Monday, April 20, 2009

ಸೇಲನ್ ನಲ್ಲಿ ಸ್ವೀಡಿಶ್ ದಂಪತಿಗಳ ಜೊತೆಗೆ ಕಳೆದ ಕೊನೆಯ ದಿನ...

ಪ್ರವಾಸ ಕಥನ ..ಭಾಗ 4  

ಹಿಂದಿನ ಸಂಚಿಕೆಯಲ್ಲಿ ( http://gurumurthyhegde.blogspot.com/2009/04/3.html ) ಸ್ಕಿಯಿಂಗ್ ಜೊತೆ ಅನುಭವಿಸಿದ ಪ್ರಕ್ರತಿಯ ರೋಚಕ ಅನುಭವಗಳನ್ನು ತಿಳಿಸಿದ್ದೆ. ಇಂದು ಇಲ್ಲಿ ನಾವು ಕಳೆದ ಕೊನೆಯ ದಿನದ ನೆನಪುಗಳ ಬುತ್ತಿ ಇಡುತ್ತಿದ್ದೇನೆ.
ಇಂದು ಸ್ಕಿಯಿಂಗ್ ಮಾಡಲು ಕೊನೆಯ ದಿನವಾಗಿತ್ತು, ಬೆಳಿಗ್ಗೆ ಎದ್ದಾಗ ೧೫ ಡಿಗ್ರಿ ಯಷ್ಟು ಉಷ್ನತೆಯಿತ್ತು. ಸೂರ್ಯನ ಸಂಪೂರ್ಣ ಪ್ರಕಾಶ ಎಲ್ಲ ಹಿಮದ ಮೇಲೆ ಬಿದ್ದು ಹಿಮ ನಿಧಾನವಾಗಿ ಕರಗಲಾರಂಬಿಸಿತ್ತು. ಆದರೆ ಅದರಲೂ ಒಂದು ಸೌಂದರ್ಯತೆಯಿದೆ, 

ಕರಗುವ ಪರಿ, ಬೀಳುವ ಪರಿ, ಎಲ್ಲವೂ ಅದ್ಭುತ, ರಮ್ಯ ಮನೋಹರ.ಇಂದು ರಾಲ್ಫ್ ಮತ್ತು ಅವರ ಹೆಂಡತಿ ಲೀನ ಬೇರೆ ದಿಕ್ಕಿನಲ್ಲಿ ಸ್ಕಿಯಿಂಗ್ ಮಾಡಲು ಹೋದರು. ನಾನು ಮತ್ತು ನನ್ನ ಹೆಂಡತಿ ಇಬ್ಬರೇ ಇನ್ನೊದು ದಿಕ್ಕಿಗೆ ಹೋದೆವು. ಇಬ್ಬರೇ ಇದ್ದಿದ್ದರಿಂದ ಬಿದ್ದರೂ ನಗಲು ನಾವಿಬ್ಬರೇ ಇದ್ದೆವು. ಹಾಗಾಗಿ ಸ್ವಲ್ಪ ಆರಾಮ ಎನಿಸಿತ್ತು. ಆದರೆ ಇಂದು ತುಂಬಾ ವೇಗದಲ್ಲಿ ಹೋಗುತ್ತಾ ಹೋಗುತ್ತಾ ಅನೇಕ ಜಾಗಗಳ ದರ್ಶನವಾಯಿತು. ಮೊದಲಿಗೆ ನಮ್ಮ ಪ್ರಯಾಣದ ಮದ್ಯದಲ್ಲಿ ನಾಯಿಯನ್ನು ಕಟ್ಟಿಕೊಂಡು ತಾನು ಹಿಂದೆ 


ಹೋಗುವ ಮನುಷ್ಯನ ದರ್ಶನವಾಯಿತು. ಹೀಗೆ ಎಷ್ಟೋ ಜನ ಇಲ್ಲಿ ಹೀಗೆ ಮಾಡುತ್ತಾರೆ.ಆ ಬಡಪಾಯಿ ನಾಯಿಗಳ ಸ್ಥಿತಿ ದೇವರಿಗೆ ಪ್ರೀತಿ. ಅವುಗಳನ್ನು ಹೊಡೆಯುತ್ತಾ ಇವರು ಹಿಮದಲ್ಲಿ ವೇಗವಾಗಿ ಹೋಗುತ್ತಾರೆ. ಆ ನಾಯಿಗಳಿಗೋ ವಿಪರೀತ ಚಳಿಯಾಗಿ ಮುದುಡಿಕೊಂಡಿರುತ್ತವೆ. ಯಜಮಾನದ ಹೊಡೆತದ ರುಚಿ ತಾಳಲಾರದೆ ಓಡುತ್ತಾ ಹೋಗುವ ದ್ರಶ್ಯ ಮನ ಕಲಕಿತು. ಹೀಗೆಯೇ ಸ್ವಲ್ಪ ಮುಂದೆ ಹೋದಕೂಡಲೇ ಒಂದು 250 ವರ್ಷಕ್ಕೂ ಮಿಗಿಲಾದ ಚಹಾ 

ಅಂಗಡಿ ಸಿಕ್ಕಿತು. ಅತ್ಯಂತ ಪುಟ್ಟ ಚಹಾ ಅಂಗಡಿ, ಆದರೆ ಅದು ಅಷ್ಟೊಂದು ಹಳೆಯದು ಎಂದು ಕೇಳಿದಾಗ ಒಡನೆಯೇ ಆಶ್ಚರ್ಯವಾಯಿತು . ನಮ್ಮಲ್ಲಿ ಕಟ್ಟಿದ ಮನೆ 50 ವರ್ಷ ಬರಲು ಕಷ್ಟ. ಅಂಥದರಲ್ಲಿ 250 ವರ್ಷಗಳಷ್ಟು ಹಳೆಯದಾದ ಚಹಾ ಅಂಗಡಿ ಅದೇ ರೂಪದಲ್ಲಿ ಇದೆ ಎಂದರೆ ಸೋಜಿಗವೇ ಸರಿ. ಪ್ರಕ್ರತಿಯ  ವಿಕೋಪಕ್ಕೆ ಎದುರಾಗಿ ಸೆಟೆದು ನಿಂತು ತನ್ನ ಭವಿತವ್ಯದ ಮೊನಚನ್ನು ತೋರಿಸುತ್ತಿರುವ ಆ ಅಂಗಡಿಗೆ ಒಂದು ಸಲಾಮು ಹೊಡೆದು ಮುಂದೆ ಹೊರಟೆವು. ಪ್ರಕ್ರತಿಯ ವಿಚಿತ್ರ ನೋಡಿ. ಎಲ್ಲ 


ಗಾಳಿ, ಬೆಳಕು ಶುಭ್ರ ವಾಗಿದ್ದರೆ ಈ ರೀತಿಯ ಎಲೆಗಳು ಗಿಡದಲ್ಲಿ ಬರುತ್ತವಂತೆ. ಇದನ್ನು ಎಲ್ಲ ಕಡೆ ನೋಡಲು ಸಿಗುವುದಿಲ್ಲ. ಅಷ್ಟೊಂದು ಶುಭ್ರತೆ ಪ್ರಕ್ರತಿಯಲ್ಲಿದ್ದರೆ ಇವು ಹುಟ್ಟುತ್ತವಂತೆ. ಇಲ್ಲಿನ ಅನೇಕ ಗಿಡಗಳಲ್ಲಿ ಇದರ ದರ್ಶನವಾಯಿತು.  ಸ್ವಲ್ಪ ದೂರ ನಡೆಯುವಷ್ಟರಲ್ಲಿ ಹಳೆಯ ಕಾಲದ ಸ್ಕಿಯಿಂಗ್ ಸೆಟ್ ಗಳನ್ನಿಟ್ಟ ಒಂದು ಅಂಗಡಿ ನೋಡಿದೆವು. ಹಿಂದಿನ ಕಾಲದಲ್ಲಿನ
 

ಸ್ಕಿಯಿಂಗ್ ಸೆಟ್ ಹೇಗಿತ್ತು ಎನ್ನುವುದರ ಪರಿಚಯವಾಯಿತು. ಇಂದು ನಾವಿಬ್ಬರೂ ಸೇರಿ ಸುಮಾರು ೧೫ ಕಿ ಮಿ ಗಳಷ್ಟು ಸ್ಕಿಯಿಂಗ್ ಮಾಡಿದೆವು. ನಯನ ಮನೋಹರ ಹಿಮದ ರಾಶಿಗಳ ನಡುವೆ ನಮ್ಮನ್ನೇ ನಾವು ಕಳೆದು ಕೊಂಡಷ್ಟು ಭಾಸವಾಯಿತು. ಅಲ್ಲಿನ ಒಂದೊಂದು ಪರ್ವತಗಳೂ ನವ ವಧುವಿನಂತೆ ಕಂಗೊಳಿಸುತ್ತಾ 

ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿದ್ದವು. ಹೀಗೆ ಸಂಪೂರ್ಣ ದಿನ ಸ್ಕಿಯಿಂಗ್ ಮಾಡಿ ರಾತ್ರಿ ರಾಲ್ಫ್ ಮತ್ತು ಲೀನ ಜೊತೆ ಊಟ ಮಾಡಿ ಕೊನೆಯ ದಿನದ ನೆನಪಿನಲ್ಲಿ ನಿದ್ದೆ ಹೋದೆವು. 
ಮರುದಿನ ಬೆಳಿಗ್ಗೆ ಬೇಗನೆ ಎದ್ದು ಸ್ಕಿಯಿಂಗ್ ಸೆಟ್ ಎಲ್ಲ ತಿರುಗಿ ಕೊಟ್ಟು ಮನೆಗೆ ಬಂದು ಸಾಮಾನು ಪ್ಯಾಕ್ ಮಾಡಿ ರಾಲ್ಫ್ ಮತ್ತು ಲೀನಾಗ ಕ್ರತಜ್ನತೆಯನ್ನು ಅರ್ಪಿಸಿದಾಗ ಏನೋ ಒಂದು ಅಗಲಿಕೆಯ ನೋವು ಮನದಂಚಿನಲ್ಲಿ ಸುಳಿದು ಹೋಯಿತು. ಮಾನವೀಯತೆಗೆ ಜಾತಿಯ ಹಂಗಿಲ್ಲ,  ಎನ್ನುವುದು ಅವರ ಜೊತೆ ದಿನ ಕಳೆದಾಗ ತಿಳಿಯಿತು. ತಾವು ಸ್ವೀಡಿಶ್ ಆಗಿದ್ದರೂ ನಮ್ಮನ್ನು ತಮ್ಮ ಮಕ್ಕಳಂತೆ ನೋಡಿಕೊಂಡ ಅವರನ್ನು ಈ ಜನ್ಮದಲ್ಲಿ ಮರೆಯಲು ಸಾದ್ಯವಿಲ್ಲ. ಇಂಥಹ ಎಷ್ಟೋ ಮಧುರ ಸಂಭಂದಗಳೊಡನೆ ಬಸ್ ಹತ್ತಿದಾಗ ಕಣ್ಣಲ್ಲಿ ಏನೋ ಒಂದು ನೋವಿತ್ತು. ರಾಲ್ಫ್ ನಮ್ಮನ್ನು ಕಳಿಸಲು ಬಸ್ ಸ್ಟೇಷನ್ ತನಕ ಬಂದಿದ್ದರು. ಅವರಿಗೂ ಏನೋ ಬೇಸರ, ನಮಗೂ ಏನೋ ತಳಮಳ. ಬರುವಾಗ ಇದ್ದ ಉತ್ಸಾಹ ಆಗ ಮಾಯವಾಗಿತ್ತು. ಆದರೆ ಸಿಹಿನೆನಪುಗಳು, ಮಧುರ ಅನುಭವಗಳು ಮನದ ಮೂಲೆಯಲ್ಲಿ ಕುಳಿತು ತನ್ನಾಟ ಆರಂಬಿಸಿತ್ತು. ರಾತ್ರಿ Gothenburg ಬಂದಿಳಿದಾಗ 7 ಗಂಟೆಯಾಗಿತ್ತು. ಭಾರವಾದ ಮನಸ್ಸು, ಭಾರ ಹೆಜ್ಜೆಗಳಿಂದ ಮನೆಯ ಕಡೆ ಹೊರಟೆವು. 
 
ದರೆ ಈ ಪ್ರವಾಸ ಒಂದು ಹೊಸ ಅನುಭವ ಕೊಟ್ಟಿತು. ಸ್ಕಿಯಿಂಗ್ ಎನೆಂಬುದನ್ನೇ ಗೊತ್ತಿಲ್ಲದ ನಮಗೆ ಸ್ವೀಡಿಶ್ ದಂಪತಿಗಳು ಹೊಸ ನೆನಪುಗಳ ಬುತ್ತಿಯನ್ನೇ ನೀಡಿದ್ದರು. ಆ ಹಿಮಗಳ ರಾಶಿ, ಪರ್ವತದ ಸೌಂದರ್ಯ, ಒಂದೇ ಎರಡೇ, ಎಲ್ಲವೂ ಈಗ ನೆನಪು ಮಾತ್ರ, ನೆನಪು ಮಾತ್ರ, ನೆನಪು ಮಾತ್ರ.....  

ಕೊನೆಯ ಒಂದು ತಿಂಗಳಿಂದ ನನ್ನೊಡನೆ ಪ್ರವಾಸ ಕಥನ ಓದಿದ, ಅಭಿಪ್ರಾಯ ವ್ಯಕ್ತಪಡಿಸಿದ ತಮಗೆಲ್ಲರಿಗೂ ಧನ್ಯವಾದಗಳು. ಮತ್ತೆ ಬರುತ್ತೇನೆ....

22 comments:

ಮನಸು said...

ಗುರು,
ನಿಮ್ಮ ಈ ಅನುಭವ ನಮ್ಮೂಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು... ಫೋಟೋಗಳು ತುಂಬಾ ಚೆನ್ನಾಗಿವೆ ಹೇಗೋ ಸ್ಕಿಯಿಂಗ್ ಬಗ್ಗೆ ನಿಮಗೆ ತಿಳಿಸಿ ಅನುಭವಿಸುವಂತೆ ಮಾಡಿದ ಆ ದಂಪತಿಗಳಿಗೂ ಸಹ ವಂದನೆ ಹೇಳಲೇ ಬೇಕು...ಆ ಚಹಾ ಅಂಗಡಿ ಅಷ್ಟು ವರ್ಷ ಕಳೆದರು ಹಾಗೆ ಇರುವುದು ನಿಜಕ್ಕೂ ಸೊಜಿಗದ ಸಂಗತಿಯೆನಿಸಿದೆ.ನಿಜಕ್ಕೊ ಆ ನಾಯಿಗಳ ಸ್ಥಿತಿ ಕಂಡು ಮನ ಕಲಕಿದೆ...ಅಯ್ಯೋ ಪಾಪವೆನಿಸಿದೆ.... ನಿಮ್ಮ ಈ ಪ್ರವಾಸ ಕಥೆ ನಮಗೆ ತುಂಬ ಖುಷಿಕೊಟ್ಟಿದ್ದೆ... ಮತ್ತಷ್ಟು ಲೇಖನಿಗಳು ಮೂಡಿಬರಲಿ..

ಧನ್ಯವಾದಗಳು..

PARAANJAPE K.N. said...

ಡಾ: ಗುರುಮೂರ್ತಿಯವರೇ,
ನಿಮ್ಮ ಪ್ರವಾಸಾನುಭಾವವನ್ನು ಬ್ಲಾಗ್ ಮಿತ್ರರೊ೦ದಿಗೆ ಹ೦ಚಿಕೊ೦ಡು ಕೃತಾರ್ಥರಾಗಿದ್ದಿರಿ. ನಿಮ್ಮೊಡನೆ ನಾವು ಪ್ರವಾಸ ಮಾಡಿ ಬ೦ದ ಅನುಭೂತಿ ಪಡೆದ೦ತಾಗಿದೆ. ಹೀಗೆ ಬರೆಯುತ್ತಿರಿ.

ಶಾಂತಲಾ ಭಂಡಿ (ಸನ್ನಿಧಿ) said...

ಡಾ.ಗುರುಮೂರ್ತಿಯವರೆ...
ಪ್ರವಾಸ ಕಥನ ತುಂಬ ಇಷ್ಟವಾಯಿತು. ಸ್ಕೀಯಿಂಗ್ , ಇನ್ನೂರೈವತ್ತು ವರ್ಷಕ್ಕೂ ಹಳೆಯ ಚಹದಂಗಡಿ ಎಲ್ಲವೂ ಇಷ್ಟವಾದವು. ಅಂತ್ಯದ ಸಾಲುಗಳನೋದುತ್ತ ಪ್ರವಾಸ ಮುಗಿಸಿ ಬಂದ ಭಾವ ಓದಿದವರನ್ನು ಆವರಿಸಿಕೊಳ್ಳುವಂತೆ ಬರೆದಿದ್ದೀರಿ.

ಸಾಗರದಾಚೆಯ ಇಂಚರ said...

ಮನಸು,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ, ಒಂದು ತಿಂಗಳಿಂದ ಇದನ್ನು ಬರೆಯುತ್ತಿದ್ದೇನೆ, ಎಲ್ಲಿ ನಿಮಗೆಲ್ಲ ಬೇಸರ ಬರುತ್ತದೋ ಎಂದುಕೊಂಡಿದ್ದೆ, ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪರಾಂಜಪೆಯವರೆ,
ಅಭಿಪ್ರಾಯಕ್ಕೆ ಧನ್ಯವಾದಗಳು, ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ

ಸಾಗರದಾಚೆಯ ಇಂಚರ said...

ಶಾಂತಲ,
ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು, ಇದೊಂದು ಮರೆಯಲಾರದ ಪ್ರವಾಸವಾಗಿ ನನ್ನ ಮನಸಿನಲ್ಲಿ ಉಳಿದು ಹೋಯಿತು, ಕೇವಲ ಸ್ಥಳದ ದ್ರಷ್ಟಿಯಿಂದ ಮಾತ್ರವಲ್ಲ, ಇನ್ನು ಹತ್ತು ಹಲವು ವಿಶಿಷ್ಟ ಅನುಭವಗಳು ಇಲ್ಲಿ ಸಿಕ್ಕಿವೆ, ಸದ್ಯದಲ್ಲೇ ಮತ್ತೊಂದು ಪ್ರವಾಸ ಕಥನ ಆರಂಬಿಸುತ್ತೇನೆ, ಹೀಗೆಯೇ ಬರುತ್ತಿರಿ,

ಜ್ಞಾನಮೂರ್ತಿ said...

ಡಾ ಗುರುಮೂರ್ತಿ ಸರ್,
ನಿಮ್ಮ ಪ್ರವಾಸ ಕಥನ ಓದಿ ತುಂಬಾ ಖುಷಿಯಾಯಿತು ಸರ್ , ಹೀಗೆ ಬರೆಯುತ್ತಿರಿ.
ಧನ್ಯವಾದಗಳು..

ಸಾಗರದಾಚೆಯ ಇಂಚರ said...

ಜ್ಞಾನಮೂರ್ತಿ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ

ಶಿವಪ್ರಕಾಶ್ said...

ಗುರುಮೂರ್ತಿಯವರೆ,
ನಿಮ್ಮ ಸೇಲನ್ ಪ್ರವಾಸ ತುಂಬಾ ಚನ್ನಾಗಿತ್ತು,
ಒಳ್ಳೆ ಚಿತ್ರಗಳು, ಹಾಗು ಒಳ್ಳೆಯ ಲೇಖನದೊಂದಿಗೆ ನಿಮ್ಮ ಪ್ರವಾಸವನ್ನು ಹಂಚಿಕೊಂದಿದ್ದಿರಿ...
ನಿಮಗೂ, ರಾಲ್ಫ್ ಕುಟುಂಬದವರಿಗೂ ಧನ್ಯವಾದಗಳು ...

ಸಾಗರದಾಚೆಯ ಇಂಚರ said...

ಧನ್ಯವಾದಗಳು ಶಿವಪ್ರಕಾಶ್ ಸರ್,
ಹೀಗೆ ಬರುತ್ತಿರಿ.

ಕ್ಷಣ... ಚಿಂತನೆ... said...

ಸರ್‍, ಸೇಲನ್ ಪ್ರವಾಸ ಲೇಖನ ತುಂಬ ಮುದ ನೀಡಿತು. ದೂರದೂರಿನ ದರ್ಶನ. ಅದರಲ್ಲೂ ಹಿಮಾವೃತಗೊಂಡ ಜಾಗದಲ್ಲಿನ ಸ್ಥಿತಿಗತಿ, ರಮಣೀಯ ದೃಶ್ಯಗಳು, ಉಡುಗೆತೊಡುಗೆ, ಸ್ಕೀಯಿಂಗ್ ಮತ್ತು ಅದಕ್ಕೆ ಬೇಕಾಗುವ ಪರಿಕರಗಳು, ತರಬೇತಿ, ಟೀ ಅಂಗಡಿ, ಸ್ಕೀಯಿಂಗ್‌ನ ಅನುಭವ ಇವೆಲ್ಲವನ್ನೂ ನಾವೇ ಅನುಭವಿಸುತ್ತಿದ್ದಂತೆ ಅನಿಸುತ್ತಿತ್ತು ಲೇಖನವನ್ನು ಓದುತ್ತಾ ಸಾಗಿದಂತೆ. ಸರಳವಾಗಿ, ಸುಂದರ ಛಾಯಾಚಿತ್ರಗಳೊಡನೆ ಲೇಖನವನ್ನು ಬರೆದಿದ್ದೀರಿ ಮತ್ತು ಕನ್ನಡ ಮಿತ್ರರೊಡನೆ ಹಂಚಿಕೊಂಡಿದ್ದೀರಿ. ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಕ್ಷಣ ಚಿಂತನೆ,
ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ

shivu.k said...

ಡಾ.ಗುರುಮೂರ್ತಿ ಹೆಗಡೆ ಸರ್,

ನಿಜಕ್ಕೂ ನಿಮ್ಮ ನಾಲ್ಕು ಕಂತಿನ ಸ್ಕೀಯಿಂಗ್ ಅನುಭವವನ್ನು ಓದುತ್ತಿದ್ದಂತೆ ನಾನು ನಿಮ್ಮ ಜೊತೆಯಲ್ಲೇ ಸ್ಕೀಯಿಂಗ್ ಮಾಡುತ್ತಾ ಇದ್ದ ಅನುಭವವಾಯಿತು...

ನೀವು ಸ್ಕೀಯಿಂಗ್ ಕಲಿಯಲು ಸ್ವೀಡಿಶ್ ದಂಪತಿಗಳ ಪಾಲು ದೊಡ್ಡದೇ ಅಲ್ಲವೇ...

ಚಹ ಅಂಗಡಿ ನನಗೆ ವಿಶೇಷವೆನಿಸಿತು...

ಆಹಾಂ! ಫೋಟೋಗಳಂತೂ ತುಂಬಾ ಚೆನ್ನಾಗಿವೆ....ಕೆಲವಂತೂ ಸ್ಪರ್ಧೆಗೆ ಕಳಿಸಿದರೆ ಬಹುಮಾನ ಖಚಿತ...

ಧನ್ಯವಾದಗಳು...

ಅಂತರ್ವಾಣಿ said...

ಡಾ||
ಸಕ್ಕತ್ ಮಜಾ ಮಾಡಿದ್ದೀರ ಅನಿಸುತ್ತಿದೆ ಸ್ಕೀಯಿಂಗ್ ಮಾಡುತ್ತ. ಆ ಚಹಾ ಅಂಗಡಿ ನಿಜಕ್ಕೂ ಆಶ್ಚರ್ಯ ತರಿಸಿತು.

ನಿಮ್ಮ ಎಲ್ಲಾ ಪ್ರವಾಸ ಕಥನ ಚೆನ್ನಾಗಿತ್ತು.

ಸಾಗರದಾಚೆಯ ಇಂಚರ said...

ಶಿವೂ ಸರ್,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ, ಫೋಟೋಗಳ ಬಗೆಗೆ ನಿಮ್ಮ ಅಭಿಪ್ರಾಯ ಕೇಳಿ ತುಂಬಾ ಸಂತೋಷವಾಯಿತು. ಇನ್ನು ಫೋಟೋಗ್ರಫಿ ಉತ್ತಮ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ..

ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಅಂತರ್ವಾಣಿ,
ನಿಜಕ್ಕೂ ಇಲ್ಲಿ ಬಂದ ಮೇಲೆ ವಾರದ ಕೊನೆಗೆ ಎಷ್ಟೊಂದು ತಿರುಗುತ್ತೇವೆ ಎಂದರೆ ವಾರದ ಮಧ್ಯದಲ್ಲೇ ಸ್ವಲ್ಪ ಅರಾಮವಾಗಿರುತ್ತೇವೆ.
ಹೀಗೆಯೇ ಬರುತ್ತಿರಿ, ಅಭಿಪ್ರಾಯ ತಿಳಿಸುತ್ತಿರಿ.

Godavari said...

ತುಂಬ ಸುಂದರವಾಗಿ ನಿಮ್ಮ ಪ್ರವಾಸಕಥನವನ್ನು ಹೇಳಿಕೊಂಡಿದ್ದಿರಿ..ನಾವೇ ಹೋಗಿ ನೋಡಿಬಂದಷ್ಟು ಸಂತೋಷ ಆಯಿತು..

ಧನ್ಯವಾದಗಳು...

ಸಾಗರದಾಚೆಯ ಇಂಚರ said...

ಗೋದಾವರಿ,
ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ

ವಿನುತ said...

ಈ ನಾಲ್ಕು ಕ೦ತುಗಳಲ್ಲಿ ನಿಮ್ಮ ಸ್ಕೀಯಿ೦ಗ ಅನುಭವ ತುಂಬಾ ಸೊಗಸಾಗಿ ಮೂಡಿಬ೦ದಿದೆ. ಮಾಡಬೇಕೆ೦ದುಕೊ೦ಡು, ಕೊನೆಗೂ ಅವಕಾಶ ಸಿಗದೇ ನಿರಾಶಳಾಗಿದ್ದೆ. ನೀವು ಅವಕಾಶ ಮಾಡಿಕೊಟ್ಟಿರಿ ನಿಮ್ಮ ಬರಹದ ಮೂಲಕ. ಧನ್ಯವಾದಗಳು.

ಸಾಗರದಾಚೆಯ ಇಂಚರ said...

ವಿನುತಾ,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ, ಒಮ್ಮೆ ನೀವು ಮಾಡಿ ಬನ್ನಿ

shwetha said...

Shwetha

Nemma varnane yalle namage Selan ge hoge banda hage ayethu.
nanaganesuthe chaha shop edheyalla adu alleruva chalee enda astu chennage edhe andukondeddene allava.

nejakku adbutha nemma ondu ondu lekana namage hosa lokada prechaya madekoduthe

Thank you anubava nammondeege hanchee kondeddakke.

ಸಾಗರದಾಚೆಯ ಇಂಚರ said...

Shweta
Thank you so much