Friday, June 17, 2011

ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ ..

''ಬದುಕು ಬಯಸುತ್ತದೆ, ಬಯಸಿದಂತೆ ಬೆಸೆಯುತ್ತದೆ, ಬೆಸೆದಂತೆ ಕಾಡಿಸುತ್ತದೆ ''



ಬದುಕಿನ ಬಗೆಗಿನ ಈ ಸಾಲುಗಳನ್ನು ಎಷ್ಟು ಬಾರಿ ಓದಿದೆನೋ ಗೊತ್ತಿಲ್ಲ, ಪ್ರತಿ ಸಲ ಓದಿದಾಗ  ಹೊಸ ಹೊಸ ಅರ್ಥವನ್ನೇ ನೀಡಿವೆ. ಕೆಲವೊಮ್ಮೆ ತೀರ ಸಾಗರದ ಅಲೆಗಳ ನಡುವೆ ನಿಂತು ಬದುಕನ್ನು ನೋಡಿದ ರೀತಿ, ಇನ್ನೊಮ್ಮೆ ದಟ್ಟ ಅರಣ್ಯದ ನಡುವೆ ನಿಂತು ಬಾಳ ಕಂಡ ರೀತಿ, ಬದುಕು ಅಂದಿಗೂ ಇಂದಿಗೂ ಎಂದಿಗೂ ಅಷ್ಟೇ ಸಮ್ಮೋಹಕ ಶಕ್ತಿಯ ಮಿಂಚಿನ ಸಂಚಲನದ ಪ್ರತೀಕ.

ಕಳೆದ ವಾರ ಬೆಂಗಳೂರು  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಸ್ವೀಡನ್ ಗೆಂದು ಹೊರಟು ನಿಂತಾಗ ಕಾಡಿದ ಬದುಕಿನ ಘಳಿಗೆಗಳು ಬದುಕಿನಲ್ಲಿ ಹಿಂದೆಂದೂ ಕಾಡಿರಲಿಲ್ಲ. Bacholor ಗೂ Forced Bacholor ಗೂ ಬಹಳ ವ್ಯತ್ಯಾಸ. ಒಬ್ಬ ಹೇಗೂ ನಡೆಯುತ್ತದೆ ಎನ್ನುವ ವಿಶಾಲ ಮನೋಭಾವ, ಇನ್ನೊಬ್ಬ ಹೀಗೆ ನಡೆಯಬೇಕು ಎನ್ನುವ ಮನೋಭಾವ. ಇವೆರಡರ ನಡುವಿನ ವ್ಯತ್ಯಾಸ ತಿಳಿಯುವ ಸಂದರ್ಭ ಮದುವೆಯಾದ 3 ವರ್ಷಗಳಲ್ಲಿ ಎಂದಿಗೂ ಬಂದಿರಲಿಲ್ಲ. ಆದರೆ ಇದೆ ಮೊದಲ ಬಾರಿಗೆ ಆ ವ್ಯತ್ಯಾಸ ತಿಳಿಯುವ ದಿನಗಳು ಬಂದಿದ್ದವು.

ತವರು ಮನೆಯಲ್ಲಿ ಹೆಂಡತಿಯನ್ನು ಬಿಟ್ಟು ವಿಮಾನ ನಿಲ್ದಾಣಕ್ಕೆ ಬಂದಾಗ ಮನಸೇಕೋ ಭಾರ. ಸದಾ ಅವಳೊಂದಿಗೆ ಪ್ರಯಾಣ ಮಾಡಿದ ನನಗೆ ಒಬ್ಬನೇ ಹೋಗುವ ಪರಿಸ್ಥಿತಿ ನೆನದು ಅರೆ ಘಳಿಗೆ ಖೇದ ಆಯಿತು. ಅಂತೂ ವಿಮಾನ ನಿಲ್ದಾಣದಿಂದ ವಿಮಾನ ಹತ್ತಿ ಕುಳಿತೆ. ವಿಮಾನ ನಿಧಾನ ವಾಗಿ ಗಗನಕ್ಕೆ ಹೋಗುತ್ತಿದ್ದರೆ ನನ್ನ ಮನಸ್ಸು ಅಷ್ಟೇ ನಿಧಾನವಾಗಿ ಕಳೆದ ಬದುಕಿನ ಕ್ಷಣಗಳ ನೆನಪಿನ  ಬುತ್ತಿ ಯನ್ನು  ಯನ್ನು ಬಿಚ್ಚುತ್ತಿತ್ತು.  
                                              
''जी हमे मंजूर है आपका ये फैसला
कह रही है हर नझर बंदा परवर शुकरीया
हंसके अपनी जिदगीमें कर लीया शामिल मुझे''


3 ವರ್ಷದ ಹಿಂದೆ ಜೊತೆಯಾದ ಗೆಳತಿ ಯ ತವರಿಗೆ ಬಿಟ್ಟು ಬರುವ ನೋವು ಮತ್ತು ಅದರ ಅಗಾಧತೆ ಬಹಳ ಕ್ಲಿಷ್ಟ ವಾದದ್ದು. ಬೆಂಗಳೂರಿಂದ ಹೋರಾಟ ವಿಮಾನ ಮುಂಬೈ ಗೆ ಬಂತು. ಮುಂಬೈ ವಿಮಾನ ನಿಲ್ದಾಣ ಕ್ಕೂ ನನಗೂ ಸದಾ ಎಣ್ಣೆ ಶೀಗೆಕಾಯಿ ಸಂಬಂಧ. ಕಾರಣ ನಾವು 4 ಸಲ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದೇವೆ. ಹಾಗೆಯೇ ಮುಂಬೈ ಮಾರ್ಗವಾಗಿ ಹೊರದೇಶಕ್ಕೆ ಹೋಗಿದ್ದೇವೆ. ಪ್ರತಿಸಲವೂ 3-4 ಘಂಟೆಗಳು ಕೇವಲ ಕಸ್ಟಮ್ಸ್ ಚೆಕ್ ಮುಗಿಸಲು, ಸಾಮಾನುಗಳನ್ನು ಹಾಕಲು, ಬೋರ್ಡಿಂಗ್ ಪಾಸ್ ಪಡೆಯಲು ಕಾದಿದ್ದೇವೆ. ಆದರೆ ಈ ಸಲ ಒಬ್ಬನೇ ಬಂದಿಳಿದಾಗ ಸ್ವಲ್ಪ ನೆಮ್ಮದಿಯಾಯಿತು. ಕಾರಣ ನನಗೆ ಮುಂಬೈ ನಿಂದ ಸ್ವೀಡನ್ ಗೆ ವಿಮಾನ ಹೊರಡಲು 6 ಘಂಟೆಗಳ ಸಮಯವಿತ್ತು. 3-4 ಘಂಟೆಗಳು ಕಸ್ಟಮ್ಸ್ ಚೆಕ್ ಎನ್ನುವುದರಲ್ಲಿ ಕಳೆದರೆ ಕಡೆಗೆ ಇರುವುದು ಕೇವಲ 2 ಘಂಟೆ ಮಾತ್ರ. ಹೇಗೂ ಕಳೆದು ಹೋಗುತ್ತದೆ ಎಂದುಕೊಂಡೆ. ಅದು ಬೇರೆ ಬೆಳಗಿನ ಜಾವ.
ಪಾಪಿ ಚಿರಾಯು

ಅಂತಾರಲ್ಲ ಹಾಗಾಯ್ತು ಸ್ವಾಮಿ ನನ್ನ ಸ್ಥಿತಿ. ಅದ್ಯಾವ ಘಳಿಗೆ ನೋ ಗೊತ್ತಿಲ್ಲ, ಮುಂಬೈ ನಲ್ಲಿ ಎಲ್ಲ ಚೆಕ್ ಗಳು ಕೇವಲ ಒಂದು ಘಂಟೆಯಲ್ಲಿ ಮುಗಿದುಹೊಗಿದ್ದವು. ಮತ್ತೆ ವಿಮಾನ ನಿಲ್ದಾಣ ದ ಬಗೆಗೆ ಅಸಾದ್ಯ ಕೋಪ ಬಂತು :) ಸದಾ ಟೈಮ್ ಪಾಸು ಮಾಡಿಸುವ ವಿಮಾನ ನಿಲ್ದಾಣ ಈ ಬಾರಿ ಕೈ ಕೊಟ್ಟಿತ್ತು. 5 ತಾಸುಗಳು ಏನು ಮಾಡುವುದು ಎಂದೇ ತಿಳಿಯಲಿಲ್ಲ. ಆದರೆ ಪ್ರೀತಿಗೆ, ಆದರ ಕ್ಕೆ ಇನ್ನೊಂದು ಹೆಸರಾದ ಆತ್ಮೀಯ ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆಯವರ ಮನೆಗೆ ಹೋದಾಗ ಪ್ರಕಾಶಣ್ಣ  ಕೊಟ್ಟ ಹೊಸ ಪುಸ್ತಕ ''ಇದೇ ಇದರ ಹೆಸರು'' ನನ್ನ ಬ್ಯಾಗ್ ನಲ್ಲಿ ಇತ್ತು. ಅಂತೂ ಸತತ 5 ತಾಸುಗಳು ಅವರ ಪುಸ್ತಕ ಓದುತ್ತ ಕಳೆದೆ. ಪ್ರಕಾಶಣ್ಣ ನ ಪುಸ್ತಕ ಎಂದರೆ ಅದು ನಗುವನ್ನೇ ಗುತ್ತಿಗೆ ಪಡೆದಂತೆ. ಆ 5 ಘಂಟೆಗಳು ನನ್ನ ಒಂಟಿತನಕ್ಕೆ ಸ್ವಲ್ಪ ವಿರಾಮ ನೀಡಿದವು.


ವಿಮಾನ ದ ಒಳಗಂತೂ ಬೇಸರ ಹೇಳತೀರದು. ಒಂದಂತು ಸತ್ಯ, ಭಾರತದ ರೈಲುಗಳಲ್ಲಿ ಸಾಮಾನ್ಯ ವರ್ಗದವರು ಪ್ರಯಾಣಿಸುವಾಗ ಸಿಗುವ ಸಂತೋಷ ಯಾವ ವಿಮಾನ ದಲ್ಲಿಯೂ ಸಿಗುವುದಿಲ್ಲ. ಆ ರೈಲುಗಳಲ್ಲಿ ಎಲ್ಲರು ಸ್ನೇಹಿತರೆ, ಪರಿಚಯ ಬೇಕೇ ಬೇಕೆಂದಿಲ್ಲ, ನಗು ಇದ್ದರೆ ಸಾಕು. ವಿಮಾನಗಳಲ್ಲಿ ಹಾಗಲ್ಲ,

''ನಾನು ಸತ್ಯವನ್ನೇ ನುಡಿಯುತ್ತೇನೆ , ಸತ್ಯವನ್ನಲ್ಲದೆ ಬೇರೇನನ್ನೂ ನುಡಿಯುವುದಿಲ್ಲ'' 

ಎಂದು ಕೋರ್ಟ್ ನಲ್ಲಿ ಪ್ರಮಾಣ ಮಾಡುವ ಹಾಗೆ ವಿಮಾನ ಹತ್ತುವ ಎಲ್ಲ ಪ್ರಯಾಣಿಕರು

 ''ವಿಮಾನ ಹತ್ತಿದ ಮೇಲೆ ನನ್ನ ಸ್ಟೇಟಸ್ ಅನ್ನು ಕಾಪಾಡಿಕೊಳ್ಳುತ್ತೇನೆ, ಯಾರೊಂದಿಗೂ ಮಾತನಾಡುವುದಿಲ್ಲ, ಗಂಬೀರತೆ   ಯನ್ನು  ದತ್ತು ತೆಗೆದುಕೊಳ್ಳುತ್ತೇನೆ, ಆಕಸ್ಮಾತ್ ಯಾರಾದರೂ ನನ್ನ ಮಾತನಾಡಿಸಿದರೆ ಕೇಳಿದ್ದಕ್ಕಷ್ಟೇ ಉತ್ತರ ಕೊಟ್ಟು ಮತ್ತೆ ಸ್ಟೇಟಸ್ ಕಾಯ್ದುಕೊಳ್ಳುತ್ತೇನೆ'' 


ಎಂದು ಪ್ರಮಾಣ ಮಾಡಿಯೇ ಬಂದಿರುತ್ತಾರೆ ಎನಿಸುತ್ತದೆ. ಒಂದು ತರ ಜೈಲಿನಲ್ಲಿ ಇಟ್ಟ ಅನುಭವ. ಪಕ್ಕದಲ್ಲಿದ್ದ ವ್ಯಕ್ತಿಯನ್ನು ಮಾತನಾಡಿಸಲು ಪ್ರಯತ್ನಿಸಿದೆ. ಒಂದು ನಗುವನ್ನೇ ಅವನ ಮುಖದಿಂದ ಹೊರ ಹಾಕಲಾಗಲಿಲ್ಲ, ಇನ್ನು ಮಾತನಾಡಿಸುವುದು ದೂರದ ಮಾತು. ಅವನ ಗಂಭೀರ ಮುಖ ನೋಡಿದರಂತೂ ನನ್ನ ಒಂಟಿತನ ಇನ್ನು ಜಾಸ್ತಿ ಆಗುತ್ತಿತ್ತು. ಪ್ರತಿ ಬಾರಿ ವಿಮಾನ ದಲ್ಲಿ ಬರುವಾಗ ನಾನು ಮಾತು ಹೆಂಡತಿ ಮಾತನಾಡುತ್ತಾ, ಇಸ್ಪೀಟ್ ಆಡುತ್ತ ಬರುವ ಸಮಯ ನೆನಪಾಗಲು ಆರಂಬಿಸಿ ಮತ್ತು ಬೇಸರಗೊಂಡಿತು ಮನಸು. ಅದ್ಯಾಕೋ ಗೊತ್ತಿಲ್ಲ, ವಿಮಾನ ಹತ್ತುವವರೆಗೆ ಮಾತನಾಡುವ ಜನರು ಹತ್ತಿದ ಮೇಲೆ ಬದಲಾಗಿ ಹೋಗುತ್ತಾರೆ, ಪಕ್ಕ ನಮ್ಮ ರಾಜ ಕಾರಣಿಗಳ ಹಾಗೆ. ''ಎಷ್ಟೇ ಒಳ್ಳೆಯ ರಾಜಕಾರಣಿಯನ್ನು ನೀವು ಚುನಾಯಿಸಿ ಕಳಿಸಿ, ದೇವರಾಣೆಗೂ ಆಟ ಆರಿಸಿ ಬಂದ ಮೇಲೆ ತನ್ನ ಉದ್ದಾರ ಬಿಟ್ಟು ಬೇರೆ ಯೋಚಿಸುವುದಿಲ್ಲ''. ಹಾಗೆಯೇ ವಿಮಾನ ಪ್ರಯಾಣಿಕರು ಕೂಡ. ಹತ್ತಿದ ಮೇಲೆ ಸೈಲೆಂಟ್ ಆಗಿಬಿಡುತ್ತಾರೆ.

''ವಿಮಾನ ಹತ್ತುವ ಮೊದಲು ಅವರು  ವಯಾಲೆಂಟ್
ಹತ್ತಿದ ಮೇಲೆ ಆಗುವರು ಸೈಲೆಂಟ್
ಹತ್ತುವ ಮೊದಲು , ಕಸ್ಟಮ್ಸ್ ಕಾಟ
ಹತ್ತಿದ ಮೇಲೆ ಗಗನ ಸಖಿಯರ ನೋಟ ''

ಅಂತೂ ಗೋಥೆನ್ಬರ್ಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಬಂದಿಳಿದಾಗ ಮಧ್ಯಾನ್ಹ 2 ಘಂಟೆ. ಇಲ್ಲಿನ ವಿಮಾನ ನಿಲ್ದಾಣ ದ ಬಗ್ಗೆ ಹೇಳಲೇಬೇಕು. ಅತ್ಯಂತ ಪುಟ್ಟ ಮತ್ತು ಅತ್ಯಂತ ವ್ಯವಸ್ಥಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದು. ವಿಮಾನ ಇಳಿದು ಬ್ಯಾಗ್ ತೆಗೆದುಕೊಳ್ಳಲು ಬರುವ ಮೊದಲೇ ಬ್ಯಾಗ್ ನಿಮಗಾಗಿ ಕಾಯುತ್ತಿರುತ್ತದೆ. ಅಷ್ಟೊಂದು ವೇಗದಲ್ಲಿ ಇಲ್ಲಿ ಕೆಲಸ ನಡೆಯುತ್ತದೆ. ಯಾವ ಚೆಕ್ ಇಲ್ಲ. ವಿಮಾನ ಇಳಿದು 30 ನಿಮಿಷದ ಒಳಗೆ ನೀವು ನಿಮ್ಮ ಮನೆ ಮುಟ್ಟಿರುತ್ತಿರಿ.
ಮನೆ ತಲುಪಿದ ವೇಳೆ 2-30. ಮೊದಲ ಬಾರಿಗೆ ಹೆಂಡತಿ ಇಲ್ಲದ ಮನೆಯ ಬಾಗಿಲು ತೆಗೆದಾಗ ಹ್ರದಯ ಭಾರವಾಯಿತು. ಕಳೆದ 3 ವರ್ಷಗಳಲ್ಲಿ ಅವಳಿಲ್ಲದೆ ನಾನು ಒಂದು ದಿನವನ್ನು ಈ ಮನೆಯಲ್ಲಿ ಕಳೆದಿಲ್ಲ. ಮನೆ ಒಳಗೆ ಬಂದಾಗ ಎಲ್ಲೆಡೆ ನೀರವ ಮೌನ. 

''ಬಾ ಮಗನೆ , ಮುಂದೈತೆ ಊರಹಬ್ಬ'' 

ಎಂದು ನನ್ನನ್ನೇ ಅಣಕಿಸಿ ಮನೆ ಒಳಗೆ ಎಲ್ಲರೂ ಕರೆದಂತೆ ಭಾಸವಾಗುತ್ತಿತ್ತು. ಕೂಡಲೇ ಹೆಂಡತಿಗೆ ಫೋನ್ ಮಾಡಿ ಬಂದ ಸುದ್ದಿ ತಿಳಿಸಿದೆ ಮತ್ತು ಮೌನದ ಬಗ್ಗೆ ಹೇಳಿದೆ. ಅವಳು ಸಮಾಧಾನ ಮಾಡಿದಳು. ಪಾಪ ನನ್ನ ಬಿಟ್ಟು ತವರು ಮನೆಯಲ್ಲಿ ಇರುವ ಅವಳನ್ನು ನಾನು ಸಮಾಧಾನ ಮಾಡುವುದು ಬಿಟ್ಟು ಅವಳೇ ನನ್ನ ಸಮಾಧಾನ ಮಾಡುತ್ತಿದ್ದಳು.

''ತವರ ಸುಖದೊಳಗೆನ್ನ 
ಮರೆತಿಹಳು ಎನ್ನದಿರಿ 
ನಿಮ್ಮ ಪ್ರೇಮವ ನೀವೇ........''

ಎಂದು ಅವಳು ಹೇಳಿದಂತೆ ನನಗೆ ಅನ್ನಿಸತೊಡಗಿತು. ಅವಳಿಗೆ ಆಮೇಲೆ ಫೋನ್ ಮಾಡುತ್ತೇನೆ ಎಂದು ಹೇಳಿ ಹೊಟ್ಟೆ ಪೂಜೆಗೆ ಕುಳಿತೆ. ಹಸಿವು ವಿಪರೀತ ಆಗಿತ್ತು. ಈ ಹಸಿವೆಗೆ ನೋಡಿ, ಒಂಟಿತನ ಆಗಲಿ, ಜಂಟಿ ಆಗಲಿ ಯಾವುದು ಭಾದಿಸದು, ತನ್ನ ಸಮಯ ಬಂದಾಗ ಚೀರುವ ಹಸಿವೆಯ ಬಗ್ಗೆ ನನಗೆ ವಿಪರೀತ ಕೋಪವಿದೆ. ಯಾವ ಬೇಧ ಭಾವ ವೂ ಇಲ್ಲದೆ ಎಲ್ಲರನ್ನು ಸಮನಾಗಿ ಕಾಡುವ ಅದರ ಒಳ್ಳೆಯ ತಾಣದ ಬಗೆಗೆ ಸಂತಸವೂ ಇದೆ. ಬದುಕಿನಲ್ಲಿ ''ಸಸ್ಯಾಹಾರಿ'' ಆಗುವುದು ಕೆಲವೊಮ್ಮೆ ಶಾಪ. ಯಾಕೆಂದರೆ ಸ್ವೀಡನ್ ಗೆ ಬಂದ ಕೂಡಲೇ ಯಾವುದಾದರೊಂದು ಹೋಟೆಲ್ ಹೋಗೋಣ ಎಂದರೆ ಅಲ್ಲಿ ಸಿಗುವುದು ''ಮಾಂಸಾಹಾರಿ'' ಯೇ. ಅದಕ್ಕೆ ಮನೆಯ ಅಡಿಗೆ ಮನೆಗೆ ಹೋಗಿ ಅನ್ನ, ಸಾರು ಮಾಡಿಕೊಳ್ಳೋಣ ಎಂದು ನಿರ್ಧರಿಸಿ ಅನ್ನ ಇಡಲು ಪಾತ್ರೆ ಹುಡುಕತೊಡಗಿದೆ.


''ಎಲ್ಲ ಪಾತ್ರೆಗಳು ಮುಷ್ಕರ ಹೂಡಿದಂತೆ ನನಗೆ ಕಾಣದೆ ಕುಳಿತಿದ್ದವು. ಮನೆಯಲ್ಲಿ ಹೆಂಡತಿ ಇದ್ದಾಗ ಅವಳು ಲಕ್ಷಣವಾಗಿ ಎಲ್ಲವನ್ನು ಜೋಡಿಸಿಟ್ಟಾಗ ಅದರ ಪ್ರಾಮುಖ್ಯತೆ ನಮಗೆ ತಿಳಿಯುವುದೇ ಇಲ್ಲ. ಅದೇ ನಮಗೆ ಅಂಥಹ ಸ್ತಿತಿ ಬಂದಾಗ ಅವರ ಇರುವಿಕೆ ಅರ್ಥ ಆಗುತ್ತದೆ. ಒಂದು ಗಾಜಿನ ಪಾತ್ರೆ ತೆಗೆದುಕೊಂಡು ಅಕ್ಕಿ ತೊಳೆಯಲು ಮುಂದಾದೆ. ಆದರೆ ಆ ಪಾತ್ರೆ '' ನಿನ್ನೊಂದಿಗೆ ಇರಲು ಮನಸಿಲ್ಲ'' ಎನ್ನುವಂತೆ ನನ್ನ ಕೈಯಿಂದ ತಪ್ಪಿಸಿಕೊಂಡು ನೆಲದ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿತು. ಬಂದ ದಿನವೇ ''ಕೊಲೆ''. ನೋಡಿ, ಪಾತ್ರೆಗಳಿಗೂ ಅವಳಿಲ್ಲದ ನೋವು....''


ಬಿದ್ದ ಗಾಜಿನ ಚೂರುಗಳ ಒಂದೊಂದು ಪುಡಿಯೂ ಅಣಕಿಸುವಂತೆ ತೋರುತ್ತಿದ್ದವು. ಮೊದಲ ದಿನವೇ ಹೀಗಾದರೆ ಮುಂದೆ ಗತಿಯೇನೋ.....

ಇನ್ನೊಂದು ಸ್ಟೀಲ್ ಪಾತ್ರೆ ತೆಗೆದುಕೊಂಡೆ (ಪುನಃ ಗಾಜು ಮುಟ್ಟಿದರೆ ಎಲ್ಲಿ ಆತ್ಮಹತ್ಯೆ ಯ ಸಂಖ್ಯೆ ಜಾಸ್ತಿ ಆಗುತ್ತದೋ ಎಂಬ ಭಯ ), ಅನ್ನ ತೊಳೆದು ಅನ್ನಕ್ಕಿಟ್ಟೆ. ಸರಿ ಅನ್ನ ಆಗಲು ಸ್ವಲ್ಪ ಸಮಯವಿದೆ, ಒಂದು ಹಾಡನ್ನಾದರೂ ಕೇಳೋಣ ಎಂದು Tape Recorder ಹಚ್ಚಿದೆ. ಸ್ವಾಮಿ, ಏನಂತಿರ ನನ್ನ ಬೇಸರನ, ಒಳ್ಳೆ ಎಲ್ಲರು ನನ್ನ ಮೇಲೆ ಸೇಡು ತೀರಿಸ್ಕೊಳ್ಳುವ ಯೋಚನೆ ಯಲ್ಲಿ ಇದ್ದ ಹಾಗೆ ಅನಸ್ತು ಯಾಕೆ ಗೊತ್ತಾ, ಅದರಲ್ಲಿ ಬರ್ತಾ ಇದ್ದ ಹಾಡು, ಪ್ರಸಿದ್ದ ಗಾಯಕಿ M D Pallavi ಅವರು ಹಾಡಿದ

''ಮೊದಲ ದಿನ ಮೌನ,
ಅಳುವೇ ತುಟಿಗೆ ಬಂದಂತೆ..... ಚಿಂತೆ......''

ಬರಬೇಕೇ...ಕವಿ ಆ ಕವನ ಬರೆದ ಸನ್ನಿವೇಶ ಕ್ಕೂ ನನ್ನ ಪ್ರಸ್ತುತ ಸನ್ನಿವೇಶಕ್ಕೂ ಯಾವ ಸಂಬಂಧ ಇಲ್ಲದಿದ್ದರೂ ಹೆಂಡತಿಯ ಬಿಟ್ಟು ಮೊದಲ ದಿನ ಕಳೆಯುತ್ತಿರುವ ನನಗೆ ನನಗೋಸ್ಕರವೇ ಕವಿ ಈ ಹಾಡನ್ನ ಬರೆದರೇ ಎಂದು ಅನ್ನಿಸಿದ್ದು ಸುಳ್ಳಲ್ಲ. ಅಳು ತುಟಿಗೆ ಅಲ್ಲ, ಕಣ್ಣಲ್ಲೇ ಬಂದಿತ್ತು.

ಮೊದಲ ದಿನದ ಅನುಭವಗಳು ನನ್ನನ್ನ ಮಾನಸಿಕವಾಗಿ ದುರ್ಬಲ ಗೊಳಿಸಿದ್ದು ಸುಳ್ಳಲ್ಲ. ಅಂತು ಈಗ ದಿನಕ್ಕೆ ಹಲವಾರು ಬಾರಿ ಹೆಂಡತಿಯ ಜೊತೆ, ಮನೆಯವರ ಜೊತೆ ಮಾತನಾಡುತ್ತ 8 ದಿನಗಳೇ ಕಳೆದುಹೋಗಿವೆ.

ಅದಿರಲಿ, ಹೆಂಡತಿ ಯಾಕೆ ತವರು ಮನೆಗೆ ಹೋಗಿದ್ದಾಳೆ ಅಂತಿರಾ,
ಸದ್ಯದಲ್ಲೇ ಹೇಳ್ತೀನಿ ಅದನ್ನ :)
ನಿಮ್ಮವ
ಗುರು









71 comments:

Jyoti Hebbar said...

Ayyo...tumba paapa (pappa)anstiddu... n nin preeti kandu khusheeee aatu... raashi chenda express madidde guru.. very nice...

ಸಾಗರದಾಚೆಯ ಇಂಚರ said...

ಜ್ಯೋತಿ,
ಹೌದು, ಒಬ್ಬನೇ ಇರದು ಅಂದ್ರೆ ರಾಶಿ ಬೇಜಾರು,
ಅದು ಮದುವೆ ಆಗಿ ೩ ವರ್ಷ ಕಳೆದ ಮೇಲೆ....
ಕಾಮೆಂಟಿಗೆ ಧನ್ಯವಾದಗಳು

ಭಾಶೇ said...

Guess I have guessed the reason ;)

ಸಾಗರದಾಚೆಯ ಇಂಚರ said...

ಭಾಶೇ ,
if you guessed tight, thats the right guess :)

Ambika said...

paapa neevu :)
nanu eno ondu reason guess maadkyandi..

ಸಾಗರದಾಚೆಯ ಇಂಚರ said...

@ Kavita,

kaadu nodi :)

thanks for the comments

ಸುಧೇಶ್ ಶೆಟ್ಟಿ said...

samadhaana maadikoLLi :)

olle sudhdhi bega barali :P

supta said...

kutuhaladinda Odide ...hendati tavarige hOgidyaake anno kutuhala haage uLiyitu.. chnnagide..;)

supta said...

kutuhaladinda odide ...hendati yaake tavarige hodlu anno kutuhala haage uLiyitu.. channagide..;)

Dr.D.T.Krishna Murthy. said...

ನಿಮ್ಮ ಅನುಭವ ಓದಿದ ಮೇಲೆ ನಾವೆಲ್ಲಾ ಒಂದೇ,ನಮ್ಮೆಲ್ಲರ ಅನುಭವಗಳೂ ಒಂದೇ ಎನಿಸುತ್ತದೆ!

pandomatti naveena said...

hi sir how r u..this is naveen from ventura...congrates...i guess the reason....

Rashmi Hegde said...

ಗುರು ಅಣ್ಣ ....ಹೆಂಡ್ತಿ ಬಗ್ಗೆ ನಿನಗಿದ್ದ ಪ್ರೀತಿನ ಚಂದ ಮಾಡಿ ಹೇಳಿದ್ದೆ ..ಹಿಂಗೆ ಇರ್ಲಿ ನಿಮ್ಮಿಬ್ಬರ ಪ್ರೀತಿ .....ಆರ್ಟಿಕಲ್ ಚೊಲೋ ಇದ್ದು......

balasubramanya said...

ಹೆಂಡತಿ ಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎನದ ಕವಿವಾಣಿ ನೆನಪಿಗೆ ಬಂತು. ಹೌದು ಸ್ವಾಮೀ ಗಂಡಸರು ಎಲ್ಲಿ ಬೇಕಾದರೂ ಮೆರೆಯಬಹುದು, ಆದ್ರೆ ಅಡಿಗೆ ಮನೆಯಲ್ಲಿ ನಮ್ಮ ಆಟ ಏನೂ ನಡೆಯದು,ಅದ್ಭುತ ಅನುಭವ. ನಿಮ್ಮ ಪಯಣದ ಅನುಭವ , ಹೆಂಡತಿಯಿಲ್ಲದ ಮನೆಯ ಅನುಭವ ಸೂಪರ್ .ನಿಮ್ಮ ಕುಟುಂಬಕ್ಕೆ ಮತ್ತೊಂದು ಪುಟ್ಟ ಜೀವದ ಆಗಮನವಾಗಲಿ ಇಬ್ಬರ ಮೊಗದಲ್ಲೂ ನಗು ಅರಳಿ ಇಂತಹ ಘಟನೆ ಹಸಿರ ನೆನಪಾಗಿ ಕಾಡಿ ನಗೆ ಉಕ್ಕಿಸಲಿ. ಜೈ ಹೋ.

ಅನಂತ್ ರಾಜ್ said...

ಮನಸಿಗೆ ತು೦ಬಾ ಆಪ್ತವಾಗುವ ಚಿತ್ರಣ, ನಡುವಿನಲಿ ಕೆ ಎಸ್ ನ ಅವರ ಕಾವ್ಯದ ಹೂರಣ. ಮು೦ಗಡವಾಗಿ ಶುಭಾಶಯಗಳು ನಿಮಗೆ ಗುರು ಸರ್.

ಅನ೦ತ್

ಚಿತ್ರಾ said...

ಗುರು ,
ರಾಶಿ ಚಂದ ಬರದ್ದೆ , ಹೆಂಡತಿಯನ್ನು ಬಿಟ್ಟು ಒಬ್ಬನೇ ಮನೆಯಲ್ಲಿರಬೇಕಾದ ಸಂಕಟವನ್ನು ಚಂದವಾಗಿ ಬಿಡಿಸಿಟ್ಟಿದ್ದೆ. ಯಾವಾಗಲೂ ಹಾಗೆ , ಸದಾ ಜೊತೆಯಿರುವಾಗ ಅಷ್ಟಾಗಿ ತಿಳಿಯದ ಮಹತ್ವ , ದೂರವಾದಾಗ ಭಾರಿಯಾಗಿ ಕಾಡುತ್ತದೆ . ಕೆಲವೇ ತಿಂಗಳುಗಳ ಮಾತಷ್ಟೇ? ಬೇಗ ಮುಗಿದು ಹೋಗುತ್ತದೆ ಬಿಡು ! ಆಮೇಲೆ ಹರ್ಷ , ನಗು ತುಂಬಿದ ಮನೆ ಮತ್ತೆ !
ಅಂದ ಹಾಗೆ, ಅಡುಗೆ ಚೆನ್ನಾಗಿ ಮಾಡದು ಪ್ರಾಕ್ಟೀಸ್ ಮಾಡಿಟ್ಕ ! ಮುಂದೆ ಹೆಂಡತಿ ಬಂದ ಮೇಲೂ ಅವಶ್ಯಕತೆ ಬೀಳ್ತು !! ;-)

sunaath said...

ಗುರುಮೂರ್ತಿಯವರೆ,
ಆಗೋದೆಲ್ಲಾ ಒಳ್ಳೇದಕ್ಕೆ ಅಂತಾರೆ. ತಾಳ್ಮೆ ಇಟ್ಟುಕೊಳ್ಳಿ.

SANTOSH MS said...

Guru Sir,

Article super. aadre nimma sankatakke sadhyadalle baruva magu saantvanaheluvudu.

ಸುಮ said...

nice :)
ಆದಷ್ಟು ಬೇಗ ಹೆಂಡತಿಯನ್ನು ವಾಪಾಸ್ ಕರೆಸಿಕೊಳ್ಳಿ.

ಮನಸು said...

ರಾಶಿ ಬೇಜಾರಿಗೆ ರಾಶಿ ಕಣ್ಣೀರು........ ನಿಮ್ಮ ಕೋಟಿ ರುಪಾಯಿ ಆದಷ್ಟು ಬೇಗ ನಿಮ್ಮ ಜೊತೆಯಾಗಲಿ... ಆಡಿಗೆ ಮಾಡುವುದು ತಪ್ಪಲಿ ... ಬರಹ ತುಂಬಾನೇ ಚೆನ್ನಾಗಿದೆ.

Pradeep Rao said...

ಸೂಪರ್! ನಿಮ್ಮ ಹೆಂಡತಿ ಮೇಲಿನ ಪ್ರೀತಿ ಮೆಚ್ಚಬೇಕು ಸಾರ್! ವಿಮಾನವೇರಿದಾಗ ಜನ ಈ ರೀತಿ ವರ್ತಿಸುತ್ತಾರೆ ಎಂದು ಇದೆ ಮೊದಲು ತಿಳಿದದ್ದು! ಆತ್ಮಹತ್ಯೆ ಮಾಡಿಕೊಂಡ ಗಾಜಿನ ಪಾತ್ರೆಯ ಆತ್ಮಕ್ಕೆ ಶಾಂತಿ ಸಿಗುವುದು ಬಹುಶಃ ನಿಮ್ಮ ಮಡದಿ ಮನೆಗೆ ವಾಪಸ್ ಬಂದ ಮೇಲೆಯೇ ಎನಿಸುತ್ತೆ! ಅಲ್ಲಿವರೆಗೆ ನೀವು ಮಡದಿ ತವರಿಗೆ ಹೋಗಿರುವ ಕಾರಣವನ್ನು ಗುಟ್ಟಾಗಿ ಇಟ್ಟಿರುತ್ತೀರ?

ಸವಿಗನಸು said...

ಗುರು, ....
ಹೆಂಡತಿ ಬಗ್ಗೆ ನಿನಗಿರುವ ಪ್ರೀತಿ ಬಹಳ ಚಂದವಾಗಿ ಚಿತ್ರಣವಾಗಿದೆ......
ಮತ್ತೆ ಈ ರೀತಿಯ ಒಂಟಿ ಬದುಕು ಬರದಿರಲಿ....
ಭಾರತದ ರೈಲುಗಳಲ್ಲಿ ಸಾಮಾನ್ಯ ವರ್ಗದವರು ಪ್ರಯಾಣಿಸುವಾಗ ಸಿಗುವ ಸಂತೋಷ ಯಾವ ವಿಮಾನ ದಲ್ಲಿಯೂ ಸಿಗುವುದಿಲ್ಲ....ಇದಂತೂ ಸತ್ಯದ ಮಾತು...

Mohan Hegade said...

Super atricle. estu dina ettu india visit? udupi bandidya matte? jr. estu dina kayavo ennu?

barla,

Mohan Hegade

V.R.BHAT said...

ಸಹಜ ದಾಂಪತ್ಯದ ಉತ್ತಮ ಪ್ರೀತಿಯ ಅನಿಸಿಕೆ!

Renuka said...

Guru ,
Anyway i guessed the reason..:). I shall wait for your announcement ;).

Renuka said...

Very nice article , you have expressed your feelings very well..Anyway i have guessed the reason :) . Please announce it soon.

Jagadeesh Balehadda said...

hosa suddina? :)

ಜಲನಯನ said...

ಡಾ. ಗುರು...ವಾವ್ ವಾ ..ಮೊದಲ ಅಗಲಿಕೆ...ಕಾರಣ..ನೀವೇ ಎಲ್ಲರಿಗೂ ತಿಳಿಸಿಬಿಡಿ..ಹಹಹ..ಸ್ವಾರಸ್ಯಕರ ಪಯಣ..ಮತ್ತು ನಿಮ್ಮ ವಿವರಣೆ ಅದಕ್ಕೆ ಇನ್ನೂ ಹೆಚ್ಚು ಸ್ವಾರಸ್ಯ ನೀಡಿದೆ...
ಮುಂದಿನ ಕಂತು..ಬರಲಿ ಬೇಗ...

Raghu said...

Nice article..
Nimmava,
Raghu.

Ittigecement said...

ಗುರು...

ದಾಂಪತ್ಯದ ಸೊಗಸು ಇದೆ...

ಅಗಲಿಕೆಯ ಅಸಹನೀಯ ಕ್ಷಣಗಳು ಪ್ರೀತಿಯ ಒರತೆಯನ್ನು ಹೆಚ್ಚಿಸುತ್ತವೆ..

ಈ ಅಗಲಿಕೆ ನಿಮ್ಮಿಬ್ಬರ ಪ್ರೇಮ ಬಾಂಧವ್ಯವನ್ನು ಇನ್ನೂ ಹೆಚ್ಚಸಲಿ..
ನಮಗೂ ಖುಷಿ ವಿಷಯವನ್ನು ಸಿಹಿ ಊಟದೊಡನೆ ಹಂಚಿಕೊಳ್ಳಿ...

ಜೈ ಹೋ...

ಬರಹ ತುಂಬಾ ಆಪ್ತವಾಗಿದೆ..

ಮನೆಯ ಶಕ್ತಿ said...

gottiddo..... cograts..... kano.....

ಶಿವಪ್ರಕಾಶ್ said...

istondu bhaavukaradare henge sir.. :)

Nagendra hegde said...

super agi bardyo... ellaroo hendtira preetsta. aadre ni vyaktapadisira shyli mast iddu.. akka raashi kushi padtu idraa odi..

Unknown said...

neatagide varNane..nice read :)

prabhamani nagaraja said...

'ವಿರಹ' ಪ್ರೀತಿಯನ್ನು ಹೆಚ್ಚಿಸುತ್ತದೆ ಗುರು ಅವರೇ, ಸಧ್ಯದಲ್ಲೇ promotion ಆಗುವ ಸಾಧ್ಯತೆ ಕ೦ಡುಬರುತ್ತಿದೆ! ನೆನಪಿನ ಸಾಲುಗಳು ಚೆನ್ನಾಗಿ ಮೂಡಿ ಬ೦ದಿದೆ. ಅಭಿನ೦ದನೆಗಳು.

ಸಾಗರದಾಚೆಯ ಇಂಚರ said...

@ ಸುಧೇಶ್,
ನಿಮ್ಮ ಹಾರೈಕೆಯಂತೆ ಅಗಲಿ
ಬರ್ತಾ ಇರಿ

ಸಾಗರದಾಚೆಯ ಇಂಚರ said...

@ ಸುಪ್ತ
ಖಂಡಿತ ಆ ಕುತೂಹಲಕ್ಕೆ ಬೇಗ ತೆರೆ ಎಲಿತಿನಿ
ಸ್ವಲ್ಪ ದಿನ ಕಾಯಿರಿ
ಬ್ಲಾಗ್ ಓದ್ತಾ ಇರಿ

ಸಾಗರದಾಚೆಯ ಇಂಚರ said...

@ ಕೃಷ್ಣಮೂರ್ತಿ ಸರ್
ನಾವೆಲ್ಲಾ ಒಂದೇ ಪಾತ್ರೆಯ ಅಣ್ಣ ಇದ್ದ ಹಾಗೆ ಅಲ್ಲವೇ
ನಿಮ್ಮ ಪ್ರೀತಿ ಸದಾ ಇರಲಿ

ಸಾಗರದಾಚೆಯ ಇಂಚರ said...

@ ನವೀನ
ನಿಮ್ಮ ಗೆಸ್ ಸರಿಯಾಗಿದೆ :)

ಸಾಗರದಾಚೆಯ ಇಂಚರ said...

@ ರಶ್ಮಿ
ದೂರ ಇದ್ದಾಗ ಪ್ರೀತಿಯ ಬೆಲೆ ಗೊತ್ತಗ್ರು ಅಲ್ದಾ,
ಹತ್ತಿರ ಇದ್ದಾಗ ಗೊತ್ತಾಗ್ತಿಲ್ಲೆ
'ದಿನಕರ್ ದೆಸ್ಸಯಿಯವರ ಮಾತು ನೆನಪಾಗ್ತು
''ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂ ನ ಕೋಟೆಯಲಿ ''
ಬರ್ತಾ ಇರು

ಸಾಗರದಾಚೆಯ ಇಂಚರ said...

ಬಾಲು ಸರ್

ನಿಮ್ಮ ಪ್ರೀತಿಯ ಮಾತುಗಳು ಖುಷಿ ಕೊಡುತ್ತವೆ
ಸದಾ ನಿಮ್ಮ ಆಶೀರ್ವಾದ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

@ ಅನಂತ್ ಸರ್
ನಿಮ್ಮ ಶುಭಾಶಯಗಳಿಗೆ ಥ್ಯಾಂಕ್ಸ್
ಸದ್ಯದಲ್ಲಿಯೇ ಶುಭ ಸಮಾಚಾರ ತಿಳಿಸುತ್ತೇನೆ

ಸಾಗರದಾಚೆಯ ಇಂಚರ said...

@ ಚಿತ್ರಾ
ಅಡಿಗೆ ಮಾಡದು ಹೆಂಡ್ತಿ ನಂಗೆ ಕಲಿಸಿಕೊತ್ತಿದ್ದು
ಹಂಗಾಗಿ ಪ್ರಾಬ್ಲಮ್ ಇಲ್ಲೇ
ಮತ್ತೆ ಪಾಪು ಬಂದ ಖುಷಿನಲ್ಲಿ ಒಂದು ಅಡಿಗೆ ಮಾಡದು ಕಷ್ತನ :)
ಬ್ಲಾಗ್ ಓದ್ತಾ ಇರು

ಸಾಗರದಾಚೆಯ ಇಂಚರ said...

@ ಸುನಾಥ್ ಸರ್
ನಿಮ್ಮ ಮಾತು ನಿಜ
ಆದ್ರೆ ಟೈಮ್ ಹೋಗ್ತಾನೆ ಇಲ್ಲ :(

ಸಾಗರದಾಚೆಯ ಇಂಚರ said...

@ ಸಂತೋಷ್
ಥ್ಯಾಂಕ್ಸ್ ನಿಮ್ಮ ಕಾಮೆಂಟಿಗೆ
ಬರುತ್ತಿರಿ

ಸಾಗರದಾಚೆಯ ಇಂಚರ said...

@ ವಸಂತ್
ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

@ ಸುಮಾ ಮೇಡಂ,
ಇನ್ನು ೩ ತಿಂಗಳು ಬಾರೋ ಹಾಗಿಲ್ಲ ಬಿಡಿ
ಆದಷ್ಟು ಬೇಗ ಕರೆಸ್ಕೊಬೇಕು
ಬ್ಲಾಗ್ ಓದ್ತಾ ಇರಿ

ಸಾಗರದಾಚೆಯ ಇಂಚರ said...

@ ಮನಸು
ಕೋಟಿ ಸಂತೋಷಕ್ಕೆ ಕೋತಿ ಕಣ್ಣೀರು ಹರಿದರೂ ಬೇಸರವಿಲ್ಲ ಆಲ್ವಾ
ನಿಮ್ಮ ಪ್ರೀತಿಯ ಹಾರೈಕೆಗೆ ಚಿರಋಣಿ
ಬರುತ್ತಿರಿ

ಸಾಗರದಾಚೆಯ ಇಂಚರ said...

@ ಪ್ರದೀಪ್ ಸರ್
ನಿಜಕ್ಕೂ ವಿಮಾನ ಯಾನ ದಲ್ಲಿ ಜನ ಯಾಕೆ ಹಾಗೆ ವರ್ತಿಸುತ್ತಾರೋ ಗೊತ್ತಿಲ್ಲ
ತಲೆ ಹಾಳಾಗಿ ಹೋಗುತ್ತೆ
ನಿಮ್ಮ ಪ್ರೀತಿಯ ಮಾತಿಗೆ ಥ್ಯಾಂಕ್ಸ್
ಹೆಂಡತಿ ಬಂದ ಮೇಲೆ ಆತ್ಮಹತ್ಯೆ ನಿಲ್ಲುತ್ತೆ ಬಿಡಿ :)

ಸಾಗರದಾಚೆಯ ಇಂಚರ said...

@ ಮಹೇಶ್ ಅಣ್ಣ
ಭಾರತೀಯ ರೈಲುಗಳಲ್ಲಿ ಸಾಮಾನ್ಯ ವರ್ಗದವರ ಜೊತೆ ಪ್ರಯಾಣಿಸುವ ಸುಖವೇ ಬೇರೆ
ನಿಮ್ಮ ಹಾರೈಕೆ ವಂದನೆಗಳು

ಸಾಗರದಾಚೆಯ ಇಂಚರ said...

@ ಮೋಹನ್
ಇನ್ನು ೨ ತಿಂಗಳು ಕಾಯವೋ :)
ಉಡುಪಿಗೆ ಸದ್ಯ ಪ್ಲಾನ್ ಇಲ್ಲೇ
ಬಂದ್ರೆ ಫೋನ್ ಮಾಡ್ತಿ
ಮತ್ತೆಂತ ಸುದ್ದಿ

ಸಾಗರದಾಚೆಯ ಇಂಚರ said...

ವಿ ಆರ್ ಭಟ್ ಸರ್
ನಿಮ್ಮ ಮಾತುಗಳಿಗೆ ವಂದನೆ

ಸಾಗರದಾಚೆಯ ಇಂಚರ said...

@ ರೇಣುಕ
ನೀವು wait ಮಾಡಲೇಬೇಕು :)
ಬರುತ್ತಿರಿ

ಸಾಗರದಾಚೆಯ ಇಂಚರ said...

@ ಜಗದೀಶ್
ಹೌದೋ
ಬ್ಲಾಗ್ ಓದ್ತಾ ಇರು

ಸಾಗರದಾಚೆಯ ಇಂಚರ said...

@ ಅಜಾದ್ ಸರ್
ಪ್ರೀತಿಯ ಮಾತುಗಳಿಗೆ ಧನ್ಯವಾದಗಳು
ಪ್ರೀತಿ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

@ ರಘು

ಥ್ಯಾಂಕ್ಸ್
ಬರ್ತಾ ಇರಿ

ಸಾಗರದಾಚೆಯ ಇಂಚರ said...

@ ಪ್ರಕಾಶಣ್ಣ
ನಿಮ್ಮ ಪ್ರೀತಿಯ ಮಾತುಗಳು ತುಂಬಾ ಸಂತೋಷ ಕೊಟ್ಟಿತು
ವಿರಹ ಬದುಕಿನ ಪ್ರೀತಿಯ ಬರಹ
ದೂರ ಹೋದಷ್ಟು ಹತ್ತಿರ ಸೆಳೆಯುವ ಮಾಂತ್ರಿಕತೆ ಪ್ರೇಮಕ್ಕಿದೆ
ಬರುತ್ತಿರಿ ಬ್ಲಾಗ್ ಗೆ
ಬರೆಯುತ್ತಿರುವೆ ಹೊಸದನ್ನ

ಸಾಗರದಾಚೆಯ ಇಂಚರ said...

@ ಮನೆಯ ಶಕ್ತಿ
ಥ್ಯಾಂಕ್ಸ್ ಥ್ಯಾಂಕ್ಸ್

ಸಾಗರದಾಚೆಯ ಇಂಚರ said...

@ ಶಿವೂ ಸರ್
ಏನು ಮಾಡೋದು ಹೇಳಿ
ಬಿಟ್ಟೆ ಇದ್ದಿರಲಿಲ್ಲ
ಹಾಗಾಗಿ ಹೀಗೆ :)

ಸಾಗರದಾಚೆಯ ಇಂಚರ said...

@ ನಾಗೇಂದ್ರ ಬಾವ
ಅಕ್ಕನ ಬಿಟ್ಟು ಇರದು ಎಷ್ಟು ಕಷ್ಟ ಹೇಳಿ ಈಗ ಗೊತ್ತಾಗ್ತಾ ಇದ್ದು
ಬೇಗನೆ ಅಕ್ಕ ಬರಲಿ ಹೇಳಿ ಕಾಯ್ತಾ ಇದ್ದಿ

ಸಾಗರದಾಚೆಯ ಇಂಚರ said...

@ ರಾಘವೇಂದ್ರ ಸರ್
ಥ್ಯಾಂಕ್ಸ್
ಬರ್ತಾ ಇರಿ

ಸಾಗರದಾಚೆಯ ಇಂಚರ said...

@ ಪ್ರಭಾಮಣಿ
ನಿಮ್ಮ ಮಾತುಗಳಿಗೆ ವಂದನೆಗಳು
ಸದ್ಯದಲ್ಲಿಯೇ ಸಂತಸದ ಸುದ್ದಿ ತಿಳಿಸುತ್ತೇನೆ.

Chaithrika said...

ಆಹಾ... ನೀವೊಬ್ಬರು ಸತ್ಯ ಹೇಳಿದಿರಿ. ಅನೇಕರು ಹೆಂಡತಿ ಮನೆಯಲ್ಲಿಲ್ಲದಾಗ ಬಹಳ ಉದಾಸೀನ ಅನುಭವಿಸಿದರೂ ಹೇಳುವಾಗ ಸ್ವಚ್ಛಂದ ಜೀವನ ಎಂದು ಏನೇನೋ ಬೊಗಳೆ ಬಿಡುವುದನ್ನು ಕಂಡಿದ್ದೇನೆ. ನಿಜ ಹೇಳಿದ ನಿಮ್ಮ ಬರಹ ಮನಸಿಗೆ ತಟ್ಟಿತು.
ಇನ್ನೊಂದು ವಿಷಯವೆಂದರೆ, ಹೆಂಡತಿಗೂ ಗಂಡ ಜೊತೆಗಿಲ್ಲದಿದ್ದರೆ, ತವರು ಮನೆ ರುಚಿಸುವುದಿಲ್ಲ...
ನಿಮಗಿಬ್ಬರಿಗೂ ಶುಭವಾಗಲಿ. ಬೇಗನೆ ಹೆಂಡತಿ ದುಪ್ಪಟ್ಟು ಖುಷಿಯೊಂದಿಗೆ ಮರಳಲಿ.

ಸಾಗರದಾಚೆಯ ಇಂಚರ said...

ಚೈತ್ರಿಕ ಮೇಡಂ,
ಎಷ್ಟೇ ಬೊಗಳೆ ಬಿಟ್ಟರೂ ಹೆಂಡತಿ ಇಲ್ಲದೆ ಇರಲಾಗದು ಎಂಬ ಸತ್ಯ ಮಾತ್ರ ಸುಳ್ಳಲ್ಲ
ನಿಮ್ಮ ಆಶಿರ್ವಾದಕ್ಕೆ ಚಿರ ಋಣಿ ಬ್ಲಾಗ್ ಗೆ ಬರುತ್ತಿರಿ

ಸೀತಾರಾಮ. ಕೆ. / SITARAM.K said...

chendada baraha....nanna maga matu hendatiyannu bittu dehalige hosakelasakkendu bandu 2 tingalu naa patta paaadu nenapaayitu. nanna Brazil payanada vimaanada anubhava nimma anubhavadante ittu...

ಸೀತಾರಾಮ. ಕೆ. / SITARAM.K said...

chendada baraha....nanna maga matu hendatiyannu bittu dehalige hosakelasakkendu bandu 2 tingalu naa patta paaadu nenapaayitu. nanna Brazil payanada vimaanada anubhava nimma anubhavadante ittu...

KalavathiMadhusudan said...

ardhaangiya bele avara anupasthitiyalle arivaagodu.haasyamayavaada lekhana.bega sihi suddi tilisi.abhinandanegalu.

ಗಿರೀಶ್.ಎಸ್ said...

Nice article...really thr train travelling is far better...and i have guessed the reason y your wife has gone to her mother's home....dont know whether it is right r not...let your love continues like this...

ಸಾಗರದಾಚೆಯ ಇಂಚರ said...

ಸೀತಾರಾಮ. ಕೆ. / SITARAM.K sir
thanks for the comments

ಸಾಗರದಾಚೆಯ ಇಂಚರ said...

ಕಲರವ

khandita sihi suddi kodtene

thanks for the comments

ಸಾಗರದಾಚೆಯ ಇಂಚರ said...

Gireesh,

thanks for the comments

Guruarj M said...

ನಮಸ್ಕಾರ,

ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ. ತುಂಬು ಹೃದಯದಿಂದ ನಿಮಗೆ ಅಭಿನಂದನೆಗಳು.