- ಗುರು ಬಬ್ಬಿಗದ್ದೆ
ಅವಳಿಂದಲೇ ಬಾಳು, ಅವಳಿಲ್ಲದೇ ಗೋಳು
ನನ್ನೆದೆಯ ಬಾಂದಳದಿ ಹೊಳೆವ ತಾರೆ ಅವಳು
ಚೈತ್ರಮಾಸದ ಕೋಗಿಲೆ, ಮಾಧುರ್ಯದವಳು
ಮುಂಗಾರಿನ ಮೋಡದ ಹಿಂದೆ ಸ್ವಾತಿಮುತ್ತು ಅವಳು
ನನ್ನ ಜೀವನ ಪುಟದಿ, ಅಕ್ಷರವಾದವಳು
ಸಕ್ಕರೆಯ ಮಾತಿನಲಿ, ಪ್ರೀತಿ ಕೊಟ್ಟವಳು
ನೋವಿರಲಿ, ನಲಿವಿರಲಿ, ಅನುಸರಿಸಿದವಳು
ತುಳಿದು ಸಪ್ತಪದಿ, ಸಂಗಾತಿಯಾದವಳು
ಹೊತ್ತು ಹೆತ್ತವರನೆಲ್ಲ, ಬಿಟ್ಟೆಲ್ಲ ಬಂದಿಹಳು
ಚಿತ್ತದಿ ನನ್ನಯ ಮನವ, ಮುದದಿ ಗೆದ್ದಿಹಳು
ತಾಯಿ ಮಮತೆಯ ಎನಗೆ ಧಾರೆ ಎರೆದಿಹಳು
ಎನ್ನಯ ಸಾಧನೆಗೆ ಸ್ಪೂರ್ಥಿ ಚಿಲುಮೆಯು ಅವಳು
33 comments:
ಗುರು ಸರ್,
ಸಂಗಾತಿಯ ಬಗೆಗೆ ಅರ್ಪಣಾ ಭಾವದಿಂದ ಬರೆದ ಕವನ ತುಂಭಾ ಚೆನ್ನಾಗಿದೆ..ಭಾವನೆಗಳು ಚೆನ್ನಾಗಿ ಅಭಿವ್ಯಕ್ತಿಗೊಂಡಿವೆ...
ಧನ್ಯವಾದಗಳು.
ಗುರುಮೂರ್ತಿಯವರೆ...
ತುಂಬಾ ಭಾವ ಪೂರ್ಣವಾಗಿದೆ...
ಬಾಳಸಂಗಾತಿಯಲ್ಲಿ ಪ್ರೇಮದ ಹಲುಅವು ಮುಖಗಳನ್ನು ನೋಡುವ ನಿಮ್ಮ..
ಕವನ ಇಷ್ಟವಾಯಿತು...
ಅಭಿನಂದನೆಗಳು...
ಗುರುಮೂರ್ತಿಯವರೇ
ಕವನ ಚೆನ್ನಾಗಿ ಮೂಡಿಬ೦ದಿದೆ. ನಿಮ್ಮ ಸ್ಪೂರ್ತಿ ಚಿಲುಮೆ ಎ೦ದೆ೦ದಿಗೂ ನಿತ್ಯ ನೂತನವಾಗಿರಲಿ ಎ೦ಬ ಹಾರೈಕೆ ನನ್ನದು.
Gurumurthi avare, sangaathi edegina nimma bhavanegalu chennagi vyaktha aagide. :) e santhasavu nithyavu iralendu haaraike nannadu.
nice kavana :)
nice one
ಗುರುಮೂರ್ತಿ ಸರ್,
ಕವನ ಭಾವನಾತ್ಮ ಹಾಗೂ ಆತ್ಮೀಯತೆಯಿಂದ ಕೂಡಿದೆ. ಧನ್ಯವಾದಗಳು.
ಸ್ನೇಹದೊಂದಿಗೆ,
ಪ್ರೀತಿ ನವಿರು ನವಿರಾಗಿರುವ ಕವನ. ಚನ್ನಾಗಿದೆ.
ತುಂಬಾ ಚೆನ್ನಾಗಿದೆ... ನಿಮ್ಮವರ ಮೇಲಿನ ಪ್ರೀತಿ ಕವನದಲ್ಲಿ ತುಂಬಿ ಬಂದಿದೆ.
ಶಿವೂ ಸರ್,
ನಿಮ್ಮ ಅಭಿಪ್ರಾಯಕ್ಕೆ ತುಂಬು ಹ್ರದಯದ ಧನ್ಯವಾದಗಳು
ಪ್ರಕಾಶಣ್ಣ,
ಬಾಳ ಸಂಗಾತಿ ನಮಗೋಸ್ಕರ ಎಲ್ಲವನ್ನು ತ್ಯಜಿಸಿ ಬರುತ್ತಾಳೆ, ಅವಳ ತ್ಯಾಗ ದೊಡ್ಡದು
ಅಭಿಪ್ರಾಯಕ್ಕೆ ಧನ್ಯವಾದಗಳು
ಪರಾಂಜಪೆ ಸರ್,
ನಿಮ್ಮ ಹಾರೈಕೆ ಸದಾ ಇರಲಿ
ಬಾಲು ಸರ್,
ನಿಮ್ಮ ಹಾರೈಕೆಗೆ ಸದಾ ಋಣಿ
ಹೀಗೆಯೇ ಬರುತ್ತಿರಿ
ವೀಣಾ,
ಹೀಗೆಯೇ ಬರುತ್ತಿರಿ
ಶಿವಪ್ರಕಾಶ್ ಸರ್,
ಇಷ್ಟವಾಗಿದ್ದಕ್ಕೆ ಧನ್ಯವಾದಗಳು
ಕ್ಷಣ ಚಿಂತನೆ,
ನನ್ನ ಭಾವನೆಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು , ಹೀಗೆಯೇ ಬರುತ್ತಿರಿ
ಬಿಸಿಲ ಹನಿ,
ಕವನಕ್ಕೆ ಅಭಿಪ್ರಾಯ ತಿಳಿಸಿದ್ದಿರ, ತುಂಬಾ ಆನಂದವಿದೆ , ಸದಾ ಬರುತ್ತಿರಿ
ಮನಸು,
ನಿಮ್ಮ ಪ್ರೀತಿಯ ಹಾರೈಕೆ ಹೀಗೆ ಇರಲಿ, ಬರುತ್ತಿರಿ, ಬರೆಯುತ್ತಿರುವೆ
ಸಂಗಾತಿಯ ಬಗ್ಗೆ ನಿಮಗಿರುವ ಒಲವು, ಪ್ರೀತಿ,ಭಾವನೆಗಳನ್ನು ಸರಳ ರೂಪದಲ್ಲಿ ಹೊರಹಾಕಿದ್ದೀರಾ
ಚೆನ್ನಾಗಿದೆ
ರೂಪ
ಸು೦ದರ ಕವನ. ನಿಮ್ಮ ಮನವ ಗೆದ್ದ, ಸ್ಫೂರ್ತಿಯ ಸೆಲೆಯಾದ ನಿಮ್ಮ ಸ೦ಗಾತಿಗೊ೦ದು ಅಪೂರ್ವ ಕಾಣಿಕೆ.
ರೂಪ ಮೇಡಂ,
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್,
ಹೀಗೆ ಬರುತ್ತಿರಿ
ವಿನುತ,
ನೀವು ಅಂದಿದ್ದು ನಿಜ, ಇದೊಂದು ಅಪೂರ್ವ ಕಾಣಿಕೆ,
ಹೀಗೆಯೇ ಬರುತ್ತಿರಿ
ಗುರು ಸರ್,
ನಿಮ್ಮ ಕವನ ತುಂಬಾ ಚೆನ್ನಾಗಿದೆ. ಹೀಗೆ ಬರೆಯುತ್ತಿರಿ...
ನಿಮ್ಮಾಕೆ ಬಗ್ಗೆ ಚೆನ್ನಾಗಿ ಬರೆದಿದ್ದೀರ..
ರಂಜನ ಮೇಡಂ,
ತುಂಬಾ ಥ್ಯಾಂಕ್ಸ್ ಅಭಿಪ್ರಾಯಕ್ಕೆ , ಹೀಗೆ ಬರ್ತಾ ಇರಿ
ಅಂತರ್ವಾಣಿ,
ತುಂಬಾ ಧನ್ಯವಾದಗಳು, ಮನೆಯಾಕೆ ಮನಸ್ಸಿನ ಒಡತಿಯಲ್ಲವೇ,
ಸರ್ ಕವನಗಳು ಸೂಪರ್... ಯಾರವಳು? ಮನಸಲ್ಲಿ ಕವನವ ಹುಟ್ಟು ಹಾಕುತ್ತಿರುವವಳು
ಪ್ರಭುರಾಜ್ ಸರ್,
ಅಭಿಪ್ರಾಯಕ್ಕೆ ಧನ್ಯವಾದಗಳು,
ನಿಮ್ಮಷ್ಟು ಕಲ್ಪನೆ ಮಾಡೋಕೆ ಎಲ್ಲಿ ಆಗುತ್ತೆ ಸರ್, ಮದುವೆನೇ ಆಗದೆ ಏನು ಚೆನ್ನಾಗಿ ಬರಿತಿರಾ. ಹೀಗೆ ಬರುತ್ತಾ ಇರಿ
ಗುರುಮೂರ್ತಿ ಅವರೆ...
ಚೆಂದದ ಕವನ.
ಊರಿಗೆ ಹೋಗುವ ಖುಷಿ ಖುಷಿಯಲ್ಲಿ ಮನದೊಡತಿಯ ಮೇಲೆ ಇನ್ನಷ್ಟು ಪ್ರೀತಿಯ ಚೆಲ್ಲುತ್ತಿದ್ದೀರಿ ಅನ್ನಿಸ್ತಿದೆ :-)
ಶಾಂತಲ,
ನಿಜ, ಮುಂದಿನ ತಿಂಗಳು ಊರಿಗೆ ಹೋಗ್ತಾ ಇದಿವಿ, ಅದಕ್ಕೆ ಕವನ.
ಅಭಿಪ್ರಾಯಕ್ಕೆ ಧನ್ಯವಾದಗಳು
Really refreshing the romance. Lovely keep it up
Really refreshing the romance. Lovely keep it up
sooooo super sir..
Post a Comment