ ಪ್ರೇಮವೇ
ಕೊರಗಬೇಡ ಕೊರಗಬೇಡ ಕೊರಗಬೇಡ ಜೀವ ಸೆಲೆಯೇ
ಕೊರಗಿ ನೀನು ದುಡುಕಬೇಡ ಭಾವ ಬಿಂದುವೇ
ಸೊರಗಿ ಹೋದ ಮರವೂ ಕೂಡ ಮರಳಿ ಬಾಳ ಕಾಯುತಿಹುದು
ಪುನ: ಚಿಗುರಿ ಚಿಗುರಿ ಪುನ: ನಗುವ ತೋರ್ವದು
ಮುಗುದೆ ನೀನು ಮುದುಡಬೇಡ ಮುದದಿ ನಿನ್ನ ಅಪ್ಪಿಕೊಳುವೆ
ಕ್ಷಣದಿ ನೆನೆದು ನೆನೆದು ಕ್ಷಣದಿ ಬದುಕ ಬಯಸುವೆ
ಕಾಲನೆದೆಯ ಗರ್ಭದಲ್ಲಿ ಸತತ ಕೃಷಿಯು ನಡೆಯುತಿಹುದು
ಹುಟ್ಟು ಸಾವು ಸಾವು ಹುಟ್ಟು ವಿಧಿಯ ಬರಹವೋ
ಮನವಿದೆನ್ನ ಅರ್ಪಿಸಿಹೆನು ಕ್ಷಣದೊಳೆನ್ನ ವದನ ನೋಡು
ಕದನ ಸರಸ ಸರಸ ಕದನ ಬದುಕಿನಾಟವೋ

23 comments:

PARAANJAPE K.N. said...

ಚೆನ್ನಾಗಿದೆ. ಜೀವನದ ಗತಿವಿಧಿಯನ್ನು ಸಾರುವ ನೋವಿನ ನ೦ತರ ನಲಿವು ಇರುವುದೆ೦ದು ಹೇಳುವ ಕಾವ್ಯ.

ಮೂರ್ತಿ ಹೊಸಬಾಳೆ. said...

@ ಗುರು,
ಬಹಳ ದಿನಗಳ ನಂತರ ಮತ್ತೊಂದು ವಿಚಾರಪೂರ್ಣ ಕವನ.
ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಮೂರ್ತಿ,
ಕೆಲಸದ ಒತ್ತಡದಿಂದ ಬರೆಯಲಾಗುತ್ತಿಲ್ಲ, ಆದರೆ ಬರೆಯಲು ಪ್ರಯತ್ನಿಸುತ್ತಿರುವೆ ಹಾಗೆ ಎಲ್ಲ ಬ್ಲಾಗುಗಳಿಗೂ ಭೆಟ್ಟಿ ನೀಡಬೇಕು.
ಅಭಿಪ್ರಾಯಕ್ಕೆ ಧನ್ಯವಾದಗಳು

sunaath said...

ಬಾಳಿನ ಬಗೆಯನ್ನು ಬಿಂಬಿಸುವ ಸುಂದರ ಕವನ. ತನ್ನ ರಚನಾವಿಧಾನದಿಂದ ಮತ್ತೆ ಮತ್ತೆ ಮೆಲಕು ಹಾಕಬಹುದಾದ ಗೀತೆಯಾಗಿದೆ.

Ittigecement said...

ಗುರುಮೂರ್ತಿಯವರೆ...

ಕವಿತೆ ಬರೆಯುವದು ನಿಮಗೆ ಸಿದ್ಧಿಸಿದೆ...

ಚಂದದ ಕವನಕ್ಕೆ..
ಅಭಿನಂದನೆಗಳು...

ಮನಸು said...

tumba chennagide, jeevanda haadiyannu chennagi tilisideeri

ಸವಿಗನಸು said...

ಗುರು,
ಬಾಳಿನ ಹಾದಿ ಸೊಗಸಾಗಿ ಹೇಳುತಿದೆ ನಿಮ್ಮ ಕವನ...
ಮಹೇಶ್!

ಸಾಗರದಾಚೆಯ ಇಂಚರ said...

ಸುನಾಥ್,
ಈ ಕವನ ನನಗೆ ಬಲು ಇಷ್ಟವಾದ ಕವನ, ಈ ಕವನಕ್ಕೆ ರಾಗ ಹಾಕುವುದಾಗಿ ಕೆಲವು ಸಂಗೀತಗಾರರು ಹೇಳಿದ್ದಾರೆ, ನೋಡೋಣ ಏನಾಗುತ್ತದೆ ಎಂದು,
ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಎಲ್ಲ ನಿಮ್ಮ ಪ್ರೀತಿ ಆಶೀರ್ವಾದ. ನಿಮ್ಮ ಪ್ರೋತ್ಸಾಹ ಸದಾ ಇರಲಿ,

ಸಾಗರದಾಚೆಯ ಇಂಚರ said...

ಮನಸು,
ಹೌದು, ಜೀವದ ಸಂಕೀರ್ಣತೆಗಳ ಮೂರ್ತ ರೂಪವೇ ಇದರ ಹೂರಣ

ಸಾಗರದಾಚೆಯ ಇಂಚರ said...

ಮಹೇಶ್,
ನೀವು ಅಂದಿದ್ದು ನಿಜ, ಹೀಗೆಯೇ ಬರುತ್ತಿರಿ
ಪ್ರೀತಿ ಇರಲಿ

ಜಲನಯನ said...

ಗುರು, ಪದ ಪುನಃ ಪ್ರಯೋಗದ ಮೂಲಕ ಸಾಲಿಗೆ ತಿರುವುಗಳನ್ನು ಕೊಟ್ಟು ಅದರ ದಿಕ್ಕು ಮತ್ತು ಅದು ಮಂದಿಸುವ ವಿಷಯದ ತೀವ್ರತೆಯನ್ನು ಹೆಚ್ಚಿಸಿದ್ದೀರಿ...ಸರಳ ಪದಗಳ ಉತ್ತಮ ಬಳಕೆ ಕವಿತೆಯ ಸೊಬಗನ್ನು ಇನ್ನೂ ಹೆಚ್ಚಿಸಿವೆ.

ಸಾಗರದಾಚೆಯ ಇಂಚರ said...

ಜಲನಯನ,
ನಿಮಗೆ ಹಿಡಿಸಿದರೆ ಅದೇ ನನಗೆ ಸಂತೋಷ,
ಹೀಗೆಯೇ ನನ್ನ ಪ್ರೋತ್ಸಾಹಿಸುತ್ತಿರಿ, ಸದಾ ಬರುತ್ತಿರಿ

ತೇಜಸ್ವಿನಿ ಹೆಗಡೆ said...

ತುಂಬಾ ಸುಂದರ ಕವನ. ಗೇಯತೆಯನ್ನು ಹೊಂದಿದ್ದು, ಬಲು ಅರ್ಥವತ್ತಾಗಿದೆ.

ಸಾಗರದಾಚೆಯ ಇಂಚರ said...

ತೇಜಸ್ವಿನಿ ಮೇಡಂ,
ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು, ಕವನದ ಒಳ ಅರ್ಥವೇ ಇದರ ಹೂರಣ,

shivu.k said...

ಸಾಂತ್ವನದಿಂದ ಜೀವನಪ್ರೀತಿಯನ್ನು ಬಿಂಬಿಸುವ ಸೊಗಸಾದ ಕವನ. ನನಗೆ ಕವನ ಬರೆಯಲು ಕಷ್ಟ. ನೀವು ಅದೆಷ್ಟು ಸುಲಭವಾಗಿ ಬರೆದುಬಿಡುತ್ತೀರಿ...

ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಶಿವೂ ಸರ್,
ನಿಮ್ಮ ಹಗೆ ಫೋಟೋ ತೆಗೆಯಲು ನನಗೆ ಬರದು ನೋಡಿ, ನಿಮ್ಮ ಫೋಟೋ ನೋಡಿದಾಗಲೆಲ್ಲ ಹಾಗೆ ಅನಿಸಿದೆ ನನಗೆ,
ಅಭಿಪ್ರಾಯಕ್ಕೆ ಧನ್ಯವಾದಗಳು

ಕ್ಷಣ... ಚಿಂತನೆ... said...

ಗುರುಮೂರ್ತಿಯವರೆ, ಕವನ ಚೆನ್ನಾಗಿದೆ. ಜೀವನದ ಒಳಗಿನ ನೋಟವನ್ನೆಲ್ಲ ಆವೀರ್ಭವಿಸಿದಂತಿದೆ.

ಸ್ನೇಹದಿಂದ,

ಚಂದ್ರು

ಸಾಗರದಾಚೆಯ ಇಂಚರ said...

ಚಂದ್ರು ಸರ್,
ನಿಮ್ಮ ಅಭಿಪ್ರಾಯಕ್ಕೆ ಅನಂತ ಧನ್ಯವಾದಗಳು, ಹೀಗೆಯೇ ನನ್ನನ್ನು ತಿದ್ದಿ ತೀಡುತ್ತಿರಿ

ವಿನುತ said...

ಗುರುಮೂರ್ತಿಯವರೇ,

ತು೦ಬಾ ತಡವಾಗಿ ಬ೦ದಿದೀನಿ, ಕ್ಷಮೆಯಿರಲಿ
ಅಬ್ಬಾ! ನಿಜಕ್ಕೂ ಒ೦ದು ಅರ್ಥಪೂರ್ಣ ಕವನ. ಮತ್ತೆ ಮತ್ತೆ ಓದಿಕೊಳ್ಳುತ್ತಿದ್ದೇನೆ. ಅದೇನೋ ಗೊತ್ತಿಲ್ಲ, ಒ೦ದು ರಾಗಕ್ಕೆ ಸೊಗಸಾಗಿ ಹೊ೦ದಿಕೊಳ್ಳುತ್ತಿದೆ. ಹಾಗಾಗಿ ಹಾಡಿಕೊಳ್ಳುತ್ತಿದ್ದೇನೆ ಎನ್ನಲೂ ಅಡ್ಡಿಯಿಲ್ಲ.
ಸ೦ಗೀತದ ಲಯಕ್ಕೆ ತಕ್ಕುದಾಗಿ ಬರೆದಿದ್ದೀರೋ ಗೊತ್ತಿಲ್ಲ, ಆದರೆ ಜೀವನದ ಲಯವನ್ನು ಚೆನ್ನಾಗಿ ಹಿಡಿದಿದ್ದೀರಿ ಕವನದಲ್ಲಿ.
ಧನ್ಯವಾದಗಳು ಚೆ೦ದದ ಕವನ ನೀಡಿದ್ದಕ್ಕೆ.

ಸಾಗರದಾಚೆಯ ಇಂಚರ said...

ವಿನುತ,
ನನಗೂ ರಾಗ ಹಾಕುವ ಆಸೆ ಇದಕ್ಕೆ, ಅದೇನೋ ಮನಸ್ಸಿಗೆ ಹಿತ ನೀಡುತ್ತದೆ ಕವನ

ನಿಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ವಿನುತ,
ನನಗೂ ರಾಗ ಹಾಕುವ ಆಸೆ ಇದಕ್ಕೆ, ಅದೇನೋ ಮನಸ್ಸಿಗೆ ಹಿತ ನೀಡುತ್ತದೆ ಕವನ

ನಿಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು