-ಗುರು ಬಬ್ಬಿಗದ್ದೆ
ಹೊತ್ತು ಮೂಡುವ ಮೊದಲೇ ಹೊತ್ತಿ ಉರಿಯಿತು ಬೆಂಕಿ
ಹಚ್ಚ ಹಸುರಿನ ಹಸುಳೆ ಬಾಳದಾರಿಯ ಕನಸು
ಹಚ್ಚನೆಯ ಕೆಸರಿನಲಿ ನುಚ್ಚು ನೂರಾಯಿತು
ನಿತ್ಯ ಬರುವ ಗಾಳಿ ಎತ್ತಿ ತಂದಿತು ಉರಿಯ
ನಗುವ ಮರೆಸುತ ಮನದಿ ವಿಷ ತುಂಬಿತು
ಜಾತಿ-ಜಾತಿಯ ನಡುವೆ ದ್ವೇಷಾಸೂಯೆಯ ಬೆಂಕಿ
ಜಾತ್ಯಾತೀತತೆ ನಮ್ಮ ಕನಸಾಯಿತು
ಕಣ್ಣ ಬೆಳಗುವ ಬೆಳಕು ಕಣ್ಣನ್ನೇ ಕೊರೆದಿತ್ತು
ಹಣ್ಣ ಕೊಯ್ಯುವ ಕತ್ತಿ ಕತ್ತು ಕೊಯ್ದಿತ್ತು
ನಾ ಮೇಲು ನೀ ಮೇಲು ಎಂಬ ಒಣ ಭಾವನೆಯು
ಬಟ್ಟ ಬಯಲಲಿ ಬಿಟ್ಟ ಕರುವಾಯಿತು
ಎಚ್ಚೆತ್ತ ಎಚ್ಚರಿಕೆ ಅಚ್ಚಳಿಯದೇ ಉಳಿದು
ಬಿತ್ತುತ್ತ ಪ್ರೇಮವನು ದ್ವೇಷವನು ತೊರೆದು
ಒಟ್ಟಿನಲಿ ಒಂದಾಗಿ ಬೆಚ್ಚನೆ ಹೊದಿಕೆಯ ಹೊದ್ದು
ಹೊತ್ತು ಇಳಿಯುವ ಮೊದಲೇ ಬೆಂಕಿ ಆರಿಸಿ ಜಗದಿ
ಹತ್ತಾರು ಹಸುಳೆಗಳ ಭವ್ಯ ದೇಶದ ಕನಸು
ಹೊತ್ತಿ ಬೆಳಗಲಿ ಮನದಿ ನಮಗೂ ವಯಸಾಯಿತು
22 comments:
sariyada samayakke barediddeeri !
ಗುರುಮೂರ್ತಿಯವರೇ,
ಚೆನ್ನಾಗಿದೆ. ಕಣ್ಣ ಬೆಳಗುವ ಬೆಳಕು ಕಣ್ಣನ್ನೇ ಕೊರೆದಿತ್ತು, ಹಣ್ಣ ಕೊಯ್ಯುವ ಕತ್ತಿ ಕತ್ತು ಕೊಯ್ದಿತ್ತು, ನಾ ಮೇಲು ನೀ ಮೇಲು ಎಂಬ ಒಣ ಭಾವನೆಯು ಬಟ್ಟ ಬಯಲಲಿ ಬಿಟ್ಟ ಕರುವಾಯಿತು - ಬಹಳ ಅರ್ಥ ತು೦ಬಿಸಿ ಬರೆದಿದ್ದೀರಿ.
ಕವನ ಪ್ರಾಸಬದ್ಧವಾಗಿ ಮೂಡಿಬಂದಿದೆ. ಕವನದ ಆಶಯ ಕೂಡ ಚನ್ನಾಗಿದೆ.
ಪ್ರತಿಯೊಂದು ಸಾಲುಗಳು ಕೂಡ ಅರ್ಥಪೂರ್ಣವಾಗಿವೆ
ಒಳ್ಳೆಯ ಕವನ
Guru Sir,
titlege takkante kavana..
channagide..
ಗುರುಮೂರ್ತಿ ಸರ್,
ಅರ್ಥಪೂರ್ಣವಾದ ರಚನೆ...ಕವನದ ಭಾವನೆ ಮತ್ತು ಪದಗಳ ಜೋಡಣೆ ಇಷ್ಟವಾಯಿತು...
ಗುರು ಸರ್,
ತುಂಬಾನೇ ಉತ್ತಮವಾದ ಮತ್ತು ಮನಸ್ಸಿಗೆ ಹತ್ತಿರವಾದ ಬರಹ, ಓದಿದ ಮೇಲೆ ಯೋಚನೆಗೆ ಒಡ್ಡುತ್ತದೆ ನಮ್ಮನ್ನು.
ಗುರುಮೂರ್ತಿ ಅವರೆ...
ಚೆಂದಚೆಂದದ ಸಾಲುಗಳ ಹೆಣೆದಿದ್ದೀರಿ.
"ಕಣ್ಣ ಬೆಳಗುವ ಬೆಳಕು ಕಣ್ಣನ್ನೇ ಕೊರೆದಿತ್ತು
ಹಣ್ಣ ಕೊಯ್ಯುವ ಕತ್ತಿ ಕತ್ತು ಕೊಯ್ದಿತ್ತು
ನಾ ಮೇಲು ನೀ ಮೇಲು ಎಂಬ ಒಣ ಭಾವನೆಯು
ಬಟ್ಟ ಬಯಲಲಿ ಬಿಟ್ಟ ಕರುವಾಯಿತು"
ಇನ್ನಷ್ಟು ಎಂಬಂತೆ ಈ ಮೇಲಿನ ಸಾಲುಗಳು ಇಷ್ಟವಾದವು.
Ismail Mk Shivamogga ಸರ್,
ಧನ್ಯವಾದಗಳು, ನಿಮ್ಮ ಭೇಟಿ ಹೀಗೆ ಇರಲಿ
ಪರಾಂಜಪೆ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಕೆಲವು ಸಾಲುಗಳು ತುಂಬಾ ಹಿಡಿಸಿದ್ದಕ್ಕೆ ಹೆಮ್ಮೆ ಇದೆ
ಬಿಸಿಲ ಹನಿ,
ಕವನ ಓದಿ ಮೆಚ್ಚಿದ್ದಕ್ಕ್ಕೆ ಬಹಳ ಸಂತೋಷ, ಹೀಗೆಯೇ ಪ್ರೀತಿ ಇರಲಿ
ಶಿವಪ್ರಕಾಶ್ ಸರ್,
ಅಭಿಪ್ರಾಯಕ್ಕೆ ಧನ್ಯವಾದಗಳು
ಜ್ಞಾನಮೂರ್ತಿ ಸರ್,
ಟ್ಯಟಲಗೆ ತಕ್ಕಂತೆ ಕವನ ಇದೆ ಅಂದಿದ್ದಿರ, ಕೆಲವೊಮ್ಮೆ ಕವನಕ್ಕೆ ಹೆಸರು ಕೊಡಲು ಬಹಳ ಕಷ್ಟವಾಗುತ್ತದೆ.
ಶಿವೂ ಸರ್,
ನಿಮ್ಮ ಪ್ರೀತಿಯ ಹಾರೈಕೆ ಹೀಗೆಯೇ ಇರಲಿ, ಸದಾ ಬರುತ್ತಿರಿ
ರಾಜೇಶ್ ಸರ್,
ಯೋಚನೆಗೆ ಒಡ್ಡಿದ್ದಕ್ಕೆ ಬಹಳ ಸಂತೋಷ. ಅಭಿಪ್ರಾಯಕ್ಕೆ ಧನ್ಯವಾದಗಳು.
ಶಾಂತಲರವರೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಹೀಗೆಯೇ ಬರುತ್ತಿರಿ.
ಇ೦ದಿನ ಸಮಾಜಕ್ಕೆ ಹಿಡಿದ ಕನ್ನಡಿಯ೦ತಿದೆ ನಿಮ್ಮ ಕವನ. ಆದರಿದೇ ವಾಸ್ತವ ಎ೦ದರಿವಾದಾಗ ಅಷ್ಟೇ ಖೇದವೂ ಆಗುತ್ತದೆ. ಚ೦ದದ ಕವನಕ್ಕಾಗಿ ಧನ್ಯವಾದಗಳು.
ಆತ್ಮೀಯ ವಿನುತ,
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು, ಹೀಗೆಯೇ ಬರುತ್ತಿರಿ
ಗುರುಮೂರ್ತಿಯವರೆ...
ಬಹಳ ಚಂದದ ಕವನ...
ಪ್ರತಿಸಾಲುಗಳು..
ಪ್ರಾಸ ಬದ್ಧವಾಗಿ..
ಅರ್ಥಪೂರ್ಣ ಭಾವದಿಂದ ತುಂಬಿವೆ...
ಬಹಳ ಇಷ್ಟವಾಯಿತು...
ಚಂದನೆಯ ಕವನಕ್ಕೆ ಅಭಿನಂದನೆಗಳು..
ಗುರು ಸರ್,
ಕಟು ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ಅರ್ಥಪೂರ್ಣವಾಗಿ ಕವನದಲ್ಲಿ ಹೇಳಿದ್ದೀರ, ಇಷ್ಟವಾಯಿತು.
ಅಭಿನಂದನೆಗಳು.
- ಉಮೀ
ಪ್ರಕಾಶಣ್ಣ,
ತಮ್ಮ ಮೆಚ್ಚುಗೆಯ ಮಾತುಗಳು ಸದಾ ಇರಲಿ,
ಅಭಿಪ್ರಾಯಕ್ಕೆ ಧನ್ಯವಾದಗಳು
ಉಮೇಶ್ ಸರ್,
ಹೀಗೆ ಬರುತ್ತಿರಿ, ಧನ್ಯವಾದಗಳು
Post a Comment