Sunday, November 22, 2009

ಮೋಹಿನಿ ....






ಕಾಡುತಿರುವೆ ಕಾಡಬೇಡ,ಕೋಮಲಾಂಗಿ ಮೋಹಿನಿ
ಕನಸುಗಳನು ಹೊಸೆಯಬೇಡ ನನ್ನ ಬಾಳ ಚಾಂದಿನಿ


ಕಣ್ಣ ರೆಪ್ಪೆಯಂಚಿನಲ್ಲಿ,ಕೊಂಕುಕಣ್ಣ ನೋಟದಲ್ಲಿ
ಕರಗುವಂತೆ ಕಲ್ಲು ಹ್ರದಯ ನೋಡಬೇಡ ನನ್ನ ನೀ


ಕಾಯುತಿರುವೆ ನಿನ್ನ ನಾನು,ನನ್ನ ಪ್ರೇಮ ಗೂಡಿನಲ್ಲಿ 
ಕಾಯಲಾರೆ ಇನ್ನು ಮುಂದೆ ಕದವ ತೆರೆಯೆ ಮಾನಿನಿ


ಹಾರುತಿರುವೆ ಮನದ ತುಂಬ,ಬಂಧಿಯಾಗು ಕಣ್ಮಣಿ
ನಿನ್ನ ಪ್ರೇಮ ಪಾಶದಲ್ಲಿ ಸಿಲುಕಿಬಿಡಲೇ ಅರಗಿಣಿ


ಅಚ್ಚ ಹಸಿರ ಪಚ್ಚೆ ಕೆನೆಯ,ಕಡೆದ ಕಲ್ಲ ಶಿಲ್ಪದಲ್ಲಿ
ತುಂಟನಗೆಯ ಬೀರಿ ಎನ್ನ ಕಾಡಬೇಡ ಕಾಮಿನಿ


ಕಾಲವೆಂಬ ಪರಿಧಿಯಲ್ಲಿ,ಕವನವಾದ ವಾಹಿನಿ
ಕವಿಯ ಮನದ ಕಣ್ಣ ಮುಂದೆ ಮೂಡಿ ಬಂದ ಕಾವ್ಯ ನೀ

64 comments:

shivu.k said...

ಗುರುಮೂರ್ತಿ ಸರ್,

ಕವನ ರೋಮ್ಯಾಂಟಿಕ್ ಆಗಿದೆ. ಇದನ್ನು ನಿಮ್ಮ ಶ್ರೀಮತಿಯವರು ಓದಿದ್ದಾರಾ? ಓದಿದ ಮೇಲೆ ಏನು ಹೇಳಿದರು? ಅಥವ ಅವರನ್ನು ನೋಡಿಯೇ ಬರೆದಿದಿರುವಿರಾ? ಬೇಗ ಉತ್ತರ ತಿಳಿಸಿ.

ಸಾಗರದಾಚೆಯ ಇಂಚರ said...

ಶಿವೂ ಸರ್,
ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು
ಶ್ರೀಮತಿಯವರ ನೋಡಿಯೇ ಬರೆದಿದ್ದು :)
ಬಹಳ ಸಂತಸ ಗೊಂಡಿದ್ದಾರೆ
ಹೀಗೆಯೇ ಬರುತ್ತಿರಿ

Unknown said...

ಕವನದ ನವಿರುತನ ಸದಾ ನಿಮ್ಮ ಭಾವದಲಿ ಉಳಿಯಲಿ....

ಚುಕ್ಕಿಚಿತ್ತಾರ said...

ಮೋಹಿನಿಯ ವಶವಾಗಿದ್ದೀರಿ....ಎನ್ನುವ ಭಾವನೆಯ ನಿಮ್ಮ ಕವನ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ....ವ೦ದನೆಗಳು.

ಸೀತಾರಾಮ. ಕೆ. / SITARAM.K said...

ಮೋಹಿನಿ, ಚಾಂದಿನಿ, ಮಾನಿನಿ, ಕಣ್ಮಣಿ, ಅರಗಿಣಿ, ಕಾಮಿನಿ-ಎಲ್ಲಾ ಅಪರೂಪದ ಶಬ್ದಗಳನ್ನು ಹಿಡಿದು ಹೊಸೆದು, ಕವನವಾಹಿನಿಯನ್ನೇ ಹರಿಸಿ ಒಳ್ಳೇ ಕವನ ಕೊಟ್ಟಿದ್ದಿರಾ ಗುರುಮೂರ್ತಿಯವರೇ! ಚೆನ್ನಾಗಿದೆ.

ತೇಜಸ್ವಿನಿ ಹೆಗಡೆ said...

ತುಂಬಾ ಸುಂದರ ಹಾಗೂ ಲಾಲಿತ್ಯ ಪೂರ್ಣ ಕವನ. ರಾಗಬದ್ಧವಾಗಿ ಹಡಿಕೊಳ್ಳಬಹುದು. (ಹಾಡಿಯೂ ಹಾಡಿಪ್ಪೆ ಈ ಕವನ ಅಲ್ದಾ? :) )

ಸವಿಗನಸು said...

ಡಾ.ಗುರು,
ಕವನಗಳನ್ನು ಸೊಗಸಾಗಿ ಬರೆಯುತ್ತೀರಿ......
ಬಹಳ ಚೆನ್ನಾಗಿದೆ...
ಅಭಿನಂದನೆಗಳು ....

Unknown said...

thumbha channagi eddu kavana guruanna... bhavane galu thumbha channagithu edaralli

ಸಾಗರದಾಚೆಯ ಇಂಚರ said...

ಈಶಕುಮಾರ ಸರ್
ನವಿರುತನವೇ ಕವನದ ತಾಜಾತನವಲ್ಲವೇ
ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ಕವನ ಇಷ್ಟವಾದರೆ ಅದೇ ಬಹಳ ಸಂತಸದ ವಿಷಯ
ಪ್ರೋತ್ಸಾಹ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

ಸೀತಾರಾಂ ಸರ್,
ಪದಗಳನ್ನು ಹಿಡಿಯಲು ತುಂಬಾ ಕಷ್ಟ ಪಟ್ಟಿದ್ದೆ ಈ ಕವನದಲ್ಲಿ
ಪ್ರಾಸಗಳು ಕೆಲವೊಮ್ಮೆ ತ್ರಾಸ ವಾಗುತ್ತವೆ
ನಿಮ್ಮ ಅಭಿಪ್ರಾಯಕ್ಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ,
ನೀವು ಅಂದಿದ್ದು ನಿಜ,
ಸುಮಾರು ಸಲ ನನ್ನಷ್ಟಕ್ಕೆ ನಾನೇ ಹಾಡಿಕೊಂಡಿದ್ದೇನೆ,
ಅದೊಂದು ನನ್ನ ಹವ್ಯಾಸ,
ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ

ಸಾಗರದಾಚೆಯ ಇಂಚರ said...

ಸವಿಗನಸು ಸರ್,
ಪ್ರೀತಿ , ಪ್ರೋತ್ಸಾಹ ಹೀಗೆಯೇ ಇರಲಿ,
ಯಾವುದೋ ಲೇಖನ ಬರೆಯುತ್ತಿದ್ದೇನೆ, ಅದು ಮುಗಿಯಲಿಲ್ಲ ಅದಕ್ಕೆ ಕವನ ಹಾಕಿದೆ

ಸಾಗರದಾಚೆಯ ಇಂಚರ said...

ದೀಪಿಕಾ,
ಇಷ್ಟವಾದರೆ ನಂಗೂ ಸಂತಸ,
ಹೀಗೆಯೇ ಬರುತ್ತಿರು

ಜಲನಯನ said...

ಡಾ. ಗುರೂಜಿ...ಶರಣು ಎಂದೆ....
ಎಲ್ಲಿ ಕಾಮಿನಿ
ಎಲ್ಲಿ ಮೋಹಿನಿ
ಎಲ್ಲಿ ಚಾಂದಿನಿ
ಅಲ್ಲೇ ಅರಗಿಣಿ
.....ಹಹಹ...ಬೌತಶಾತ್ರಕ್ಕೆ ಭೂತಹೊಕ್ಕೈತೋ ಮರಾಯ....ಜೀವ ಬಂದೈತೆ..ಹೆಣ್ಣು ಬೊಂಬೆಗೆ..ಬಂದೌಳೆ ಮೋಹಿನಿ...ಹಹಹ ಬಹಳ ಮೆಚ್ಚುಗೆಯಾದ ಸಾಲು
ಕವಿಯ ಮನದ ಕಣ್ಣ ಮುಂದೆ ಮೂಡಿ ಬಂದ ಕಾವ್ಯ ನೀ

ಸಾಗರದಾಚೆಯ ಇಂಚರ said...

ಡಾ
ಥ್ಯಾಂಕ್ಸ್
ಭೌತಶಾಸ್ತ್ರ ಸಮಯ ಸಿಕ್ಕಾಗ ಮೋಹಿನಿ ಹುಡುಕಾಟ ದಲ್ಲಿ ಮುಳುಗಿತ್ತು :)
ನಿಮ್ಮ ಮೆಚ್ಚಿಗೆಗೆ ಶರಣು
ಹೀಗೆ ಬರ್ತಾ ಇರಿ

Anonymous said...

NICE sirr....

ನಿನ್ನ ಪ್ರೇಮ ಪಾಶದಲ್ಲಿ ಸಿಲುಕಿ ಬಿಡಲೇ ಅರಗಿಣಿ >>> illi 'ಸಿಲುಕಿ ಬಿಡಲೇ' one word alva?
Clarify pls..

ಶಿವಪ್ರಕಾಶ್ said...

Nice one sir :)

ಆನಂದ said...

ಬೇಡ ಬೇಡವೆನ್ನುತ್ತಲೇ ಹಂಬಲಿಸುವ ಭಾವನೆ ಚೆನ್ನಾಗಿದೆ

SANTOSH MS said...

sir,nimmannu kaaduttidda mohini eega kavana odidavarannu kaaduvante anisuttide

Good one

Raghu said...

ಗುರುಮೂರ್ತಿ ಸರ್,
ಕವನ ಓದುದರಲ್ಲಿ ಎಂಜಾಯ್ಮೆಂಟ್ ಸರ್.. ತುಂಬಾ ಚೆನ್ನಾಗಿದೆ... ಇಗ ನನ್ನನ್ನ ಕಾಡಕ್ ಹತ್ತಾಲ್ ಮೋಹಿನಿ..
ನಿಮ್ಮವ,
ರಾಘು.

sunaath said...

ಈ ಮೋಹಕ ಕವನ ಓದಿದ ಮೋಹಿನಿ, ನಿಮ್ಮನ್ನು ಮೋಹಿಸದೆ ಇರಲು ಸಾಧ್ಯವೆ?

Anonymous said...

wow, kewl, nice iddu..

ಮನಸು said...

ತುಂಬಾ ಸುಂದರ ಕವನ,ಮೋಹಿನಿಯ ಪಾಶ ಇಷ್ಟು ಚೆಂದದ ಕವನ ಬರೆಸಿದೆ

ಸಾಗರದಾಚೆಯ ಇಂಚರ said...

ಕಲ್ಲಾರ್ ಮಹೇಶ್ ಸರ್,
ನೀವು ಅಂದಿದ್ದು ನಿಜ, ಸ್ವಲ್ಪ ಸಾಫ್ಟ್ವೇರ್ ದೋಷದಿಂದ ಹಾಗಾಗಿತ್ತು, ಈಗ ಸರಿ ಪಡಿಸಿದ್ದೇನೆ,
ತಿಳಿಸಿದ್ದಕ್ಕೆ ಧನ್ಯವಾದಗಳು
ಹೀಗೆಯೇ ಬರ್ತಾ ಇರಿ, ತಿದ್ದುತ್ತ ಇರಿ

ಸಾಗರದಾಚೆಯ ಇಂಚರ said...

Thank you Shivu, thanks for the comments

ಸಾಗರದಾಚೆಯ ಇಂಚರ said...

ಆನಂದ ಸರ್,
ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸಂತೋಷ್,
ಮೋಹಿನಿ ಕಾಟ ಮುಗಿದಿದೆ :)
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

ಸಾಗರದಾಚೆಯ ಇಂಚರ said...

ರಘು ಸರ್,
ಯಾವ ಮೋಹಿನಿ ಕಾಡಾಕ್ ಹತ್ತಾಳ್
ಹಿಂಗ ಬರ್ತಾ ಇರ್ರಿ

ಸಾಗರದಾಚೆಯ ಇಂಚರ said...

ಸುನಾಥ್ ಸರ್,
ನೀವು ಅಂದಿದ್ದು ನಿಜ, ನಿಜಕ್ಕೂ ಸಂತಸಗೊಂಡಿದ್ದಾಳೆ

ಸಾಗರದಾಚೆಯ ಇಂಚರ said...

Shree,
thanks for the comments,

ಸಾಗರದಾಚೆಯ ಇಂಚರ said...

ಮನಸು,
ಮೋಹಿನಿಯ ಪಾಶ ಬರೆಸಿದ ಕವನಕ್ಕೆ ನಿಮ್ಮ ಪ್ರತಿಕ್ರಿಯೆ ನೋಡಿ ಸಂತಸವಾಯಿತು
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ

ದಿನಕರ ಮೊಗೇರ said...

ಗುರು ಸರ್,
ಯಾವುದೋ ಸಂಗೀತಕ್ಕೆ ಪದ್ಯ ಬರೆದ ಹಾಗಿದೆ..... ತುಂಬಾ ತುಂಬಾ ಚೆನ್ನಾಗಿದೆ..... ಯಾರಿಗಾದರು music director ಗೆ ಕೊಡಿ...hit ಆಗತ್ತೆ song .....

Ranjita said...

ಗುರು ಅಣ್ಣ ,
ಚಂದದ ಕವನ .. ಕೊನೆ ಸಾಲಂತೂ ಅತೀ ಸ್ಪೂರ್ತಿದಯಕವಾಗಿದೆ

ಸಾಗರದಾಚೆಯ ಇಂಚರ said...

ದಿನಕರ್ ಸರ್,
ಖಂಡಿತ ಅದಕ್ಕೆ ರಾಗ ಹಾಕಿಸಬೇಕು ಅಂತಿದೆ,
ಆದರೆ ಮೊದಲು ಭಾರತಕ್ಕೆ ಬರಬೇಕು
ನಂತರ ಸುಮಾರು ಪದ್ಯಕ್ಕೆ ರಾಗ ಹಾಕಿಸೋಣ ಅಂತಿದಿನಿ
ನಿಮ್ಮ ಮಾತು ಇನ್ನಷ್ಟು ಹುರುಪು ನೀಡಿದೆ ಪದ್ಯ ಬರೆಯಲು

ಸಾಗರದಾಚೆಯ ಇಂಚರ said...

ರಂಜಿತಾ,
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ
ನಿಮ್ಮೆಲ್ಲರ ಹಾರೈಕೆಯೇ ಪದ್ಯ ಬರೆಯಲು ಸ್ಫೂರ್ತಿ

Ittigecement said...
This comment has been removed by the author.
Ittigecement said...

ಗುರು...

ಈ ಕವನ ನನ್ನ ಕಾಲೇಜು ದಿನಗಳಿಗೆ ಕರೆದೊಯ್ಯಿತು...

ಸರಳ ಶಬ್ಧಗಳಲ್ಲಿ..
ಪ್ರಾಸ ಬದ್ಧವಾಗಿ...
ಸೊಗಸಾಗಿ ಬರೆದಿದ್ದೀರಿ...

ನಿಮಗೂ..
ನಿಮ್ಮ ಮೋಹಿನಿಗೂ ಅಭಿನಂದನೆಗಳು.....

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಿಮ್ಮ ಚಂದದ ಹಾರೈಕೆಗೆ ವಂದನೆಗಳು
ನಿಮ್ಮ ಪ್ರೋತ್ಸಾಹ ಪ್ರೀತಿ ಸದಾ ಇರಲಿ
ಅದೇ ಪ್ರೇರಣೆ ಕೂಡಾ

ಚಂದಿನ | Chandrashekar said...

ಲಯಬದ್ಧ ಶೃಂಗಾರ ಕಾವ್ಯ... ಮುದ ನೀಡಿತು!

ಸಾಗರದಾಚೆಯ ಇಂಚರ said...

ಚಂದಿನ,
ಧನ್ಯವಾದಗಳು ಕಾಮೆಂಟಿಸಿದ್ದಕ್ಕೆ
ಕವನಕ್ಕೆ ನಿಮ್ಮೆಲ್ಲರ ಹಾರೈಕೆಯೇ ಹೊಸ ಚೈತನ್ಯ

ವಿನುತ said...

ಪ್ರಾಸಬದ್ಧ, ರಾಗಬದ್ಧ ಕವನ. ಸೊಗಸಾಗಿದೆ. ಧನ್ಯವಾದಗಳು.

ಕ್ಷಣ... ಚಿಂತನೆ... said...

ಗುರು ಅವರೆ, ಮೋಹಿನಿ ಕವನ ಮನಮೋಹಕವಾಗಿದೆ. ಕವನವನ್ನು ರಾಗ ಸಂಯೋಜಿಸಿ ಹಾಡುವಂತಿದೆ. ಕವನಕ್ಕೆ ಸ್ಪೂರ್ತಿಯಾಗಿರಬಹುದಾದ ಚಿತ್ರವೂ ಚೆನ್ನಾಗಿದೆ.

Snow White said...

ತುಂಬ ಚೆನ್ನಾಗಿ ಮೂಡಿ ಬಂದಿದೆ ಸರ್ ನಿಮ್ಮ ಶೃಂಗಾರ ಕವನ.. :) ಓದಿ ಖುಷಿಯಾಯಿತು :)

ಸುಮಾ

Dileep Hegde said...

ಚೆನ್ನಾಗಿದೆ.. :)

ಚಿತ್ರಾ said...

ಗುರು,
ಚಂದದ ಕವನ . ಪ್ರಾಸಬದ್ಧ ಸಾಲುಗಳು ಮುದಗೊಳಿಸುತ್ತವೆ . ವಿಜ್ಞಾನದ ಜೊತೆಯಲ್ಲಿ ಸಾಹಿತ್ಯವನ್ನೂ ಪ್ರೀತಿಯಿಂದ ಪೋಷಿಸುತ್ತಿರುವ ನಿಮ್ಮ ಬಗ್ಗೆ ಅಭಿಮಾನ ಎನಿಸುತ್ತಿದೆ

ಸಾಗರದಾಚೆಯ ಇಂಚರ said...

ವಿನುತಾ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಪ್ರೋತ್ಸಾಹಿಸುತ್ತಿರಿ

ಸಾಗರದಾಚೆಯ ಇಂಚರ said...

ಚಂದ್ರು ಸರ್,
ರಾಗ ಸಂಯೋಜಿಸಬೇಕು ಅನ್ನೋ ವಿಚಾರ ಇದೆ
ಯಾವಾಗ ಆಗುತ್ತೆ ಗೊತ್ತಿಲ್ಲ,
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಸುಮಾ,
ಕವನ ಇಷ್ಟವಾದರೆ ನನಂಗೆ ಬಹಳ ಸಂತಸ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿಲೀಪ್ ಸರ್,
ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚಿತ್ರಾ,
ಸಂಶೋಧನೆ ವ್ರತ್ತಿ. ಅದರೊಂದಿಗೆ ಕೆಲವು ಪ್ರವ್ರತ್ತಿಗಳಿದ್ದರೆ ಬೇಸರ ಬರದು ಅಲ್ಲವೇ
ಕೆಲವೊಮ್ಮೆ ಕೆಲಸದ ನಡುವೆ ಬೇಸರ ಬಂದರೆ ಇಂಥಹ ಕವನ ಗಳು ಮನಸ್ಸಿಗೆ ಮುದ ನೀಡುತ್ತವೆ.
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ

ಸುಧೇಶ್ ಶೆಟ್ಟಿ said...

ಕವನದಲ್ಲಿ ಬರೆದಿರುವುದಕ್ಕೂ ಶೀರ್ಷಿಕೆಗೂ ಚೆನ್ನಾಗಿ ತಾಳೆಯಾಗಿದೆ :)

ಸಾಗರದಾಚೆಯ ಇಂಚರ said...

ಸುಧೇಶ್
ತುಂಬಾ ಥ್ಯಾಂಕ್ಸ್
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ಸಂತೋಷ ಇದೆ
ಬರ್ತಾ ಇರಿ

Anonymous said...

Chennagide kavite

ಸಾಗರದಾಚೆಯ ಇಂಚರ said...

ನೀಲಿಹೂವು
ಧನ್ಯವಾದಗಳು
ಬ್ಲಾಗಿಗೆ ಸ್ವಾಗತ
ಹೀಗೆಯೇ ಬರುತ್ತಿರಿ

ಭಾವಜೀವಿ... said...

ಗುರು,
ನಿನ್ನ ಕವಿ ಮನದ ಕವನ ಬಹಳ ಚೆನ್ನಾಗಿದೆ!
ಸುಂದರವಾದ ಬ್ಲಾಗ್ ಕೂಡಾ.
ನೀನು ಬ್ಲಾಗಿಂಗ್‌ನಲ್ಲಿ ತೊಡಗಿಸಿಕೊಂಡಿದ್ದೀಯೆಂದು ಗೊತ್ತೇ ಇರಲಿಲ್ಲ. ಸಂಶೋಧನಾ ವೃತ್ತಿ ಹಾಗು ಪ್ರವೃತ್ತಿ ಎರಡರನ್ನೂ ಆನಂದಿಸುತ್ತಿದ್ದೀಯ. ಹೀಗೆ ಮುಂದುವರೆಯಲಿ ನಿನ್ನ ಬರವಣಿಗೆ.

SSK said...

ಗುರು ಮೂರ್ತಿ ಅವರೇ,
ಕವನ ತುಂಬಾ ಚೆನ್ನಾಗಿದೆ!
ನಿಮ್ಮ ಶ್ರೀಮತಿಯವರು ಬಹಳ ಅದೃಷ್ಟವಂತರು!!

ಸಾಗರದಾಚೆಯ ಇಂಚರ said...

ಎಸ ಎಸ ಕೆ,
ತುಂಬಾ ಥ್ಯಾಂಕ್ಸ್,
ಹೀಗೆ ಬರುತ್ತಿರಿ

Unknown said...

chennagide

ಮಿಥುನ ಕೊಡೆತ್ತೂರು said...

ಚೆನ್ನಾಗಿದೆ ಚೆನ್ನಾಗಿದೆ

ಸಾಗರದಾಚೆಯ ಇಂಚರ said...

ಸತೀಶ್,
ತುಂಬಾ ಧನ್ಯವಾದಗಳು
ಪ್ರೋತ್ಸಾಹ ಸದಾ ಇರಲಿ

ಸಾಗರದಾಚೆಯ ಇಂಚರ said...

ಮಿಥುನ್,
ಹೀಗೆಯೇ ಬೆನ್ನು ತಟ್ಟುತ್ತಿರಿ
ತಪ್ಪಿದಲ್ಲಿ ತಿದ್ದುತ್ತಿರಿ ,

ದೀಪಸ್ಮಿತಾ said...

ಗುರು ಸರ್, ಚೆನ್ನಾಗಿದೆ. ಶಿವು ಅವರಿಗೆ ಬಂದ ಅನುಮಾನ ನನಗೂ ಬಂದಿತ್ತು. ಆದರೆ ನಿಮ್ಮ ಉತ್ತರ ನೋಡಿ ಅನುಮಾನ ಪರಿಹಾರ ಆಯ್ತು.

ಸಾಗರದಾಚೆಯ ಇಂಚರ said...

ದೀಪಸ್ಮಿತ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಅನುಮಾನ ಪರಿಹಾರವಾಯಿತಲ್ಲವೇ :)
ಹೀಗೆ ಬರುತ್ತಿರಿ