ಪ್ರವಾಸ ಕಥನ , ಭಾಗ ೧
ಸ್ವೀಡನ್ ಗೆ ಬರುವ ಮುಂಚೆ ಯಾವಾಗಲೂ ಸೂರ್ಯನ ಬೆಳಕನ್ನು ತುಂಬ ಬಯ್ಯುತ್ತಿದ್ದೆ. ಸೂರ್ಯ ಎನ್ನುವುದು ಜೀವನದಲ್ಲಿ ಎಷ್ಟು ಅನಿವಾರ್ಯ ಎನ್ನುವುದು ಇಲ್ಲಿಗೆ ಬಂದ ಮೇಲೆ ತಿಳಿಯಿತು. ಈ ಜನರಿಗೆ ಸೂರ್ಯನ ಬೆಳಕೆಂದರೆ ಹಸಿದ ಹೆಬ್ಬುಲಿ ತನ್ನೆದುರಿಗೆ ನಿಂತ ನರಿಯನ್ನು ದಿಟ್ಟಿಸಿ ನೋಡುವ ಹಾಗೆ ನೋಡುತ್ತಾರೆ . ವರ್ಷದ ೬ ತಿಂಗಳು ಕತ್ತಲೆ, ಉಳಿದ ೬ ತಿಂಗಳಿನಲ್ಲಿ ೨ ತಿಂಗಳು ಬೆಳಕಿದ್ದರೂ ಚಳಿಯ ಕಾಟ. ಸಿಗುವುದು ಕೇವಲ ೪ ತಿಂಗಳುಗಳು ಮಾತ್ರ ಇವರಿಗೆ. ನಾವೋ ಹುಟ್ಟಿನಿಂದಲೇ ಸೂರ್ಯನ ಜೊತೆಗೆ ಬೆಳೆದವರು. ಬೇಸಿಗೆಯಲ್ಲಿ ಬಿಸಿಲ ಬೇಗೆ ತಡೆಯಲಾರದೆ ಮನೆಯ ಒಳಗೆ ಕುಳಿತು ಟೀ ವಿ ನೋಡುವವರು. ಅವರ ಕಷ್ಟ ನಮಗೇನು ಗೊತ್ತು. ಆದರೆ ಇಲ್ಲಿಗೆ ಬಂದ ಮೇಲೆ ಅದರ ವಿರಾಟ ದರ್ಶನವಾಯಿತು. ಸ್ವೀಡಿಷ್ ಇಮ್ಮಿಗ್ರಶನ್ ನವರ ಕ್ರಪಕಟಾಕ್ಷ ದಿಂದ ನನಗೆ ಇಲ್ಲಿ ಬರಲು ಅಂದುಕೊಂಡದ್ದಕಿಂತ ೨ ತಿಂಗಳೇ ತಡವಾಯಿತು. ಸರಿಯಾಗಿ ಚಳಿಗಾಲಕ್ಕೆ ನನ್ನವಳ ಜೊತೆ ನನ್ನ ಆಗಮನವಾಯಿತು ನೋಡಿ. ಅಲ್ಲಿಂದ ಪ್ರಾರಂಭ ವಾಗುತ್ತದೆ ಚಿತ್ರ ವಿಚಿತ್ರ ಅನುಭವಗಳ ಸಾರ. ಸದ್ಯಕ್ಕೊಂದು ಸುಂದರ ಪ್ರವಾಸಿ ತಾಣದ ಬಗೆಗೆ ವರ್ಣಿಸುತ್ತೇನೆ.´
ನನ್ನ ಮನೆಯವಳು ಕೆಲಸ ಮಾಡುವ ಸಾಫ್ತ ವೇರ್ ಕಂಪನಿಯಲ್ಲಿ ಬರಿ ೮ ಜನ ಮಾತ್ರ ಇದ್ದಾರೆ. ಆದರೆ ಮಹಾ ಶ್ರೀಮಂತ ಕಂಪನಿ. ಇಂಥಹ ಅರ್ಥಿಕ ಒತ್ತಡದಲ್ಲಿಯೂ ಅವರ ಬೆಳವಣಿಗೆ ಕಣ್ಣಿಗೆ ಕುಕ್ಕುವಂತಿದೆ. ವಿಷಯ ಅದಲ್ಲ, ಅಲ್ಲಿ ನನ್ನವಳನ್ನು ಬಿಟ್ಟರೆ ಎಲ್ಲರೂ ೪೫ ವರ್ಷಕ್ಕೆ ಮೇಲ್ಪಟ್ಟವರು. ಹಾಗಾಗಿ ಅವರೆಲ್ಲ ಇವಳನ್ನು ತಮ್ಮ ಮಗಳಂತೆ ನೋಡಿಕೊಳ್ಳುತ್ತಾರೆ. ಎಲ್ಲೇ ಹೋಗುವುದಿದ್ದರೂ ಇವಳಿಗೆ ಒಂದು ಆಮಂತ್ರಣ ಗ್ಯಾರಂಟೀ. ಮಲ್ಲಿಗೆ ಹೂವಿನೊಂದಿಗೆ ದಾರಕ್ಕೂ ಸ್ವರ್ಗ ಎಂಬಂತೆ ಅವಳೊಂದಿಗೆ ನನಗೂ ಹೋಗುವ ಸೌಭಾಗ್ಯ.
ಸ್ವಿಡೆನ್ನಿನ ಜನರ ಹವ್ಯಾಸಗಳು ಚಿತ್ರ ವಿಚಿತ್ರವಾಗಿರುತ್ತದೆ. ಹೇಳಿ ಕೇಳಿ ಹೊಟ್ಟೆ ತುಂಬಿದ ಜನ. ನಮ್ಮ ಹಾಗೆ ಮೈ ಬಗ್ಗಿಸಿ ದುಡಿಯುವ ಅಗತ್ಯವಿಲ್ಲ. ದುಡಿದಿದ್ದನ್ನು ಎಂಜಾಯ್ ಮಾಡುತ್ತಾರೆ ತಮಗೆ ಇಷ್ಟ ಬಂದಂತೆ. ಮಕ್ಕಳ ಚಿಂತೆ ಇಲ್ಲ, ಕಾಂತೆಯ ಜೊತೆ ಬಹಳ ಕಾಲ ಬಾಳುವುದಿಲ್ಲ. ಮತ್ತೇಕೆ ಹಣ ಉಳಿಸುವ ಚಿಂತೆ. ಅವರಿಗೆ ಚಲಿಗಾಲ ಬಂತೆಂದರೆ ಹತ್ತು ಹಲವು ಆಟಗಳನ್ನು ಆಡುವ ತವಕ. ಅದರಲ್ಲೂ ಜನವರಿಯಿಂದ ಮಾರ್ಚ್ ತನಕ ಹಿಮವೂ ಸಾಕಷ್ಟು ತುಂಬಿರುತ್ತದೆ. ಆ ಕಾಲ ಸ್ಕಿಯಿಂಗ್ ಮಾಡಲು ಪ್ರಶಸ್ತ ಕಾಲ.
ಇದನ್ನೆಲ್ಲಾ ಓದಿದ ತಿಳಿದಿದ್ದ ನಮಗೆ ನನ್ನಾಕೆಯ ಕಂಪನಿಯಲ್ಲಿ ಕೆಲಸ ಮಾಡುವ ಸ್ವೀಡಿಷ್ ದಂಪತಿಗಳಿಂದ ಸ್ಕಿಯಿಂಗ್ ಮಾಡಲು ಆಹ್ವಾನ ಬಂತು. ಮೊದಲೇ ಮಂಗನ ಮನಸ್ಸು, ಕೇಳಬೇಕೆ, ಓ ಕೆ ಅಂದೇ ಬಿಟ್ಟೆವು. ಸ್ಕಿಯಿಂಗ್ ಎಲ್ಲ್ಲ ಕಡೆ ಮಾಡಲು ಸಾದ್ಯವಿಲ್ಲ. ಅದಕ್ಕಾಗಿಯೇ ಕೆಲವು ಖಾಸಗಿ ಕಂಪನಿಗಳು ಉತ್ತಮ ಸ್ಕಿಯಿಂಗ್ ರಸ್ತೆಯನ್ನು ಮಾಡಿರುತ್ತಾರೆ. ಸ್ವಿಡೆನ್ನಿನ ಉತ್ತರ ಭಾಗದಲ್ಲಿ ತುಂಬ ಸುಂದರ ಪ್ರದೇಶಗಳಿವೆ. ನಾವು ಮಲೆನಾಡನ್ನು ವರ್ಣಿಸಿದಂತೆ ''ಸುತ್ತಲೂ ನಿತ್ಯ ಹರಿದ್ವರ್ಣದ ಕಾಡುಗಳು, ಎಲ್ಲಿ ನೋಡಿದರಲ್ಲಿ ಖಗ ಸಂಕುಲ, ಹಸಿರೆ ಹಸಿರು .....'' ಇಲ್ಲಿ ವರ್ಣಿಸಬೇಕಾದರೆ '' ಎಲ್ಲೆಲ್ಲೂ ಬೋಳಾದ ಮರಗಳು, ಸದಾ ಹಿಮದ ರಾಶಿ, ಎಲೆಲ್ಲೂ ಬಿಳಿಯ ಮೋಡಗಳಂತೆ ಗೋಚರಿಸುವ ಮತ್ತದೇ ಹಿಮ, ಮತ್ತದೇ ಬೋಳು ಮರ, ಸದಾ ನಿದ್ರಿಸುವ ಪ್ರಾಣಿಗಳು....''. ಇದು ನನ್ನ ವ್ಯಾಖ್ಯಾನ ಅಲ್ಲಿ ಹೋಗುವ ಮೊದಲು.
ನಾನೀಗ ಹೇಳಹೊರಟಿರುವ ಸ್ಕಿಯಿಂಗ್ ಮಾಡುವ ಸೇಲನ್ ಎಂಬ ಪ್ರದೇಶದ ಸಣ್ಣ ಸ್ಕಿಯಿಂಗ್ ನಕ್ಷೆ ಹೀಗಿದೆ. ಇಂಥಹ ಅನೇಕ ನಕ್ಷೆಗಳಿಂದ ಈ ಜಾಗ ೨೦೦ ಕಿ ಮಿ ಗಳನ್ನೂ ಆವರಿಸಿದೆ. ಆದರೆ ನಾವು ಸ್ಕಿಯಿಂಗ್ ಮಾಡಿದ್ದು ಮಾತ್ರ ೩೦ ಕಿ ಮಿ ಗಳು ಮಾತ್ರ.
ಅಂತಹ ಹಿಮಗಳ ಸ್ವರ್ಗವೇ ಸೇಲನ್ ಎಂಬ ಪ್ರದೇಶ. ಅಂತರಾಷ್ಟ್ರೀಯ ಪ್ರವಾಸೀ ತಾಣವೂ ಹೌದು. ದೇಶ ವಿದೇಶಗಳಿಂದ ಜನ ಸ್ಕಿಯಿಂಗ್ ಮಾಡಲು ಇಲ್ಲಿಗೆ ಬರುತ್ತಾರೆ. ಸೇಲನ್ ಎಂಬುದು Gothenburgನಿಂದ ೫೦೦ ಕಿ ಮಿ ಉತ್ತರದಲ್ಲಿದೆ. Gothenburg ನಾವಿರುವ ಸ್ಥಳ. ಇಲ್ಲಿಂದ ಬಸ್ ಹಿಡಿದು ಹೊರಟರೆ ೮ ಗಂಟೆಗಳ ಪ್ರಯಾಣ. ದಾರಿಯುದ್ದಕ್ಕೂ ಸದಾ ಬಿಳಿ ಬಿಳಿ ಹಿಮ ರಾಶಿ. ಬಸ್ ನಲ್ಲಿ ಎಲ್ಲರೂ ಸ್ವೀಡಿಶ್ ಗಳೇ ತುಂಬಿದ್ದರು. ನಮ್ಮನ್ನು ಕರೆದ ಸ್ವೀಡಿಶ್ ದಂಪತಿಗಳು ನಮಗಿಂತ ಒಂದು ವಾರ ಮುಂಚೆಯೇ ಸ್ಕಿಯಿಂಗ್ ಮಾಡಲು ಹೋಗಿದ್ದರು. ಪ್ರತಿ ವರ್ಷವೂ ೧೫ ದಿನ ಅಲ್ಲಿ ಹೋಗಿ ಸ್ಕಿಯಿಂಗ್ ಮಾಡುವುದು ಅವರ ಹವ್ಯಾಸವಂತೆ.
ಇವಿಷ್ಟು ಸ್ಕಿಯಿಂಗ್ ಆಡುವ ಜಾಗದ ಬಗ್ಗೆ ಮಾಹಿತಿ. ಮುಂದಿನ ವಾರ ಅಲ್ಲಿನ ಚಿತ್ರ ವಿಚಿತ್ರ ಅನುಭವಗಳನ್ನು ಸಚಿತ್ರದೊಂದಿಗೆ ವರ್ಣಿಸುತ್ತೇನೆ. ಒಂದೇ ದಿನ ಎಲ್ಲವನ್ನೂ ತಿಂದರೆ ಅಜೀರ್ಣವಲ್ಲವೇ ?.
ನಿಮ್ಮನುಮತಿಯೊಂದಿಗೆ ಮುಂದಿನ ವಾರ ಸಿಗುತ್ತೇನೆ,
ಮುಂದುವರಿಯುತ್ತದೆ.....
21 comments:
ಗುರುಮೂರ್ತಿಯವರೆ...
ಬಹಳ ದಿನಗಳಿಂದ ನಿಮ್ಮಿಂದ..
ಇದನ್ನು ನಿರಿಕ್ಷಿಸಿದ್ದೆ..
ಒತ್ತಾಯ ಕೂಡ ಮಾಡಿದ್ದೆ...
ಬಹಳ ಚೆನ್ನಾಗಿ..ವಿವರಗಳನ್ನು ಕೊಟ್ಟಿದ್ದೀರಿ..
ನಮಗೂ ಒಮ್ಮೆ ಹೋಗಿಬಿಡಬೇಕೇಂಬ ಆಸೆ ಹುಟ್ಟಿಸಿಬಿಟ್ಟಿದ್ದೀರಿ...
ಇನ್ನಷ್ಟು ಫೋಟೊ ಹಾಕಿ...
ತುಂಬಾ ಖುಷಿಯಾಯಿತು..
ಅಭಿನಂದನೆಗಳು...
guru,
chennagi vivarisiddeeri saagali nimma lekhaniyondige namma payaNa... olleya anubhavagaLu haccikolutta ideeri namge kushi kooda
dhanyavadagaLu...
ಪ್ರಕಾಶಣ್ಣ,
ಬಹಳ ದಿನದಿಂದ ಬರೆಯಬೇಕೆಂದುಕೊಂಡಿದ್ದೆ, ಆದರೆ ಎಲ್ಲಿಂದ ಆರಂಭಿಸುವುದು ಎನ್ನುವುದೇ ಸಮಸ್ಯೆಯಾಗಿತ್ತು. ಅಂತು ಈಗ ೩ ಕಂತುಗಳಲ್ಲಿ ಇಡುವ ಪ್ರಯತ್ನ ಮಾಡಿದ್ದೇನೆ.
ನಿಜಕ್ಕೂ ಬಹಳ ಸುಂದರ ಜಾಗ ಅದು. ಸುತ್ತಲೆಲ್ಲ ಹಿಮ ರಾಶಿ ಕನ್ನಡದ ಹಳೆಯ ಸಿನೆಮಾಗಳಲ್ಲಿ ತೋರಿಸುವ ಸ್ವರ್ಗದ ಚಿತ್ರಣ ನೆನಪಿಗೆ ತರುತ್ತದೆ.
ಕಂಡಿತ ಮುಂದಿನ ಭಾಗದಲ್ಲಿ ಹೆಚ್ಚು ಫೋಟೋಗಳು ಇರುತ್ತವೆ.
ಧನ್ಯವಾದಗಳು.
ಮನಸು,
ನಿಮಗೆ ಖುಷಿ ಆಗಿದ್ದಕ್ಕೆ ನನಗೂ ಬಹಳ ಖುಷಿ. ನಿಮ್ಮೆಲ್ಲರ ಮೆಚ್ಚುಗೆಯ ನುಡಿಯೇ ಬರೆಯಲು ಪ್ರೇರೇಪಿಸುತ್ತದೆ.
ಸದಾ ಬರುತ್ತಿರಿ,
ಗುರುಮೂರ್ತಿ ಸರ್,
ನಾನು ನಿಮ್ಮ ಬ್ಲಾಗಿಗೆ ಬಂದಾಗ ಅಲ್ಲಿನ ಜನಜೀವನ...ಅವರ ಚಿತ್ರವಿಚಿತ್ರ ನಡುವಳಿಕೆ..ಹುಚ್ಚಾಟ ಕಂಡುಹಿಡಿದು ಬರೆಯಿರಿ ಅಂತ ನಿವೇದಿಸಿದ್ದೆ...
ಈಗ ನನಗೆ ಖುಷಿಯಾಯಿತು....ನಿಜಕ್ಕೂ ತುಂಬಾ ಚೆನ್ನಾಗಿ ಬರೆದಿದ್ದೀರಿ....ಅಲ್ಲಿನ ಸ್ಕೀಯಿಂಗ್. ಸೂರ್ಯ, ಎಲ್ಲಾ ಚೆನ್ನಾಗಿದೆ...
ಹಾಗೆ ಅಲ್ಲಿನ ಜನ ಕಷ್ಟ ಸಹಿಷ್ಣುಗಳು ಅಂದುಕೊಂಡಿದ್ದೆ..ನೀವು ನೋಡಿದರೆ ಅವರನ್ನು ಹೊಟ್ಟೆತುಂಬಿದವರು ಅಂತ ಹೇಳಿಬಿಟ್ಟಿರಿ....
ಅವರ ಎಲ್ಲಾ ಅಚಾರ ವಿಚಾರ ಇನ್ನಷ್ಟು ಬರೆಯಿರಿ...ನಮಗೂ ಹೊಸ ಪ್ರಪಂಚ ಜ್ಞಾನ ತಿಳಿದಂತಾಗುತ್ತದೆ...
ಮುಂದಿನ ನಿಮ್ಮ ಸ್ಕೀಯಿಂಗ್ ಹೇಗಿತ್ತು...?
ಕಾಯುತ್ತಿದ್ದೇನೆ...
ಧನ್ಯವಾದಗಳು...
ಆತ್ಮೀಯ ಶಿವೂ,
ಅವರಿಗೆ ಹೊಟ್ಟೆ ತುಂಬಿದೆ ಎನ್ನುವುದರ ಅರ್ಥ ನಮ್ಮ ಹಾಗೆ ಹಗಲೂ ರಾತ್ರಿ ಎನ್ನದೆ ಕೆಲಸ ಮಾಡುವ ಪ್ರಮೇಯವಿಲ್ಲ ಅಂದು. ಅದು ಬಿಟ್ಟರೆ ಇಲ್ಲಿಯ ಜನರು ಅವರವರ ಕೆಲಸವನ್ನು ಅವರೇ ಮಾಡಿಕೊಳ್ಳುತ್ತಾರೆ. ಕೆಲಸದವರನ್ನು ಹುಡುಕಿದರೂ ಕಾಣಿಸಲು ಸಾದ್ಯವಿಲ್ಲ. ಎಲ್ಲರೂ ಸಿರಿವಂತರೆ. ಹಾಗಾಗಿ ಮನೆ ಕೆಲಸ ಅವ್ರೆ ಮಾಡಿಕೊಳ್ಳಬೇಕು.
ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು. ಮುಂದಿನ ಲೇಖನದಲ್ಲಿ ವರ್ಣರಂಜಿತ ಚಿತ್ರಗಳೊಂದಿಗೆ ಸ್ಕಿಯಿಂಗ್ ಬಗ್ಗೆ ವಿವರಿಸುತ್ತೇನೆ.
ನಿಮ್ಮ ಅನುಭವಗಳನ್ನು ಒಳಗೊ೦ಡ ಲೇಖನ ಚೆನ್ನಾಗಿ ಮೂಡಿ ಬ೦ದಿದೆ. ಮು೦ದುವರಿಯಲಿ
ಪರಾಂಜಪೆಯವರೇ,
ಅಭಿಪ್ರಾಯಕ್ಕೆ ಧನ್ಯವಾದಗಳು,
ಡಾ|ಹೆಗ್ಡೆ ಸರ್, ನಿಮ್ಮ ಸ್ವೀಡನ್ ಸ್ಕೀಯಿಂಗಿನ ಮುಂದಿನ ಭಾಗ ಕಾತುರದಿಂದ ಎದುರು ನೋಡ್ತಾ ಇದೀನಿ. ನನ್ನ ಬ್ಲಾಗನ್ನು ಬಹುವಾಗಿ ಮೆಚ್ಚಿಕೊಂಡಿದ್ದಕ್ಕೆ ಅನಂತಾನಂತ ಧನ್ಯವಾದಗಳು. ನಾನು ಕೂಡಾ ದಕ್ಷಿಣ ಜರ್ಮನಿಯ ಟ್ರೈಬರ್ಗ್ (TRIBERG) ಸ್ಕೀಯಿಂಗ್ ಸ್ವಲ್ಪ ಟ್ರೈ ಮಾಡಿದೆ. ಈ ಜಾಗ CUCKOO CLOCKS ಗೆ WORLD FAMOUS.
ಜೊತೆಗೆ ನಮ್ಮ ಹ್ಯಾಂಬರ್ಗ್ ನಲ್ಲಿ ಕೂಡಾ ICE SKATING ಶುರು ಮಾಡಿ,ಮೂರನೆ ಬಾರಿಗೆ ಸುಮಾರಾಗಿ ಸ್ಕೇಟ್ ಮಾಡತೊಡಗಿದೆ. ಇದೆಲ್ಲಾ ನಮಗೊಂಥರಾ ಹೊಸಾ ಆಟ ಹಾಗು ಅನುಭವ. ಅಲ್ವೆ ?
ಕಟ್ಟೆ ಶಂಕ್ರ
ಶಂಕರಪ್ರಸಾದ ಅವರೇ,
ನೀವು ಅಂದಿದ್ದು ನಿಜ, ಇದೊಂದು ನಮಗೆ ಹೊಸ ಅನುಭವವೇ ಸರಿ, ಆದರೆ ಮಾಡಲೇಬೇಕಾದ ಅನುಭವ. ಭಾರತದಲ್ಲಿ ಹಿಮಾಲಯದ ತಪ್ಪಲಿಗೆ ಹೋಗಬೇಕು ಇದರ ಅನುಭವ ಪಡೆಯಲು. ನೀವು ಜರ್ಮನಿ ಗೆ ಬಂದು ಎಷ್ಟು ಸಮಯವಾಯಿತು. ನನ್ನ ಬ್ಲಾಗ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಹೀಗೆಯೇ ಬರುತ್ತಿರಿ
ಗುರು,
ಸ್ವೀಡನ್ ಅನುಭವ ಚೆನ್ನಾಗಿದೆ...ಸ್ಕೀಯಿಂಗ್ ಅನುಭವ ಪೂರ್ತಿ ಕೇಳಲು ಕುತೂಹಲ ಇದೆ..ಬೇಗ ಅಪ್ಡೇಟ್ ಮಾಡಿ :)
ವೇಣು ವಿನೋದ್ ಅವರೇ,
ತಮಗೆ ಕುತೂಹಲ ಉಂಟಾಗಿದ್ದಕ್ಕೆ ನಾನು ಚಿರಋಣಿ, ಕಂಡಯಾತ್ ಬೇಗನೆ ಅಪ್ ಡೇಟ್ ಮಾಡುತ್ತೇನೆ. ಹೀಗೆಯೇ ಬರುತ್ತಿರಿ,
ಡಾಕ್ಟ್ರೆ,
ಒಳ್ಳೆ ಅನುಭವವೇ ಆಗಿರುತ್ತೆ ನಿಮಗೆ. ನಾನು ಫಿನ್ ಲ್ಯಾಂಡಿನಲ್ಲಿ ಇದ್ದಾಗ, ಟಿವಿಯಲ್ಲಿ ನೋಡುತ್ತಿದ್ದೆ ಸ್ಕಿಯಿಂಗ್. ಅದು ಬಹಳ ಮೆಚ್ಚುಗೆಯಾಗಿತ್ತು.
ಅಂತರ್ವಾಣಿ,
ಸಂಶಯವೇ ಇಲ್ಲ, ಇದೊಂದು ರೋಮಾಂಚಕ ಅನುಭವ, ಆ ಹಿಮ ರಾಶಿ ಇನ್ನು ಕಣ್ಣೆದುರಿಗೆ ಇದ್ದಂತಿದೆ. ಅಭಿಪ್ರಾಯಕ್ಕೆ ಧನ್ಯವಾದಗಳು.
ಗುರುಮೂರ್ತಿಯವರೆ,
ಪ್ರವಾಸಕಥನದ ಮೊದಲ ಭಾಗ ತುಂಬ ಇಷ್ಟವಾಯ್ತು. ಸ್ವೀಡನ್
ದೇಶ ಹಾಗೂ ಜನರ ಬಗೆಗೆ ಆಸಕ್ತಿಕಾರಕ ವಿಷಯ ಹೇಳಿದ್ದೀರಿ.
ಮುಂದಿನ ಭಾಗಗಳಿಗಾಗಿ ಕಾಯುತಿದ್ದೇನೆ.
ಸುನಾಥ ಅವರೇ,
ನಮ್ಮ ಪ್ರವಾಸ ಕಥನ ಇಷ್ಟವಾಗಿದ್ದಕ್ಕೆ ಬಹಳ ಸಂತೋಷವಾಯಿತು. ಹೀಗೆಯೇ ಬರುತ್ತಿರಿ
ಗುರುಮೂರ್ತಿ ಸರ್,
ಸ್ವೀಡನ್ ವಾತಾವರಣವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಸ್ಕೀಯಿಂಗ್ ಅನುಭವದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕಾತರನಾಗಿದ್ದೇನೆ. ನಾನು ಕ್ಯಾಲಿಫೋರ್ನಿಯಾದ ತಾಹೋ ಸರೋವರದ ಸುತ್ತಮುತ್ತಲಿನಲ್ಲಿ ಸ್ಕೀಯಿಂಗ್ ಪ್ರಯತ್ನಿಸಿದ್ದು ನೆನಪಾಯಿತು. ಕಾಯುತ್ತಿದ್ದೇವೆ, ಮುಂದುವರೆಸಿ.
- ಉಮೀ
ಹಲೋ ಉಮೇಶ್ ಸರ್,
ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದ. ಸ್ಕಿಯಿಂಗ್ ನಿಜಕ್ಕೂ ಒಂದು ರೋಮಾಂಚನೀಯ ಆಟ. ಕಂಡಿತ ಅದರ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಸುತ್ತೇನೆ. ಹೀಗೆಯೇ ಬರುತ್ತಿರಿ.
ಫ್ರೀಯಾಗಿ ಒಂದು ಟ್ರಿಪ್ ಹೋದಾಗಾಯ್ತು:)
ಹಾಯ್ ಸಂದೀಪ್,
ನಾಳೆ ಮತ್ತೆ ಅಲ್ಲಿಗೆ ಕರೆದುಕೊಂಡು ಹೋಗ್ತೇನೆ, ಅಭಿಪ್ರಾಯ ಕ್ಕೆ ಧನ್ಯವಾದಗಳು
ಗುರುಮೂರ್ತಿಯವರೆ,
ಧನ್ಯವಾದಗಳು. ಒಂದಷ್ಡು ಫೋಟೋಗಳಿದ್ದರೆ ನಮಗೂ ನೋಡಿದ ಹಾಗಾಗುತ್ತಿತ್ತು.
ಸಂಪಖಂಡದ ಹತ್ತಿರದ ಬಬ್ಬಿಗದ್ದೆನಾ?
ಮತ್ತೆ ಬರುತ್ತಿರುತ್ತೇನೆ.
ಬಾಲು
Post a Comment