- ಗುರು ಬಬ್ಬಿಗದ್ದೆ
ಮನಸ್ಸು ಮಂಗನಂತೆ, ಅದನ್ನು ಹಿಡಿದಿಡುವುದು ಪ್ರಯಾಸದ ಕೆಲಸ.ಅದು ಆದಿಯಿಂದ ಅಂತ್ಯದವರೆಗೆ ನಮ್ಮೊಂದಿಗೇ ಇದ್ದು ನಮಗೆ ಅರಿವಿಗೆ ಬಾರದಂತೆ ತನ್ನ ಕಾರ್ಯವನ್ನು ಪೂರೈಸುತ್ತದೆ. ಇಂಥಹ ಮನಸ್ಸು ನಮ್ಮನ್ನು ಸದಾ ಚಿಂತನೆಗೆ ಒಳಪಡಿಸಿ ಕೊಲ್ಲುತ್ತಲೇ ಇರುತ್ತದೆ. ಚಿಂತಿಸುತ್ತಿದ್ದರೆ ನಾವು ಚಿತೆಯಾಗಿಬಿಡುತ್ತೇವೆ. ಕಾಲದೊಂದಿಗೆ ಮುಂದಡಿ ಇಡುತ್ತಾ, ನಗುಮೊಗದಿ ಬಾಳಬೇಕೆಂಬುದೇ ಕವಿಯ ಆಶಯ ಮಾತ್ರವಲ್ಲ ಕವನದ ವಿಷಯವೂ ಹೌದು. ನಿಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯಗಳಿಗೆ ಸದಾ ಸ್ವಾಗತ.ನನ್ನ ಈ-ಮೇಲ್ ವಿಳಾಸ: murthyhedge@gmail.com
ಚಿಂತಿಸದಿರು ಮನವೆ, ಚಿತೆಯಾಗುವೆ
ಚಿಂತಿಸದಿರು ಮನವೆ, ಚಿತೆಯಾಗುವೆ
ಚಿಂತನೆ ಮಾಡುತಲಿ ಚರಿತೆಯಾಗುವೆ
ಚಿತ್ರದಿಂದ ನೀ ಪತ್ರವಾದೆ
ವಿಚಿತ್ರದಲ್ಲಿಯೇ ಸಚಿತ್ರವಾದೆ
ಕಣ್ಣಾದೆ, ಕಿವಿಯಾದೆ, ಕನಸುಗಳ ಜೊತೆಯಾದೆ
ನನ್ನೆದೆಯ ಭಾವನೆಗೆ, ನನ್ನೊಲವೇ ನೀನಾದೆ
ಚಿನ್ನದಂತ ನೀ ನಯನವಾದೆ
ಚಂಚಲ ಮನಸಿಗೆ ಸತಿಯಾದೆ
ಒಗಟಾದೆ, ನೆರಳಾದೆ, ಆಸೆಗಳ ಸೆಳವಾದೆ
ಆಶಿಸುವ ಆಸರೆಗೆ, ಕೈ ಹಿಡಿದ ಪತಿಯಾದೆ
ಚೆಲ್ಲಿದ ಮಲ್ಲಿಗೆ ಹೂವಾದೆ
ಸಾಧಿಸುವ ಗುರಿಗೆ ಛಲವಾದೆ
ಹಿತವಾದೆ, ಹಸನಾದೆ,
ಹದಿಹರೆಯಕೆ ಬೆಳಕಾದೆ
ನನ್ನಯ ಸುಂದರ ಕನಸಿನಲಿ,
ಜೀವಕೆ ಜೀವವೇ ನೀನಾದೆ
ಚರಮಗೀತೆಗೆ ನುಡಿಯಾದೆ
ಚರಿತ್ರೆಯ ಪುಟದಲಿ ಹೆಸರಾದೆ
ಆದಿ ಅಂತ್ಯಗಳ ಕರ್ತನು ಆದೆ
ಸರ್ವವೂ ನೀನಾದೆ, ಚಿಂತಿಸದಿರು ಮನವೆ
9 comments:
ಗುರುಮೂರ್ತಿಯವರೆ..
ಬಹಳ ಸುಂದರ ಕವನ..ಪ್ರಾಸ ಬದ್ಧವಾಗಿದೆ....
ಇತ್ತೀಚೆಗೆ ನಾನು ಯೋಗ ಕ್ಲಾಸಿಗೆ ಹೋಗಿದ್ದೆ..
ಅಲ್ಲಿ ಮನಸ್ಸನ್ನು ಶಾಂತಿಯಿಂದ ಇಟ್ಟುಕೊಳ್ಳುವದು ಹೇಗೆ..?
ಹೇಳಿಕೊಡುತ್ತಿದ್ದರು..
ಅದೆಲ್ಲ ನೆನಪಾಯಿತು..
ನಿಮ್ಮ ಕವನ ಓದಿ..
ಅಭಿನಂದನೆಗಳು..
ಸುಂದರ ಕವಿತೆಗಾಗಿ...
OLLeya kavana manasina bhavane manemaadide...
ಆತ್ಮೀಯ ಶಿವೂ,
ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು.
ಆತ್ಮೀಯ ಪ್ರಕಾಶಣ್ಣ,
ನಿಮ್ಮ ನೆನಪಿನಾಳವನ್ನು ನನ್ನ ಕವನ ಕೆದಕಿದ್ದಕ್ಕೆ ನನಗೆ ಹೆಮ್ಮೆಯಿದೆ. ಯೋಗ ಕ್ಲಾಸ್ ಗೆ ನಾನೂ ಬಹಳ ಹಿಂದೆ ಹೋಗಿದ್ದೆ. ನಿಜಕ್ಕೂ ಮನಸ್ಸು ಪ್ರಫುಲ್ಲವಾಗುತ್ತದೆ.
ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.
ಆತ್ಮೀಯ ಮನಸು,
ನಿಮಗೆ ಇಷ್ಟವಾಗಿದ್ದಕ್ಕೆ ತುಂಬಾ ಆಭಾರಿ, ಹೀಗೆಯೇ ಬರುತ್ತಿರಿ,
ಡಾಕ್ಟರ್. ಗುರುಮೂರ್ತಿ ಸರ್,
ಮನಸ್ಸಿನ ಮೇಲಿನ ಕವನ ತುಂಬಾ ಚೆನ್ನಾಗಿದೆ...ಜೊತೆಗೆ ಪ್ರಾಸವನ್ನು ಬಳಸಿಕೊಂಡರೂ ಎಲ್ಲೂ ಅದು ಕಂಡು ಬರುವುದಿಲ್ಲ...ಮನಸ್ಸಿನ ಎಲ್ಲಾ ಭಾವನೆಗಳನ್ನು ಕವನದಲ್ಲಿ ಹಿಡಿದಿಟ್ಟೀದ್ದೀರಿ..ಚೆನ್ನಾಗಿದೆ...
ಧನ್ಯವಾದಗಳು...
ಹೈ ಶಿವು ಸರ್,
ನನ್ನ ಕವನ ಇಷ್ಟವಾಗಿದ್ದಕ್ಕೆ ತುಂಬಾ ಆಭಾರಿ. ನಿಮಗೆ ಪ್ರಶಸ್ತಿ ಸಿಕ್ಕಿದ್ದು ಕೇಳಿ ತುಂಬಾ ಸಂತಸವಾಯಿತು. ಇನ್ನೂ ಹೆಕ್ಚಿನ ಪ್ರಶಸ್ತಿಗಳು ನಿಮ್ಮನ್ನು ಅರಸಿ ಬರಲಿ.
ಗುರುಮೂರ್ತಿಯವರೆ,
ಮನಸ್ಸಿನ ವಿವಿಧ ಬಗೆಗಳ ಬಗೆಗೆ ತುಂಬ ಚೆನ್ನಾಗಿ ಕವನ ಮೂಡಿಸಿದ್ದೀರಿ.
ನಿಮ್ಮ ಕವನವನ್ನು ಓದಿ ಮನಸ್ಸಿಗೆ ಮನಸ್ಸೇ ಮಿತ್ರ, ಮನಸ್ಸಿಗೆ ಮನಸ್ಸೇ ಶತ್ರು ಎನ್ನುವ ಉಪನಿಷತ್ ವಾಕ್ಯ ನೆನಪಾಯಿತು.
ಸುನಾಥ್ ಅವರೇ,
ಇಷ್ಟವಾಗಿದ್ದಕ್ಕೆ ಧನ್ಯವಾದಗಳು
Post a Comment