ಮುಗಿಲಿನ ಮುಟ್ಟುವ ತವಕವು ಯಾಕೆ?
ನಿನ್ನಯ ಮೊಗವನು ಕದ್ದಾರು ಜೋಕೆ....
ಏನಿದು ನಿನ್ನಯ ರೂಪ, ಕರಗಿತು ಮನಸಿನ ಕೋಪ....
ಇನಿಯನ ಜೊತೆಯಲಿ ನಿನ್ನಯ ಆಟವೇ? ಚೆಲುವೆ ನೀ ಎಲ್ಲಿರುವೆ.....
ಬಣ್ಣದ ಚಿಟ್ಟೆಗೆ ಮಕರಂದದ ಚಿಂತೆ... ಹೂವಿಗೆ ತನ್ನೊಡಲ ಒಳಗಿರುವ ರಸವ ಉಣಬಡಿಸುವ ಆಸೆ...
ಈ ಸುಂದರ ತರುಲತೆಗಳ ಬ್ರಂದಾವನ ಲೀಲೆ....
ನಿನ್ನ ಪ್ರೇಮದಾಳದಲ್ಲಿ, ಮುಳುಗಿ ಹೋದ ಮೀನು ನಾನು....
ತನ್ನೊಳಗೆ ಜಗತ್ತನ್ನೇ ಸೆಳೆಯುವ ಅಪ್ರತಿಮ ಚೆಲುವೆ ಈಕೆ....
ಬಿರಿದ ಮಲ್ಲಿಗೆ ಹೂವ ನೆನಪು ಬಾರದೆ....
ನಿನ್ನ ಮೋಹಕತೆಗೆ, ಸೌಂದರ್ಯಕ್ಕೆ ಎಣೆಯುಂಟೆ ...
ಚೆಲುವೆ ನೀನು ನಕ್ಕರೆ, ಬದುಕು ಬಾಳ ಸಕ್ಕರೆ...
ಮಕರಂದವ ಕುಡಿದು ಮರೆಯದಿರು ಎನ್ನ, ಬಾ ಇಲ್ಲಿ ಮತ್ತೊಮ್ಮೆ, ಕೊಡುವೆ ಮಕರಂದವನ...
ನಿಮ್ಮವ
ಗುರು ಬಬ್ಬಿಗದ್ದೆ