-ಗುರು ಬಬ್ಬಿಗದ್ದೆ
ಬಿಟ್ಟು ಬಂದೆ ಬಿಟ್ಟು ಬಂದೆ ನಮ್ಮ ನೆಲವನು
ಮಮತೆಯಿಂದ ಸಲಹಿದಂತ ತಾಯಿ ಮಡಿಲನು
ತಿದ್ದಿ ತೀಡಿ ಬೆಳೆಸಿದಂತ ತಂದೆ ಮಾತನು
ಅಣ್ಣ ಅಕ್ಕ ತೋರಿದಂತ ಪ್ರೀತಿ ನೆನಪನು
ನಮ್ಮ ನೆಲದ ಗಂಧ ಗಾಳಿ ಇಲ್ಲಿ ರುಚಿಸದು
ಇವರು ತೋರ್ವ ಮಮತೆ ಪ್ರೀತಿ ಕ್ಷಣಿಕವಾದುದು
ಅಲ್ಲಿ ಸಿಗುವ ಮಣ್ಣ ವಸುಧೆ ಇಲ್ಲಿ ಇಲ್ಲವೊ
ಇಲ್ಲಿ ಇರುವ ಮಣ್ಣಿನಲ್ಲಿ ಪ್ರಣಯ ಇಲ್ಲವೊ
ನಮ್ಮ ಊರು ನಮ್ಮ ಜನ ಏನು ಚಂದವೋ
ಬಡವನೂಟ ಬಾಳಿನಲ್ಲಿ ಸಿರಿಯ ಭಾಗ್ಯವೋ
ಹರುಕ ಸೀರೆ ಮುರುಕ ಬಟ್ಟೆ ನಮ್ಮ ತಾಯಿಯೋ
ಆದರವಳು ನಮ್ಮ ಮನಸ ಪ್ರೇಮದಾಯಿಯೋ
ಎಲ್ಲ ಇದೆ ಇಲ್ಲಿ ಎಂಬ ಪೊಳ್ಳು ಮನಸಿದೋ
ಹಣದ ಮುಂದೆ ಮನವು ಮಾನ ಮಾರಿಕೊಂಬುದೋ
ಅನುರಾಗದ ಸೆಲೆಗೆ ಇಲ್ಲಿ ಬೆಲೆಯೇ ಇಲ್ಲವೊ
ಇದ್ದರೂನು ತಾಯ್ಗೆ ಬಟ್ಟೆ ಹರುಕೆ ಚಂದವೋ
ಏನೇ ಆದರು ನಮ್ಮ ತಾಯ್ಗೆ ನಾವೇ ಮಕ್ಕಳು
ನಿಂದಿಸಿದರೂ ಸಲಹುತಿಹುದು ಅವಳ ಹೊಕ್ಕಳು
ನಮ್ಮ ನೀರು ನಮ್ಮ ಗಾಳಿ ಗಂಧದ ಗುಡಿಯೋ
ಇರುವುದೆಲ್ಲ ಬಿಟ್ಟು ಇಲ್ಲಿ ಅಲ್ಲಿಗೆ ನಡಿಯೋ
Some Tips to lead a better life
-
ವಯಸ್ಸು ಆಗ್ತಾ ಇದ್ದ ಹಾಗೆ ಕೆಲವು tips
1. ಸ್ನಾನದ ಕೋಣೆಯಲ್ಲಿ ಒಂದು ನೈಲ್ ಕಟ್ಟರ್ ಇಟ್ಟುಕೊಂಡು ಬಿಡಿ. ಕಾಲಿನ ಉಗುರು
ಗಟ್ಟಿಯಾಗುರುತ್ತೆ, ಕೆಲವೊಮ್ಮೆ ಉಗುರು ಬೆಳೆಯಲು ಬಿಟ್ಟರೆ ಅವು ...
15 hours ago
36 comments:
ಗುರುಮೂರ್ತಿಯವರೆ...
ತಾಯಿನೆಲದ ಪ್ರೀತಿಯ ಸುಂದರ ಕವನ..
ತುಂಬಾ ಇಷ್ಟವಾಯಿತು..
ಕೆಲವು ಸಾಲುಗಳನ್ನು ನೀವು ಮಾತ್ರ ಬರೆಯಲು ಸಾಧ್ಯ..
"ಏನೇ ಆದರು ನಮ್ಮ ತಾಯ್ಗೆ ನಾವೇ ಮಕ್ಕಳು
ನಿಂದಿಸಿದರೂ ಸಲಹುತಿಹುದು ಅವಳ ಹೊಕ್ಕಳು .."
ಸುಂದರ ಕವನಕ್ಕೆ ಅಭಿನಂದನೆಗಳು...
ಗುರುಮೂರ್ತಿ ಸರ್,
ತಾಯ್ನೆಲ, ತಾಯಿಪ್ರೀತಿ ಬಗ್ಗೆ ನಿಮಗಿರುವ ಕಾಳಜಿ ಕವನದಲ್ಲಿ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ...
ನಮ್ಮ ತಾಯಿ ಬಡವೆಯಾದ್ರೂ ಹೃದಯ ಶ್ರೀಮಂತಿಕೆಯವಳು ಅಲ್ವಾ....
ಗುರುಮೂರ್ತಿ ಅವರೆ,
ಕವನ ತುಂಬಾ ಚೆನ್ನಾಗಿದೆ.
ಪಡುವಾರಹಳ್ಳಿ ಪಾಂಡವರು ಗೀತೆಯಲ್ಲಿ ಬರುವ ಈ ಹಾಡನ್ನು ನೆನಪಿಸುತ್ತದೆ: ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೆ ಮರೆಯಲಿ... ನಾ ಹೇಗೆ ತಾನೆ ತೊರೆಯಲಿ....
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸೀ ಎಂದು ಅದಕ್ಕೇ ಹೇಳುವುದು.
ಸ್ನೇಹದಿಂದ,,
ಚಂದ್ರಶೇಖರ ಬಿ.ಎಚ್.
ನಿಮ್ಮ ಮನದಾಳದ ನೋವುಗಳನ್ನು, ಆತ್ಮೀಯರ ಅಗಲುವಿಕೆಯಿಂದುಟಾಗಿರುವ ದುಃಖವನ್ನು ಕಾವ್ಯಾತ್ಮಕವಾಗಿ ವಿವರಿಸಿದ್ದೀರಿ. ಸುಮ್ಮನೆ ಹೇಳಿಲ್ಲ."ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ.." ಎಂದು. ನಮ್ಮವರಿಂದ, ನಮ್ಮ ತಾಯ್ನಾಡಿನಿಂದ ದೂರವಾದಾಗ ಮಾತ್ರ ಅವರ/ಅದರ ಮಹತ್ವ ಅರಿವಾಗುವುದು ಅಲ್ಲವೇ?
ಸುಂದರವಾಗಿದೆ ಕವನ. ರಾಗ ಸಂಯೋಜಿಸಿ ಹಾಡಿಕೊಳ್ಳುವಂತಿದೆ.
superaagi barededeera...........
ಪ್ರಕಾಶಣ್ಣ,
ನಿಮ್ಮ ಪ್ರೀತಿ ಹಾರೈಕೆ ಸದಾ ಹೀಗೆಯೇ ಇರಲಿ,
ನಿಮ್ಮ ಪ್ರೋತ್ಸಾಹವೇ ನನಗೆ ಉತ್ಸಾಹ ತರುತ್ತದೆ
ಶಿವೂ ಸರ್,
ಹೌದು, ನಮ್ಮ ತಾಯಿ ನಮ್ಮ ತಾಯಿನೇ ಅಲ್ವಾ,
ನಮ್ಮ ದೇಶದ ಸುಖ ಇನ್ನೆಲ್ಲಿದೆ ಹೇಳಿ
ಚಂದ್ರು ಸರ್,
ಆದರೂ ನಮ್ಮ ದೇಶದ ಬಗ್ಗೆ ಕೆಲವು ಬೇಸರನು ಇದೆ. ಎಲ್ಲ ಇದ್ದು ನಾವು ಇನ್ನು ಸುಧಾರಿಸಿಲ್ಲ ಅನ್ನೋದು. ನಮ್ಮ ದೇಶದ ಮೊದಲ ಆದ್ಯತೆ ಆಂತರಿಕ ಭದ್ರತೆ ಸಿಗಬೇಕು ಎಲ್ಲರಿಗೂ. ಇಷ್ಟೆಲ್ಲಾ ಸಮಸ್ಯೆಗಳಿದ್ರು ನಾವು ಬ್ರಹತ್ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ ಅನ್ನೋದೇ ನಮ್ಮ ಧನಾತ್ಮಕ ಅಂಶ
ತೇಜಸ್ವಿನಿ ಮೇಡಂ,
ನೀವು ಹೇಳೋದು ನಿಜ, ನಮ್ಮ ದೇಶದ ಮಹತ್ವ ದೇಶ ಬಿಟ್ಟಾಗಲೇ ಗೊತ್ತಾಗೋದು. ದೇಶದೊಳಗೆ ಇರೋವಾಗ ದೇಶಕ್ಕೆ ಬೈತ ಇರ್ತಿವಿ, ಆದರೆ ಹೊರಗೆ ಬಂದಾಗ ದೇಶ ಚೆನ್ನ ಅನ್ನಿಸುತ್ತೆ.
ಅದೇ ನಮ್ಮ ದೇಶದ ಶಕ್ತಿ ಅಲ್ವ?
ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು
ನ್ಯೂ ಲೈಫ್ ಮತ್ತು ಹೋಪ್ ಸರ್,
ಸ್ವಾಗತ ಬ್ಲಾಗ್ ಗೆ,
ಹೀಗೆಯೇ ಬರ್ತಾ ಇರಿ
ಹೃದಯ೦ಗಮವಾಗಿದೆ ನಿಮ್ಮ ಮನದಾಳದ ಕವನ, ಭಾವನೆಗಳನ್ನು ಚೆನ್ನಾಗಿ ಹೊರಗೆಡಹಿದ್ದೀರಿ.
ಪರಾಂಜಪೆ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು,
ನಿಮಗೆ ಇಷ್ಟವಾದರೆ ಬರೆದಿದ್ದಕ್ಕೂ ಸಾರ್ಥಕ
ತಾಯ್ನಾಡ ನೆಲದ ಕನವರಿಕೆಗಳು ತುಂಬಾ ಚನ್ನಾಗಿ ವ್ಯಕ್ತವಾಗಿವೆ.
ಬಿಸಿಲ ಹನಿ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ
ಉಋ ಬಿಟ್ಟು ಬಂದಿರುವವರೆಲ್ಲರ ತೀವ್ರವಾಗಿ ಕಾಡುವ ವಿಷಯ ಕವಿತೆಯದ್ದು. ಸೊಗಸಾಗಿದೆ
ಚಕೋರ,
ನನ್ನ ಬ್ಲಾಗ್ ಗೆ ಸ್ವಾಗತ,
ಹೀಗೆಯೇ ಬರುತ್ತಿರಿ
ಗುರುಮೂರ್ತಿ ಅವರೆ,
ನೀವು ಹೇಳಿದ್ದು ನಿಜ
ನಮ್ ಜೀವನ ಹಾಗೆ ಆಗಿಬಿಟ್ಟಿದೆ...
ಇರುವುದೆಲ್ಲವ ಬಿಟ್ಟು... ಇರದುದರೆಡೆಗೆ ನಡೀತಾ ಇದಿವಿ....
ಶಿವೂ ಸರ್,
ನಿಜ, ನಮ್ಮ ಲೈಫ್ ಹೀಗೆ ಆಗಿದೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
guru,
ಅವಳ ನೆನಪುಗಳೇ ಹಾಗೆ ಬಿಟ್ಟೂ ಬಿಡದೆ ಕಾಡುತ್ತವೆ.
ಉತ್ತಮವಾದ ಪದ್ಯ ಧನ್ಯವಾದಗಳು.
oh guru,
really great kavana.... tumba istavaayitu, manada maatu kavanavaagi moodide..
taayi, taaynaadu mareyalu saadyave illa avara staana tumbalu bere yarigu aguvudilla
ತಾಯ್ನೆಲ ಬಿಟ್ಟು ದೂರ ಇರುವ ನಮ್ಮ-ನಿಮ್ಮ೦ತವರ ಭಾವನೆ ಏನು ಎ೦ಬುದನ್ನು ಸು೦ದರವಾಗಿ ಬರೆದಿದ್ದಕ್ಕೆ ಧನ್ಯವಾದಗಳು.
ತುಂಬಾ ಚಂದದ ಸಾಲುಗಳು ...ಫೋಟೋ ಕೂಡ ಚೆನ್ನಾಗಿದೆ. ಓಮ್ಮೆ ಊರ ನೆನಪು ಮನದಂಗಳದಲ್ಲಿ ಸುಳಿದಾಡಿ ಮರೆಯಾಯ್ತು
"ಏನೇ ಆದರು ನಮ್ಮ ತಾಯ್ಗೆ ನಾವೇ ಮಕ್ಕಳು
ನಿಂದಿಸಿದರೂ ಸಲಹುತಿಹುದು ಅವಳ ಹೊಕ್ಕಳು .."
ಆಹಾ ಮನಸಲ್ಲಿ ಕೂರೋವಂತ ಸಾಲುಗಳು ..
ಮೂರ್ತಿ
ನಿಜ, ಊರ ಬಿಟ್ಟು ಬಂದ ಮೇಲೆ ಊರಿನ ಮಹತ್ವದ ಅರಿವಾಗುತ್ತದೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಮನಸು,
ನಿಜ, ತಾಯಿ ಸ್ಥಾನ ವೆ ಅಂಥದ್ದು, ಅದಕ್ಕೆ ಅವಳು ಎಲ್ಲರಿಗಿಂಥ ಪ್ರೀತಿ, ಸರ್ವರಲ್ಲೂ ಶ್ರೇಷ್ಠ.
ಅಭಿಪ್ರಾಯಕ್ಕೆ ಧನ್ಯವಾದಗಳು
ಮುಸ್ಸಂಜೆ ಇಂಪು,
ಹೌದು, ನಮಗೆ ತಾಯ್ನಾಡ ನೆನಪು ಸ್ವಲ್ಪ ಜಾಸ್ತಿಯೇ ಇರುತ್ತದೆ ಯಾಕೆಂದರೆ ನಾವು ಹೊರದೆಶವನ್ನು ಮತ್ತು ತಾಯ್ನಾಡಿನ ಸಂಭ್ರಮ ಎರಡನ್ನು ಅನುಭವಿಸಿರುತ್ತೇವೆ ಅಲ್ಲವೇ?
ರಂಜಿತ ಮೇಡಂ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಸಾಲು ಇಷ್ಟವಾಗಿದ್ದಕೆ ನನಗು ಖುಷಿ.
ಹೀಗೆಯೇ ಬರುತ್ತಿರಿ
ಗುರು,
ತಾಯ್ನೆಲದ ಹಂಬಲ ನಿಮ್ಮ ಕವನದಲ್ಲಿ ಚೆನ್ನಾಗಿ ವ್ಯಕ್ತವಾಗಿದೆ.
ನಮ್ಮ ತಾಯಿ ಹೇಗಿದ್ದರೂ ನಮಗೆ ಅವಳೇ ಸೊಗಸು ಎನ್ನುವದು
ಒಪ್ಪಲೇಬೇಕಾದ ಮಾತು.
ಸುನಾಥ್ ಸರ್,
ತಾಯ್ನೆಲದ ಕಂಪು ಇಂಪು ಬೇರೆಲ್ಲಿ ಸಿಘೋಕೆ ಸಾದ್ಯ ಹೇಳಿ. ನಮ್ಮ ದೇಶದ ಸುಮಘಮ ಬೇರೆಲ್ಲಿಯೂ ಇಲ್ಲಾರಿ, ಅದ್ಕೆ ನಮ್ಮ ತಾಯಿನೇ ನಮಗೆ ಚಂದ
ಎಲ್ಲೋ ಇರುವುದು ನಮ್ಮ ಮನೆಯಾ ಲೌಕಿಕ ಮೂರ್ತ ರೂಪ ನಿಮ್ಮ ಕವನದಲಿ ಹೇಳಿಯೂ ಹೇಳದಂತೆ ಮೈಳೈಸಿದೆ. ನಿಮ್ಮ ಕೆಲವು ಕವನಗಳನ್ನ ಓದಿದೆ ಎಲ್ಲವು ಸೊಗಸಾಗಿವೆ..
ಗುರು ಸರ್, ತಾಯಿ ಮತ್ತು ತಾಯಿನೆಲ, ಇದು ಸ್ವರ್ಗಕ್ಕಿಂತಲೂ ಮಿಗಿಲು. ನಿಮ್ಮ ಕವನದಲ್ಲಿ ಆ ಕನವರಿಕೆ ಎದ್ದು ಕಾಣುತ್ತದೆ
ಎಚ್.ಎನ್. ಈಶಕುಮಾರ್ ರವರೆ,
ನನ್ನ ಕವನ ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ,
ವಿಜಯ ದಶಮಿಯ ಶುಭಾಶಯಗಳು
ದೀಪಸ್ಮಿತ,
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು, ತಾಯ್ನೆಲ ದ ಪ್ರೀತಿ ಯಾರಿಗಿಲ್ಲ ಹೇಳಿ, ಎಷ್ಟೇ ಬೈದರೂ ನಮ್ಮ ದೇಶ ನಮ್ಮ ದೇಶವೇ ಅಲ್ಲವೇ?
ತಾಯ್ನೆಲದ ಬಗ್ಗೆ ಬಹಳ ಸುಂದರವಾಗಿ ಬರೆದಿದ್ದೀರಿ... ಹಾಗೆ ಹುಟ್ಟಿದ ನಾಡು ನೆಲದ ಬಗ್ಗೆ ಅಭಿಮಾನ ಕಮ್ಮಿಯಾಗೋದೇ ಇಲ್ಲ.
ಪ್ರಭು ಸರ್,
ಧನ್ಯವಾದಗಳು ಇಷ್ಟವಾಗಿದ್ದಕ್ಕೆ, ತಾಯ್ನೆಲದ ಪ್ರೀತಿ ಸದಾ ಹಸಿರಾಗಿರಲಿ ಅಲ್ಲವೇ?
ಬಹುಶ: ವಸ್ತುವೊ೦ದನ್ನು ಕಳೆದುಕೊ೦ಡ ಮೇಲೆಯೇ ಅದರ ಬೆಲೆ ಇನ್ನೂ ಹೆಚ್ಚಿಗೆ ತಿಳಿದೀತೇನೋ!! ನಿಜಕ್ಕೂ, ತಾಯ್ನೆಲದ ಹೊರಗಿರುವವರೆಲ್ಲರ ಭಾವನೆಗಳನ್ನು ನಿಮ್ಮ ಪದಗಳಲ್ಲಿ ಹೇಳಿದ್ದೀರಿ.
ವಿನುತ, ನೀವು ಹೇಳೋದು ನಿಜ, ದೇಶದಲ್ಲಿ ಇದ್ದಾಗ ಅದರ ಬೆಲೆ ತಿಳಿಯದು, ಬಿಟ್ಟಾಗಲೇ ತಿಳಿಯುತ್ತದೆ ಅದರ ಮಹತ್ವ
Post a Comment