-ಗುರು ಬಬ್ಬಿಗದ್ದೆ
ಹವ್ಯಕ ಸಮುದಾಯದವರು ಆದರಾತಿಥ್ಯದಲ್ಲಿ ಎಷ್ಟು ಮುಂದೋ ಹಾಗೆಯೇ ಸಂಪ್ರದಾಯದಲ್ಲಿಯೂ ಕೂಡ. ಅದರಲ್ಲೂ ಹವ್ಯಕರ ಮದುವೆಯೆಂದರೆ ಅದೊಂದು ವಿಶಿಷ್ಟ ಆಚರಣೆಯ ಹಬ್ಬ. ಕಾಲ ಬದಲಾಗುತ್ತಿದ್ದರೂ ತಮ್ಮ ಸಂಪ್ರದಾಯ, ಸಂಸ್ಕ್ರತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಹವ್ಯಕ ಜನಾಂಗವನ್ನು ಶ್ಲಾಘಿಸಲೇಬೇಕಾಗಿದೆ. ಈ ಕವನದಲ್ಲಿ ಹವ್ಯಕರ ಮದುವೆಯ ದಿನದ ಸಜೀವ ಚಿತ್ರಣ ನೀಡಲಾಗಿದೆ. ಮದುವೆಯ ದಿನ ಬೆಳಿಗ್ಗೆ ಬಾಸಿಂಗ ಕಟ್ಟುವ ಕಾರ್ಯಕ್ರಮದಿಂದ ಹಿಡಿದು ದಿನದ ಎಲ್ಲ ಸಂಪ್ರದಾಯಗಳನ್ನು ಯಥಾವತ್ತಾಗಿ ತಿಳಿಸುವ ಪ್ರಯತ್ನವೇ ಈ ಕವನದ ಹೂರಣ. ಅದೇ ನಿಜವಾದ ಮದುವೆಯ ಸಂಭ್ರಮದ ತೋರಣ.
ಏನಿದು ಸಂಭ್ರಮವೋ , ಸಖಿ ನನಗೇನಿದು ಸಂತಸವೋ
ಮನಸುಗಳಾಚೆಗೆ ಮುದವನು ನೀಡುವ
ಮನಸುಗಳಾಚೆಗೆ ಮುದವನು ನೀಡುವ
ಮಿಲನ ಮಹೋತ್ಸವವೋ, ಮಿಲನ ಮಹೋತ್ಸವವೋ, ಮಿಲನ ಮಹೋತ್ಸವವೋ
ಮುಂಜಾನೆಯ ಸೂರ್ಯನ ಕಿರಣಗಳು , ತೆರೆದಿವೆ ಕಣ್ಣಿನ ರೆಪ್ಪೆಗಳು
ಬಾಸಿಂಗ ಕಟ್ಟಿದ ಕ್ಷಣ ಕ್ಷಣವೋ
ಪ್ರೇಮ ಮಹೋತ್ಸವವೋ ಮಿಲನ ಮಹೋತ್ಸವವೋ
ಬಾಸಿಂಗ ಕಟ್ಟಿದ ಕ್ಷಣ ಕ್ಷಣವೋ
ಪ್ರೇಮ ಮಹೋತ್ಸವವೋ ಮಿಲನ ಮಹೋತ್ಸವವೋ
ಸಿಂಗರ ಮಾಡಿದ ವಧು ವರರು, ಶಾಸ್ತ್ರ ವಿಧಿಗಳಲಿ ಎಲ್ಲ ಹಿರಿಯರು
ಹರಸಲು ಬಂದಿಹ ಬಂಧು ಬಳಗವೋ
ಸಂತಸದಾ ಹೊನಲೋ, ಸಖಿ ಮಿಲನ ಮಹೋತ್ಸವವೋ
ಸಂತಸದಾ ಹೊನಲೋ, ಸಖಿ ಮಿಲನ ಮಹೋತ್ಸವವೋ
ವಧುವಿನ ಕರದಲಿ ಮಲ್ಲಿಗೆ ಹಾರ, ವರನು ಕಟ್ಟುವ ತಾಳಿಯ ದಾರ
ಧಾರೆಯ ಎರೆಯುವ ಕನ್ಯಾ ಪಿತರು
ಧಾರೆಯ ಎರೆಯುವ ಕನ್ಯಾ ಪಿತರು
ಸಾರ್ಥಕವಾಯಿತು ಕಣ ಕಣವೋ , ಮಿಲನ ಮಹೋತ್ಸವವೋ
ಸಪ್ತ ಪದಿಯಲಿ ನಡೆಯುವ ಸಮಯ, ಸುಪ್ತ ಭಾವನೆಯು ಅರಳುವ ಸಮಯ
ಬಗೆ ಬಗೆ ಖಾದ್ಯದ ನಂಟು ರಸಮಯ
ಎಲ್ಲರೂ ಸೇರುವ ಉತ್ಸವವೋ , ಮಿಲನ ಮಹೋತ್ಸವವೋ
ಬಗೆ ಬಗೆ ಖಾದ್ಯದ ನಂಟು ರಸಮಯ
ಎಲ್ಲರೂ ಸೇರುವ ಉತ್ಸವವೋ , ಮಿಲನ ಮಹೋತ್ಸವವೋ
ಅರಸಿಣ ಹಚ್ಚುವ ಸಮಯವಿದು, ಸೆರಗನು ಹಿಡಿಯುವ ಕ್ಷಣವೇ ಇದು
ವಧುವಿನ ಮಧುರ ಗಾನ ಸುಧೆ
ವಧುವಿನ ಮಧುರ ಗಾನ ಸುಧೆ
ನಕ್ಕು ನಲಿಯುವ ಅನುಕ್ಷಣವೋ ,ಸಖಿ ಮಿಲನ ಮಹೋತ್ಸವವೋ
ಏಳು ರಂಧ್ರಗಳು ಕೃಷ್ಣನ ಕೊಳಲು, ಏಳು ಹೆಜ್ಜೆಗಳಲೇನಿದೆ ತಿರುಳು
ಬಿಳಿಯ ಬಣ್ಣದಲಿ ಏಳು ಬಣ್ಣಗಳೋ
ಏಳು ಜನುಮದ ನಂಟಿದು ಕೇಳೋ, ಮಿಲನ ಮಹೋತ್ಸವವೋ
ಏಳು ಜನುಮದ ನಂಟಿದು ಕೇಳೋ, ಮಿಲನ ಮಹೋತ್ಸವವೋ
11 comments:
Thumba chennagide!!
ವಾವ್ ಅದ್ಬುತ ರಮ್ಯ ಮನೋಹರ!!!!!!!!!!!!!!!!!!!!
ಆತ್ಮೀಯ ಮೂರ್ತಿ ಹಾಗೂ ಮನಸು,
ತುಂಬಾ ಧನ್ಯವಾದಗಳು ಇಷ್ಟವಾಗಿದ್ದಕ್ಕೆ
ಗುರು...
ತುಂಬಾ ಚೆನ್ನಾಗಿದೆ...!
ಪ್ರತಿಕ್ರಿಯೆ ಕೊಡಲು ತಡವಾದುದಕ್ಕೆ ಕ್ಷಮಿಸಿ..!
ವ್ಹಾ ವ್ಹಾ ವ್ಹಾ ಮೂರ್ತಿಗಳೇ, ನಿಮ್ಮ ಕವನ ಸುಂದರ, ಹಾಗೂ ಅದನ್ನು ಓದಿ ನನಗೊಂದು ಮದುವೆ ಆಗಲೇಬೇಕು ಅನ್ನಿಸತೊಡಗಿದೆ :)
ನಿಮ್ಮ ಬ್ಲಾಗ್ ತಡವಾಗಿ ನೋಡಿದೆ, ಖುಷಿಯಾಯ್ತು, ಈಗಲಾದ್ರೂ ಸಿಕ್ರಲ್ಲ..
ಆತ್ಮೀಯ ಪ್ರಕಾಶಣ್ಣ,
ತಡವಾಗಿದ್ದಕ್ಕೆ ಬೇಸರವಿಲ್ಲ, ಓದಿದ್ದಕ್ಕೆ ಸಾರ್ಥಕತೆ ಇದೆ.
ಆತ್ಮೀಯ ವೇಣು,
ನನ್ನ ಬ್ಲಾಗ್ ಗೆ ಸುಸ್ವಾಗತ, ತುಂಬಾ ದಿನಗಳ ನಂತರ ಸಿಕ್ಕಿದ್ದು ಮುದ ನೀಡಿದೆ. ಹೀಗೆ ಬರುತ್ತಿರು.
tumba chennagide
ಗುರುಮೂರ್ತಿ ಹೆಗಡೆ ಸರ್,
ಪ್ರಕಾಶ್ ಹೆಗಡೆಯವರ್ ಬ್ಲಾಗಿನಿಂದ ಇಲ್ಲಿಗೆ ಬಂದೆ...
ಹವ್ಯಕರ ಮದುವೆಯನ್ನು ಕವನದ ಮುಖಾಂತರ ತುಂಬಾ ಚೆನ್ನಾಗಿ ಬರೆದಿದ್ದೀರಿ....
ನನ್ನ್ ಬ್ಲಾಗಿಗೊಮ್ಮೆ ಬೇಟಿಕೊಡಿ....
ಆತ್ಮೀಯ ಶಿವು ಸರ್,
ತುಂಬಾ ಧನ್ಯವಾದಗಳು ನಮ್ಮ ಕವನ ಇಷ್ಟವಾಗಿದ್ದಕ್ಕೆ. ಬರುತ್ತಿರಿ,
ನಿಮ್ಮ ಬ್ಲಾಗ್ ಗೆ ಬರುತ್ತಿರುತ್ತೇನೆ,
ಗುರುಮೂರ್ತಿಯವರಿಗೆ ನಮಸ್ಕಾರ,
ಹವ್ಯಕರ ಮದುವೆ ಸಂಪ್ರದಾಯದ ಬಗ್ಗೆ ಬರೆದಿದ್ದು ಸಂತೋಷವಾಯಿತು. ನಾನೂ ಕೂಡ ಹವ್ಯಕನೇ. ಶಿರಸಿ ಸಾಗರ ಕಡೆಯ ಹವ್ಯಕರದು ವಿಶಿಷ್ಟ ಸಂಪ್ರದಾಯ. ಪುತ್ತೂರು ಸುಳ್ಯ ಕಡೆಯದು ಇನ್ನೊಂದು ಥರ. ಇದೆಲ್ಲ ವಿಡಿಯೋ ಚಿತ್ರೀಕರಣ ಮಾಡಬೇಕೆಂದು ಆಸೆಯಿದೆ, ನೋಡಬೇಕು.
ದೀಪಸ್ಮಿತ ಅವರೇ,
ನನ್ನ ಬ್ಲಾಗ್ ಗೆ ಆತ್ಮೀಯ ಸ್ವಾಗತ. ಹವ್ಯಕರ ಮದುವೆಯಲ್ಲಿ ವಿಶಿಷ್ಟ ಸಂಪ್ರದಾಯಗಳಿರುತ್ತವೆ. ತಮಗೆ ಸ್ವಾಗತವಿದೆ ಸಿರ್ಸಿಗೆ. ನಾನು ಸಿರಸಿಯ ಒಂದು ಹಳ್ಳಿಯವನು, ಎಅಗ ಸ್ವಿಡೆನ್ ನಲ್ಲಿ ಇದ್ದೇನೆ.
ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ತುಂಬಾ ಧನ್ಯವಾದಗಳು.
Post a Comment