ಹೆಣ್ಣಿಗೆ ತವರುಮನೆ ಎಂದರೆ ಸ್ವರ್ಗವಿದ್ದಂತೆ. ಅಲ್ಲಿ ಬರುವ ಎಲ್ಲ ಕಷ್ಟವನ್ನು ಅವಳು ಕಷ್ಟ ಅಂದುಕೊಳ್ಳುವುದೇ ಇಲ್ಲ. ಅದರಲ್ಲೂ ಮದುವೆಯಾಗಿ ವರುಷವಾದರೂ ತವರು ಮನೆಗೆ ಹೋಗದೆ ಗಂಡನ ಮನೆಯಲ್ಲಿ ಅತ್ತೆ-ಮಾವರ ಸೇವೆ ಮಾಡುತ್ತಾ, ಪತಿಯ ಸೇವೆ ಮಾಡುತ್ತಾ ಇದ್ದ ಹೆಣ್ಣಿಗೆ ಒಮ್ಮೆಲೇ ಊರಿಗೆ ಹಬ್ಬಕ್ಕೆ ಬಾ, ಎಂಬ ಅಣ್ಣನ ಕರೆಯೋಲೆ ಬಂದರಂತೂ ಸ್ವರ್ಗಕ್ಕೆ ಮೂರೇ ಗೇಣು. ಆ ಸಂದರ್ಭದಲ್ಲಿ ಅವಳಿಗೆ ಊಟ ರುಚಿಸದು, ಇನಿಯನ ಸನಿಹ ಬೇಡ, ಅತ್ತೆ ಮಾವರ ನೋಟವೂ ಬೇಡ. ಒಟ್ಟಿನಲ್ಲಿ ಅವಳಿಗೆ ತನ್ನ ತವರುಮನೆಯ ಚಿತ್ರಣವೇ ಎದುರಿಗಿರುತ್ತದೆ. ಅಲ್ಲಿ ತಾ ಆಡಿದ್ದು, ನಲಿದಿದ್ದು, ಅಪ್ಪ-ಅಮ್ಮರ ಮಡಿಲಲ್ಲಿ ಮುದ್ದು ಕಂದನಾಗಿ ಬೆಳೆದದ್ದು, ಗೆಳತಿಯರ ನಗು ಎಲ್ಲ ಕಣ್ಮುಂದೆ ಬಂದು ಯಾವಾಗ ತಾನು ತವರು ಸೇರುತ್ತೇನೆಯೋ ಎಂಬ ತವಕ ಅವಳಿಗೆ. ಅಂಥಹ ಹೆಣ್ಣಿನ ಮನದ ಭಾವನೆಗಳ ಅನಾವರಣ ಈ ಕವನದಲ್ಲಿದೆ.
ದೂರದ ಊರಿಂದ ಧ್ವನಿಯೊಂದು ಬರುತಲಿದೆ
ತಂಗಿ, ನೀ ಬಾ ಬಾರೆ, ಎಂದೆನ್ನ ಕರೆಯುತಿದೆ
ಕಳೆದು ಹೋಯಿತು ವರುಷ, ತವರೂರ ಆ ಹರುಷ
ಮರೆಯಲಾರೆನು ನಾನು, ಅನುಗಾಲ ನಿಮಿಷ
ದೂರದ ಊರಿಂದ ಧ್ವನಿಯೊಂದು ಬರುತಲಿದೆ
ಅಣ್ಣನ ಒಡನಾಟ, ತಮ್ಮನೊಂದಿಗೆ ಕಾಟ
ಅಕ್ಕನ ಜೊತೆಯಲಿ, ಕಳೆದ ಆ ಕ್ಷಣದೂಟ
ತಂಗಿಯ ತೆಕ್ಕೆಯಲಿ, ಸರಸ ವಿರಸದ ಆಟ
ಗೆಳತಿಯರ ಒಡನಾಟ, ಗೆಳೆಯರ ಸವಿಮಾತ
ದೂರದ ಊರಿಂದ ಧ್ವನಿಯೊಂದು ಬರುತಲಿದೆ
ಹೆತ್ತ ತಾಯಿಯ ನೋಟ, ಪಿತನ ಹಿತನುಡಿ ಪಾಠ
ಸುತ್ತ ನೂರೆಂಟು ತರುಲತೆಗಳ ಮುದ್ದಾಟ
ಕೆಲಸದ ರಂಗಿಯ, ಕಿಲ ಕಿಲ ನಗುವಾಟ
ಹೊಲದಲ್ಲಿ ಬೆಳೆದ, ಭತ್ತದ ಸವಿನೋಟ
ಹಸಿರನ್ನೇ ಹೊತ್ತ, ಉಸಿರು ಅಡಿಕೆಯ ತೋಟ
ದೂರದ ಊರಿಂದ ಧ್ವನಿಯೊಂದು ಬರುತಲಿದೆ
ಬೇಡವಾಗಿದೆ ಇಂದು, ಇನಿಯನ ಸರಸದ ಮಾತು
ಕಾಡತೊಡಗಿದೆ ನನಗೆ, ಅತ್ತೆ ಮಾವರ ಕಾಟ
ಮಡಿಲ ಸೇರುವ ತವಕ, ತವರ ಸೇರುವ ತನಕ
ಅಪ್ಪ-ಅಮ್ಮರ ಮಡಿಲ, ಕಂದನಾಗುವ ತನಕ
ದೂರದ ಊರಿಂದ, ಧ್ವನಿಯೊಂದು ಬರುತಲಿದೆ
72 comments:
Guru Sir,
Good one. I can really understand the feelings. Its difficult to stay away for a long time from the beloved ones.
Dear Santhosh,
thanks for the quick comments
yes, life is like that,
ಡಾಕ್ಟ್ರೇ, ಹೆಣ್ಣಿಗೆ ತವರ ತವಕ ತನುವಿನಲಿ ಪ್ರಾಣದ ಸೆಲೆಯತನಕ ಎಂದು ಹೇಳುವ ಮಾತಿದೆ..ಬಾಂಧವ್ಯಗಳನ್ನು ನೆನವ ಮತ್ತು ಅನುಭವಿಸಿ ನೆಡೆವ ಗುಣ ಹೆಣ್ಣಿಗೆ ಹೆಚ್ಚು ಆಪ್ತ ಎನ್ನುವುದು ನಿಮ್ಮ ಸಾಲುಗಳಲ್ಲಿ ವ್ಯಕ್ತವಾಗಿದೆ...ಚನ್ನಾಗಿದೆ ತವರ ನೆನಪು ...ಮೇಡಂ ಗುರುಗೆ ಏನಾದ್ರೂ ತವರ ಬಯಕೆ ಆಗಿದೆಯೇನೋ ಎನ್ನುವುದೇ ಈಗ ಡೌಟು ಹಹಹಹ....
ಡಾಕ್ಟ್ರೆ
ನಮಗೆ ತವರ ನೆನಪು ಮಾತ್ರ ಯಾವಾಗಲು ಆಗುತ್ತೆ
ಹೆಣ್ಣಿಗೆ ಸದಾ ತವರು ಮನೆಯ ಚಿಂತೆ
ಹೆಣ್ಣಿನ ವ್ಯಕ್ತಿತ್ವವೇ ಅಂತದ್ದು
ತಾಳ್ಮೆ, ಸಹನೆಯಾ ಮೂರ್ತಿ
ಹೆತ್ತವರನ್ನೆಲ್ಲ ಬಿಟ್ಟು ನಮ್ಮೊಂದಿಗೆ ಬರ್ತಾರಲ್ಲ, ಅದೇ ವೈಚಿತ್ರ್ಯ
ನನಗೆ ನಮ್ಮ ಹೆತ್ತವರನ್ನು ಬಿಟ್ಟು ಇನ್ನೊಬ್ಬರ ಮನೆಯಲ್ಲಿ ಅಡ್ಜಸ್ಟ್ ಅಗೋ ಕಾನ್ಸೆಪ್ಟ್ ನೆನೆಸಿ ಕೊಂಡ್ರೆನೆ ಭಯ ಆಗತ್ತೆ
ಅಂಥಾದ್ರಲ್ಲಿ ಎಲ್ಲವರನ್ನು ಬಿಟ್ಟು ನಮ್ಮನ್ನೇ ಎಲ್ಲವರು ಅಂದ್ಕೊಂಡು ಬದುಕೋ ಹೆಣ್ಣಿಗೆ ಒಂದು ನಮನ
tumbaa chennaagide..
hennina mele neevu ittiruva gauravakke ondu salaam..
ತವರ ನೆನಪು ಚನ್ನಾಗಿದೆ.
ಆಕಾಶಬುಟ್ಟಿ
tumbaa dhanyavaada abhipraayakke
modalella maneya bagge astondu hacchikondiralilla
aadare mane bittu bere kade kaliyaraamabisida mele, nantara kelsakkendu deshavanne bittu banda mele maneya nenapau, adaralloo taayiya nenapu tumbaa baruttade. nange heegegirabekaadare ellavannnoo tyajisi baruva hennige hegaagirabeda emba yochane bandu bareda kavanvidu.
Vasanth sir
thank you for your comment
bartaa iri
Nisha madam,
thanks for the comments
bartaa iri
ಚೆನ್ನಾಗಿದೆ ಕವನ. ನಿಜ.. ಹೆಣ್ಣು ಎಂದೂ ತನ್ನ ತವರ ಮರೆಯುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಆಕೆ ತವರಿಗೆ ಭೇಟಿ ನೀಡಲು ಅಣ್ಣನ ಕರೆಗಾಗಿ ಕಾಯಬೇಕಾಗಿಲ್ಲ... ಹಾಗೆ ನೋಡಿದರೆ ಇಂದು ತಂಗಿಯನ್ನು ಕರೆದು ಬರಮಾಡಿಕೊಳ್ಳುವ ಪ್ರೀತಿಯ ಅಣ್ಣಂದಿರ ಕೊರತೆಯೂ ಬಹಳವಿದೆ ಎನ್ನಬಹುದು :)
ಏನೇ ಆದರೂ ಏನೇ ಹೋದರೂ.. ತಾಯಿ ಇರುವವರೆಗೂ ತವರಿನ ನಂಟು ಬಿಡದು.
ಗುರು ಸರ್,
ತವರ ನೆನಪು ಹೆಣ್ಣಿನ ಮನದಲ್ಲಿ ನಿರಂತರ.......
ನೀವು ಹೇಳಿದಂತೆ ಪತಿ ಅತ್ತೆ ಮಾವಂದಿರನ್ನು ಮರೆತಾಳು ಆದರೆ ತವರ ನೆನಪುಗಳನ್ನಲ್ಲ!
ಚಂದದ ಕವನಕ್ಕೆ ಧನ್ಯವಾದಗಳು.....
how very true.
nice lines Gurumurthy
:-)
malathi S
Gurumurthy,
very nice poem.
Regards,
Bala.
ಗುರು,
ಭಾವಪೂರ್ಣ ಕವನ....
ಚೆನ್ನಾಗಿದೆ...
Its very touching and very true.
Even after spending 40 - 50 years in husbands house, making it her own, women are always fond of their mom's home!
ಗುರುಮೂರ್ತಿಯವರೆ,
ಹೆಣ್ಣಿನ ಮನದಾಳದ ಹಂಬಲವನ್ನು ಚೆನ್ನಾಗಿ ಕವನಿಸಿದ್ದೀರಿ.
ಕವನದಲ್ಲಿ ನಿಮ್ಮ ಹಂಬಲದ ಛಾಯೆಯೂ ಕಾಣಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲವಷ್ಟೆ?
ತೇಜಸ್ವಿನಿ ಹೆಗಡೆ ಯವರೇ
ನಿಮ್ಮ ಮಾತು ನಿಜ
ಅಂಥಹ ಅಣ್ಣ ರ ಕೊರತೆಯಿದೆ
ಆದರೂ ಹೆಣ್ಣಿನ ತವರುಮನೆಯ ಪ್ರೀತಿ ಮೆಚ್ಚಬೇಕಾದ್ದೆ
ಅಭಿಪ್ರಾಯಕ್ಕೆ ಧನ್ಯವಾದಗಳು
ಮನದಾಳದಿಂದ............
ನಿಮ್ಮ ಮಾತು ನಿಜ
ತವರು ಮನೆ ಹೆಣ್ಣಿಗೆ ಅರಮನೆಯಂತೆ
ತನ್ನ ದು:ಖ ವನ್ನೆಲ್ಲ ತಾಯಿಯ ಮಡಿಲ ಮೇಲೆ ಮರೆಯುವ ಹೆಣ್ಣಿನ
ಸಮಾಧಾನದ ಮನೆಯೂ ಹೌದು
nenapina sanchy inda
thanks for your comments
bartaa iri
chandana
thanks for your nice words
keep coming
ಸವಿಗನಸು
tumbaa thanks
baruttiri
ಭಾಶೇ
you are right
hennina manassu tavarumaneya kade yavaagaloo hecchu vaaliruttade allave:)
abhipraayakke thanks
sunaath ಸರ್
ಒಂದರ್ಥದಲ್ಲಿ ನೀವು ಹೇಳಿದ್ದು ನಿಜ
ಭಾರತಕ್ಕೆ ಫೆಬ್ರವರಿ ಯಲ್ಲಿ ಬರುವ ಯೋಚನೆ
ಹಾಗಾಗಿ ಮನೆಯ ಚಿಂತನೆ
ಅಭಿಪ್ರಾಯಕ್ಕೆ ಧನ್ಯವಾದಗಳು
ಬರುತ್ತಿರಿ
ಗುರು ಸರ್... ತುಂಬಾ ಆತ್ಮೀಯವಾಗಿ ಬರೆದಿದ್ದೀರ....,,,, ತುಂಬಾ ಚೆನ್ನಾಗಿ ಇದೆ,,, ಕವನ,,, ಹೌದು,, ಎಷ್ಟು ವರುಷ ಕಳೆದರು,, ನಮ್ಮ ತವರು ಮನೆ ಎಂದರೆ,,, ಹೆಣ್ಣು ಮಕ್ಕಳಿಗೆ,,,, ಎಷ್ಟು ಅಕ್ಕರೆಯೋ ಪ್ರೀತಿಯೋ ,,, ಏನೋ...... ಯಾವಾಗಲು ತುದಿಗಳಲ್ಲಿ ನಿಂತಿರುತ್ತಾರೆ...
ಗುರು
Guru
nija
hennige tavarumaneya preeti maatra varnisalu saadyave illa
ellavannoo bittu baruva avrige aa swaatantryavannu needadiddare hege allave?
ಚೆನ್ನಾಗಿದೆ ಸಾರ್.. ಇಷ್ಟವಾಯ್ತು..
Pradeep Rao
thanks for the comments
ಗುರು ಸಾರ್..
ಸ್ತ್ರೀ ಎಂದರೇ "ಅಕ್ಕರೆ"... ಹುಟ್ಟಿದಮನೆಯಾಗಲೀ, ಸೇರಿದಮನೆಯಾಗಲೀ.. ಅವಳ ಅಕ್ಕರೆಯ ಧಾರೆಗೆ ಅಡೆತಡೆಯಿಲ್ಲ... ಎಲ್ಲರನ್ನೂ ಬಿಟ್ಟು ಪತಿಯೇ, ಪತಿಯ ಗೃಹವೇ/ಜನರೇ ಸರ್ವಸ್ವ ಎಂದುಕೊಂಡು ಬರುವ ಹೆಣ್ಣುಮಗಳ ಮನದ ಭಾವಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ. ಅಂತಹ ಹೆಣ್ಣಿಗೆ ನಮನ ಎಂದು ನಿಮ್ಮ ಹೃದಯ ಶ್ರೀಮಂತಿಕೆಯನ್ನೂ ಮೆರೆದಿದ್ದೀರಿ. ಧನ್ಯವಾದಗಳು ಸಾರ್. ನಿಜಕ್ಕೂ ತುಂಬಾ ಖುಷಿಯಾಯಿತು ನಿಮ್ಮ ಕವನ ಹಾಗೂ ನಿಮ್ಮ ಮಾತುಗಳು ಎರಡನ್ನೂ ಓದಿ...
ಶ್ಯಾಮಲ
ಭಾವಪೂರ್ಣ ಕವನ....
ಚೆನ್ನಾಗಿದೆ...
ಹೆಣ್ಣಿನ.."ತವರು" ಯಾವ ಕವಿಗಳನ್ನೂ ಬಿಟ್ಟಿಲ್ಲ!!
ಗುರು ಕವನ ಸೊಗಸಾಗಿದೆ..ಹೆಣ್ಣಿಗೆ ತವರು ಅಂದ್ರೆ ಪ್ರೀತಿ -ಅಕ್ಕರೆಯ ಬೀಡು...
chandada kavana .Tavarina nenapaayitu.
Very nice poem and the context..
The situation seems situated in 1970s :)
This situation reminds me of K S Narasimhaswamy's mysore mallige "baLegara chennayyä" :))
ಗುರು ಮೂರ್ತಿ ಸರ್ ಹೆಣ್ಣಿನ ತವರಿನ ನೆನಪಿನ ಬುತ್ತಿಯ ಸವಿ ನೆನಪುಗಳನ್ನು ಅದ್ಭುತವಾಗಿ ಮೂಡಿಸಿದ್ದೀರಿ.ಭಾವನೆಗಳ ಅನಾವರಣ ರಂಗು ತುಂಬಿದೆ. ಲೇಖನ ಚೆನ್ನಾಗಿದೆ.
Kavana tumba chennagide. Ellakkinta hecchagi kavankkinta modalu bareda nalku saaligalu,jalanayana avarige needida reply haagu nimma bhavanegalu ella chennagive.
ತುಂಬಾ ಒಳ್ಳೆಯ ಕವಿತೆ.ಇಷ್ಟವಾಯ್ತು ಸರ್.
ತಂದೆ ತಾಯಿ ಹುಟ್ಟಿದ ಊರು ಎಲ್ಲವನ್ನೂ ಬಿಟ್ಟು ಗಂಡನ ಜೊತೆ ಬಂದ ಹೆಣ್ಣಿಗೆ ಈ ತವಕ ಸದಾ ಇದ್ದೇ ಇರುತ್ತದೆ. ಆ ಭಾವನೆಗಳನ್ನು ಬಹಳ ಸುಂದರವಾಗಿ ಕವನವನ್ನಾಗಿಸಿದ್ದೀರಾ ಗುರು ಅವರೇ. ಇಷ್ಟವಾಯ್ತು.
@ಗುರುಮೂರ್ತಿ ಸರ್, ಕವನದ ಜೀವಂತಿಕೆ ಅಲ್ಲಿನ ಸಾಲುಗಳಲ್ಲಿ ಹಸಿ ಹಸಿಯಾಗಿಯೇ ಮಡುಗಟ್ಟಿದೆ, ಜೀವಂತಿಕೆಯ ಭಾವ ಸ್ಪುರಿಸುವ ಸಾಲುಗಳಲ್ಲ ಅದು ಅನುಭವದ ಭಾವ ಲಹರಿ ಚೆನ್ನಾಗಿದೆ. ಅಂದ ಹಾಗೆ "ಅಣ್ಣನ ಒಡನಾಟ, ತಮ್ಮನೊಂದಿಗೆ ಕಾಟ.... ಎಂಬ ಸಾಲಿನಲ್ಲಿ "... ತಮ್ಮನೊಂದಿಗೆ ಕಾದಾಟ..." ಎಂದಿದ್ದರೆ ಚೆನ್ನಾಗಿರ್ತಿತ್ತು ಅಂತ ನನ್ನ ಅನಿಸಿಕೆ.
ಗುರುಮೂರ್ತಿಸರ್,
ಹೆಣ್ಣಿನ ಮತ್ತು ಆಕೆಯ ತವರಿನ ಭಾಂದವ್ಯದ ಬಗೆಗಿನ ಕವನ ತುಂಬಾ ಚೆನ್ನಾಗಿದೆ. ಆಕೆಯ ಮನದಾಳದ ಶ್ರೀಮಂತಿಕೆಯನ್ನು ಅರ್ಥೈಸಿದ್ದೀರಿ...ಅದಕ್ಕಾಗಿ ಧನ್ಯವಾದಗಳು.
ಕವನ ಚೆನಾಗಿದೆ, ಪಾಲಕರ-ಮಕ್ಕಳ ನಡುವಿನ ಚಿತ್ರಣ ಮುದನೀಡಿತು. ಮತ್ತಷ್ಟು ಕವನಗಳನ್ನು ನಿರೀಕ್ಷಿಸತ್ತೇನೆ
Very nice one... yes, its true when we are away, we miss our home a lot......
very nice one!!! this is what everyone feel when the miss their home........
ನವಿರು ಭಾವಗಳನ್ನು ಉಕ್ಕಿಸುವುದೇ ಭಾವಗೀತೆಗಳ ರಚನೆಯಲ್ಲಿ, ಮೊದಲ ಆದ್ಯತೆ. ಡಾ.ಗುರು ಅವರೆ, ನೀವು ಅದರಲ್ಲಿ ಯಶ ಸಾಧಿಸಿಬಿಟ್ಟಿರಿ. ವಿಷಯವೂ ಕೂಡ "ladies appeal"- ತವರು ಮನೆಯ ಬಾ೦ಧವ್ಯವನ್ನು ಕುರಿತಾದದ್ದು. ವಿರಳವಾಗುತಿಹ ಭಾವಗಳನ್ನು ಮರಕಳಿಸುವ೦ತೆ ಮಾಡುವ೦ತಹ ಭಾವಗೀತೆಗಳು ಮತ್ತಷ್ಟು ನಿಮ್ಮ ಲೇಖನಿಯಿ೦ದ ಹರಿದು ಬರಲಿ.
ಶುಭಾಶಯಗಳು
ಅನ೦ತ್
chendada kavana. henna mana hokku avalallina toura tudita horahaakiddiraa...
ಗುರುಮೂರ್ತಿ,ಯವರೇ ,ಬಹಳ ದಿನಗಳ ನಂತರ ತವರನು ಕಾಣುವ ಹೆಣ್ಣಿನ ತವಕವನ್ನ ಮನಮುಟ್ಟುವಂತೆ ಹೆಣೆದಿದ್ದೀರ.ನಿಮ್ಮ ಕವನ, ೨ ವರ್ಷಗಳನಂತರ ಮೊದಲ ಬಾರಿಗೆ,ನನ್ನ ಮಗಳು, ತವರಿಗೆ ಬರುವಾಗಿನ ಸಂಭ್ರಮ ನೆನಪಿಸಿತು.ಅಭಿನಂದನೆಗಳು.
ಗುರುಮೂರ್ತಿ,ಯವರೇ ,ಬಹಳ ದಿನಗಳ ನಂತರ ತವರನು ಕಾಣುವ ಹೆಣ್ಣಿನ ತವಕವನ್ನ ಮನಮುಟ್ಟುವಂತೆ ಹೆಣೆದಿದ್ದೀರ.ನಿಮ್ಮ ಕವನ, ೨ ವರ್ಷಗಳನಂತರ ಮೊದಲ ಬಾರಿಗೆ,ನನ್ನ ಮಗಳು, ತವರಿಗೆ ಬರುವಾಗಿನ ಸಂಭ್ರಮ ನೆನಪಿಸಿತು.ಅಭಿನಂದನೆಗಳು.
ಗುರುಮೂರ್ತಿ,ಯವರೇ ,ಬಹಳ ದಿನಗಳ ನಂತರ ತವರನು ಕಾಣುವ ಹೆಣ್ಣಿನ ತವಕವನ್ನ ಮನಮುಟ್ಟುವಂತೆ ಹೆಣೆದಿದ್ದೀರ.ನಿಮ್ಮ ಕವನ, ೨ ವರ್ಷಗಳನಂತರ ಮೊದಲ ಬಾರಿಗೆ,ನನ್ನ ಮಗಳು, ತವರಿಗೆ ಬರುವಾಗಿನ ಸಂಭ್ರಮ ನೆನಪಿಸಿತು.ಅಭಿನಂದನೆಗಳು.
ತವರನ್ನು ಹ೦ಬಲಿಸುವ ಜೀವದೊಳಗೆ ಪರಕಾಯ(ಮನ) ಪ್ರವೇಶ ಮಾಡಿ ಬರೆದ೦ತಿದೆ ಕವನ! ಅಭಿನ೦ದನೆಗಳು ಸರ್.
AntharangadaMaathugalu
ಜಗತ್ತನ್ನು ಸಲಹುವ ತಾಯಿ ಸ್ತ್ರಿ ಅಲ್ಲವೇ?
ನಿಮ್ಮ ಮಾತುಗಳಿಗೆ ತುಂಬಾ ಧನ್ಯವಾದಗಳು
ಸದಾ ಬರುತ್ತಿರಿ
Venkatakrishna.K.K. ಸರ್
ನಿಜ, ಹೆಣ್ಣಿನ ತವರಿನ ಪ್ರೇಮ ಕವಿಗಳಿಗೆ ಬರೆಯಲು ಪ್ರೇರೇಪಿಸಿವೆ ಅಲ್ಲವೇ?
ಬರುತ್ತಿರಿ
Shashi jois ಮೇಡಂ
ನಿಜ ನಿಮ್ಮ ಮಾತು
ಹೆಣ್ಣಿಗೆ ತವರ ಪ್ರೀತಿ ಎಲ್ಲರಿಗಿಂತ ಅಧಿಕ
ಸುಮ
ತವರಿನ ನೆನಪು ನನ್ನ ಕವನ ತಂದೀತೆಂದರೆ
ಬರೆದಿದ್ದಕ್ಕೆ ಸಾರ್ಥಕ
ಬರುತ್ತಿರಿ
Dear Bhavana,
although situations seems 1970, but its always evergreen :)
thanks for the comments
nimmolagobba ಬಾಲು ಸರ್
ನಿಮ್ಮ ಮಾತುಗಳಿಗೆ ಧನ್ಯವಾದ
ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಋಣಿ
ಸದಾ ಪ್ರೋತ್ಸಾಹ ನೀಡುತ್ತಿರಿ
ಕವಿತಾ
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ
ಹೆಣ್ಣಿನ ತವರಿನ ಬಗೆಗೆ ಒಂದು ಬರಹ ಬರೆಯಲು ಹೋಗಿ ಅದು ಕವನ ಆಯಿತು :)
ಸದಾ ಬರುತ್ತಿರಿ
Dr.D.T.krishna Murthy. ಸರ್
ಥ್ಯಾಂಕ್ಸ್ ನಿಮ್ಮ ಅಭಿಪ್ರಾಯಕ್ಕೆ
ಬರ್ತಾ ಇರಿ
ಓ ಮನಸೇ, ನೀನೇಕೆ ಹೀಗೆ...?
ನಂಗೂ ಆ ತ್ಯಾಗವೇ ಬಹಳಷ್ಟು ವಿಚಿತ್ರವಾಗಿ ತೋರುತ್ತದೆ,
ಎಲ್ಲವನ್ನೂ ಬಿಟ್ಟು ಬರುವ ಹೆಣ್ಣಿನ ತ್ಯಾಗಕ್ಕೆ ಶರಣು
ಅರಕಲಗೂಡುಜಯಕುಮಾರ್ ಸರ್
ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ಋಣಿ
ನೀವು ಅನ್ನೋದು ನಿಜ, ತಮ್ಮನೊಂದಿಗೆ ಕಾಟ ಇದ್ದಾರೆ ಚೆನ್ನಾಗಿರ್ತಿತ್ತು
ಆದರೆ ಬರೆಯುವಾಗ ಕೆಲವೊಮ್ಮೆ ಶಬ್ದಗಳ ಕೊರತೆ ಎದುರಾಗುತ್ತದೆ
ನಿಮಗೆ ಗೊತ್ತಿರಬೇಕಲ್ಲ
ಹೀಗೆಯೇ ತಿದ್ದುತ್ತಿರಿ
shivu ಸರ್
ಊರಿನ ನೆನಪು ಮಡದಿಗೆ ಬಂದಾಗ ನೆನಪಾದ ಕವನ ಇದು
ಹೆಣ್ಣಿಗೆ ತವರು ಮನೆಯ ಪ್ರೀತಿಯ ಉತ್ಕಟತೆ ನಮಗೆ ಅರ್ಥವಾಗದ ವಿಷಯ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ವಿ.ಆರ್.ಭಟ್ ಸರ್
ನಿಮ್ಮ ಪ್ರೋತ್ಸಾಹ ಬರೆಯಲಿ ಪ್ರೇರಣೆ
ಸದಾ ಬರುತ್ತಿರಿ
ಬರೆಯುತ್ತಿರುವೆ
Abhilash
yes, indeed its true,
we miss only when we depart
life is like that
thanks for the comments
ಅನಂತರಾಜ್ ಸರ್
ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು
ಇನ್ನಷ್ಟು ಭಾವಗೀತ ಬರೆಯಲು ಉತ್ಸಾಹ ಬಂದಿದೆ
ಹೀಗೆಯೇ ಬಂದು ಪ್ರೋತ್ಸಾಹಿಸುತ್ತಿರಿ
ಸೀತಾರಾಮ. ಕೆ. / SITARAM.K ಸರ್
ಹೆಣ್ಣಿನ ತವರ ಸುಖ ಮೈಸೂರ್ ಮಲ್ಲಿಗೆ ನೆನಪು ತರಿಸುತ್ತದೆ ಅಲ್ಲವೇ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಕಲರವ
ನಿಮ್ಮ ಮಗಳು ತವರಿಗೆ ಬರುವ ಸಂಭ್ರಮ ನಿಮಗೆ ನೆನಪಿಸಿದ್ದಕ್ಕೆ ನನಗೆ ಹೆಮ್ಮೆ
ಬರಹದಿಂದ ಬದುಕು ಅರಳಬೇಕು, ಕೆರಳಬಾರದು ಎಂಬ ಧೋರಣೆಯ ಮನುಷ್ಯ ನಾನು
ಪ್ರೋತ್ಸಾಹ ಹೀಗೆಯೇ ಇರಲಿ
prabhamani nagaraja
nimma abhipraayakke dhanyavaadgalu
sadaa baruttiri
bande baruvavu kaala kasta maresuvadakke
talabeku naadakke ,jeevanada vegakke
manake santasa beku naguva manasirabeku
istuu sahisade jeva , enu baduku!
bande baruvavu kaala
kasta maresuvadakke
taala beku naadakke, jeevanada vegakke
kanasu vaastavada ghalige
kaadu kulitive naalegalige!
Chandrika
welcome to my blog
thanks for the comments
saalugalu tumbane chennagiddu
bartaa iru
kannu tersisidi nanna vadeya
nanna hendati jan 20 tavarige hogteni andalu igale tiket madistini devare
Tumba chhannnagi ide kaaniru bantu
Tumba chhannnagi ide kaaniru bantu
wow its heart touching words :)
ನಿಮ್ಮ ಈ ವರ್ಣನೆ ಮನಸಿಗೆ ಮುಟ್ಟುವಂತಿದೆ ತ್ಹುಭು ಹೃದಯದ ವಂದನೆಗಳು ಸರ್
ಶ್ವೇತ ಗೌಡ
ಮಲೆನಾಡು
Post a Comment