ಯಾಕೆ ಗೆಳತಿ ನಿನ್ನ ಮುಖವು ಹೀಗೆ ಬಾಡಿದೆ
ಚಂದ್ರ ಕಿರಣ ಕೂಡ ಬೆಂಕಿ ಮಳೆಯ ಸುರಿಸಿದೆ
ಮುದ್ದು ಮೊಗದ ನಿನ್ನ ನೋಟ ಎಲ್ಲಿ ಹೋಗಿದೆ
ಹಂಸದಂಥ ನಡಿಗೆಯಿಂದು ಭಾರವಾಗಿದೆ ಗೆಳತಿ ಕಾಣದಾಗಿದೆ
ಹಕ್ಕಿ ಕೂಡ ಹಾಡಲಿಲ್ಲ ನಿನ್ನ ನೋಡದೆ
ಕೋಳಿ ತಾನು ಕೂಗಲಿಲ್ಲ ಮುಖವ ಕಾಣದೆ
ರವಿಯು ಕೂಡ ಬಾಡಿ ಹೋದ ಬಿಸಿಲು ಬೀರದೆ
ನಿನ್ನ ಮನದ ಬೇಗೆಯನ್ನು ಹೇಳಬಾರದೇ ಗೆಳತಿ ನೋಡಲಾಗದೆ
ಚದುರಿ ಹೋಯ್ತು ಮೋಡವೆಲ್ಲ ಮಳೆಯ ಸುರಿಸದೆ
ಬೀಸೊ ಗಾಳಿ ಮೌನವಾಯ್ತು ತಂಗಾಳಿ ಸೂಸದೆ
ಹರಿಯೋ ನದಿಯೂ ಹರಿಯಲಿಲ್ಲಂಬಿಗನ ಕಾಣದೆ
ನಿನ್ನ ಚಿಂತೆ ದೂರ ಮಾಡ್ವೆ ಹೇಳು ನನ್ನೆದೆ, ಗೆಳತಿ ಬಳಿಗೆ ಬಾರದೆ
ದೂರ ಕಡಲು ಹರಿವ ತೆನೆಯು ನಿಂತು ನೋಡಿದೆ
ಬಾನ ರವಿಯು ಚಂದ್ರಮಂಗೆ ದಾರಿ ತೋರಿದೆ
ಕತ್ತಲಲ್ಲಿ ಬೆಳಕ ತುಂಬಿ ಲಾಲಿ ಹಾಡಿದೆ
ನಿನ್ನ ಬಿಂಬ, ಚಂದ್ರ ಬಿಂಬ ಒಂದೆ ಆಗಿದೆ ಗೆಳತಿ ಮನಸು ತುಂಬಿದೆ
Saturday, November 7, 2009
Subscribe to:
Post Comments (Atom)
64 comments:
ಕವನಗಳ ಮೂಲಕ ಬರೆದ್ರೆ, ಎರ್ಡ್ಮೂರು ಪುಟಗಳಷ್ಟು ವಿಷ್ಯನ ಸರಳ್ವಾಗಿ ಒಂದೇ ಪುಟದಲ್ಲಿ ಹೇಳ್ಬೌದು = ಹಾಗಂತ ಹಂಸಲೇಖ ಹೇಳಿದ್ದು ಜ್ಞಾಪ್ಕಾ ಬಂತು.
ಕವನಗಳನ್ನ ಬರಿಯೊ ಕಲೆ ನಿಮ್ಗೆ ಸಿಧ್ದಿಸಿದೆ.
ಅಭಿನಂದನೆಗಳು.
ಡಾ|
ಮತ್ತೊಂದಿ ಸುಂದರ ಕವನ. ಇದನ್ನು ನಾನು ಓದೋಕೆ ಹೋಗಲಿಲ್ಲ.. ನನಗೆ ತೋಚಿದ ರಾಗ, ತಾಳ ಸೇರಿಸಿ ಹಾಡಿಕೊಂಡೆ.
ಡಾ.ಗುರು, ಕವನ ಸೆಳೆತವನ್ನು ಎಳೆದೊಯ್ದು ಕಡೆಯ ಪಾದಕ್ಕೆ ಬೀಳಿಸಿ ಮೊಟಕಾದ ಸಾಲು ಉತ್ತಮ ಅಂತ್ಯ ಮತ್ತು ಅರ್ಥ ನೀಡಿವೆ..ಪ್ರಾಸವೂ ಕೂಡಿ ಸಾಲುಗಳು ಮತ್ತೆ ಮತ್ತೆ ಓದುವಂತೆ ಇವೆ...ಸಂಶೋಧನೆಯ ನಡುವಿನ ಈ ಶೋಧ ಅಪೂರ್ವವಾಗಿ ಮೂಡಿದೆ.
ಆತ್ಮೀಯ,
ನಿಮ್ಮ ಪ್ರೀತಿಯ ಹಾರೈಕೆ ಸದಾ ಇರಲಿ, ನನ್ನ ಕವನಕ್ಕೆ ನೀವೇ ಬ್ಲಾಗಿಗರು ಸ್ಪೂರ್ತಿ
ಅಂತರ್ವಾಣಿ,
ರಾಗ ಹಾಕಿ ಹಾಡುವಷ್ಟು ಒಳ್ಳೆಯ ಕವನ ಹೌದೋ ಅಲ್ಲವೋ ಗೊತ್ತಿಲ್ಲ,
ಆದರೆ ನಿಮ್ಮ ನುಡಿಗಳು ಇನ್ನು ಉತ್ಸಾಹ ನೀಡಿವೆ
ಸದಾ ಬರುತ್ತಿರಿ
ಜಲನಯನ ಡಾ.
ಸಂಶೋಧನೆಯ ನಡುವೆ ಇಂಥಹ ಕವನ ಗಳು ಮನಸ್ಸಿಗೆ ಮುದ ನೀಡಿವೆ,
ಇಲ್ಲದಿದ್ದರೆ ಸದಾ ೪ ಗೋಡೆಗಳ ಮದ್ಯೆ ಸಂಶೋಧನೆ ಮಾಡುತ್ತಾ ಹೊರಗಿನ ಪ್ರಪಂಚದ ಸುಳಿವೇ ಸಿಗದ ವಾತಾವರಣ ಏರ್ಪಡುತ್ತಿತ್ತು
ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ
ಗುರುಮೂರ್ತಿಯವರೆ...
ಪ್ರೇಮ ಭಾವ...
ಅಭಿಮಾನ, ಕಾಳಜಿಯನ್ನು ಬಿಂಬಿಸುವ ಈ ಕವಿತೆ ಬಹಳ ಚೆನ್ನಾಗಿದೆ..
ಈ ಹಾಡು ಕೇಳಿದ ನಿಮ್ಮ ಗೆಳತಿ ಏನಂದಳು...?
ಅಭಿನಂದನೆಗಳು ಚಂದದ ಕವಿತೆಗೆ....
ಕವನ ತುಂಬ ಚೆನ್ನಾಗಿದೆ.
ಗುರು,
ತುಂಬಾ ಚೆನ್ನಾಗಿದೆ, ಈ ಕವನಕ್ಕೆ ನಿಮ್ಮ ಗೆಳತಿಯಿಂದ ಉತ್ತರ ಬಂತೆ..? ನಿಮ್ಮ ಕಾಳಜಿ ಎದ್ದು ಕಾಣುತ್ತದೆ...
ಗುರು,
ತುಂಬಾ ಚೆನ್ನಾಗಿದೆ.ನಿಜವಾಗಲೂ ನೀನು ಕವಿನೆ ಕಣೋ.
ಕವನ ತುಂಬ ಚೆನ್ನಾಗಿದೆ.
Raaghu.
ಗುರು,
ಸುಂದರ ಕವನ...ಅಲ್ಲ ಹಾಡು ಅಂತಾನೆ ಹೇಳಬಹುದು...
ನಿಮ್ಮ ಕವನಕ್ಕೆ ನಿಮ್ಮ ಗೆಳತಿಯ ಪ್ರತಿಕ್ರಿಯೆ ನಿಮ್ಮ ಮುಂದಿನ ಕವನದ ಮೂಲಕ ಹೇಳಿ.....
ಚೆನ್ನಾಗಿತ್ತು...
ಅಭಿನಂದನೆಗಳು...
ಗುರು,
ಗೆಳತಿಯ ಬಗೆಗೆ ಉತ್ಕಟ ಪ್ರೀತಿ ಹಾಗು ಕಾಳಜಿ ಇರೋರೇ ಇಂತಹ ನವಿರಾದ ಕವನ ಬರೆಯಬಲ್ಲರು. ನಿಮ್ಮ ಗೆಳತಿಯೇ ಪುಣ್ಯವಂತೆ!
ಡಾ.ಗುರು ಸರ್,
ಪ್ರೇಮದ ತೀವ್ರತೆಯನ್ನು ಸುಂದರವಾಗಿ ಹೇಳಿದ್ದೀರಿ.
ಕವನದಲ್ಲಿ ವಿಚಾರವನ್ನು ಹೇಳುವ ಕಲೆ ನಿಮಗೆ ಚೆನ್ನಾಗಿ ಸಿದ್ಧಿಸಿದೆ.
ಪ್ರಕಾಶಣ್ಣ,
ನನ್ನ ಗೆಳತಿ ಇನ್ನಾರೂ ಅಲ್ಲ, ನನ್ನ ಮನದನ್ನೆಯೇ,
ಅವಳ ಮನಸ್ಸಿನ ಬೇಸರ ನೀಗಿಸಲು ಬರೆದ ಕವನವಿದು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಸುಮಾ,
ಅಭಿಪ್ರಾಯಕ್ಕೆ ಧನ್ಯವಾದಗಳು
ಮನಸು,
ನನ್ನ ಗೆಳತಿಗೆ ತುಂಬಾ ಸಮಾಧಾನ ಲಭಿಸಿತು ಕವನದಿಂದ :)
ಅಭಿಪ್ರಾಯಕ್ಕೆ ಧನ್ಯವಾದಗಳು
ಮಂಜು,
ಪ್ರೀತಿ ಹೀಗೆಯೇ ಇರಲಿ
ಬರ್ತಾ ಇರು
ರಾಘು,
ಹೀಗೆಯೇ ಬರ್ತಾ ಇರಿ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಸವಿಗನಸು ಮಹೇಶ್ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಖಂಡಿತ ಮುಂದೊಮ್ಮೆ ಗೆಳತಿಯ ಉತ್ತರ ಬರೆಯುತ್ತೇನೆ
ಬರುತ್ತಿರಿ
ಸುನಾಥ್ ಸರ್,
ನಿಮ್ಮ ಪ್ರೀತಿ, ಹಾರೈಕೆ ಹೀಗೆಯೇ ಇರಲಿ
ಗೆಳೆತನಕ್ಕೆ ಬೆಲೆ ಕಟ್ಟಲಾದೀತೆ?
ಧನ್ಯವಾದಗಳು
ಶಿವೂ ಸರ್,
ನಿಮ್ಮ ಹಾರೈಕೆ ಹೀಗೆ ಇರಲಿ,
ಕವನ ದಲ್ಲಿ ಇನ್ನು ಪ್ರಭುತ್ವ ಲಭಿಸಿಲ್ಲ, ಕೆಲವೊಮ್ಮೆ ಶಬ್ದಗಳಿಗೆ ತಡಕಾಡುತ್ತೇನೆ/
ಬರುತ್ತಿರಿ
ಕವನ ತುಂಬಾ ಚೆನ್ನಾಗಿದೆ. ನಾನು ಸಾಮಾನ್ಯವಾಗಿ ಕವನಗಳನ್ನು ಓದುವುದಿಲ್ಲ, ಆದರೆ ನಿಮ್ಮದು ಓದಿದಾಗ ಚೆನ್ನಾಗಿದೆ ಅನ್ನಿಸಿತು
ನಿಮ್ಮ ಕವನ ಬಹಳ ಇಷ್ಟವಾಹಿತು ಸರ್..ಇದನ್ನು ಓದಿದ ನಿಮ್ಮ ಗೆಳತಿ ಖಂಡಿತ ನಗುಸೂಸಿರುತಾರೆ ಎಂದು ನಂಬಿದೇನೆ.. :)
ಮುನಿದ/ನೊ೦ದ ಮನದನ್ನೆಯ ಮನವನ್ನು ತಿಳಿಯಾಗಿಸಲು ಹೊಸೆದ ಕಾವ್ಯ ಸಾಲುಗಳು ಅದ್ಭುತವಾಗಿದೆ. ಗುರುಮೂರ್ತಿಯವರೇ ಚೆ೦ದವಿದೆ ತಮ್ಮ ಕವನ.
ಭಾವಗೀತಾತ್ಮಕವಾದ ಪ್ರೇಮನಿವೇದನೆಯ ಗೀತೆ. ಚೆನ್ನಾಗಿದೆ. ಮುಂದುವರಿಯಲಿ ನಿಮ್ಮ ಪ್ರೇಮ ಗೀತೆ ಗಳ ಸರಣಿ
ಗುರು, ಕವನ ತುಂಬಾ ಆತ್ಮೀಯವಾಗಿದೆ...
ಕವನ ಚೆನ್ನಾಗಿದೆ. ಅದರಲ್ಲೂ ಕೊನೆಯ ಚರಣ ತುಂಬಾ ಇಷ್ಟವಾಯಿತು.
ದೀಪಸ್ಮಿತ
ನನ್ನ ಕವನ ನಿಮಗೆ ಸಂತೋಷ್ ನೀಡಿದರೆ ನನ್ನ ಬರವಣಿಗೆ ಸಾರ್ಥಕ,
ನಿಮ್ಮ ಮೆಚ್ಚುಗೆಯ ಮಾತುಗಳೇ ನನಗೆ ಪ್ರೋತ್ಸಾಹ
Snow White
ನಿಮಗೆ ಕವನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ,
ಗೆಳತಿ ತುಂಬಾ ಸಂತಸಗೊಂಡಳು ಕವನ ನೋಡಿ
ಸೀತಾರಾಮ್ ಸರ್,
ನಿಮ್ಮ ಮಾತುಗಳೇ ಇನ್ನಷ್ಟು ಕವನ ಬರೆಯಲು ಪ್ರೋತ್ಸಾಹ ನೀಡಿವೆ,
ಸದಾ ಬರುತ್ತಿರಿ
ಪರಾಂಜಪೆ ಸರ್,
ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಇರಲಿ
ಕವನವನ್ನು ತಿದ್ದಿ ತೀಡುತ್ತಿರಿ
ಧನ್ಯವಾದಗಳು ಕಾಮೆಂಟಿಸಿದ್ದಕ್ಕೆ
ದಿವ್ಯ,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ
ಹೀಗೆಯೇ ಬರುತ್ತಿರಿ
ತೇಜಸ್ವಿನಿಯವರೇ,
ಕವನ ಬರೆಯುವಾಗ ಶಬ್ದಗಳೇ ಸಿಗದೇ ಒದ್ದಾಡುವ ಪರಿಸ್ಥಿತಿ ಎಷ್ಟೋ ಸಲ ಎದುರಾಗಿದೆ, ಅದು ನಿಮಗೂ ಗೊತ್ತಿದೆ,
ಬರೆದ ಸಾಲುಗಳು ಓದುಗರಿಗೆ ಇಷ್ಟವಾದರೆ ಬರಹಗಾರ ಸಾರ್ಥಕ್ಯನಾದಂತೆ ಅಲ್ಲವೇ
ಸೊಗಸಾದ ಕವನ. ಭಾವ ಹಂದರ ವಿಶಿಷ್ಟವಾಗಿದೆ. ಲಯಬಧ್ದವಾಗಿದೆ. ಅಭಿನಂದನೆಗಳು.
ವಿನುತ,
ಕಾಮೆಂಟಿಸಿದ್ದಕ್ಕೆ ತುಂಬಾ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ
ತುಂಬ ಚೆನ್ನಾಗಿದೆ ಸರ್ :)
ಶಿವೂ ಸರ್
ತುಂಬಾ ಧನ್ಯವಾದಗಳು ನಿಮ್ಮ ಕಾಮೆಂಟಿಗೆ,
ಬರ್ತಾ ಇರಿ
ಸಾರ್... ಕವನ ಭಾವಪೂರ್ಣವಾಗಿದೆ. ನಂಗಿಷ್ಟವಾಯಿತು.
ಶ್ಯಾಮಲ
ಗುರು..ಅವರೆ...
ನಿಮ್ಮ ಭಾವನೆಗಳನ್ನ ಶಬ್ಧಗಳಲ್ಲಿ ಚೆನ್ನಾಗಿ ಜೋಡಿಸಿದ್ದೀರಿ.
ಸು೦ದರ ಕವನ...
ಇಷ್ಟವಾಯಿತು.
ವ೦ದನೆಗಳು.
ಶ್ಯಾಮಲಾ ಮೇಡಂ,
ಬ್ಲಾಗಿಗೆ ಸ್ವಾಗತ
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರ್ತಾ ಇರಿ
ಚುಕ್ಕಿ ಚಿತ್ತಾರ
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಪ್ರೋತ್ಸಾಹಿಸುತ್ತಿರಿ
ಬರೆದ ಕವನ ಓದುಗರಿಗೆ ಇಷ್ಟವಾದರೆ ಕವನ ಸಾರ್ಥಕ್ಯ ಹೊಂದಿದಂತೆ ಅಲ್ಲವೇ
geLati ge enaadru gift kodi pa.... illa andre haage ne avaLu... ;-)
Gift kodtane irtivi sir :)
abhipraayakke dhanyavaadagalu
ಗುರು ಸರ್,
ಗೆಳತಿಯನ್ನು ಪಟಾಯಿಸಲು ತುಂಬಾ ಚೆಂದವಿರುವ ಕವಿತೆ ಬರೆದಿದ್ದೀರಾ........... ಹಮ್....... ಹೇಗಿದೆ ಅವರ ಪ್ರತಿಕ್ರೀಯೆ.....
ದಿನಕರ ಸರ್,
ಗೆಳತಿ ಖುಷಿಯಾಗಿದ್ದಾಳೆ
ಅಭಿಪ್ರಾಯಕ್ಕೆ ಧನ್ಯವಾದಗಳು
ತುಂಬಾ ಸೊಗಸಾದ ಕವಿತೆ... ತುಂಬಾ ಇಷ್ಟವಾಯ್ತು.. ಇನ್ನಷ್ಟು ಮತ್ತಷ್ಟು ಇಂತಹ ಸುಂದರ ಕವಿತೆಗಳನ್ನು ಓದಿಸಿ ಪ್ಲೀಸ್..!!
ದಿಲೀಪ್ ಸರ್,
ಖಂಡಿತ ಬರೀತೀನಿ ಕವಿತೇನ,
ನಿಮ್ಮ ಪ್ರೋತ್ಸಾಹ ಸದಾ ಇರಲಿ
ಸದಾ ಬರ್ತಾ ಇರಿ
The poem is good and encouraging. I felt that in the 3rd stanza tangaali could be replaced by tampu so that the same word gaali will not be a repetition in that line.
Dear Santhosh,
Thanks for your comments, Keep visiting
ಕವಿತೆ ಸುಂದರವಾಗಿ ಮೂಡಿ ಬಂದಿದೆ....
ಚಂದಿನ ಸರ್,
ಸ್ವಾಗತ ಬ್ಲಾಗ್ ಗೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆ ಬರ್ತಾ ಇರಿ
ತುಂಬಾ ಚೆನ್ನಾಗಿ ಬರೆದಿದ್ದೀರಿ ಕವನವನ್ನು ಗುರುಮೂರ್ತಿಯವರೇ.
ನಿನ್ನ ಬಿಂಬ, ಚಂದ್ರ ಬಿಂಬ ಒಂದೆ ಆಗಿದೆ ಗೆಳತಿ ಮನಸು ತುಂಬಿದೆ. ಕೊನೆಯ ಸಾಲು ತುಂಬಾ ಇಷ್ಟವಾಯಿತು. ನಿಮ್ಮ ಗೆಳತಿ ನಿಜಕ್ಕೂ ಪುಣ್ಯವಂತೆ. .
ಸೂಪರ್ ಸಾಲುಗಳು ಗುರು ಅಣ್ಣ ,
ಸ್ಪೂರ್ತಿಗೆ ತಕ್ಕ ಸಾಲುಗಳೋ ?.. ಶಬ್ಧಗಳಿಗೆ ತಕ್ಕ ಸ್ಪೂರ್ತಿಯೋ ?
ಧನ್ಯವಾದಗಳು ರಂಜಿತ,
ಹೀಗೆ ಬರುತ್ತಿರು
ನಿಮ್ಮ ಹೆಸರೇನು,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ನಿಜಕ್ಕೂ ಅಂಥಹ ಗೆಳತಿ ಪಡೆದ ನಾನು ಪುಣ್ಯವಂತ
ಕೇವಲ ಓದಿಸಿಕೊಂಡಲ್ಲ, ಹಾಡಿಸಿಕೊಂಡೂ ಹೋಗುತ್ತೆ.
ಗುನುಗುವಂತೆಯೂ ಮಾಡುತ್ತೆ.
ಕವನದ ಸಾಲುಗಳಲ್ಲಿರುವ ಕಾಳಜಿ ಅನನ್ಯ. ಚೆನ್ನಾಗಿದೆ.
ಕವನ ಕೂಲಾಗಿದೆ :)
ಉಳಿದ ವಿಷಯಗಳನ್ನು ಈಗಾಗಲೇ ಎಲ್ಲರೂ ಹೇಳಿದ್ದಾರೆ :)
ಲೇಟಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ...
ಹರೀಶ್ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ,
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ಸಂತೋಷ
ಹೀಗೆಯೇ ಬರ್ತಾ ಇರಿ
ಸುಧೇಶ್ ಸರ್
ನಿಮ್ಮ ಕಾಮೆಂಟಿಗೆ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ
ಬರ್ತಾ ಇರಿ
ಕವಿತೆ ಚಿನ್ನಾಗಿದೆ...
ಆನಂದ
ಸ್ವಾಗತ ಬ್ಲಾಗಿಗೆ
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ
ಗುರಣ್ಣ ಪ್ರಾಸ ಚೊಲೋ ಬಂಜು :) ಚೊಲೋ ಇದ್ದು ::)
Post a Comment