ಮನಸೇಕೋ ಕಾಯುತಿದೆ ಬರಲಿಲ್ಲ ಅವಳು
ಮಿಸ್ಸಾಯ್ತು ಬಸ್ಸೆಂದು ಕಾರಣವು ಹಲವು
ಟುಸ್ಸ್ ಆಯ್ತು ಪ್ಲಾನ್ ಎಲ್ಲ ನೀ ಬರದೆ ಹೋದೆ
ಕಿಸ್ ಒಂದು ಮಿಸ್ ಆಯ್ತು, ಬಳಿಗೆ ನೀ ಬರದೆ
ಬಿಸಿಲೇಕೋ ಬಹು ಉರಿಯು, ಫ್ಯಾನಿಲ್ಲ ಇಲ್ಲಿ
ಬಾಯೆಲ್ಲ ಇಂಗೊಯ್ತು, ನೀರಿಲ್ಲದ ನಲ್ಲಿ
ಲಾಲ್ಬಾಗ್ನ ಒಡಲಲ್ಲಿ, ನಾ ಕಾಯ್ತಾ ಇರುವೆ
ಯಾಕ್ ಹಿಂಗೆ ಮಾಡ್ತಿ, ಓ ನನ್ನ ಒಲವೆ
ಹಲ್ಲಿಲ್ಲದ ಕಡ್ಲೆ, ಆಯ್ತಲ್ಲೇ ಚೆಲುವೆ
ವಿಲ್ ಬರಿದೆ ಸಾಯೋಕೆ, ಮನಸಿಲ್ವೆ ಹೂವೆ
ಎಲ್ನೋಡು ಅಲ್ಲೆಲ್ಲ, ತುಂಬೈತೆ ಪುಷ್ಪ
ಕಾಯ್ತಾನೆ ಕುಂತಿವ್ನಿ, ಎಲ್ಲೋದ್ಲೋ ''ಪುಷ್ಪ''
82 comments:
ಸೂಪರ್, ಚೆನ್ನಾಗಿದೆ
ahaa how romantic
:-)
malathi S
'ಕಿಸ್ಸಾ ಏಕ್ ಕಿಸ್ ಮಿಸ್ ಕಾ'ತುಂಬಾ ರೋಮ್ಯಾಂಟಿಕ್ ಆಗಿದೆ ಗುರೂ ಸರ್.ಧನ್ಯವಾದಗಳು.
ಸೊಗಸಾಗಿ ಬರೆದಿದ್ದಿರಾ. ನಿಜವಾಗ್ಲೂ ಸಕತ್ತಾಗಿದೆ
:D mast poem :)
ಕಿಸ್ ಕಿಸಕ್ಕನೆ ಕೊಡ್ಬ್ಯಾಡ ಗುರುವೆ
ಮಿಸಕಾಡಿ ಮಾಡ್ಯಾಳೋ ಮಿಸ್ ಕೇಳು ಗುರುವೆ
ಎಸ್ ಮಿಸ್ ಅನ್ನೋ ವಿಶ್ ಬ್ಯಾಡ ಗುರುವೆ
ಮಿಸ್ ಕೊನೆಗೆ ಬುಸ್ ಗುಟ್ಯಾಳೋ ಗುರುವೆ
ಹಹಹಹ....ಸೂಪರ್ ಗುರು..
ಕಿಸ್ ಕಿಸಕ್ಕನೆ ಕೊಡ್ಬ್ಯಾಡ ಗುರುವೆ
ಮಿಸಕಾಡಿ ಮಾಡ್ಯಾಳೋ ಮಿಸ್ ಕೇಳು ಗುರುವೆ
ಎಸ್ ಮಿಸ್ ಅನ್ನೋ ವಿಶ್ ಬ್ಯಾಡ ಗುರುವೆ
ಮಿಸ್ ಕೊನೆಗೆ ಬುಸ್ ಗುಟ್ಯಾಳೋ ಗುರುವೆ
ಹಹಹಹ....ಸೂಪರ್ ಗುರು..
ಕಿಸ್ ಕಿಸಕ್ಕನೆ ಕೊಡ್ಬ್ಯಾಡ ಗುರುವೆ
ಮಿಸಕಾಡಿ ಮಾಡ್ಯಾಳೋ ಮಿಸ್ ಕೇಳು ಗುರುವೆ
ಎಸ್ ಮಿಸ್ ಅನ್ನೋ ವಿಶ್ ಬ್ಯಾಡ ಗುರುವೆ
ಮಿಸ್ ಕೊನೆಗೆ ಬುಸ್ ಗುಟ್ಯಾಳೋ ಗುರುವೆ
ಹಹಹಹ....ಸೂಪರ್ ಗುರು..
ಕಿಸ್ ಕಿಸಕ್ಕನೆ ಕೊಡ್ಬ್ಯಾಡ ಗುರುವೆ
ಮಿಸಕಾಡಿ ಮಾಡ್ಯಾಳೋ ಮಿಸ್ ಕೇಳು ಗುರುವೆ
ಎಸ್ ಮಿಸ್ ಅನ್ನೋ ವಿಶ್ ಬ್ಯಾಡ ಗುರುವೆ
ಮಿಸ್ ಕೊನೆಗೆ ಬುಸ್ ಗುಟ್ಯಾಳೋ ಗುರುವೆ
ಹಹಹಹ....ಸೂಪರ್ ಗುರು..
ಗುರು ಸರ್ ..
ಓದಿ ಕಳೆದು ಹೋದೆ .. :) ..
ಸೂಪರ್ ಕವನ ....
ಅಬ್ಬಾ, ಒಂದು ಕಿಸ್ ಮಿಸ್ ಆಗಿದ್ದಕ್ಕೆ ಇಷ್ಟು ಸೊಗಸಾದ ಗೀತೆ ಹೊರಹೊಮ್ಮಿತು. ಇನ್ನು ಕಿಸ್ ಯೆಸ್ ಆಗಿದ್ರೆ......!!
ಚೆನ್ನಾಗಿದೆ!
ಗುರು ಸರ್,
ಕಿಸ್ ಮಿಸ್ ಆದ ಕವನ ಸೂಪರ್ ಮತ್ತು ಸಕ್ಕತ್ ರೊಮ್ಯಾಂಟಿಕ್ ಆಗಿದೆ..
ಗುರೂ ಸರ್ ಸಖತ್ ರೋಮ್ಯಾ೦ಟಿಕ್ ಆಗಿದೆ!
ಅನ೦ತ್
ಡಾ.ಗುರು ಸರ್,
ಹ್ಹ ಹ್ಹಾ...
ಕಿಸ್ಸೊಂದು ಮಿಸ್ ಆಯ್ತು....
ಅವಳು ಬರದೆ ಬಳಿಗೆ...
ಒಲ್ಲೋದ್ಲೋ ಗೊತ್ತಿಲ್ಲ..
ನಾ ಬಂದೆ ಒಳಗೆ....
ತುಂಬಾ ಚೆನ್ನಾಗಿದೆ ನಿಮ್ಮ ಕವನ ಸರ್....
Olle kick barang aitri nim kavithe. G.P.Rajarathnam styelenallide. Laal baag puspa , nimma kalpaneya pushpa eradu nimage dakkali..
ಪರಾಂಜಪೆ ಸರ್
ಥ್ಯಾಂಕ್ಸ್
ಬರ್ತಾ ಇರಿ
ಮಾಲತಿ ಮೇಡಂ
ಬಹಳ ದಿನದಿಂದ ಪ್ರವಾಸ ಕಥನ ಬರಿತ ಇದ್ದೆ
ಅದ್ಕೆ ಸ್ವಲ್ಪ ಚೇಂಜ್
Dr.D.T.krishna Murthy ಸರ್
ನಿಮ್ಮ ಅಭಿಪ್ರಾಯನೇ ನಂಗೆ ಟಾನಿಕ್ ಇದ್ದಂತೆ
Jagadeesh
ಥ್ಯಾಂಕ್ಸ್ ಕಣೋ
ಬರ್ತಾ ಇರು
ತೇಜಸ್ವಿನಿ ಹೆಗಡೆ ಯವರೇ
ಧನ್ಯವಾದ ಅಭಿಪ್ರಾಯಕ್ಕೆ
ಜಲನಯನ ಅಜ್ಹಾದ್ ಸರ್
ಎಲ್ಲಿದ್ದೀರಾ?
ಕುವೈತ್ ಬಂದ್ರಾ?
ನಿಮ್ಮ ಅಭಿಪ್ರಾಯಾನೂ ಸೂಪರ್
ಬರ್ತಾ ಇರಿ
sunaath ಸರ್
ಕಿಸ್ ಮಿಸ್ ಅದ್ರೆನೆ ಕವನ ಹುಟ್ಟತ್ತೆ,
ಕಿಸ್ ಎಸ್ ಆದ್ರೆ ಎಲ್ಲಿದೆ ಟೈಮ್ ಬರೆಯೋಕೆ ಆಲ್ವಾ :)
ಸೀತಾರಾಮ. ಕೆ. / SITARAM.K ಸರ್
ಥ್ಯಾಂಕ್ಸ್
ಬರ್ತಾ ಇರಿ
ಶಿವೂ ಸರ್
ಹಾಗೆಲ್ಲ ಹೇಳ್ಬೇಡಿ, ನಾಚಿಕೆ ಆಗುತ್ತೆ :)
ಹೀಗೆ ಬರ್ತಾ ಇರಿ
ಅನಂತರಾಜ್ ಸರ್
ಚಳಿಗಾಲ ಹತ್ತರ ಬರ್ತಾ ಇದೆ
ರೋಮಾಂಟಿಕ್ ಕವನಾನು ಎದ್ದು ಬರ್ತಾ ಇದೆ :)
ದಿನಕರ ಮೊಗೇರ. ಸರ್
ತುಂಬಾ ಧನ್ಯವಾದಗಳು
ಕವನ ಹಾಕದೆ ತುಂಬಾ ದಿನ ಆಗಿತ್ತು ಅದ್ಕೆ ಸ್ವಲ್ಪ ಚೇಂಜ್
*ಚುಕ್ಕಿ*
ಕಿಕ್ ಬರ್ಬೇಕ್ರಿ
ನಿಮ್ಮ ಮಾತಿಗೆ ನಂಗೆ ಬಹಳ ಖುಷಿ ಆಯ್ತ್ರಿ
ಹಿಂಗ ಬರ್ತಾ ಇರ್ರಿ
ಸೂಪರ್ ಗುರು :)
ಈ ಥರ ಕವನ ಬರೋ ಹಾಗೆ ಇದ್ದರೆ ಕಿಸ್ ಮಿಸ್ ಆಗೋದರಲ್ಲಿ ಓದುಗರಿಗೆ ಏನೂ ಅಭ್ಯಂತರ ಇಲ್ಲಾ :)
Gurruuuuuuuuuu............
Norway prabhaava jaasti aaydu kaantu ;)
Super kavana....!!!
:)..nice lines.
ಗುರು ಅವರೇ,, ಒಂಥರಾ ಜಾನಪದದ ಸೊಗಡಿನ ಸುಂದರ ಕವನ.. ಅಲ್ಲಲ್ಲ ತುಂಬಾ ಸುಂದರವಾದ ಕವನ
gurumoorthanna..
super iddo.. hadavada english kannada mishrana.. paka super...
Pravi
ಗುರು ಸರ್, ಕಿಸ್ ನಿಜವಾಗಲು ಮಿಸ್ ಆಯ್ತ?
ಚೆನ್ನಾಗಿದೆ.
ಗುರು ಸರ್ ..
ಸೂಪರ್ ಕವನ ..
ಲಾಲ್ ಬಾಗನಲ್ಲಿ ನೀವು ಕಾಯೋದು ತಪ್ಪಲಿ ...
ಮಿಸ್ ಆದ ಕಿಸ್ ಬೇಗ ದಕ್ಕಲಿ
No guru sir u r saving one more kiss ! very nice feeling
Guru Sir,
Super, tumba channagide.
guruji,
super poemri.
ondu kissge estu tapatraya alva adu sikkiddare abba majane bere alvari.
danyari,
Mohan Hegade
ಸಖತ್ ರೋಮ್ಯಾ೦ಟಿಕ್ ಆಗಿದೆ!
Shiv ಸರ್
ಓದುಗರಿಗೆ ಇಷ್ಟ ಆಗೋದಾದ್ರೆ ಒಂದು ಕಿಸ್ ಮಾಡ್ಕೊಲೋಕೆ ನಾವು ರೆಡಿ
:)
ಬರ್ತಾ ಇರಿ
Vinay
hangenu ille
alli soundarya kannu munde iddu
ಮನಮುಕ್ತಾ
thanks for the comments
ಸಾಗರಿ.
ಹೌದು, ಜಾನಪದ ಶೈಲಿ ಯಲ್ಲಿಯೇ ಬರೆಯಲು ಪ್ರಯತ್ನಿಸಿದ್ದೇನೆ
ಬರುತ್ತಿರಿ
ಪ್ರವೀಣ್ ಭಟ್
ಇಷ್ಟ ಆದ್ರೆ ರಾಶಿ ಖುಷಿ ನೋಡು
ಬರ್ತಾ ಇರಪ್ಪ
ಗುಬ್ಬಚ್ಚಿ ಸತೀಶ್ ಸರ್
ಮಿಸ್ ಆದ ಕಿಸ್ ಕಥೆ ಈಗ ಯಾಕೆ ಹೇಳಿ :)
ಬರ್ತಾ ಇರಿ
shridhar ಸರ್
ಲಾಲ್ ಬಾಗ್ ದಲ್ಲಿ ಕಾಯೋದು ಈಗ ಇಲ್ಲಿ ಬಿಡಿ\
ಬರ್ತಾ ಇರಿ
ನನ್ನೊಳಗಿನ ಕನಸು...
ನಿಜ, ನಿಮ್ಮ ಮಾತು
ಕಿಸ್ ಕಾಯ್ದಿರಿಸಿದೆ
ಬರುತ್ತಿರಿ
SANTOSH MS
thanks for the comments
baruttiri
Mohan
ನಿಜಾ
ನಿಮ್ಮ ಮಾತಿಗೆ ಎರಡಿಲ್ಲ ನೋಡಿ
ಬರ್ತಾ ಇರಿ
SATISH N GOWDA ಸರ್
ಮಳೆಗಾಲಕ್ಕೊಂದು ರೋಮಾಂಟಿಕ್ ಗೀತೆ
ನಿಮ್ಮ ಕಿಸ್ಸಾಯಣ ಚೆನ್ನಾಗಿದೆ..:):)
Shashi madam,
thank you for the comments
ಹಹಹಹ....ಸೂಪರ್ ಗುರು..ಸರ್
ಥ್ಯಾಂಕ್ಸ ಪಾರ್ ರೈಟಿಂಗ್ ದ್ಯಾಟ್ ಓನ್..
ಈ ವೇದರ್ ಗೂ ನಿಮ್ಮ ರೋಮ್ಯಾಂಟಿಕ್ ಕವನಕ್ಕೂ ಸಕ್ಕತ ಆಗಿದೆ ಗುರವೇ
ಸಕತ್ತಾಗಿದೆ. :-D
ha ha channagide sir :)
ಗುರು ,
ಒಳ್ಳೆ ಕಥೆ ಆತಲ್ಲೋ ನಿಂದು ? ನಿನ್ನ ' ಪುಷ್ಪಾ' ನ ಹೀಂಗೆ ಲಾಲ್ ಬಾಗ್ನಲ್ಲಿ ' ಕಿಸ್' ಮಾಡ್ತೀನಿ ಅಂತ ಕರೆದಿದ್ದಕ್ಕೆ , ನಾಚಿಕೆ ಆಗಿ ಬಂದಿರಲಿಕ್ಕಿಲ್ಲ.
ಎಲ್ಲಾದರೂ ಹೀಗೆ ಪಬ್ಲಿಕ್ ಆಗಿ ಕಿಸ್ ಮಾಡೋಕೆ ಇದು ವಿದೇಶ ಅಲ್ಲಾ ಕಣಪ್ಪಾ!
ಮತ್ತೆ ಇನ್ನೊಂದು , ಈಗೇನೋ ' ಕಿಸ್ ' ಮಿಸ್ ಆಯ್ತು ಅಂತ ಬರೆದೆ .... ಮಿಸ್ ಆಗದಿರೋ ಕಿಸ್ ಬಗ್ಗೆ ಯಾವಾಗ್ಲಾದ್ರೂ ಬರೆದಿದ್ಯಾ ? ಹಾ ಹಾ ha
whistle hodetta idde..kelitta..!!:-)
- Vanitha.
ಕನಸು
ಥ್ಯಾಂಕ್ಸ್ ರೀ
ಬರ್ತಾ ಇರಿ
Doddamanimanju ಸರ್
ಮಳೆ ಬರುವ ಹಾಗಿದೆ ಅಂತಿರಾ :)
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಆನಂದ
ಥ್ಯಾಂಕ್ಸ್ ಸರ್
ಶಿವಪ್ರಕಾಶ್ ಸರ್
ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರ್ತಾ ಇರಿ
ಚಿತ್ರಾ
ಹಂಗೆನಿಲ್ಯೇ
ಕಿಸ್ ಲಾಲ್ಬಾಗ್ನಲ್ಲಿ ಮಿಸ್ ಆಗಿದ್ದು ಹೇಳಿ ಕಲ್ಪನೆ ಮಾಡಿದ್ದೂ
ಮಿಸ್ ಆಗದೆ ಇರೋ ಕಿಸ್ ನ ಹೆಂಗೆ ಕಲ್ಪನೆ ಮಾಡಲಿ ಹೇಳು
ಥ್ಯಾಂಕ್ಸ್ ಅಭಿಪ್ರಾಯಕ್ಕೆ
ವನಿತಾ / Vanitha
ಹುಂ ಕೇಳ್ತು
ಹಿಂಗೆ ವಿಸಲ್ ಹೊಡಿತಾ ಇರಿ ನಮ್ಮ ಬ್ಲಾಗ್ ಓದಿ :)
ಥ್ಯಾಂಕ್ಸ್
Sooper Sir, bahala chenaagide! Thanks
ಚೆಂದದ ಚಿತ್ರಕ್ಕೆ ಸುಂದರ ಸಾಲುಗಳು ಗುರುಮೂರ್ತಿಯವರೇ....
Nice song
ವಿ.ಆರ್.ಭಟ್ ಸರ್
ಧನ್ಯವಾದಗಳು ಅಭಿಪ್ರಾಯಕ್ಕೆ
ಬರುತ್ತಿರಿ
ಗುರುಪ್ರಸಾದ್, ಶೃಂಗೇರಿ ಸರ್
ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರ್ತಾ ಇರಿ
ರಾಘವೇಂದ್ರ ಹೆಗಡೆ
ಅಭಿಪ್ರಾಯಕ್ಕೆ ಧನ್ಯವಾದಗಳು
ಬರುತ್ತಿರಿ
ಹಹಹ..
:):)tumba chennagide sir :)
ಗುರು ಸಾರ್....
ಪ್ರವಾಸ ಕಥನದಿಂದ ಬದಲಾವಣೆಗೆ ರೊಮ್ಯಾಂಟಿಕ್ ಕವನ ಎಂಬ ನಿಮ್ಮ ಅಭಿಪ್ರಾಯವೂ, ಚೆನ್ನಾಗಿದೆ.....
ಶ್ಯಾಮಲ
ತುಂಬ ಚೆನ್ನಾಗಿದೆ ಸರ್.
- ಕತ್ತಲೆ ಮನೆ..
thank you
Snow White
bartaa iri
AntharangadaMaathugalu
nimma abhipraayakke thanks
bartaa iri
Subrahmanya sir
thank you
barta iri
ರಾಶಿ ಚೊಲೋ ಇದ್ದು ....ಒಳ್ಳೆ ರೋಮಾಂಟಿಕ್ ಕವನ..:-)
ಅದ್ಬುತ ಕನ್ನಡದ ಶಯರಿ.
ಕಿಸ್ಸು ಆಗಾಗ ಮಿಸ್ಸಾದರೆ ಕಿಮ್ಮತ್ತು
ಬೇಕೆಂದಾಗ ಸಿಕ್ಕರೆ ಅದರಲೇನಿದೆ ಗಮ್ಮತ್ತು!
Post a Comment