Saturday, August 22, 2009

ತಮಗೆಲ್ಲರಿಗೂ ಧನ್ಯವಾದಗಳು..

ಆತ್ಮೀಯರೇ,

''ಸಾಗರದಾಚೆಯ ಇಂಚರ '' ಕವನ ಸಂಕಲನ ನನ್ನ ಮೊದಲ ಪುಸ್ತಕ. ಕಳೆದ ತಿಂಗಳು ಇದು ಬಿಡುಗಡೆಗೊಂಡ ವಿಷಯ ತಮಗೆಲ್ಲ ತಿಳಿದೇ ಇದೆ. ಕೆಲಸದ ಒತ್ತಡದಿಂದ ಬ್ಲಾಗ್ ಗೆ ಬರಲಾಗುತ್ತಿಲ್ಲ. ಅದಕ್ಕೆ ಕ್ಷಮೆ ಇರಲಿ.

ತಮಗೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ನನ್ನ ಕವನ ಸಂಕಲನ ಬಿಡುಗಡೆಗೊಳ್ಳಲು ಸಹಕರಿಸಿದ ಎಲ್ಲ ನಲ್ಮೆಯ ಮಿತ್ರ ಮಿತ್ರೆಯರಿಗೆ ಈ ಸಂಧರ್ಬದಲ್ಲಿ ಧನ್ಯವಾದ ಅರ್ಪಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ , ಪ್ರೀತಿ, ಹಾರೈಕೆ ಸದಾ ಹೀಗೆಯೇ ಇರಲಿ.

ಕವನ ಸಂಕಲನಕ್ಕೆ ಮೆಚ್ಚುಗೆಯ ನುಡಿಯಾಡಿದ ಶ್ರೀ ಕೆ ಏನ್ ಹೊಸಮನಿಯವರಿಗೆ ಧನ್ಯವಾದ.

ಕವನ ಸಂಕಲನಕ್ಕೆ ಮುನ್ನುಡಿ ಬರೆದ ಕವಿ ಅಶ್ವಥ್ ಭಾರದ್ವಾಜರಿಗೆ ಧನ್ಯವಾದ.
ಕವನ ಸಂಕಲನವನ್ನು ಅಂದವಾಗಿ ಮುದ್ರಿಸಿದ ಸೂರ್ಯ ಪ್ರಿಂಟರ್ಸ್ ಅವರಿಗೆ ಧನ್ಯವಾದ
ಕವನಗಳಿಗೆ ರಾಗ ಒದಗಿಸಿ ಇಂಪಾಗಿ ಹಾಡಿದ ವಾಣಿ ಹರ್ಡಿಕರ್ ಹಾಗೂ ಅವರ ತಂಡಕ್ಕೆ ಧನ್ಯವಾದ



ಸಮಾರಂಭಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ನಮ್ಮೂರ ಜನತೆಗೆ, ಒಲವಿನ ಜೈ ವಿಠಲ ಬಳಗಕ್ಕೆ ತುಂಬು ಹ್ರದಯದ ಕ್ರತಜ್ನತೆ.


ನನ್ನ ಕವನಕ್ಕೆ ಸದಾ ಚಿಂತನೆಯ ವೇದಿಕೆಯನ್ನೊದಗಿಸಿದ ಎಲ್ಲ ಬ್ಲಾಗ್ ಮಿತ್ರರಿಗೂ ಧನ್ಯವಾದಗಳು.

ಪ್ರೀತಿ ಹೀಗೆಯೇ ಇರಲಿ.

ಸದ್ಯದಲ್ಲಿಯೇ ಇಟಲಿಯ ಮನಮೋಹಕ ತಾಣಗಳ ಬಗೆಗೆ ಪ್ರವಾಸ ಕಥನ ಆರಂಬಿಸುತ್ತಿದ್ದೇನೆ.

ನಿಮ್ಮ ಪ್ರೀತಿಯ ಗುರು

24 comments:

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಿಮ್ಮ ಕವನ ಸಂಕಲನ ಬಿಡುಗಡೆಯಾಗಿದ್ದು ತಿಳಿದು ಸಂತಸವಾಯ್ತು.ಅಭಿನಂದನೆಗಳು.
ಗೌರಿ ಗಣೇಶ ಹಬ್ಬದ ಶುಭಾಶಯಗಳು.

Ittigecement said...
This comment has been removed by the author.
Ittigecement said...

ಗುರುಮೂರ್ತಿಯವರೆ....

ನಿಮ್ಮ ಪುಸ್ತಕ ನಮಗೂ ಸಿಗುವಂತೆ ಮಾಡಿ....
ನಿಮ ಬರವಣಿಗೆಗಳು ಇನ್ನಷ್ಟು ಪುಸ್ತಕವಾಗಲಿ....

ಗಣೇಶ ಹಬ್ಬದ ಶುಭಾಶಯಗಳು....

ನಿಮ್ಮ, ಪ್ರಯತ್ನ, ಪ್ರತಿಭೆಗೆ ಗಣೇಶನ ಆಶೀರ್ವಾದ ಯಾವಾಗಲೂ ಇರಲಿ....

shivu.k said...

ಗುರುಮೂರ್ತಿ ಸರ್,

ನಿಮ್ಮ ಕವನ ಸಂಕಲನ ಇಲ್ಲೆಲ್ಲಾ ಸಿಗುವಂತೆ ಮಾಡಿ ನಾವು ಓದುತ್ತೇವೆ. ಮತ್ತೆ ನಿಮಗೆ ಮತ್ತು ನಿಮ್ಮ ಕುಟುಂಟಕ್ಕೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ಮನಸು said...

nimma kavana sankalagalu mattastu baralendu ashisutteve..

Unknown said...

ನಿಮ್ಮ ಸಾಗರದಾಚೆಯ ಇಂಚರ ಓದಿ ಸಂತಸವಾಹಿತು
ಬಿಡುವಾದಾಗ ನನ್ನ ಬ್ಲೋಗೆ ಬನ್ನಿ.......
sahayaatri.blogspot.com

ಸವಿಗನಸು said...

ಗುರು,
ನಿಮ್ಮ "ಸಾಗರದಾಚೆಯ ಇಂಚರ" ಕವನ ಸಂಕಲನ ಬಿಡುಗಡೆ ತಿಳಿದು ಸಂತಸವಾಹಿತು.
ಅಭಿನಂದನೆಗಳು. ನಿಮ್ಮ ಮತ್ತಷ್ಟು ಬರವಣಿಗೆಗಳು ಪುಸ್ತಕವಾಗಲಿ....

ಗೌರಿ ಗಣೇಶ ಹಬ್ಬದ ಶುಭಾಷಯಗಳು

sunaath said...

ಗುರುಮೂರ್ತಿಯವರೆ,
ಕವನ ಸಂಕಲನದ ಬಿಡುಗಡೆಗಾಗಿ ಅಭಿನಂದನೆಗಳು. ಗಣೇಶನು ನಿಮ್ಮ ಎಲ್ಲ ಕಾರ್ಯಗಳನ್ನು ನಿರ್ವಿಘ್ನವಾಗಿ ನೆರವೇರಿಸಲಿ.

ಶರಶ್ಚಂದ್ರ ಕಲ್ಮನೆ said...

ಗುರುಮೂರ್ತಣ್ಣ,
ನಿನ್ನ ಕವನ ಸಂಕಲನ ಎಲ್ಲಿ ಸಿಕ್ತು.. ಪ್ರಕಾಶಕರ ವಿಳಾಸ ಇದ್ರೆ ಕೊಡು.. ಪುಸ್ತಕ ಬಿಡುಗಡೆಗೆ ಅಭಿನಂದನೆಗಳು. ನಿನ್ನ ಪ್ರವಾಸ ಕಥನಕ್ಕೆ ಕಾಯ್ತಾ ಇದ್ದಿ... ಗೌರಿ ಗಣೇಶ ಹಬ್ಬದ ಶುಭಾಶಯಗಳು.

ವಿನುತ said...

ನಿಮಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.
ಕವನಸ೦ಕಲನದ ಬಿಡುಗಡೆಗೆ ಅಭಿನ೦ದನೆಗಳು. ಸಮಾರ೦ಭದ ಚಿಕ್ಕ ವರದಿಯನ್ನು ಫೋಟೋ ಸಮೇತ ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರವಾಸ ಕಥನದ ನಿರೀಕ್ಷೆಯಲ್ಲಿ..

ಸಾಗರದಾಚೆಯ ಇಂಚರ said...

ಮಲ್ಲಿಕಾರ್ಜುನ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಸದ್ಯದಲ್ಲಿಯೇ ನನ್ನ ಪುಸ್ತಕ ಸಿಗುವಂತೆ ಮಾಡುತ್ತೇನೆ. ಆ ದಿನ ಹೊರಡುವ ಗಡಿಬಿಡಿಯಲ್ಲಿ ಪುಸ್ತಕ ಕೊಡಲು ಮರೆತೇ
ಪ್ರೀತಿ ಸದಾ ಇರಲಿ

ಸಾಗರದಾಚೆಯ ಇಂಚರ said...

ಶಿವೂ ಸರ್,
ಖಂಡಿತ ಕವನ ಸಿಗುವಂತೆ ಮಾಡುತ್ತೇನೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ

ಸಾಗರದಾಚೆಯ ಇಂಚರ said...

ಮನಸು,
ನಿಮ್ಮ ಹಾರೈಕೆ ಸದಾ ಇರಲಿ

ಸಾಗರದಾಚೆಯ ಇಂಚರ said...

ಈಶಕುಮಾರ ಸರ್,
ನನ್ನ ಬ್ಲಾಗ್ ಗೆ ಸ್ವಾಗತ, ಖಂಡಿತ ನಿಮ್ಮ ಬ್ಲಾಗ್ ಓದುತ್ತೇನೆ, ಹೀಗೆ ಬರುತ್ತಿರಿ

ಸಾಗರದಾಚೆಯ ಇಂಚರ said...

ಸವಿಗನಸು,
ಹಾರೈಕೆ ಸದಾ ಇರಲಿ

ಸಾಗರದಾಚೆಯ ಇಂಚರ said...

ಸುನಾಥ್,
ನಿಮ್ಮ ಪ್ರೀತಿಗೆ ಅಭಾರಿ, ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಶರಶ್ಚಂದ್ರ
ನಿನ್ನ ಪ್ರೀತಿಯ ಮಾತಿಗೆ ನಾನು ಅಭಾರಿ, ಸದ್ಯದಲ್ಲಿ ಸಿಗುವ ಹಾಗೆ ಮಾಡ್ತಿ,
ಬ್ಲಾಗ್ ಲಿ ಅಡ್ರೆಸ್ ಹಾಕ್ತಿ

ಸಾಗರದಾಚೆಯ ಇಂಚರ said...

ವಿನುತ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ, ಪ್ರವಾಸ ಕಥನ ಸದ್ಯದಲ್ಲಿಯೇ ನಿಮ್ಮ ಮುಂದೆ

ಜಲನಯನ said...

ಡಾ.ಗುರು, ಅಭಿನಂದನೆಗಳು ಮತ್ತು ಹೆಮ್ಮೆಯೆನಿಸುತ್ತೆ scientist ಗಳ ನಮ್ಮ ಬಳಗಕ್ಕೆ, ನಿಮ್ಮ ವ್ಯಸ್ತ ವೃತ್ತಿಜೀವನದ ಮಧ್ಯೆ ಇಂತಹ ಅಮೂಲ್ಯ ನುಡಿಸೇವೆ ಮಾಡುತ್ತಿದ್ದೀರಿ. ನಿಮ್ಮ ಮುಂಬರುವ ಎಲ್ಲ ಪ್ರಯತ್ನಗಳೂ ಇನ್ನೂ ಹೆಚ್ಚು ಸಫಲತೆಯನ್ನು ಕಾಣಲೆಂದು ನಮ್ಮ ಹಾರೈಕೆ.

Umesh Balikai said...

ಗುರು,

ನಿಮ್ಮ ಮೊದಲ ಕವನ ಸಂಕಲನ ಬಿಡುಗಡೆಯಾದುದಕ್ಕೆ ಹಾರ್ದಿಕ ಅಭಿನಂದನೆಗಳು. ಸಾಗರದಾಚೆಯ ನಿಮ್ಮ ಅಕ್ಷರ ಪ್ರೀತಿ ಸ್ತುತ್ಯಾರ್ಹ. ನಿಮ್ಮ ಇಂಚರ ಇನ್ನೂ ಹೆಚ್ಚು ದೂರ ಹರಡಲಿ, ನಿಮ್ಮಿಂದ ಇನ್ನೂ ಹೆಚ್ಚಿನ ಸಾಧನೆಯಾಗಲಿ ಎಂದು ಹಾರೈಸುತ್ತೇನೆ.

- ಉಮೇಶ್

ಸಾಗರದಾಚೆಯ ಇಂಚರ said...

ಜಲನಯನ,
ನಿಮ್ಮ ಪ್ರೀತಿ ಹಾರೈಕೆ ಸದಾ ಇರಲಿ, ಸಂಶೋಧಕರು ಅಂದರೆ ಬರಿ ಗಡ್ಡ ಬೆಳೆಸಿಕೊಂಡವರು ಅನ್ನೋ ಮನೋಭಾವ ಹೋಗಿಸೋ ಪ್ರಯತ್ನ ಅಷ್ಟೇ ನಂದು

ಸಾಗರದಾಚೆಯ ಇಂಚರ said...

ಆತ್ಮೀಯ ಉಮೇಶ್,
ನಿಮ್ಮ ಪ್ರೀತಿಯ ಮಾತುಗಳು ಇನ್ನಷ್ಟು ಸ್ಫೂರ್ತಿಯನ್ನು ಕೊಡುತ್ತಿವೆ. ಖಂಡಿತ ಇನ್ನು ಹೆಚ್ಚು ಬರೆಯಲು ಪ್ರಯತ್ನ ಪಡುವೆ

Me, Myself & I said...

ಆತ್ಮೀಯ ಗುರುರವರೆ,

ನಿಮ್ಮ ಪ್ರಯತ್ನ ಯಶ ಕಂಡದ್ದಕ್ಕೆ ಅಭಿನಂದನೆಗಳು.

ಅನೇಕ ಕನ್ನಡ ಬ್ಲಾಗಿಗರ ಬರಹಗಳು ಪುಸ್ತಕ ರೂಪದಲ್ಲಿ ಬರಲಿ ಮತ್ತು ಸಮಾಜದಲ್ಲಿ ಇನ್ನೂ ಹೆಚ್ಚೆಚ್ಚು ಕೈಗಳಿಗೆ ಎಟುಕುವಂತಾಗಾಲಿ ಎಂದು ಬಯಸುತ್ತೇನೆ.