Friday, February 13, 2009

ಗೀತಾ ಪಾರಾಯಣ...

ಗೀತಾ ಪಾರಾಯಣ
- ಗುರು ಬಬ್ಬಿಗದ್ದೆ

ನನ್ನಯ ಜೀವದ ಅರಗಿಣಿಯೆ ಮುತ್ತಿನ ಪ್ರೇಮದ ಅಭಿಷೇಕ
ನಿನ್ನಯ ಮಾತಿನ ಮುತ್ತುಗಳು ದೂಡಿವೆ ನನ್ನಯ ಕಡು ಶೋಕ ೧

ನೀನಿದ್ದರೆ ಜೊತೆಯಲಿ ಜಯವಿಹುದು ಎಲ್ಲವು ನನ್ನೆದೆ ತಟ್ಟುವುದು
ನಿನ್ನಿಂದಲೇ ಜೀವದ ಸೆಲೆಯಿಹುದು ಬದುಕಿದು ಮನವನು ಮುಟ್ಟುವುದು ೨

ನಿನಗಾಗಿಯೇ ಜೀವನ ಸವೆಸುವೆನು ಕಣ್ಣಲ್ಲೇ ಕಣ್ಣನು ಕೊಲ್ಲದಿರು
ನೀನಿರುವ ಕಡೆಯಲಿ ನಗುವಿಹುದು ಕೆಸರಲಿ ಕಮಲವು ಅರಳಿಹುದು ೩

ಮುಖದಲಿ ಸಿಟ್ಟನು ತೋರದಿರು ಮೈ ಮನದಲಿ ನೀನೆ ತುಂಬಿರುವೆ
ಒಲವಿನ ಸಹಚರ ಕಾದಿಹೆನು ಬಾಳಿಗೆ ಕೈಯನು ಹಿಡಿದಿರುವೆ ೪

ಬಿಟ್ಟೆನು ಎಲ್ಲವು ಮರುಗದಿರು ಹುಟ್ಟಲಿ ಎಲ್ಲವು ಅಡಗಿಹುದು
ಬಟ್ಟನೆ ಬಯಲಲಿ ಬಿಟ್ಟಿರುವ ಕರುಗಳು ನಾವು ಹೆದರದಿರು ೫

ಬದುಕಿದು ಒಲವಿನ ಮಧುರ ಕ್ಷಣ ಬಯಸದೆ ಬರದು ಇಂಥ ದಿನ
ಭಾವನೆ ತುಂಬಿರೊ ನಿನ ಪ್ರೀತಿಗೆ ಮನಸಿದು ತೆರೆದಿಹುದು ೬

ಚಿಂತೆಯ ಬಿಡುವ ಸಮಯವಿದು ಚಿಂತನೆ ಮಾಡಲು ಹೊತ್ತಿಹುದು
ಚೈತನ್ಯ ಚಿಲುಮೆ ಛಲವಿರಲಿ ನನ ಬಾಳಿಗೆ ಬೆಳಕು ಅರಿವಿರಲಿ ೭

ಅರಳಿದ ಮಲ್ಲಿಗೆ ಸುಮಘಮವು ನಿನ್ನಯ ಸನಿಹ ಅನುಪಮವು
ನೀನಿದ್ದರೆ ಹೃದಯಕೆ ಸಂಭ್ರಮವು ಮನಸುಗಳಾಚೆಗೆ ಸಂಗಮವು ೮

ನಾ ಬಡವನೆ ಆದರೂ ಬದುಕಿನಲಿ ನನ ಪ್ರೇಮಕೆ ಬಡತನವಿಲ್ಲ ಕಣೆ
ನನ್ನುಸಿರಿನ ಉಸಿರು ಇರೊವರೆಗೂ ನಾ ನಿನ್ನನು ಪ್ರೇಮಿಪೆ ಮನದಾಣೆ ೯

ಅರಿಯದೆ ಮಾಡಿದೆ ತಪ್ಪುಗಳ ಅದ ಮನ್ನಿಸು ನನ್ನನು ಆಧರಿಸು
ಮನವಿದು ಮರ್ಕಟನಂತಿಹುದು ಅದ ಬಳಿಯಲಿ ಸೇರಿಸಿ ನೇವರಿಸು ೧೦

ಮಾಡಿದೆ ನಿನಗೆ ನೋವುಗಳ ಕಣ್ಣಿನ ನೋವನು ಅರಿತಿಹೆನು
ಹೃದಯದ ಬೇಗೆಯ ಆಲಿಸಿಹೆ ಇನ್ನೆಂದೂ ಮನಸನು ನೋಯಿಸೆನು ೧೧

ನನ ಒಲವಿನ ಮಧುರ ಗೆಳತಿ ನೀ ನಿನ್ನೋಲವಿನ ಮಂದಿರ ಪೂಜಾರಿ
ಕರುಣಿಸು ನಿನ್ನಯ ದರುಶನವ ಬಾಳುವೆ ಮನದಲಿ ಶುಭ ಕೋರಿ ೧೨

ಮಾತಲಿ ಜ್ವಾಲೆಯ ಸುರಿಸದಿರು ಪ್ರೇಮದಿ ಮಾಲೆಯ ಹಿಡಿದಿಹೆನು
ಮುತ್ತಿನ ಮತ್ತಿನ ಪ್ರೇಮ ಪರಿ ನೀನಿಲ್ಲದೆ ಬಾಳನು ಸಾಗಿಸೆನು ೧೩

ಕಡು ಕಷ್ಟವೋ ನಷ್ಟವೋ ನಾನರಿಯೆ ಬದುಕಲಿ ನೋವು ನಲಿವುಗಳು
ನಮ್ಮಿಬ್ಬರ ಭಾವನೆ ಸೇರಿರಲು ಪ್ರತಿ ಕ್ಷಣ ಸಂತಸದಾ ಹೊನಲು ೧೪

ನಕ್ಕರೆ ಸಕ್ಕರೆ ಅಕ್ಕರೆಯ ನಿನ ತುಂಬಿದ ಕಣ್ಣಿನ ನೋಟವದು
ವಂಚನೆ ಇಲ್ಲದೆ ಮಿಂಚಿನಲಿ ಎದೆಯನು ಸೆಳೆಯುವ ಮಾಟವದು ೧೫

ಒಲವಿನ ಗೆಲುವಿನ ಪ್ರಾಣಸಖಿ ನಾನಿರುವೆನು ಅನುಕ್ಷಣ ಜೊತೆಯೆ ಸುಖಿ
ಕರುಣೆಯ ತರುಣಿಯೆ ನನ ನಂಬು ಮಾಡುವೆ ಜೀವನ ಬಣ್ಣದ ರಂಗು ೧೬

ಮಲೆನಾಡಿನ ಬೆಡಗಿನ ಹುಡುಗಿಯೆ ನೀ ಮಲೆನಾಡಿನ ಹುಡುಗನ ಹೃದಯವು ನೀ
ಕಾಡಿನ ಮೇಡಿನ ಬಳ್ಳಿಗಳ ಹುಡುಕಿ ತಂದೆ ನನ್ನವಳ ೧೭

ಸುತ್ತಲು ಕತ್ತಲೆ ಕವಿದಿಹುದು ನಕ್ಷತ್ರಗಳಲ್ಲಿ ಸೊಬಗಿಹುದು
ನಸುನಗೆ ಸೂಸುತ ಶಶಿಯಿಹನು ಬೆಳದಿಂಗಳ ಬಾಲೆ ಎನುತಿಹನು ೧೮

ಕವಿ ಕಲ್ಪನೆ ವರ್ಣನೆ ವಾಸ್ತವವೋ ಬಾಳಲಿ ಬಂದಿಹೆ ಅದ್ಭುತವೋ
ಹೆಜ್ಜೆಗೆ ಗೆಜ್ಜೆಯ ಸೇರಿಸುತ ಲಜ್ಜೆಯ ತೋರದೆ ಅನವರತ ೧೯

ತಾಳವೋ ಮೇಳವೋ ನಾನರಿಯೆ ಬಾಳನು ನಿನಗರ್ಪಿಸುವೆ ಪ್ರಿಯೆ
ಕಾಲನ ಗರ್ಭದ ಶಿಶು ನಾನು ಮಮತೆಯ ಮಡಿಲಿನ ಮಗು ನೀನು ೨೦

ವಿಧಿಯನು ಮೀರಿಸಿದವರುಂಟೆ ನಮ್ಮಿಬ್ಬರ ಪ್ರೀತಿಗೆ ಕರೆಗಂಟೆ
ಇಬ್ಬನಿ ಹಬ್ಬಿದ ಮುಂಜಾವು ತೊರೆದಿಹೆ ಪಕ್ಷಿಗಳು ಟಾವು ೨೧

ಶ್ರಂಗಾರದ ಪ್ರೇಮದ ಪುತ್ಥಳಿಯೆ ಬಂಗಾರವೆ ತುಂಬಿದ ನನ್ನೊಲವೆ
ಆಸೆಯೆ ದು:ಖಕೆ ಮೂಲ ಕಣೆ ಅದನರಿತರೆ ಜೀವನ ಹರ್ಷ ಕಣೆ ೨೨

ಕಾಲಗಳೆಷ್ಟೊ ನಾನರಿಯೆ ಸರ್ವಕಾಲದಲೂ ನೀನೆ ಪ್ರಿಯೆ
ದೇವಗೆ ಪ್ರಾರ್ಥನೆ ಸಲ್ಲಿಸುವೆ ಏಳು ಜನ್ಮದಲೂ ನಿನ ಪಡೆವೆ ೨೩

ವಸುಧೆಯ ಹಸಿರಿನ ಕನಸುಗಳು ನಿನ್ನೊಂದಿಗೆ ಸಾಗಿದ ಹೆಜ್ಜೆಗಳು
ಎಂದಿಗೂ ನಿನ್ನನು ವಂಚಿಸೆನು ನುಡಿದಿವೆ ಪ್ರೇಮದ ಹೃದಯಗಳು ೨೪

ನಿನ್ನಯ ಜಪವನು ಮಾಡುವೆನು ತಪದಲಿ ಕೂಡಾ ಕೈ ಬಿಡೆನು
ಮರೆತರೆ ನಿನ್ನನು ಕ್ಷಣ ಕ್ಷಣ ಬಳಿಯೆ ಇರುವುದೀ ಪಾರಾಯಣ ೨೫

7 comments:

Ittigecement said...

ಗುರುಮೂರ್ತಿಯವರೆ..

"ನಕ್ಕರೆ ಸಕ್ಕರೆಯ ಅಕ್ಕರೆಯ ನಿನ ಕಣ್ಣಿನ ನೋಟವದು.."..

ಅಹಾ..!!

ಅವಳು ನಿಮ್ಮ ಮನದನ್ನೇಯೇ ಇರಬೇಕು..!

ಪ್ರೇಮಿಗಳ ದಿನಕ್ಕೆ ಒಳ್ಳೆಯ ಕವನ..

ನಿಮ್ಮಾಕೆಯ ಹೆಸರು "ಗೀತಾ" ಅಂದೆ..?

ಪ್ರೇಮಿಗಳ ದಿನದ ಶುಭಾಶಯಗಳು..

ಅಭಿನಂದನೆಗಳು

Anonymous said...

ಆತ್ಮೀಯ ಪ್ರಕಾಶಣ್ಣ,
ತಾವು ಹೇಳಿದ್ದು ನಿಜ, ನಮ್ಮಕೆಯ ಹೆಸರು ಗೀತಾ, ಅದಕ್ಕೆಂದೇ ಗೀತ ಪಾರಾಯಣ ಮೂಡಿದ್ದು. ಅಭಿಪ್ರಾಯಕ್ಕೆ ಧನ್ಯವಾದಗಳು, ತಮಗೂ ಪ್ರೇಮಿಗಳ ದಿನದ ಅಭಿನಂದನೆಗಳು.

ಮೂರ್ತಿ ಹೊಸಬಾಳೆ. said...

ಗುರು
ಎಂದಿನಂತೆ ಮತ್ತೊಂದು ಉತ್ತಮ ಕವನ!!!!!!!
ಪ್ರೆಮಿಗಳ ದಿನದ ಶುಭಾಷಯಗಳು.

ಮನಸು said...

ಗುರು..

ಕವನ ಪ್ರೇಮಾಯಣವಾಗಿದೆ ... ತುಂಬ ಚೆಂದವಾದ ಸಾಲುಗಳು...
ನಿಮ್ಮಿಬ್ಬರಿಗೂ ವಿಶೇಷ ದಿನದ ಶುಭಾಶಯಗಳು..

ವಂದನೆಗಳು..

Anonymous said...

how to soothe a sinus infection [url=http://usadrugstoretoday.com/categories/weight-loss.htm]weight loss[/url] source naturals vitamin shoppe http://usadrugstoretoday.com/products/rumalaya.htm yeast infection plain yogurt http://usadrugstoretoday.com/products/zetia.htm
sign of heart attack [url=http://usadrugstoretoday.com/products/viagra-jelly.htm]viagra jelly[/url] when to go to emergency room due to high blood pressure [url=http://usadrugstoretoday.com/bestsellers.htm]sex with sleeping woman[/url]

chandrika said...

oh! romantic.... tumbaa chennagide.....

Anonymous said...

http://kerdst.kerbabel.net/?q=node/10961