ವೈರಸ್ ಹಾವಳಿ ಗಿಂತ ವೇಗವಾಗಿ ಹಾಗೂ ಅಷ್ಟೇ ವ್ಯವಸ್ಥಿತವಾಗಿ ಹಬ್ಬುತ್ತಿರುವ ದೊಡ್ಡ ವೈರಸ್ ''I am Busy'' ಎನ್ನುವ ಶಬ್ದ. ಯಾರನ್ನೇ ಕೇಳಿ ''ನಮಗೆ ಟೈಮ್ ಇಲ್ರಿ, ಆಫೀಸ್ ಕೆಲಸದ ನಡುವೆ ಬೇರೆ ಏನು ಮಾಡೋಕೂ ಟೈಮ್ ಇಲ್ಲ'' ಅನ್ನೋ ಮಾತು. ಬಹುಷ: ಇದೇ ಕಾರಣಕ್ಕೆ ಇಂದು ಚಿತ್ರಕಾರರು, ಸಾಹಿತಿಗಳು, ಕವಿಗಳ, ಮಾತುಗಾರರ ಸಂಖ್ಯೆ ಗಣನೀಯವಾಗಿ ನಶಿಸುತ್ತಿದೆ. ಮೊದಲೆಲ್ಲ ಎಷ್ಟೇ ಕಲಿತರೂ ಜನರಲ್ಲಿ ಹಾಸ್ಯ ಪ್ರಜ್ಞೆ ಕಡಿಮೆ ಆಗಿರಲಿಲ್ಲ. ಆದರೆ ಇಂದು ಗಂಭೀರ ವದನದ ಲಂಬೋದರಗಳ (ಇಡೀ ದಿನ ಕುರ್ಚಿಯ ಮೇಲೆ ಕುಳಿತು ಗಣಕ ಯಂತ್ರ ಕುಟ್ಟಿದರ ಫಲ )ಸಂಖ್ಯೆ ಎಲ್ಲೆಡೆ ಕಂಡು ಬರುತ್ತಿದೆ. ಇಂಥಹ ಲಂಬೋದರಗಳ ನಡುವೆ ದಿನದ 24 ಘಂಟೆ ಒದ್ದಾಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ''ಸಮಯಕ್ಕೇ ಸಮಯವಿಲ್ಲದ'' ಪರಿಸ್ಥಿತಿ ಬಂದಿದೆ.
ಹಾಗಾದ್ರೆ ಸಮಯ ಎಲ್ಲಿ ಹೋಯಿತು ಎಂಬುದರ ವಿಶ್ಲೇಷಣೆ ಅಗತ್ಯ ಅಲ್ಲವೇ? ದಿನದ 24 ಘಂಟೆಗಳನ್ನು ಮನುಷ್ಯ ನ ದಿನಚರಿ ನೋಡಿ ಮಾಡಲಿಲ್ಲ. ಇಂದು 24 ಘಂಟೆ, ನಾಳೆ 26 ಘಂಟೆ ಎಂದು ಬದಲಿಸಲು. ಅವು ಜಗತ್ತಿನ ಪ್ರತಿಯೊಂದು ಜೀವಿಗೂ ಒಂದೇ ತೆರನಾಗಿದೆ. ಆದರೆ ಅದೇ 24 ಘಂಟೆಗಳನ್ನೇ ಉಪಯೋಗಿಸಿಕೊಂಡು ಅಸಾಮಾನ್ಯವಾದುದನ್ನು ಸಾಧಿಸಿದ ಸಾಮಾನ್ಯ ಮನುಷ್ಯರ ಜೀವನ ಗಾಥೆ ನಮಗೊಂದು ನೀತಿ ಪಾಠ ಅಲ್ಲವೇ? ಅವರಿವರ್ಯಾಕೆ? ನಮ್ಮವರೇ ಆದ ನೆಚ್ಚಿನ ಬರಹಗಾರ ರವಿ ಬೆಳೆಗೆರೆ ಅವರನ್ನೇ ತೆಗೆದುಕೊಳ್ಳಿ. 24 ಘಂಟೆಗಳಲ್ಲಿ ಅದೆಷ್ಟೊಂದು ಕೆಲಸ ಮಾಡುತ್ತಾರೆ. ಟಿ.ವಿ ಸಿರಿಯಲ್ಲುಗಳು, ಬೆಳಗಿನ ರೆಡಿಯೋ ಕಾರ್ಯಕ್ರಮ, ನಂತರ ಹಾಯ್ ಬೆಂಗಳೂರಿಗೆ ಲೇಖನ, ರಾತ್ರಿ Crime Story, ಕಥೆ ಕವನಗಳ ಬಿಡುಗಡೆ ಸಮಾರಂಭ, ಸಾಲದೆಂಬಂತೆ ಅಸಂಖ್ಯಾತ ಪುಸ್ತಕಗಳ ಪ್ರಕಟಣೆ, ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ, ಒಂದೇ ಎರಡೇ, ಯಾವುದನ್ನೂ ತಪ್ಪಿಸುವಂತಿಲ್ಲ. ವಿಶ್ರಾಂತಿ ನೋ ಚಾನ್ಸ್.
ಅವರ ನೋಡಿ ನನಗೆ ಅನ್ನಿಸಿದೆ, ಅದೇಗೆ ಸಮಯವನ್ನು ಅವರು ಅಷ್ಟೊಂದು ಕರೆಕ್ಟ್ ಆಗಿ ಉಪಯೋಗಿಸ್ಕೊಳ್ಳುತ್ತಾರೆ ಎಂದು. ನಾವು ನಮ್ಮ ಮನಸ್ಸನ್ನು ಅಡ್ಜಸ್ಟ್ ಮಾಡಿಕೊಂಡು ಬಿಟ್ಟಿದ್ದೇವೆ ''ದಿನದ 24 ಘಂಟೆಗಳು ನಮಗೆ ಸಾಕಾಗುವುದಿಲ್ಲ, ಆದ್ದರಿಂದ ನಾವು ನಮ್ಮ ಕೆಲಸಗಳನ್ನು ಮುಗಿಸಲು ಆಗುವುದಿಲ್ಲ'' ಎಂದು. ಮೊನ್ನೆ ಮೊನ್ನೆ ಬ್ಲಾಗ್ ಬರೆಯದ, ಬ್ಲಾಗ್ ಓದದ ಸ್ನೇಹಿತರೊಬ್ಬರು ಕೇಳಿದರು, ''ನಿಮಗೆ ಆಫೀಸ್ ನಲ್ಲಿ ಮಾಡಲು ಕೆಲಸ ಇಲ್ಲವೇ? ಯಾವಾಗಲು ಬ್ಲಾಗ್ ಬರೆಯುತ್ತಿರಲ್ಲ? ಎಂದು''. ಅವರ ಪ್ರಕಾರ ಬ್ಲಾಗ್ ಎನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಎಂಬುದಾಗಿ. ಸಮಯದ ಪರಿಕಲ್ಪನೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಮಾತಾಡಬಲ್ಲ. ತಾನೊಬ್ಬನೇ ಕೆಲಸ ಮಾಡುತ್ತಿದ್ದೇನೆ, ತಾನೊಬ್ಬನೇ ದೇಶದ ಉದ್ಧಾರ ದ ಹೊಣೆ ಹೊತ್ತಿದ್ದೇನೆ, ಉಳಿದವರೆಲ್ಲ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಎಂಬ ಉಡಾಫೆಯ ಧೋರಣೆಯ ಜನರ ಮಾತುಗಳು ಬೇಸರ ತರಿಸುವುದಿಲ್ಲ ಬದಲಿಗೆ ಅವರ ಬಗೆಗೆ ಅತೀವ ಕನಿಕರ ಮೂಡಿಸುತ್ತದೆ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅವರಿಗೆ ಸಮಯವೇ ಸಿಗದ ಸ್ಥಿತಿ ನೋಡಿ ನಿಜಕ್ಕೂ ದು:ಖ ವಾಗುತ್ತದೆ. ಅವರ ಪ್ರಕಾರ ವಿದೇಶದವರು ಸುಮ್ಮನೆ ನಮ್ಮನ್ನು ಕರೆದುಕೊಂಡು ಬಂದು ಕುರ್ಚಿಯಲ್ಲಿ ಕೂರಿಸಿ ಧರ್ಮಕ್ಕೆ ಸಂಬಳ ಕೊಡುತ್ತಾರೆ ಎಂಬುದಾಗಿ. ಸಮಯ ಎಲ್ಲರಿಗೂ ಒಂದೇ ತೆರನಾಗಿದೆ, ಕೆಲಸವೂ ನಮ್ಮ ಜಾಣ್ಮೆ ಯಲ್ಲಿದೆ. ಒಬ್ಬ ಅಂಬಾನಿಗೆ, ಸಿಕ್ಕ ಸಮಯದಲ್ಲಿಯೇ ಅಷ್ಟೊಂದು ಸಾಧನೆ ಮಾಡಲು ಸಮಯವಿದೆ ಎಂದಾದರೆ ನಮಗೆ ಯಾಕೆ ಸಾದ್ಯವಿಲ್ಲ. ಅವರೆಲ್ಲ ''ಇಂದೇ ಕೊನೆಯ ದಿನ'' ಎಂಬಂತೆ ಬದುಕನ್ನು ತಿಳಿದು ಸಮಯವನ್ನು ಸದುಪಯೋಗ ಪಡಿಸಿಕೊಂದಿದ್ದಕ್ಕೆ ಅವರು ಅಲ್ಲಿದ್ದಾರೆ, ನಾವು ಇಲ್ಲಿದ್ದಿವಿ.
ಸಮಯವೇ ಇಲ್ಲದ ಸ್ಥಿತಿ ಎಲ್ಲೆಡೆ ತುಂಬಿ ಹೋಗಿದೆ, ಕಲಿಯುವ ಮಕ್ಕಳಿಗೆ ನಲಿಯಲು ಸಮಯವಿಲ್ಲ, ವಿಪರೀತ ಸ್ಪರ್ಧೆ ಅವರ ಸೃಜನಾತ್ಮಕ ವ್ಯಕ್ತಿತ್ವವನ್ನೇ ಕೊಂದು ಹಾಕುತ್ತಿದೆ. ಸದಾ ಗಣಕ ಯಂತ್ರದ ಮುಂದೆ ಕುಳಿತು ಆಡುವ ಅವರ ಸ್ಥಿತಿ ನೆನೆದು ಸಂಕಟ ಆಗುತ್ತದೆ.
ಇನ್ನು ಪ್ರೇಮಿಗಳಿಗೆ ಪ್ರೀತಿಸಲು ಸಮಯವಿಲ್ಲ. ಸದಾ ಆಫೀಸ್ ಕೆಲದಲ್ಲಿಯೇ ಬ್ಯುಸಿ ಆಗಿರುವ ಅವರು ಕೇವಲ ಮೊಬೈಲ್ ಮೂಲಕ ಪ್ರೀತಿಸುತ್ತಿದ್ದಾರೆ.
ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಮನೆಗೆ ಹೋಗಲು ಸಮಯವಿಲ್ಲ. ತಮ್ಮೆಲ್ಲ ಭಾವನೆಗಳನ್ನು ವಾರದ ಕೊನೆಗೆ ದೂಡುತ್ತಾರೆ. ಎಲ್ಲ ಭಾವನೆಗಳಿಗೆ ವಾರಾಂತ್ಯ ಉತ್ತರ ಅಲ್ಲವಲ್ಲ ಎಂಬ ನಗ್ನ ಸತ್ಯ ಅವ್ರಿಗೆ ಇನ್ನು ತಿಳಿದಿಲ್ಲ. ತಮಗೋಸ್ಕರ ಒಂದು ಜೀವ ಮನೆಯಲ್ಲಿ ಕಾಯುತ್ತಿದೆ ಎಂಬ ಸತ್ಯ ಗೊತ್ತಿದ್ದರೂ ವಿಪರೀತ ಸ್ಪರ್ಧಾತ್ಮಕ ಜಗತ್ತು ಮನೆಗೆ ಹೋಗಲು ಬಿಡುತ್ತಿಲ್ಲ. ಪುನಃ ಸಮಯವಿಲ್ಲ. ಭಾರತದಂಥ ಬೆಳೆಯುತ್ತಿರುವ ದೇಶಗಳಲ್ಲಿ ಅತೀ ವೇಗದ ಸ್ಪರ್ಧೆ ಮನುಷ್ಯನ ಮಾನಸಿಕ ಒತ್ತಡಗಳನ್ನು ಹೆಚ್ಚಿಸುತ್ತಿದೆ. ಮಿತಿ ಮೀರಿದ ಸಿಟ್ಟು, ಕೋಪ, ಅಸಹನೆ ಮಾನವನಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಸಮಾಧಾನ ಪಡಲು ಸಮಯವೇ ಇಲ್ಲದ ಪರಿಸ್ಥಿತಿ ಇರುವಾಗ ತಂಗಾಳಿಯ ಜೊತೆ ಓಡಾಡುವ ಅವಕಾಶವೆಲ್ಲಿ.
ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಮನೆಗೆ ಹೋಗಲು ಸಮಯವಿಲ್ಲ. ತಮ್ಮೆಲ್ಲ ಭಾವನೆಗಳನ್ನು ವಾರದ ಕೊನೆಗೆ ದೂಡುತ್ತಾರೆ. ಎಲ್ಲ ಭಾವನೆಗಳಿಗೆ ವಾರಾಂತ್ಯ ಉತ್ತರ ಅಲ್ಲವಲ್ಲ ಎಂಬ ನಗ್ನ ಸತ್ಯ ಅವ್ರಿಗೆ ಇನ್ನು ತಿಳಿದಿಲ್ಲ. ತಮಗೋಸ್ಕರ ಒಂದು ಜೀವ ಮನೆಯಲ್ಲಿ ಕಾಯುತ್ತಿದೆ ಎಂಬ ಸತ್ಯ ಗೊತ್ತಿದ್ದರೂ ವಿಪರೀತ ಸ್ಪರ್ಧಾತ್ಮಕ ಜಗತ್ತು ಮನೆಗೆ ಹೋಗಲು ಬಿಡುತ್ತಿಲ್ಲ. ಪುನಃ ಸಮಯವಿಲ್ಲ. ಭಾರತದಂಥ ಬೆಳೆಯುತ್ತಿರುವ ದೇಶಗಳಲ್ಲಿ ಅತೀ ವೇಗದ ಸ್ಪರ್ಧೆ ಮನುಷ್ಯನ ಮಾನಸಿಕ ಒತ್ತಡಗಳನ್ನು ಹೆಚ್ಚಿಸುತ್ತಿದೆ. ಮಿತಿ ಮೀರಿದ ಸಿಟ್ಟು, ಕೋಪ, ಅಸಹನೆ ಮಾನವನಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಸಮಾಧಾನ ಪಡಲು ಸಮಯವೇ ಇಲ್ಲದ ಪರಿಸ್ಥಿತಿ ಇರುವಾಗ ತಂಗಾಳಿಯ ಜೊತೆ ಓಡಾಡುವ ಅವಕಾಶವೆಲ್ಲಿ.
''ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ, ಸುಳಿದಾಡಬೇಡ ಗೆಳತಿ''
ಎಂದು ಹೇಳಲೂ ಸಮಯವಿಲ್ಲದ ಸನ್ನಿವೇಶ ನಿರ್ಮಾಣವಾಗಿದೆ.
ಪರಿಸ್ಥಿತಿ ಎಷ್ಟೊಂದು ಮಿತಿ ಮೀರಿದೆ ಎಂದರೆ ಹೆತ್ತವರ ಮಾತನಾಡಿಸಲು ನಮಗೆ ಸಮಯವಿಲ್ಲ. ಜೀವನದ ಕೊನೆಯ ಕ್ಷಣ ಗಳನ್ನು ನೋಡುತ್ತಿರುವ ಅದೆಷ್ಟೋ ಪಾಲಕರು ತಮ್ಮ ಮಕ್ಕಳನ್ನು ನೋಡಲು ಹಂಬಲಿಸುತ್ತಾರೆ. ಆದರೆ ಸಮಯ ಇಲ್ಲದ ಮಕ್ಕಳು ದಿನೇ ದಿನೇ ಮುಂದುಡುತ್ತಾ ಕೊನೆಗೆ ಪಾಲಕರ ಚಿತೆಗೆ ಅಗ್ನಿ ಸ್ಪರ್ಶ ಮಾಡಲು ಸಮಯ ಸಿಗಲಿಲ್ಲ ಅನ್ನುತ್ತಾರೆ. ''ಮನಸಿದ್ದಲ್ಲಿ ಮಾರ್ಗವಿದೆ''. ಸಮಯದ ಉಪಯೋಗ ತಿಳಿಯಬೇಕಷ್ಟೆ.
ಇಲ್ಲದಿರೆ
ಜಾನೆ ಕಹಾ ಗಯೇ ವೋ ದಿನ, ಕಹತೇ ತೆ ತೆರಿ ರಾಹ್ ಮೇ....
ಎನ್ನುವಂತಾಗುತ್ತದೆ ನಮ್ಮ ಬದುಕು.
ಇತ್ತೀಚಿನ ದಿನಗಳಲಿ ಓದುವ ಗೀಳು ಬಿಟ್ಟೆ ಹೋಗುತ್ತಿದೆ. ಪುಸ್ತಕಗಳನ್ನು ಓದಲು ಯಾರಿಗೂ ಸಮಯವಿಲ್ಲ. ಏನೇ ಹೇಳಿ, ಗೂಗಲ್ ಮಾಡಿ ತಿಳಿದುಕೊಳ್ಳುವ ತವಕ, ಆದರೆ ಸುಂದರ ಬರಹಗಳ, ಕಾದಂಬರಿಗಳ ಓದುವ ವ್ಯವಧಾನ ಇಲ್ಲವೇ ಇಲ್ಲ. ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಎಂದಿಗೂ ಬಸ್ ನಲ್ಲಿ ಶಾಲಾ, ಕಾಲೇಜುಗಳಿಗೆ ಆಗಲಿ, ಆಫೀಸ್ ಗೆ ಆಗಲಿ ಹೋದವನು ಅಲ್ಲ. ಆಫೀಸ್ ಹತ್ತಿರವೇ ಮನೆ ಬಾಡಿಗೆ ತೆಗೆದುಕೊಳ್ಳುವ ದುರಭ್ಯಾಸ ಮೊದಲಿನಿಂದಲೂ ಇದೆ. ಆದರೆ ಕಳೆದ 6 ತಿಂಗಳಿನ ಹಿಂದೆ ಆಫೀಸ್ ನ ಹತ್ತಿರ ಮನೆ ಮಾಡುವ ದುರಭ್ಯಾಸ ಹೆಂಡತಿಗೂ ಬಂದಿದ್ದರಿಂದ ಅನಿವಾರ್ಯವಾಗಿ ಮನೆ ಬದಲಿಸುವ ಪರಿಸ್ಥಿತಿ ಬಂತು. ಅವಳ ಆಫೀಸ್ ನ ಹತ್ತಿರ ನಾವು ಮನೆ ಮಾಡಿದ್ದರಿಂದ ನನಗೆ ಸುಮಾರು 15 ಕಿ ಮೀ ಬಸ್ ನಲ್ಲಿ ಪ್ರಯಾಣಿಸಬೇಕಾದ ಸನ್ನಿವೇಶ ನಿರ್ಮಾಣ ಆಯಿತು. ಬಹುಷ: ಬಸ್ ನಲ್ಲಿ ಪ್ರಯಾಣಿಸಬೇಕಾದರೆ ಎಷ್ಟೊಂದು ಕಷ್ಟ ಆಗುತ್ತದೆ ಎಂಬುದನ್ನು ನನಗೆ ತಿಳಿಸಲು ನನ್ನ ಮಡದಿ ಮಾಡಿದ ಉಪಾಯವೂ ಇದ್ದಿರಬಹುದು :)
ಹೇಗಪ್ಪ ಬಸ್ ನಲ್ಲಿ ಪ್ರತಿ ದಿನ ಹೋಗುವುದು ಎಂಬ ದುಗುಡ ಬೇರೆ. ಬಸ್ ಕಾಯಬೇಕು, ಇಲ್ಲಿನ ಕೊರೆಯುವ ಚಳಿಗೆ ಬಸ್ ಕಾಯುವ ದಿದೆಯಲ್ಲ, ಅದು ನನ್ನ ಶತ್ರುವಿಗೂ ಬೇಡಾ. ಬೀಸುವ ಗಾಳಿ, ಸುರಿಯುತ್ತಿರುವ ಹಿಮ ಮಳೆ, ಜಾರುತ್ತಿರುವ ರಸ್ತೆಗಳು, ಮೈ ಮೇಲೆ ಹೊದ್ದ 3-4 ಸ್ವೆಟರ್ ಗಳು, ತಲೆಗೆ ಟೊಪ್ಪಿ, ಕೈಗೆ ಗ್ಲೌಸ್ ಅಯ್ಯೋ, ಬೇಡಪ್ಪ ಬೇಡ. ಇದನ್ನೆಲ್ಲಾ ನೆನಪು ಮಾಡಿಕೊಂಡು ದೇವರಿಗೆ ಒಂದು ದೀಪ ಹಚ್ಚಿ ಬಸ್ ಹಿಡಿದು ಆಫೀಸ್ ಹೋಗುವ ಮೊದಲ ಯಾನಕ್ಕೆ ಮಾನಸಿಕವಾಗಿ ಸಿದ್ದವಾದೆ. ಹೆಂಡತಿ ಬಂದು Dan Brown ಅವರ ಹೊಸ ಕಾದಂಬರಿ ''The Lost Symbol'' ಕೈಗೆ ಕೊಟ್ಟು ಹೇಳಿದಳು ''ಇದನ್ನು ಬಸ್ ನಲ್ಲಿ ಓದುತ್ತ ಹೋಗಿ, ಸಮಯದ ಹಿಂದೆ ನೀವು ಓಡುತ್ತಿರಿ'' ಎಂದು. ಉಪಾಯವೇನೋ ಅಪಾಯವಿಲ್ಲದಂತೆ ತೋರಿತು. ಆದರೆ ಬಸ್ ಹತ್ತಿದಾಗ ಹೊಳೆಯುವ ಮೊದಲ ಕೆಲಸ ''ನಿದ್ದೆ'' ಮಾಡುವುದು. ನಾನು ಬೆಂಗಳೂರಿನ ಬಸ್ ಹತ್ತಿದಾಗ ಇಷ್ಟ ಪಡುವುದು ಅದನ್ನೇ. ಎಷ್ಟೊಂದು ಟ್ರಾಫಿಕ್ , ಸಿಗ್ನಲ್ ಗಳು, ಕನಿಷ್ಟವೆಂದರೂ ಒಂದು ಘಂಟೆ ಪ್ರಯಾಣ ಗ್ಯಾರಂಟೀ. ಆರಾಮವಾಗಿ ನಿದ್ದೆ ಮಾಡಬಹುದಲ್ಲ ಎನ್ನುವ ದೂರಾಲೋಚನೆ. ಹಾಗಾಗಿ ಬೆಂಗಳೂರು ಟ್ರಾಫಿಕ್ ಬಗ್ಗೆ No Comments.
ಹೆಂಡತಿ ಪುಸ್ತಕ ಕೊಟ್ಟಾಗ ''ನಿದ್ರಾ ದೇವಿಯ ತೆಕ್ಕೆಗೆ ಬೀಳುವ ನನಗೆ ಸರಸ್ವತಿಯ ಒಲಿಸಿಕೊಳ್ಳುವ'' ಹೆಚ್ಚುವರಿ ಖಾತೆಯೂ ಬಂದು ಸೇರಿದಂತೆ ಆಯಿತು. ನಮ್ಮ ರಾಜಕಾರಣಿಗಳಾದರೆ ಬಿಡಿ '' 4-5 ಖಾತೆಗಳನ್ನು ಸಲೀಸಾಗಿ ತೆಗೆದುಕೊಂಡು ಆ ಖಾತೆಗಳಲ್ಲಿ ಯಾವ ಸಣ್ಣ ಕಂಡಿಯನ್ನು ಬಿಡದೆ ಗುಡಿಸಿ ಗುಂಡಾಡಿ ಬಿಡುತ್ತಾರೆ''. ನಾವು ಹುಲು ಮಾನವರು, ಹಾಗಾಗಿ ಮೊದಲ ದಿನ ಕೇವಲ 5 ಪೇಜು ಗಳನ್ನು ಓದಲು ಹರ ಸಾಹಸ ಪಟ್ಟೆ. ಹಾಗೆಂದು ಪುಸ್ತಕ ಓದುವುದು ನನಗೆ ತುಂಬಾ ಇಷ್ಟ. ಆದರೆ ಬಸ್ ನಲ್ಲಿ ಓದುವ ಪ್ರವೃತ್ತಿ ಇರಲಿಲ್ಲ. ಇನ್ನು Dan Brown ಅವರ ಕಾದಂಬರಿಗಳಲ್ಲಿ ಮೊದಲ 50 ಪೇಜುಗಳಲ್ಲಿ ವಿಪರೀತ ವಿಷಯ ತುಂಬಿ ನಮ್ಮ ತಲೆಯನ್ನು mixer ನಂತೆ ತಿರುಗಿಸಿಬಿಡುತ್ತಾರೆ. ಹಾಗಾಗಿ ಅಂತೂ ಕಷ್ಟ ಪಟ್ಟು 50 ಪೇಜು ಮುಗಿಸಿದೆ, ನಂತರ 550 ಪೇಜು ಗಳ ಹೇಗೆ ಮುಗಿದವೆಂದೆ ತಿಳಿಯಲಿಲ್ಲ. ಬಸ್ ಗೆ ಹೋಗಲು ಹಾತೊರೆಯುತ್ತಿದ್ದೆ. ಬಸ್ ತಪ್ಪಿದರೂ ಮನದಲ್ಲೇ ಸಂತಸ. ಒಂದೊಂದು ಕ್ಷಣವನ್ನು ಹಾಳು ಮಾಡದೆ ಸಮಯದ ಸದುಪಯೋಗ ಪಡಿಸಿಕೊಂಡು ಆ ಮಹಾನ ಕಾದಂಬರಿ ಓದಿ ಮುಗಿಸಿದೆ. ಅದಾದ ನಂತರ 2-3 ಕಾದಂಬರಿ ಬಸ್ ನಲ್ಲಿ ಓದಿದ್ದೇನೆ. ಇದರಿಂದ ನನಗೆ ತಿಳಿದಿದ್ದು ಇಷ್ಟೇ. ಸಮಯ ನಮ್ಮಲ್ಲೂ ಇದೆ, ಆದರೆ ನಾವು ಸುಮ್ಮನೆ ಬ್ಯುಸಿ ಬ್ಯುಸಿ ಎನ್ನುತ್ತೇವೆ. ಮನಸ್ಸು ಮಾಡಿದರೆ ಎಷ್ಟೊಂದು ಕೆಲಸ ಮಾಡಬಹುದು ಎಂದು.
ಹೊಸ ವರ್ಷ ಬರುತ್ತಿದೆ, ಹಳೆಯ ವರ್ಷ ಸವಿ ನೆನಪುಗಳೋ, ಕಹಿ ನೆನಪು ಗಳೋ, ಒಟ್ಟಿನಲ್ಲಿ ಮತ್ತೊಂದು ವರ್ಷ ಎದುರಿಗಿದೆ. ಹೊಸ ಆಲೋಚನೆಗಳು, ಹೊಸ ಸಂಕಲ್ಪಗಳು ಇದ್ದಿದ್ದೆ. ಬೆಳಿಗ್ಗೆ ಬೇಗನೆ ಇನ್ನು ಮೇಲೆ ಏಳಬೇಕು, ಎದ್ದು ಒಂದರ್ಧ ಘಂಟೆ ವ್ಯಾಯಾಮ, ಜಾಗ್ಗಿಂಗ್ ಮಾಡಬೇಕು. ಅಮ್ಮನಿಗೆ ಮನೆ ಕೆಲಸಕ್ಕೆ ನೆರವಾಗಬೇಕು, ಆಫೀಸ್ ನಲ್ಲಿ ಹೆಚ್ಚು ಸಮಯ ಹಾಳು ಮಾಡದೇ ಬೇಗ ಕೆಲಸ ಮುಗಿಸಿ ಮನೆಗೆ ಬಂದು ಮನೆಯವರ ಜೊತೆ ಸಮಯ ಕಳೆಯಬೇಕು. ಎಂಬಂಥ ಸಂಕಲ್ಪಗಳೂ ಸಂಕಲ್ಪಗಳಾಗೆ ಉಳಿದಿರುತ್ತವೆ ಎಂಬುದು ನನಗೂ ಗೊತ್ತು, ನಿಮಗೂ ಗೊತ್ತು.
ಕೆಲವೊಮ್ಮೆ ಎಂಥಹ ಸಂಕಲ್ಪ ಮಾಡಿರುತ್ತೇವೆ ಎಂದರೆ''ಹೊಸ ವರ್ಷದಲ್ಲಿ ಪ್ರತೀ ವಾರ ದೇವಸ್ಥಾನಕ್ಕೆ ತಪ್ಪದೆ ಹೋಗುತ್ತೇನೆ, ಪೂಜೆ ಹವನ, ಮಾಡಿಸುತ್ತೇನೆ'' ಎಂಬ ಸಂಕಲ್ಪಗಳು. ಹೊಸ ವರ್ಷದಲ್ಲಾದರೂ ಇಂಥಹ ನಂಬಿಕೆಗಳನ್ನು ಬಿಡೋಣಾ.
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ
ಗುರುತಿಸದಾದೆನು ನಮ್ಮೋಳಗೆ
ನಮ್ಮ ಮನದಲ್ಲೇ ಇರುವ ದೇವರ ಆರಾಧನೆ ಬಿಟ್ಟು ಪೂಜೆ, ಪುನಸ್ಕಾರ, ಹವನ, ಚಂಡಿ ಯಾಗ ಎಂಬ ಮಾತುಗಳು ಕೇಳಲು ಚೆಂದ. ಆದರೆ ನಮ್ಮ ಅನೇಕ ಕುಟುಂಬಗಳು ಇಂಥ ಮೂಡ ನಂಬಿಕೆಗಳಿಂದ ಬೀದಿಗೆ ಬಂದಿವೆ. ತಿನ್ನಲು ಅನ್ನವಿಲ್ಲದಿದ್ದರೂ ಹೊನ್ನಿನ ಅಂಬಾರಿ ಮಾಡಿಸುವ ಹರಕೆಗಳನ್ನು ಯಾವ ದೇವರೂ ಇಷ್ಟ ಪಡುವುದಿಲ್ಲ. ಪರಸ್ಪರ ರಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಮಮತೆ ಸದಾ ತುಂಬಿದ್ದರೆ ಅದೇ ಗೋಕುಲ.
ಹೊಸ ವರ್ಷದ ಹೊಸ್ತಿಲಲ್ಲಿ ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನಸ್ಕರಾಗಿ ಹೆತ್ತವರನ್ನು, ಹೊತ್ತಿರುವ ಭೂಮಿಯನ್ನು ಕಾಪಾಡುವ ಸಂಕಲ್ಪ ಮಾಡೋಣ.
ಹೊಸ ವರ್ಷ ಸರ್ವರಿಗೂ ಒಳಿತನ್ನು ಮಾಡಲಿ
ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ನಿಮ್ಮವ ಗುರು
82 comments:
ನಾನಂತೂ ಗಂಬ್ಃಈರ ವದನ ಲಂಬೋದರ ಅಲ್ಲ ಅಂತ, ನಿಮ್ಮ ಲೇಖನದ ಮೊದಲ ಓದುಗನಾಗಿ ಓದುತ್ತಿದೇನೆ.
ನಿಮಗೂ ಹೊಸ ವರ್ಷದ ಶುಭಾಶಯಗಳು.
ಬಾಲು
ಅದು ಗಂಭೀರ ಆಗಿ ಕುಳಿತು ಇರವ್ಕೆ ಹೇಳಿದ ಪರ್ಯಾಯ ಪದವೇ ಹೊರತು
ಯಾರನ್ನೂ ಬೇಜಾರು ಮಾಡಲೇ ಅಂತಲ್ಲ
ಮುಖ್ಯ ಉದ್ದೇಶ ನಮ್ಮಲ್ಲಿ ಹಾಸ್ಯ ಪ್ರವೃತ್ತಿ ಕಡಿಮೆ ಆಗ್ತಾ ಇದೆ ಅನ್ನೋದು,
ನಾನಂತೂ ಸ್ವಲ್ಪ ಮಟ್ಟಿಗೆ ಲಂಬೋದರ ಹೌದು ಆದರೆ ಗಂಭೀರ ವಾದನ ಅಲ್ಲ :)
Baalu
Happy New Year to you,
marte hogittu aaga helale
Chennagide.
Hosa varshada hardika shubhashayagalu
ಸುಂದರ ಬರಹ.ಹೊಸ ವರ್ಷದ ಶುಭಾಶಯಗಳು ಗುರು ಸರ್.
ಹೊಸ ವರ್ಷದ ಶುಭಾಶಯಗಳು.
ತು೦ಬಾ ಚೆನ್ನಾಗಿದೆ ಲೇಖನ.
ನನಗ೦ತೂ ಇದನ್ನು ಓದಲು ಸಮಯವಿತ್ತು :)
ನಾನು ಸಮಯವಿಲ್ಲ ಎ೦ದು ಬರೆಯುವ ಹವ್ಯಾಸವನ್ನು ಬಿಟ್ಟಿದ್ದೆ.
ಬ್ಲಾಗ್ ಶುರು ಮಾಡಿದ ಮೇಲೆ ಅರ್ಥ ಆತು "ಮನಸ್ಸಿದ್ದಲ್ಲಿ ಮಾರ್ಗ"..ಸಮಯದ ಅಭಾವ ಅಲ್ಲ ಎ೦ದು.
ನಿಮ್ಮ ಲೇಖನ ನೋಡಿ ಪೂರ್ತಿ ಜ್ನಾನೋದಯ ಆತು :)
ಭಾಶೇ
nimagoo hosa varhsada haardika shubhaashaygalu
Dr.D.T.krishna Murthy.
dhanyavaada sir
heege baruttiri
hosa varshada shubhaashayagalu
ವಿತಾ
ಎಷ್ಟೋ ಸಲ ನಾವು ಬ್ಯುಸಿ ಅಂದ್ಕಂಡು ಸಮಯ ವೇಸ್ಟ್ ಮಾಡ್ತ್ಯ
ಬ್ಲಾಗ್ ಬರೆಯಲೇ ಸ್ಟಾರ್ಟ್ ಮಾಡಿದ ಮೇಲೆ ತುಂಬಾನೇ ಸಮಯದ ಉಪಯೋಗ ತಿಳಿತ ಇದ್ದು
ನಿಂಗೆ ಜ್ಞಾನೋದಯ ಆಗಿದ್ದಿ ಕೇಳಿ ಖುಷಿ ಆತು
ಯಾವ ಮರದ ಕೆಳಗೆ ಕುಳಿತು ಓದಿದ್ದಿಲ್ಲೇ ಅಲ್ದಾ ಲೇಖನನ :)
ಹೊಸ ವರ್ಷದ ಶುಭಾಶಯಗಳು
ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಜಯಂತ್ ಕಾಯ್ಕಿಣಿ ಅವರ " ಇದೆಯೇ ನಿನಗೆ ಸಮಯ.. ಅಲೆದಾದಲಿಕ್ಕೆ, ಜೊತೆ ಹಾಡಲಿಕ್ಕೆ, ಚಂದ್ರನ ನೋಡಲಿಕ್ಕೆ.. " ಹಾಡು ನೆನಪಾಯಿತು.
ಲೇಖನ ಸಕಾಲಿಕ ಹಾಗೂ ವಾಸ್ತವ. ಎಲ್ಲರೂ ನೆನಪಿಡಬೇಕಾದ ವಿಷಯ. ನಿಮಗೂ ೨೦೧೧ ರ ಹಾರ್ದಿಕ ಶುಭಾಶಯಗಳು.
ಗುರು ಅವರೇ,
ಸಮಯದ ಮಹತ್ವದ ಬಗ್ಗೆ ಚೆನ್ನಾಗಿ ಹೇಳಿದ್ದಿರಿ.
ನಿಮಗೂ ನಿಮ್ಮ ಮನೆಯವರಿಗೆ ಹೊಸ ವರ್ಷದ ಶುಭಾಶಯಗಳು !
ಗುರುಗಳೇ,
ಚೆನ್ನಾಗಿದೆ, ಹೌದು, ಕ೦ಪ್ಯುಟರಿನ ಮು೦ದೆ ಕುಳಿತು ನಾವೆಲ್ಲಾ, ಲ೦ಬೋದರ,ಗು೦ಡೋದರ ರಾಗುತ್ತಿರುವುದು ಸುಳ್ಳಲ್ಲ. ಹೊಸ ವರ್ಷದಲ್ಲಾದರೂ ಸಮಯದ ಸದ್ವಿನಿಯೋಗ ಮಾಡಿಕೊ೦ಡು ಹೊಸ ಸಾಧನೆಗೈಯ್ಯುವತ್ತ, ವ್ಯಾಯಾಮದೊ೦ದಿಗೆ ಹೊಟ್ಟೆ ಕರಗಿಸುವತ್ತ ಗಮನ ಹರಿಸಬೇಕೆ೦ದು ನಾನ೦ತೂ ಪಣ ತೊಟ್ಟಿದ್ದೇನೆ. ಸಕಾಲಿಕ ಬರಹಕ್ಕೆ ವ೦ದನೆ.
ಗುರುಮೂರ್ತಿಯವರೆ,
ತುಂಬ ಚಂದದ ಲೇಖನ.
ನಿಮಗೆ ಹಾಗು ನಿಮ್ಮ ಶ್ರೀಮತಿಯವರಿಗೆ ಹೊಸ ವರ್ಷದ ಶುಭಾಶಯಗಳು.
ಹ್ಹ ಹ್ಹ ಹ್ಹ .. ಒಳ್ಳೆಯ ಬರಹ ..
ಹೊಸ ವರುಷದ ಶುಭಾಶಯಗಳು ..
ಗುರು,
ಅಂತ ಹೊಸ ಕೋರ್ಸ್ ಕೂಡ ಶುರು ಮಾಡಿದ್ದ ನಮ್ ಕಂಪನಿಲಿ. :-)
ಒಳ್ಳೆಯ ಲೇಖನ.
ಹೊಸ ವರ್ಷದ ಶುಭಾಶಯಗಳು.
-ಪ್ರಶಾಂತ್
ಗುರು ಸರ್, ಮಸ್ತ್ ಲೇಖನ, ಮುಗ್ದೋತು ಹೇಳಿ ಬೇಜಾರಾತು :( ನೀವು ಹೇಳಿದ್ದು ಅಕ್ಷರಶಃ ನಿಜ. ಸಮಯ ಇಲ್ಲೆ ಅಂದ್ಕಂದ್ರೆ ಎಂಥದೂ ಮಾಡಲಾಗ್ತಿಲ್ಲೆ ಅಲ್ದಾ? ನಂಗೂ ಎಷ್ಟೋ ಜನ ಕೇಳಿದ್ದ, ಆಫೀಸ್ ಅಲ್ಲಿ ಮಾಡಲೆ ಬೇರೆ ಕೆಲ್ಸಿಲ್ಯ ಹೇಳಿ, ಆದ್ರೆ ನಾನು ನಕ್ಕು ಸುಮ್ಮನಾಗ್ತಿ ಅಷ್ಟೇ :)
ಹೊಸ ವರ್ಷದ ಶುಭಾಶಯಗಳು !!
haleya varshada kol:e loteyalu naal:eya hosadina aduu ondu varushad varevigu.
varushkomme hosatu xna.... namage istu saalade?
ಹೊಸ ವರ್ಷದ ಶುಭಾಶಯಗಳು.
2011 ರ ಹಾರ್ದಿಕ ಶುಭಾಶಯಗಳು.
nannatre time iddu.. gchat maadle kooda :)
Gurumurthy...
baraha cholo iddu.. neenu heladu nijja..time ille hela karana(?) dinda eshteshto manushya sambandhagalu naasha aagtu..
kaalaaya tasmai namaha...
Ninagoo ninna kutumbakkoo hosa varshada shubhashayagalu..:)
ತು೦ಬಾ ಚೆನ್ನಾಗಿದೆ ಲೇಖನ......
ವರುಷ ವರುಷಕ್ಕೂ ಬರುವ ಈ ಹೊಸ ವರುಷ ನಿಮ್ಮೆಲ್ಲರ ಬಾಳಿನಲ್ಲಿ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ಎಲ್ಲರ ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ...
ಸಮಯದ ಮಹತ್ವವನ್ನು ಚನ್ನಾಗಿ ಹೇಳಿದ್ದೀರಿ. ನನ್ನ ಪ್ರಕಾರ ತಾವು ಮಾಡಬೇಕಾದ ಕೆಲಸಗಳನ್ನು ಮಾಡದವರಿಗೆ ಅದರಿಂದ ತಪ್ಪಿಸಿಕೊಳ್ಳಲು ಸಮಯವಿಲ್ಲವೆಂದು ಹೇಳುವದು ಒಂದು ನೆಪ ಅಷ್ಟೆ.
ನಿಮಗೂ ಹೊಸ ವರ್ಷದ ಶುಭಾಶಯಗಳು.
ಸಮಯದ ಬಗ್ಗೆ ಸಮಯೋಚಿತ ಬರವಣಿಗೆ !!! ಲೇಖನ ಖುಷಿಕೊಟ್ಟಿದೆ. ನಿಮಗೆ ಹೊಸ ವರ್ಷದ ಶುಭಾಶಯಗಳು.
Thumba ishta aayithu.... samayavannu chennagi sadupayoga padisikollutta iddeeri.... naanu prayathna maaduttEne... yaako itteechege thumba samaya haaLu maaduttiddEne antha anisuttade nanage :(
ಗುರುಅವರೆ, ಒಳ್ಳೆ ಲೇಖನ.. ನೀವು ಹೇಳಿರೋದು ಬಹಳ ಸತ್ಯ.. ಈ ರೀತಿಯ ಬೊಗಳೆ ಬಿಡೋ ಜನರನ್ನು ನಾನು ಬಹಳ ನೋಡಿದ್ದೇನೆ. ಅಂಥವರನ್ನ ಇಗ್ನೋರ್ ಮಾಡ್ತೀನಿ ನಾನು.
ನಿಮಗೂ ಹೊಸಹಬ್ಬದ ಹಾರ್ಧಿಕ ಶುಭಾಶಯಗಳು.........
chenagide...
ವರುಷ ವರುಷಕ್ಕೂ ಬರುವ ಈ ಹೊಸ ವರುಷ ನಿಮ್ಮೆಲ್ಲರ ಬಾಳಿನಲ್ಲಿ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ಎಲ್ಲರ ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ..
ಗುರುಮೂರ್ತಿ ಸರ್,
ಸಮಯವಿಲ್ಲ ಎನ್ನುವವರಿಗೆ ನಿಮ್ಮ ಲೇಖನ ಸರಿಯಾದ ಉತ್ತರ. ಈ ವಿಚಾರದಲ್ಲಿ ನಾನು ನಿಮ್ಮ ಪರವಾಗಿ ಏಕೆಂದರೆ ನಾನು ಮಾಡುವ ಕೆಲಸ[ಬ್ಲಾಗ್, ಲೇಖನ, ಫೋಟೊಗ್ರಫಿ] ಇತ್ಯಾದಿಗಳು ಹಾಳು ಎಂದುಕೊಂಡಿಲ್ಲ. ನಿಮ್ಮಂತೆ ನಾನು ನಡುವೆ ನಾಲ್ಕಾರು ಪುಸ್ತಕವನ್ನು ಓದಿಮುಗಿಸಿದ್ದೇನೆ.
ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.
Super Article, We must practice- C N Ramesh, E-Mail: rameshcn16@gmail.com
started new year with a nice write up! Wish u too a very happy New year.
ಒಳ್ಳೆ ಲೇಖನ, ಎಲ್ಲರಿಗೂ ಅರಿವು ಮಾಡುತ್ತದೆ.
ಈಕವಿ ಸಂಘಟನೆ, ನಿಮ್ಮ ಲೇಖನ ವನ್ನು ಎಲ್ಲರಿಗೂ ಕಲಿಸುತ್ತಾ ಇದೆ.
ಒಳ್ಳೆ ಲೇಖನ, ಎಲ್ಲರಿಗೂ ಅರಿವು ಮಾಡುತ್ತದೆ. ಈಕವಿ ಸಂಘಟನೆ, ನಿಮ್ಮ ಲೇಖನ ವನ್ನು ಎಲ್ಲರಿಗೂ ಕಲಿಸುತ್ತಾ ಇದೆ. ಎಲ್ಲರು ಅವರ ಕಾಮೆಂಟ್ಸ್ ಕಲಿಸುತ್ತಾ ಇದ್ದರೆ. ಆದನ್ನು ಕಳಿಸುತ್ತೇನೆ.
ಈಕವಿ ಅಂತರ್ಜಾಲ ಅರ್ಜಿ ತುಂಬಿಸಿ, ಈಕವಿ ಸದಸ್ಯರಾಗಿ - http://www.ekavi.org
ಗುರುಗಳೆ,
ಘನಗಂಬೀರ ವದನ ಲಂಬೊದರರು ಎಲ್ಲೆಲ್ಲೂ ಇದ್ದಾರೆ. ಸ್ವಲ್ಪ ಹಾಸ್ಯ ಪ್ರವೃತ್ತಿ ಇದ್ದರೆ ಒಳ್ಳೆಯದೇ.
ವಾಸ್ತವಕ್ಕೆ ಹಿಡಿದ ಕನ್ನಡಿ ನಿಮ್ಮ ಈ ಬರಹ.
ನಿಮಗೂ ಹೊಸವರ್ಷದ ಶುಭಾಶಯಗಳು.
ಗುರು,
ಹೊಸವರ್ಷದ ಹಾರ್ದಿಕ ಶುಭಾಶಯಗಳು !
ನೀ ಹೇಳಿದ್ದು ನಿಜ. ಕೆಲವೊಮ್ಮೆ , ಕೆಲಸವಿಲ್ಲದೇ ಉಂಡಾಡಿ ಯಾಗಿ ಅಲೆಯುತ್ತಿರುವವರೂ " ನಂಗೆ ಟೈಮಿಲ್ಲ " ಎನ್ನುತ್ತಾರೆ. ಎಲ್ಲರು ಬ್ಯುಸಿ , ಯಾರ ಬಳಿಯೂ ಸಮಯವಿಲ್ಲ .ಹಾಗೆಂದು ಮಾಡುವುದು ಏನೂ ಇಲ್ಲ. ಎಲ್ಲವೂ ಪೆಂಡಿಂಗ್ !!
ಹೀಗಿರುವಾಗಲೂ ಹೊಸವರ್ಷದಲ್ಲಿ , ಗಟ್ಟಿ ಮನಸು ಮಾಡಿ , ನಮ್ಮ ಕುಟುಂಬದವರೊಡನೆ ಸ್ವಲ್ಪ ಕಾಲವನ್ನಾದರೂ ಕಳೆಯುವ, ಸ್ನೇಹಿತರಿಗೆಂದು ಕೊಂಚ ಸಮಯವನ್ನು ತೆಗೆದಿಡುವ , ಸಮಾಜಕ್ಕಾಗಿ, ಮನುಕುಲದ ಒಳಿತಿಗಾಗಿ ನಮ್ಮಿಂದಾದ ಸಹಾಯ ಮಾಡುವ ಸಂಕಲ್ಪವನ್ನು ಮಾಡೋಣ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು...ಡಾ. ಗುರೂಜಿ..ನಿತ್ಯದ ಮಾತನ್ನು ಸುಂದರ ತುಲನಾತ್ಮಕ ಲೇಖನಕ್ಕೆ ಪರಿವರ್ತಿಸಿದ್ದೀರಿ..ನೋ ಟೈಮ್..ಟೈಮೇ ಸಿಗೊಲ್ಲಾ..ಎಲ್ಲಾ ಬರೀ ಸಬೂಬುಗಳು..ಸಮಯವನ್ನ ಸರಿಯಾಗಿ ನಿರ್ವಹಿಸ್ತ್ತಿಲ್ಲ ಎನ್ನುವುದೇ ಸರಿ..ಆದ್ರೆ ಅದನ್ನು ಯಾರು ಒಪ್ಕೋತಾರೆ,,,??
ನೈಸ್ ಒನ್.
`ಸಮಯ'ದ ಬಗ್ಗೆ ಬಹಳ ಉತ್ತಮ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು.ನಿಮಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
buss nalli pustaka odaodu Europe nalli maatra sadhyaneno, BMTC bus nalli nintkolloke illa kutkolloke seat sikre swarga sukha :D innu dakota dalli pustakada geeli virala :p
nimm blogina title ishta aaitu :)
ನಿನ್ನ ಲೇಖನ ಓದಿ ನಾನು ಸಮಯವನ್ನು ಸದುಪಯೋಗ ಪಡಿಸಿಕೊಂಡೆ ಎನಿಸಿತು.
ನನ್ನನು ಹಲವರು ಜನರು ಕೇಳಿದ್ದಾರೆ.. ನಿನಗೆ ಬ್ಲಾಗ್ ಬರೆಯಲು ಸಮಯವೆಲ್ಲಿ..?
ವಾರಾಂತ್ಯದ ರಜೆಯಲ್ಲಿ ಹಾಲು ಮೂಳು ತಿರುಗಿ ಸಮಯ ಹಾಲು ಮಾಡುವುದರ ಬದಲು,ಒಂದು ಗಂಟೆ ನಿಮಗೆಂದು ಮೀಸಲಿಟ್ಟರೆ ಸಮಯ ಎಲ್ಲಿ ಎಂದು ತಿಳಿಯುತ್ತದೆ ಅಂದಿದ್ದೇನೆ..ಅರ್ಥಪೂರ್ಣ ಲೇಖನ..
Guru...First of all... Happy New year to u n family.. :)
Tumba satya :)u took words from my heart...Nangu aste... ee word keli besattu hogidde... Jana...lifeanna tumba mechanical aagi tagand bittidda... Busy anno word aa world na boudry line aste... to keep others away from them... Tamma samayana sadupayoga maadkala mande ille...janakke... I pity on them...!!!
The real thing is they are unable to manage things around them....!!! Jus BUSY is a word to make themselves more complicated in thier own world...!!! They themselves doesnt know where they are tumbling..!!!!
shuಭಾಶಯಗಳು..
೨೦೧೧ರಲ್ಲಿ ಸವಿಕ್ಷಣಗಳು ಎದುರಾಗಲಿ..
"ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ...
ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ.. "
lekhana tumba arthamayavaagiyoo, prastutavaagiyoo ide!! Nimagoo saha hosa varshanda shubhaashayagalu :)
ಚೆನ್ನಾಗಿದೆ. ಇಷ್ಟವಾಯಿತು.
ತುಂಬಾ ಚೆನ್ನಾಗಿದೆ ಸರ್. ವಾಣಿಶ್ರೀಯವರು ಹೇಳಿದಂತೆ ಸಮಯವನ್ನು ಸದುಪಯೋಗಪಡಿಸಿಕೊಂಡ ಅನುಭವವಾಯಿತು.
ಶರಶ್ಚಂದ್ರ ಕಲ್ಮನೆ ಯವರೇ,
ನಿಮಗೂ ಹೊಸ ವರ್ಷದ ಶುಭಾಶಯಗಳು
ಸಮಯ ಸಿಗದು ನಿಜ ಆದರೆ ಮಾಡಿಕೊಳ್ಳಬೇಕು ಅಷ್ಟೇ
ಬರುತ್ತಿರಿ
ವಿ.ಆರ್.ಭಟ್ ಸರ್
ನಿಮ್ಮ ಪ್ರೀತಿ ಆಶಿರ್ವಾದ ಸದಾ ಇರಲಿ
ಅಪ್ಪ-ಅಮ್ಮ(Appa-Amma)
ನಿಮ್ಮ ಶುಭಾಶಯಗಳಿಗೆ ವಂದನೆಗಳು
ಬರುತ್ತಿರಿ
ವಸಂತ್ ಸರ್
ಎಷ್ಟೋ ಸಲ ಹೀಗೆ ಆಗುತ್ತದೆ
ಪುಸ್ತಕ ಓದಲೆಂದು ತರುತ್ತೇವೆ ಆದರೆ ಓದಲು ಆಗುವುದಿಲ್ಲ
ಆದರೆ ಸಮಯ ಯಾರಿಗೂ ಕಾಯ್ದು
ನಾವೇ ಅದನ್ನ ಉಪಯೋಗಿಸಿಕೊಳ್ಳಬೇಕು
PARAANJAPE K.ನ ಸರ್
ನಾನೂ ತುಂಬಾ ಲಂಬೋದರ ಆಗುತ್ತಿದ್ದೇನೆ
ಹೊಸ ವರ್ಷದಲ್ಲಿ ಇದನ್ನು ಹೋಗಲಾಡಿಸಬೇಕಿದೆ
ಬರುತ್ತಿರಿ
sunaath ಸರ್
ನಿಮ್ಮ ಹಾರೈಕೆಗೆ ವಂದನೆಗಳು
ಪ್ರೀತಿ ಇರಲಿ
shridhar ಸರ್
ಬರುತ್ತಿರಿ
ಥ್ಯಾಂಕ್ಸ್
ಪಾಚು-ಪ್ರಪಂಚ
ಅಂಥಹ ಕೋರ್ಸ್ ಗೆ ಶುಭವಾಗಲಿ ;)
ಬರುತ್ತಿರಿ
ವಿದ್ಯಾ ರಮೇಶ್
ನಿಜಾ, ಅಂಥವರನ್ನು ಅಳಕ್ಷಿಸದೆ ಒಳ್ಳೆ ಉಪಾಯ ನೋಡಿ
ಹೇಳವು ಹೇಳ್ತಾನೆ ಇರ್ತ
ಅಭಿಪ್ರಾಯಕ್ಕೆ ಥ್ಯಾಂಕ್ಸ್
Anonymous
ತುಂಬಾ ಥ್ಯಾಂಕ್ಸ್ ಅಭಿಪ್ರಾಯಕ್ಕೆ
ದಯವಿಟ್ಟು ನಿಮ್ಮ ಹೆಸರು ಹಾಕಿ
Jagadeesh Balehadda
ನಿಮಗೂ ಹೊಸ ವರ್ಷದ ಶುಭಾಶಯಗಳು
ವನಿತಾ / Vanitha
haa, ninge time use madadu gottiddu hangare
good good :)
ಆಕಾಶಬುಟ್ಟಿ
ಹೊಸ ವರ್ಷದ ಶುಭಾಶಯಕ್ಕೆ ಥ್ಯಾಂಕ್ಸ್
ಸಮಯದ ಸದುಪಯೋಗ ಹೊಸ ವರ್ಷದ ಹೊಸ ಸಂಕಲ್ಪ ಅಲ್ದಾ
ಬರುತ್ತಿರಿ
ಹಳ್ಳಿ ಹುಡುಗ ತರುಣ್
ನಿಮಗೂ ಹೊಸ ವರ್ಷದ ಶುಭಾಶಯಗಳು
ಸದಾ ಬರುತ್ತಿರಿ
ಬಿಸಿಲ ಹನಿ ಸರ್
ನೀವು ಹೇಳೋದು ನಿಜಾ
ಕೆಲವರಿಗೆ ಅದು ಅಭ್ಯಾಸ ಆಗಿ ಹೋಗಿದೆ
nimmolagobba ಬಾಲು ಸರ್
ಧನ್ಯವಾದಗಳು ನಿಮ್ಮ ಮಾತಿಗೆ
ಸದಾ ಬರುತ್ತಿರಿ
ಸುಧೇಶ್ ಶೆಟ್ಟಿ ಸರ್
ಅದು ಎಲ್ಲರಿಗೂ ಅನಿಸೋದೇ ಬಿಡಿ
ಸಮಯ ಹೇಗೆ ಉಪಯೋಗಿಸಿದರೂ ಕೆಲವೊಮ್ಮೆ ಹಾಲು ಮಾಡ್ತಾ ಇದ್ದೇವೆ ಅನಿಸತ್ತೆ
ಸದಾ ಬರ್ತಾ ಇರಿ
Bhavana ಭಾವನ Rao ಅವರೇ
ಹೌದು, ತುಂಬಾ ಕಡೆ ಅಂಥಹ ಜನಾನೇ ಸಿಗ್ತಾರೆ
ಏನು ಮಾಡೋದು
ಅಭಿಪ್ರಾಯಕ್ಕೆ ಥ್ಯಾಂಕ್ಸ್
ಶಿವೂ ಸರ್
ನಿಮ್ಮ ಮಾತು ನಿಜಾ
ಸುಮ್ಮನೆ ಕೆಲವರು ಬ್ಯುಸಿ ಎನ್ನುತ್ತಾರೆ
ನಿಮ್ಮ ಪ್ರೀತಿ ಹೀಗೆಯೇ ಇರಲಿ
C N Ramesh ಸರ್
ತುಂಬಾ ಥ್ಯಾಂಕ್ಸ್
ಬರ್ತಾ ಇರಿ
ತೇಜಸ್ವಿನಿ ಹೆಗಡೆ ಯವರೇ
ಥ್ಯಾಂಕ್ಸ್
ಹೀಗೆ ಪ್ರೋತ್ಸಾಹ ನೀಡ್ತಾ ಇರಿ
baraha vasu bagge
ಧನ್ಯವಾದಗಳು
ಈ ಕವಿ ಸಂಘಟನೆಗೂ ಧನ್ಯವಾದಗಳು
ಮನದಾಳದಿಂದ...........
ನಿಜಾ,
ನಾವೆಲ್ಲರೂ ಹಾಗೆ ಆಗುತ್ತಿದ್ದೇವೆ
ಸಮಯದ ಸದುಪಯೋಗ ಪುನಃ ಕಲಿಯಬೇಕಿದೆ
ಚಿತ್ರಾ
ಹೌದು, ಎಲ್ಲರೂ ಹಂಗೆ ಹೇಳ್ತಾ ಟೈಮ್ ಇಲ್ಲೇ ಹೇಳಿ
ಹೊಸ ವರುಷದಲ್ಲಾದರೂ ಎಲ್ಲರೂ ಸಮಯಕ್ಕೆ ಬೆಲೆ ಕೊಡಲಿ ಅಲ್ದಾ
ಬರ್ತಾ ಇರಿ
ಜಲನಯನ ಅಜ್ಹಾದ್ ಸರ್
ಎಲ್ಲರನು ಒಪ್ಪಿಸೋಕೆ ಸಾದ್ಯನೇ ಇಲ್ಲ ಬಿಡಿ
ಒಪ್ಕೊಂದವರು ಅರಿತ್ಕೊತಾರೆ
ಒಪ್ದೆ ಇದ್ದವರು ಅಲ್ಲೇ ಇರ್ತಾರೆ ಆಲ್ವಾ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಬರುತ್ತಿರಿ
prabhamani ನಾಗರಾಜ ಅವರೇ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಶುಭಾಶಯಕ್ಕೆ ಧನ್ಯವಾದಗಳು
ಬರುತ್ತಿರಿ
Hussain ಸರ್
ನೀವು ಅನ್ನೋದು ನಿಜಾ
ಆದರೆ ಕೆಲವೊಮ್ಮೆ ಸಮಯ ಸಿಗತ್ತೆ ಆಗ ಸರಿ ಉಪಯೋಗಿಸಬೇಕು ಅಂತ
ಸೀಟ್ ಸಿಗದೆ ಇದ್ರೆ ಓದೋಕೆ ಹೇಗೆ ಆಗುತ್ತೆ ಹೇಳಿ
ಬರುತ್ತಿರಿ
ವಾಣಿಶ್ರೀ
ಇಂಥವ್ಕೆ ಎಂಥ ಹೇಳದು
ಅಲ್ದಾ
ಇಂಥವು ಎಲ್ಲ ಕಡೆ ಇರ್ತಾ
ಹೊಸ ವರ್ಷದ ಶುಭಾಶಯಗಳು
Vinay
ಅದು ನಿಜಾ, ಎಲ್ಲರೂ ಟೈಮ್ ಇಲ್ಲೇ ಹೇಳವೆಯ ನೋಡು
ಇವ್ಕೆ ಬುದ್ದಿ ಹೇಳಲೇ ಆಗ್ತಿಲ್ಲೆ
ಬರ್ತಾ ಇರಿ
- ಕತ್ತಲೆ ಮನೆ..
ಹೊಸ ವರ್ಷಕ್ಕೆ ಒಳ್ಳೆಯ ಸಂದೇಶ ನಿಮ್ಮದು
ಬರುತ್ತಿರಿ
kanasu
ತುಂಬಾ ಸಂತೋಷ ಇಷ್ಟವಾದರೆ
ಹೀಗೆಯೇ ಬರುತ್ತಿರಿ
Chaithrika
ತುಂಬಾ ಥ್ಯಾಂಕ್ಸ್ ಅಭಿಪ್ರಾಯಕ್ಕೆ
ಬರುತ್ತಿರಿ
~: rathna :~ ಅವರೇ
ನಿಮ್ಮ ಮಾತುಗಳಿಗೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ
guru sir,
sariyaada samayakke sariyaada abhiprayagalannu hanchikondiddiri.nimma anisikegalige nanna sahamatavide.
dhanyavadagalu.
2011 ra shubhagalondige
indira.ca.
sir, nanaganthoo nimma lekana odovastu samaya sikthu.... samayada korate.. educated, city janarige maatra antha anisuttide... halliya, ajja,ajji, chikkamma , chikkappa.. ellroo sanje... harattuthaa kooruvudu.. innoo nodabahudu.... aadare.. avaroo sadyadale bisiyaaga bahudeno anno baya .. thumbaa channaagide
Well said sir.. :)
Happy new year :)
guru sir nimma anubhavada buttiyanna miss maadikondidde,E dina adannu savide.ajji maadi taruttidda adike patteya mosarannada saviyantide.dhanyavaadagalu.nimage "Hosa varshada shubhaashayagalu".
guru sir nimma anubhavada buttiyanna miss maadikondidde,E dina adannu savide.ajji maadi taruttidda adike patteya mosarannada saviyantide.dhanyavaadagalu.nimage "Hosa varshada shubhaashayagalu".
Post a Comment